• Home
  • »
  • News
  • »
  • national-international
  • »
  • Himachal Pradesh: ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಬಿಗ್ ಶಾಕ್, ಹಿಮಾಚಲ ಕಾರ್ಯಾಧ್ಯಕ್ಷ ಬಿಜೆಪಿಗೆ!

Himachal Pradesh: ಚುನಾವಣೆಗೂ ಮುನ್ನ ಕಾಂಗ್ರೆಸ್​ಗೆ ಬಿಗ್ ಶಾಕ್, ಹಿಮಾಚಲ ಕಾರ್ಯಾಧ್ಯಕ್ಷ ಬಿಜೆಪಿಗೆ!

ಹರ್ಷ್ ಮಹಾಜನ್ ಬಿಜೆಪಿಗೆ ಸೇರ್ಪಡೆ

ಹರ್ಷ್ ಮಹಾಜನ್ ಬಿಜೆಪಿಗೆ ಸೇರ್ಪಡೆ

Harsh Mahajan Joins BJP:ಈ ವರ್ಷಾಂತ್ಯದಲ್ಲಿ ಹಿಮಾಚಲದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನವೇ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ. ಹಿಮಾಚಲ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಹರ್ಷ್ ಮಹಾಜನ್ ಇಂದು ಅಂದರೆ ಬುಧವಾರ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ(ಸೆ.28): ಈ ವರ್ಷಾಂತ್ಯದಲ್ಲಿ ಹಿಮಾಚಲದಲ್ಲಿ  ನಡೆಯಲಿರುವ ವಿಧಾನಸಭಾ ಚುನಾವಣೆಗೆ (Himachal Pradesh Assembly Elections) ಮುನ್ನವೇ ಕಾಂಗ್ರೆಸ್ ಭಾರಿ ಮುಖಭಂಗವಾಗಿದೆ. ಕಾಂಗ್ರೆಸ್‌ನ ಹಿಮಾಚಲ ಪ್ರದೇಶ (Himachal Pradesh Congress) ಘಟಕದ ಹಿರಿಯ ನಾಯಕ ಮತ್ತು ಕಾರ್ಯಾಧ್ಯಕ್ಷ ಹರ್ಷ್ ಮಹಾಜನ್ (Harsh Mahajan) ಬುಧವಾರ ಭಾರತೀಯ ಜನತಾ ಪಕ್ಷಕ್ಕೆ (Bharatiya Janata Party) ಸೇರಿದ್ದಾರೆ. ಕೇಂದ್ರ ಸಚಿವ ಪಿಯೂಷ್ ಗೋಯಲ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಅವರ ಸಮ್ಮುಖದಲ್ಲಿ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ಈ ವರ್ಷಾಂತ್ಯದಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಮಹಾಜನ್ ಬಿಜೆಪಿಗೆ ಸೇರ್ಪಡೆಯಾಗಿರುವುದು ಭಾರೀ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಈ ವರ್ಷದ ಮೇ ತಿಂಗಳಲ್ಲಿ ಮಹಾಜನ್ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಯಿತು.


ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮಿಸ್ ಮಾಡ್ದೇ ನೋಡಬೇಕಿರೋ ಸ್ಥಳಗಳಿವು!


ಮಹಾಜನ್​ಗೆ ಗೋಯಲ್ ಸ್ವಾಗತ


ಈ ಸಂದರ್ಭದಲ್ಲಿ ಮಹಾಜನ್ ಅವರನ್ನು ಸ್ವಾಗತಿಸಿದ ಗೋಯಲ್ ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗುಡ್ಡಗಾಡು ರಾಜ್ಯಗಳಲ್ಲಿ ಈ ಹಿಂದೆ ಅಧಿಕಾರದಲ್ಲಿರುವ ಪಕ್ಷ ಮತ್ತೆ ಸರ್ಕಾರ ರಚಿಸುವುದಿಲ್ಲ ಎಂಬ ಅಭಿಪ್ರಾಯವಿತ್ತು, ಆದರೆ ಇತ್ತೀಚೆಗೆ ಉತ್ತರಾಖಂಡದಲ್ಲಿ ಬಿಜೆಪಿ ಈ ಸಂಪ್ರದಾಯವನ್ನು ಮುರಿದಿದೆ ಎಂದು ಹೇಳಿದರು.


ಇದನ್ನೂ ಓದಿ: Anand Sharma: ಕಾಂಗ್ರೆಸ್​ಗಾಗಿ ಜೀವನವನ್ನೇ ಮುಡಿಪಾಗಿಟ್ಟೆ ಸಿಕ್ಕಿದ್ದು ಅವಮಾನ, ನಿಂದನೆ: ಹಿರಿಯ ನಾಯಕನ ನೋವಿನ ನುಡಿ!


ವೀರಭದ್ರ ಸಿಂಗ್ ಪತ್ನಿ, ಮಗನ ಉಲ್ಲೇಖ


ಮಹಾಜನ್ ಅವರು ವೀರಭದ್ರ ಸಿಂಗ್ ಅವರ ಪತ್ನಿ ಮತ್ತು ಮಗನ ಬಗ್ಗೆಯೂ ಉಲ್ಲೇಖಿಸುತ್ತಿದ್ದರು. ವೀರಭದ್ರ ಸಿಂಗ್ ಕಳೆದ ವರ್ಷ ನಿಧನರಾಗಿದ್ದರು. ಅವರ ಪತ್ನಿ ಪ್ರತಿಭಾ ಸಿಂಗ್ ಮಂಡಿಯಿಂದ ಸಂಸದರಾಗಿದ್ದು, ರಾಜ್ಯಾಧ್ಯಕ್ಷರ ಜವಾಬ್ದಾರಿಯನ್ನೂ ನಿಭಾಯಿಸುತ್ತಿದ್ದಾರೆ. ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಶಾಸಕರಾಗಿದ್ದಾರೆ.


ಮಹಾಜನ್ ದೀರ್ಘಕಾಲ ವೀರಭದ್ರ ಸಿಂಗ್ ಅವರ ಸಹವರ್ತಿಯಾಗಿದ್ದರು. ಅವರು ಹಿಮಾಚಲ ಪ್ರದೇಶದ ಪಶುಸಂಗೋಪನೆ ಸಚಿವರೂ ಆಗಿದ್ದಾರೆ. ಮಹಾಜನ್ ಅವರ ತಂದೆ ದೇಶ್ ರಾಜ್ ಮಹಾಜನ್ ಅವರು ವಿಧಾನಸಭೆಯ ಸ್ಪೀಕರ್ ಮತ್ತು ಕ್ಯಾಬಿನೆಟ್ ಸಚಿವರಾಗಿದ್ದಾರೆ. ಹರ್ಷ್ ಮಹಾಜನ್ ಅವರು ಸತತ ಮೂರು ಅವಧಿಗೆ ಚಂಬಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿದ್ದರು.

Published by:Precilla Olivia Dias
First published: