ದೆಹಲಿಯ ಮುಸ್ಲಿಂ (Musim) ಗುಲಾಮಗಿರಿಯನ್ನು ಸಂಕೇತಿಸುವ ರಸ್ತೆಗಳ ಹಾಗೂ ಸ್ಮಾರಕಗಳ ಹೆಸರನ್ನು ಮರುನಾಮಕರಣ (Rename) ಮಾಡುವಂತೆ ಹಿಂದೂ ಸಂಘಟನೆಗಳು ಒತ್ತಾಯಿಸಿದ್ದು, ಇಂದು ಪ್ರತಿಭಟನೆ ನಡೆಸಿದೆ. ದೆಹಲಿಯ ಅನೇಕ ರಸ್ತೆಗಳು ಮುಸ್ಲಿಂ ಹೆಸರುಗಳಿದ್ದು, ಅವುಗಳನ್ನು ಮರುನಾಮಕರಿಸುವಂತೆ ಮನವಿ ಮಾಡಿ ದೆಹಲಿ ಬಿಜೆಪಿ ಮುಖ್ಯಸ್ಥ ಆದೇಶ್ ಗುಪ್ತಾ ನಾಗರಿಕ ಸಂಸ್ಥೆ ಹೊಸ ದೆಹಲಿ ಮುನ್ಸಿಪಲ್ ಕೌನ್ಸಿಲ್ಗೆ ಪತ್ರ ಬರೆದಿದ್ದಾರೆ.
ಮೊಘಲ್ ಹೆಸರುಗಳನ್ನು ಬದಲಾಯಿಸಿ
ರಾಷ್ಟ್ರ ರಾಜಧಾನಿಯ ತುಘಲಕ್ ರಸ್ತೆ, ಅಕ್ಬರ್ ರಸ್ತೆ, ಔರಂಗಜೇಬ್ ಲೇನ್, ಹುಮಾಯೂನ್ ರಸ್ತೆ ಮತ್ತು ಷಹಜಹಾನ್ ರಸ್ತೆಗಳನ್ನು ಮರುನಾಮಕರಣ ಮಾಡಬೇಕು. ತುಘಲಕ್ ರಸ್ತೆಗೆ ಗುರು ಗೋಬಿಂದ್ ಸಿಂಗ್ ಮಾರ್ಗ್, ಅಕ್ಬರ್ ರಸ್ತೆಗೆ ಮಹಾರಾಣಾ ಪ್ರತಾಪ್ ರಸ್ತೆ, ಔರಂಗಜೇಬ್ ಲೇನ್ ಅಬ್ದುಲ್ ಕಲಾಂ ಲೇನ್, ಹುಮಾಯೂನ್ ರಸ್ತೆಗೆ ಮಹರ್ಷಿ ವಾಲ್ಮೀಕಿ ರಸ್ತೆ ಮತ್ತು ಷಹಜಹಾನ್ ರಸ್ತೆಗೆ ಜನರಲ್ ಬಿಪಿನ್ ರಾವತ್ ಹೆಸರನ್ನು ಮರುನಾಮಕರಣ ಮಾಡಬೇಕು ಎಂದು ಸಲಹೆಯನ್ನು ನೀಡಿದ್ದಾರೆ.
ಕುತುಬ್ ಮಿನಾರ್ಗೆ ವಿಷ್ಣು ಸ್ತಂಭ ಎಂದು ಇಡಿ
ಇದರ ಜೊತೆಗೆ ಇಂದು ಐತಿಹಾಸಿಕ ಸ್ಮಾರಕವಾಗಿರುವ ದೆಹಲಿಯ ಕುತುಬ್ ಮಿನಾರ್ ಅನ್ನು ವಿಷ್ಣು ಸ್ತಂಭ ಎಂದು ಮರುನಾಮಕರಣ ಮಾಡಬೇಕು ಎಂದು ಹಿಂದೂ ಸಂಘಟನೆಗಳ ಗುಂಪು ಪ್ರತಿಭಟನೆ ನಡೆಸಿತು
ಇದನ್ನು ಓದಿ: ಶಾಹೀನ್ ಭಾಗ್ ಬಳಿಕ ದಕ್ಷಿಣ ದೆಹಲಿಯಲ್ಲಿ ಬುಲ್ಡೋಜರ್ ಡ್ರೈವ್
ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಗುರುತಿಸಿರುವ ಕುತುಬ್ ಮಿನಾರ್ ಹೆಸರನ್ನು ಬದಲಾವಣೆ ಮಾಡಬೇಕು ಎಂದು ಮಹಾಕಾಲ್ ಮಾನವ್ ಸೇವಾ ಮತ್ತು ಇತರ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ಐತಿಹಾಸಿಕ ಸ್ಮಾರಕದ ಎದುರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ, ಕುತುಬ್ ಮಿನಾರ್ ಬಳಿ ಹನುಮಾನ್ ಚಾಲೀಸಾ ಪಠಿಸಿ ಗಮನ ಸೆಳೆದರು.
ಎನ್ಡಿಎಂಸಿಗೆ ಮನವಿ
ಇವರ ಸಲಹೆಯನ್ನು ಹೊಸ ದೆಹಲಿ ಮುನ್ಸಿಪಲ್ ಕೌನ್ಸಿಲ್ (NDMC) ಸಮಿತಿಯು ಅನುಮೋದಿಸಿದೆ. ಈ ಸಂಬಂಧ ವಿವರಣೆ ನೀಡಿರುವ ಸಮಿತಿ. ಈ ರಸ್ತೆಗಳು ಕೇಂದ್ರ ದೆಹಲಿಯಲ್ಲಿನ ರಸ್ತೆಗಳ ಮೇಲೆ ನ್ಯಾಯವ್ಯಾಪ್ತಿಯನ್ನು ಹೊಂದಿರುವ ನಾಗರಿಕ ಸಂಸ್ಥೆಯಾಗಿದೆ. ಅಲ್ಲದೇ, ಇದು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿ ಸೇರಿದಂತೆ ಉನ್ನತ ಸರ್ಕಾರಿ ಕಚೇರಿಗಳು ಮತ್ತು ಮನೆಗಳೊಂದಿಗೆ ಹೊಂದಿರುವ ಅಧಿಕಾರದ ಸ್ಥಾನದ ರಸ್ತೆಗಳಾಗಿದೆ. ಈ ಹಿನ್ನಲೆ ಅಧ್ಯಕ್ಷರ ನೇತೃತ್ವದ 13 ಸದಸ್ಯರ ತಂಡ ಈ ಸಂಬಂಧ ಎನ್ಡಿಎಂಸಿ ಕೌನ್ಸಿಲ್ ಮುಂದೆ ವಿನಂತಿಗಳನ್ನು ಸಲ್ಲಿಸಲಾಗುವುದು ಎಂದು ತಿಳಿಸಿದೆ.
ಬಿಜೆಪಿ ಕಾಲದಲ್ಲಿ ಹೆಚ್ಚಾಯಿತು ಮರುನಾಮಕರಣ
2014 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಉತ್ತರ ಪ್ರದೇಶ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಸ್ಲಿಂ ಹೆಸರುಗಳನ್ನು ಮರು ನಾಮಕರಿಸು ವಿಚಾರ ಹೆಚ್ಚು ವಿವಾದ ಮತ್ತು ಚರ್ಚೆಗೆ ಕಾರಣವಾಯಿತು.
ಇದನ್ನು ಓದಿ: ಆಂಧ್ರ ಕರಾವಳಿಯಲ್ಲಿ ಪರಿಸ್ಥಿತಿ ನಿಭಾಯಿಸಲು NDRF ಸಜ್ಜು; ಬೆಂಗಳೂರಲ್ಲಿ ಶುರುವಾದ ಮಳೆ
2015 ರಲ್ಲಿ, ಔರಂಗಜೇಬ್ ರಸ್ತೆಯನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಹೆಸರನ್ನು ಮರುನಾಮಕರಣ ಮಾಡಲಾಯಿತು. ಒಂದು ವರ್ಷದ ನಂತರ, ಪ್ರಧಾನಿ ನಿವಾಸದ ಗಣ್ಯರ ವಿಳಾಸವಾದ ರೇಸ್ ಕೋರ್ಸ್ ರಸ್ತೆಯನ್ನು ಲೋಕ ಕಲ್ಯಾಣ ಮಾರ್ಗ ಎಂದು ಬದಲಾಯಿಸಲಾಯಿತು.
ಕಳೆದ ತಿಂಗಳು ಸ್ವಾಮಿ ಚಕ್ರಪಾಣಿ ಮಹಾರಾಜ್ ಅವರು ರಾಷ್ಟ್ರ ರಾಜಧಾನಿ ದೆಹಲಿಯ ಹೆಸರನ್ನು ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡುವಂತೆ ಕರೆ ನೀಡಿದ್ದರು. ಅಖಿಲ ಭಾರತ ಹಿಂದೂ ಮಹಾಸಭಾ ಮತ್ತು ಸಂತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರು, ಈ ಸಂಬಂಧ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಹೆಸರು ಬದಲಾಯಿಸುವಂತೆ ಒತ್ತಾಯಿಸಿದರು. ಇದಕ್ಕಾಗಿ ಸಂಘಟನೆಯು ಸಹಿ ಅಭಿಯಾನವನ್ನು ಪ್ರಾರಂಭಿಸುತ್ತದೆ ಎಂದು ತಿಳಿಸಿದ್ದರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ