Himachal Pradesh: ಮಳೆಯಬ್ಬರಕ್ಕೆ 3 ಮಕ್ಕಳು ಸೇರಿ 8 ಮಂದಿ ಸಾವು, 12 ಮಂದಿ ನಾಪತ್ತೆ, 2 ಜಿಲ್ಲೆಗಳ ಶಾಲೆಗಳಿಗೆ ರಜೆ!

ಭಾರೀ ಮಳೆಯಿಂದಾಗಿ ಕುಲ್ಲೂ ಆಡಳಿತವು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಒಂದು ದಿನದ ರಜೆ ಘೋಷಿಸಿದೆ. ಕುಲ್ಲೂವಿನ ಡಿಸಿ ಅಶುತೋಷ್ ಗರ್ಗ್ ಈ ಮಾಹಿತಿ ನೀಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಆಗಸ್ಟ್ 20ಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟ

ಹಿಮಾಚಲ ಪ್ರದೇಶದಲ್ಲಿ ವರುಣನ ಆರ್ಭಟ

  • Share this:
ಶಿಮ್ಲಾ(ಆ.20): ಹಿಮಾಚಲ ಪ್ರದೇಶದಲ್ಲಿ (Himachal Pradesh) ಮಳೆಯಿಂದ ಅಪಾರ ಹಾನಿಯಾಗಿದೆ. ಕಾಂಗ್ರಾದಲ್ಲಿ ಬ್ರಿಟಿಷರ ಕಾಲದ ಚಾಕಿ ರೈಲ್ವೇ ಸೇತುವೆ ಮುರಿದುಬಿದ್ದಿದ್ದು, ಮಂಡಿಯ ಕುಟುಂಬವೊಂದರ ಮೇಲೆ ಮಳೆ ಹಾನಿಯನ್ನುಂಟು ಮಾಡಿದೆ. ಮಂಡಿ ಜಿಲ್ಲೆಯ ಗೋಹರ್‌ನಲ್ಲಿರುವ ಪ್ರಧಾನ್ ಅವರ ಮನೆ ಬಳಿ ಭೂಕುಸಿತ (Landslide) ಸಂಭವಿಸಿದ್ದು, ಅಲ್ಲಿ ಮಲಗಿದ್ದ ಒಟ್ಟು 7 ಸದಸ್ಯರು ಅವಶೇಷಗಳಡಿಯಲ್ಲಿ ಹೂತು ಹೋಗಿದ್ದಾರೆ. ಈವರೆಗೆ ಕೇವಲ 3 ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಭಾರೀ ಮಳೆಯಿಂದಾಗಿ (Rain) ಮಂಡಿ ಮತ್ತು ಕುಲ್ಲೂವಿನ ಶಾಲೆಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ. ಇದರೊಂದಿಗೆ ಚಂಬಾ, ಡಾಲ್‌ಹೌಸಿ, ಸಿಂಘುಟಾ ಮತ್ತು ಚುವಾಡಿಯ ಈ ಮೂರು ತಹಸಿಲ್‌ಗಳಲ್ಲಿರುವಬ ಶಿಕ್ಷಣ ಸಂಸ್ಥೆಗಳಿಗೆ ಆಡಳಿತ ಒಂದು ದಿನದ ರಜೆ ಘೋಷಿಸಿದೆ.

ಇದನ್ನೂ ಓದಿ: Varuna Mitra Helpline: ನಿಮ್ಮೂರಲ್ಲಿ ಮಳೆ ಯಾವಾಗ ಬರುತ್ತೆ? ಒಂದೇ ಒಂದು ಫೋನ್ ಕರೆಯಲ್ಲಿ ಹೀಗೆ ತಿಳಿಯಿರಿ

ಚಂಬಾದಲ್ಲಿ ಅವಶೇಷಗಳಲ್ಲಿ ಹೋದ ಹೂತು ದಂಪತಿ ಮತ್ತು ಮಗ ಸಾವು

ಚಂಬಾ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ಗೋಡೆ ಕುಸಿದು ಅವಶೇಷಗಳಡಿ ಸಿಲುಕಿದ್ದ ಮೂವರು ನಾಪತ್ತೆಯಾಗಿದ್ದರು. ಗ್ರಾಮಾಂತರ ಮತ್ತು ಆಡಳಿತ ತಂಡಗಳು ನಾಪತ್ತೆಯಾಗಿರುವ ಪತಿ, ಪತ್ನಿ ಮತ್ತು ಮಗನ ಶವಗಳನ್ನು ಹೊರತೆಗೆದಿದ್ದಾರೆ. ಭಾಟಿಯಾಟ್ ಪ್ರದೇಶದ ಬಾನೆಟ್ ಪಂಚಾಯಿತಿಯ ಜುಲಾಡಾ ವಾರ್ಡ್ ಸಂಖ್ಯೆ ಒಂದರಲ್ಲಿ ಈ ಮಳೆ ಅನಾಹುತ ಸಂಭವಿಸಿದೆ. ತಡರಾತ್ರಿ ಎರಡು ಗಂಟೆಗೆ ಈ ಘಟನೆ ನಡೆದಿದೆ. ಅವಶೇಷಗಳಡಿಯಲ್ಲಿ ಹೂತು ಹೋಗಿದ್ದ ಪತಿ, ಪತ್ನಿ ಹಾಗೂ ಮಗನ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಚುವಾಡಿ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.


ಮಂಡಿಯಲ್ಲಿ ಮಳೆಯ ಅನಾಹುತ

ಮಳೆಯಿಂದಾಗಿ ಮಂಡಿ ಜಿಲ್ಲೆಯಲ್ಲಿ ಇದುವರೆಗೆ ಅತಿ ಹೆಚ್ಚು ನಾಶವಾಗಿದೆ. ಇಲ್ಲಿ ಹತ್ತು ವರ್ಷದ ಮಗುವಿನ ಶವ ಕಟೋಲಾದಲ್ಲಿ ಪತ್ತೆಯಾಗಿದೆ. ಕಟೋಲ ಮಾರುಕಟ್ಟೆ ಅವಶೇಷಗಳಡಿ ಸಿಲುಕಿತ್ತು. 5-6 ಅಡಿಯಷ್ಟು ಅವಶೇಷಗಳು ಮಾರುಕಟ್ಟೆಗೆ ಕೊಚ್ಚಿ ಬಂದಿವೆ. ಮಂಡಿ ಜಿಲ್ಲೆಯ ಧರಂಪುರದಲ್ಲಿ 2015ರ ಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಸಂಪೂರ್ಣ ಮಾರುಕಟ್ಟೆ ಮತ್ತು ಬಸ್ ನಿಲ್ದಾಣ ಧ್ವಂಸಗೊಂಡಿದೆ. ಮಂಡಿ, ಕತೌಲ್, ಗೋಹರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭೂಕುಸಿತದಿಂದ ಒಟ್ಟು 15 ಮಂದಿ ನಾಪತ್ತೆಯಾಗಿದ್ದಾರೆ. ಗೋಹರ್‌ನಲ್ಲಿರುವ ಪ್ರಧಾನ್ ಅವರ ಮನೆಯಲ್ಲಿ ಭೂಕುಸಿತ ಸಂಭವಿಸಿದ್ದು, 7 ಸದಸ್ಯರ ಕುಟುಂಬ ನಾಪತ್ತೆಯಾಗಿದೆ. ಮಧ್ಯಾಹ್ನದವರೆಗೆ ಇಲ್ಲಿಂದ ಮೂರು ಮೃತದೇಹಗಳನ್ನು ಹೊರ ತೆಗೆಯಲಾಗಿದೆ.

ಇದನ್ನೂ ಓದಿ:  Heavy Rain: ಬೆಂಗಳೂರಿನಲ್ಲಿ ವರುಣನ ಆರ್ಭಟ; ಇನ್ನೆರಡು ದಿನ ಭಾರೀ ಮಳೆ

ಕುಲ್ಲೂವಿನಲ್ಲಿ ಮಳೆಯಿಂದ ಅನಾಹುತ

ಕುಲ್ಲೂ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ. ಹಲವೆಡೆ ಭೂಕುಸಿತದಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಸೈನ್ಜ್ ಕಣಿವೆಯ ಪಾಗಲ್ ನಾಲೆ ಮೂಲಕ ಭಾರೀ ಪ್ರಮಾಣದ ಅವಶೇಷಗಳು ರಸ್ತೆಗೆ ಬಂದಿದ್ದು, ಲೋಕೋಪಯೋಗಿ ಇಲಾಖೆಯ ಯಂತ್ರೋಪಕರಣಗಳು ಸಂಚಾರವನ್ನು ಪುನಃಸ್ಥಾಪಿಸಲು ಸ್ಥಳದಲ್ಲೇ ಇವೆ. ಅದೇ ಸಮಯದಲ್ಲಿ, ಭಾರೀ ಮಳೆಯಿಂದಾಗಿ, ಕುಲ್ಲೂ ಆಡಳಿತವು ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು 1 ದಿನ ಮುಚ್ಚಿದೆ. ಡಿಸಿ ಕುಲು ಅಶುತೋಷ್ ಗರ್ಗ್ ಈ ಮಾಹಿತಿ ನೀಡಿದ್ದಾರೆ.
Published by:Precilla Olivia Dias
First published: