• Home
  • »
  • News
  • »
  • national-international
  • »
  • Assembly Elections 2022: ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ಕ್ಕೆ ಎಲೆಕ್ಷನ್, ಗುಜರಾತ್ ಚುನಾವಣೆ ಯಾವಾಗ?

Assembly Elections 2022: ಹಿಮಾಚಲ ಪ್ರದೇಶದಲ್ಲಿ ನವೆಂಬರ್ 12ಕ್ಕೆ ಎಲೆಕ್ಷನ್, ಗುಜರಾತ್ ಚುನಾವಣೆ ಯಾವಾಗ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Assembly Elections 2022: ಇಂದು ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಆಯೋಗ (Central Election Commission), ಗುಜರಾತ್‌ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಪ್ರಕಟಿಸಿಲ್ಲ. ಇನ್ನು ಹಿಮಾಚಲ ಪ್ರದೇಶ (Himachal Pradesh) ರಾಜ್ಯದ ವಿಧಾನಸಭಾ ಚುನಾವಣೆಗೆ ಇಂದು ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಇದೇ ನವೆಂಬರ್ 12ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ.

ಮುಂದೆ ಓದಿ ...
  • News18 Kannada
  • Last Updated :
  • New Delhi, India
  • Share this:

ನವದೆಹಲಿ: ದೇಶದ ಗಮನ ಸೆಳೆದಿರುವ ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಗೆ (Gujarat assembly elections) ಇನ್ನೂ ಮುಹೂರ್ತ ಫಿಕ್ಸ್ ಆಗಿಲ್ಲ. ಇಂದು ಸುದ್ದಿಗೋಷ್ಠಿ (Press meet) ನಡೆಸಿದ ಕೇಂದ್ರ ಚುನಾವಣಾ ಆಯೋಗ (Central Election Commission), ಗುಜರಾತ್‌ ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ಪ್ರಕಟಿಸಿಲ್ಲ. ಇನ್ನು ಹಿಮಾಚಲ ಪ್ರದೇಶ (Himachal Pradesh) ರಾಜ್ಯದ ವಿಧಾನಸಭಾ ಚುನಾವಣೆಗೆ ಇಂದು ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಇದೇ ನವೆಂಬರ್ 12ರಂದು ಹಿಮಾಚಲ ಪ್ರದೇಶದಲ್ಲಿ ಚುನಾವಣೆ ನಡೆಯಲಿದೆ. ಒಂದೇ ಹಂತದ ಮತದಾನ (single phase voting) ನಡೆಯಲಿದ್ದು, ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ ಅಂತ ಕೇಂದ್ರ ಚುನಾವಣಾ ಆಯೋಗದ ಆಯುಕ್ತ ರಾಜೀವ್ ಕುಮಾರ್ (Commissioner Rajeev Kumar) ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.


ಹಿಮಾಚಲ ಪ್ರದೇಶ ಚುನಾವಣೆಗೆ ಮುಹೂರ್ತ


ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ ಮುಂಬರುವ ನವೆಂಬರ್ 12ರಂದು ನಡೆಯಲಿದೆ. ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್, ಏಕ ಹಂತದಲ್ಲಿ ಚುನಾವಣೆ ನಡೆಯಲ್ದಿದ್ದು, ಡಿಸೆಂಬರ್ 8ರಂದು ಎತ ಎಣಿಕೆ ನಡೆಯಲಿದೆ ಅಂತ ಹೇಳಿದ್ದಾರೆ.
ಹಿಮಾಚಲ ಪ್ರದೇಶ ಚುನಾವಣಾ ಪ್ರಕ್ರಿಯೆ


ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಗೆಜೆಟೆಡ್ ಅಧಿಸೂಚನೆಯ ದಿನಾಂಕ: ಅಕ್ಟೋಬರ್ 17 ಆಗಿದೆ. ನಾಮನಿರ್ದೇಶನಗಳ ಕೊನೆಯ ದಿನಾಂಕ: ಅಕ್ಟೋಬರ್ 25, ಪರಿಶೀಲನೆಯ ಕೊನೆಯ ದಿನಾಂಕ: ಅಕ್ಟೋಬರ್ 27 ಆಗಿದೆ. ಇನ್ನು ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಅಕ್ಟೋಬರ್ 29 ಆಗಿದ್ದು, ನವೆಂಬರ್ 12ರಂದು ಎಲೆಕ್ಷನ್ ನಡೆಯಲಿದೆ. ಇದಾದ ಬಳಿಕ ಡಿಸೆಂಬರ್ 8ರಂದು ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.


ಕೇಂದ್ರ ಚುನಾವಣಾ ಆಯುಕ್ತ ರಾಜೀವ್ ಕುಮಾರ್


ಇದನ್ನೂ ಓದಿ: Karnataka Assembly Elections: ಗಾಂಧಿನಗರದ ಗಲ್ಲಿಯೊಳಗೆ ಹೇಗಿದೆ ಚುನಾವಣಾ ಕಾವು? ಈ ಬಾರಿ ಗೆಲ್ಲೋದು ಕೈ-ಕಮಲ-ದಳವೋ?


ರಾಜ್ಯದಲ್ಲಿ 55 ಲಕ್ಷ ಮತದಾರರು


ಅಕ್ಟೋಬರ್ 10 ರಂದು ಪ್ರಕಟಿಸಲಾದ ಮತದಾರರ ಪಟ್ಟಿಯ ಪ್ರಕಾರ, 55 ಲಕ್ಷಕ್ಕೂ ಹೆಚ್ಚು ಮತದಾರರು ನೋಂದಾಯಿಸಿಕೊಂಡಿದ್ದಾರೆ, ಅವರಲ್ಲಿ ಸುಮಾರು 55,000 ಅಂಗವಿಕಲ ಮತದಾರರು, 1.22 ಲಕ್ಷಕ್ಕೂ ಹೆಚ್ಚು 80+ ಹಿರಿಯ ನಾಗರಿಕರು ಮತ್ತು 1.86 ಲಕ್ಷ ಮೊದಲ ಬಾರಿಗೆ ಹಿಮಾಚಲ ಪ್ರದೇಶದಲ್ಲಿ ಮತದಾರರಿದ್ದಾರೆ ಎಂದು ECI ತಿಳಿಸಿದೆ. ಚುನಾವಣೆಯನ್ನು ಸುಗಮವಾಗಿ ನಡೆಸಲು ಇಸಿಐ 68 ವಿಧಾನಸಭಾ ಕ್ಷೇತ್ರಗಳಲ್ಲಿ 7,881 ಮತಗಟ್ಟೆಗಳನ್ನು ಸ್ಥಾಪಿಸಲಿದೆ. ಸುಮಾರು 142 ಮತಗಟ್ಟೆಗಳನ್ನು ಮಹಿಳೆಯರು ಮತ್ತು 37 ಮತಗಟ್ಟೆಗಳನ್ನು ದಿವ್ಯಾಂಗರು ನಿರ್ವಹಿಸುತ್ತಾರೆ.


ಹಿಮಾಚಲ ಪ್ರದೇಶ ಸಿಎಂ ಜೈರಾಂ ಠಾಕೂರ್


43 ಸಾವಿರ ಮಂದಿಯಿಂದ ಮೊದಲ ಬಾರಿ ವೋಟಿಂಗ್


ಇನ್ನು ಹಿಮಾಚಲ ಪ್ರದೇಶದಲ್ಲಿ ಮೊದಲ ಬಾರಿಗೆ 43,000 ಮತದಾರರು ವೋಟ್ ಮಾಡಲಿದ್ದಾರೆ. 100 ವರ್ಷ ಮೇಲ್ಪಟ್ಟ 1000ಕ್ಕೂ ಹೆಚ್ಚು ಮತದಾರರಿದ್ದು,  ಮತದಾನ ಮಾಡಲು ಅನುಕೂಲವಾಗುವಂತೆ ಅವರ ಮನೆಗಳಿಗೆ ಹೋಗುತ್ತೇವೆ ಅಂತ ಚುನಾವಣಾ ಆಯೋಗ ತಿಳಿಸಿದೆ.


ಗುಜರಾತ್ ಸಿಎಂ ಭೂಪೇಂದ್ರ ಪಟೇಲ್


2017ರ ವಿಧಾನಸಭೆ ಚುನಾವಣೆ ಫಲಿತಾಂಶ


2017ರ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 68 ಸ್ಥಾನಗಳ ಪೈಕಿ 44 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸಿತ್ತು. ಕಾಂಗ್ರೆಸ್ ಅಧಿಕಾರದಿಂದ ಕೆಳಗಿಳಿಸಲ್ಪಟ್ಟಿತು ಮತ್ತು ಕೇವಲ 21 ವಿಧಾನಸಭಾ ಸ್ಥಾನಗಳನ್ನು ಗಳಿಸಲು ಸಾಧ್ಯವಾಯಿತು. ಈ ಎರಡು ಪಕ್ಷಗಳ ಹೊರತಾಗಿ, ಸಿಪಿಐ(ಎಂ) ಒಂದು ಸ್ಥಾನವನ್ನು ಪಡೆಯಲು ಸಾಧ್ಯವಾಯಿತು ಮತ್ತು ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಎರಡು ವಿಧಾನಸಭಾ ಸ್ಥಾನಗಳನ್ನು ಗೆದ್ದಿದ್ದಾರೆ. ಹಿಮಾಚಲ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ನಂತರ, ರಾಜ್ಯದ ಮುಖ್ಯಮಂತ್ರಿಯಾಗಿ ಜೈ ರಾಮ್ ಠಾಕೂರ್ ಅವರನ್ನು ನೇಮಿಸಿತು.


ಇದನ್ನೂ ಓದಿ: Karnataka Assembly Elections: ಹಳೆ ಸಂಪ್ರದಾಯದ ಬೇರು, ಹೊಸ ಅಭಿವೃದ್ಧಿಯ ಚಿಗುರು; ಮಲ್ಲೇಶ್ವರಂನಲ್ಲಿ ಈ ಬಾರಿ ಗೆಲ್ಲೋರ್ಯಾರು?


ಗುಜರಾತ್ ಚುನಾವಣೆ ಯಾವಾಗ?


ಇನ್ನು ಇಂದೇ ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟಿಸುವ ನಿರೀಕ್ಷೆ ಇತ್ತು. ಆದರೆ ಇಂದು ಕೇಂದ್ರ ಚುನಾವಣಾ ಆಯೋಗ ಹಿಮಾಚಲ ಪ್ರದೇಶ ಚುನಾವಣೆಯ ದಿನಾಂಕ ಮಾತ್ರ ಪ್ರಕಟಿಸಿದೆ.

Published by:Annappa Achari
First published: