Jai Ram Thakur: ಕರ್ನಾಟಕದ ಅಳಿಯನ ಹಿಮಾಚಲ ಜಯಭೇರಿ!

ಜೈರಾಮ್ ಠಾಕೂರ್

ಜೈರಾಮ್ ಠಾಕೂರ್

ಜೈರಾಮ್ ಠಾಕೂರ್ ಅವರ ಹೆಂಡತಿ ಮೂಲತಃ ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರು ಎಂಬ ವಿಷಯ ಇದೀಗ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ. 

  • News18 Kannada
  • Last Updated :
  • Himachal Pradesh, India
  • Share this:

ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶ (Himachal Pradesh Assembly Elections 2022)  ಹೊರಬಿದ್ದಿದ್ದು ಕಾಂಗ್ರೆಸ್​ ಕೈಗೆ ಗೆಲುವಿನ ಕೀಲಿಕೈ ಸಿಕ್ಕಿದೆ. ಇದಕ್ಕಿಂತಲೂ ಹೆಚ್ಚು ಕರ್ನಾಟಕದ ಅಳಿಯ ಹಿಮಾಚಲ ಪ್ರದೇಶದಲ್ಲಿ ಅಭೂತಪೂರ್ವ ಜಯಭೇರಿ ಬಾರಿಸಿದ್ದಾರೆ. ಹಿಮಾಚಲ ಪ್ರದೇಶದ ಜೈರಾಮ್ ಠಾಕೂರ್ (Jai Ram Thakur) ಸೆರಾಜ್ ವಿಧಾನಸಭಾ ಕ್ಷೇತ್ರದಿಂದ ಬರೋಬ್ಬರಿ 20 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಆದರೆ ಬಿಜೆಪಿಯನ್ನು (BJP) ಮತ್ತೆ ಅಧಿಕಾರದ ಚುಕ್ಕಾಣಿಗೆ ತರಲು ಅವರು ವಿಫಲರಾಗಿದ್ದಾರೆ.  ಕಾಂಗ್ರೆಸ್‌ನ ಚೇತ್ ರಾಮ ಅವರ (Chet Ram) ವಿರುದ್ಧ ಅವರು ಜಯಭೇರಿ ಬಾರಿಸಿದ್ದಾರೆ.


ಜೈರಾಮ್ ಠಾಕೂರ್ ಅವರ ಹೆಂಡತಿ ಮೂಲತಃ ಕರ್ನಾಟಕದ ಶಿವಮೊಗ್ಗ ಜಿಲ್ಲೆಯವರು ಎಂಬ ವಿಷಯ ಇದೀಗ ಎಲ್ಲೆಡೆ ಸಂಚಲನ ಮೂಡಿಸುತ್ತಿದೆ.  ಜೈರಾಮ್ ಠಾಕೂರ್ ಅವರ ಹೆಂಡತಿ ಸಾಧನಾ ಠಾಕೂರ್, ಮಕ್ಕಳು ಚಂದ್ರಿಕಾ ಠಾಕೂರ್ ಮತ್ತು ಪ್ರಿಯಾಂಕಾ ಠಾಕೂರ್.  ಸಾಧನಾ ಠಾಕೂರ್ ಮದುವೆಗೂ ಮುನ್ನ ಸಾಧನಾ ರಾವ್ ಆಗಿದ್ದರು. ಮುಂದೆ ಜೈರಾಮ್ ಠಾಕೂರ್ ಅವರನ್ನು ಮದುವೆಯಾಗಿ ಸಾಧನಾ ಠಾಕೂರ್ ಆಗಿ ಬದಲಾದರು.


ಎಂಬಿಬಿಎಸ್ ಪದವೀಧರೆ ಸಾಧನಾ ಠಾಕೂರ್
ಸಾಧನಾ ಠಾಕೂರ್ ತಮ್ಮ ಚಿಕ್ಕ ವಯಸ್ಸಲ್ಲೇ ರಾಜಸ್ಥಾನದ ಜೈಪುರದಲ್ಲಿ ನೆಲೆಸಿದ್ದ ಅವರು ಎಂಬಿಬಿಎಸ್ ಪದವಿ ಪಡೆದಿದ್ದಾರೆ.  ಇದೀಗ ಅವರ ಇಬ್ಬರು ಮಕ್ಕಳು ಸಹ ಎಂಬಿಬಿಎಸ್ ಪದವಿ ಓದುತ್ತಿದ್ದಾರೆ.


ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ ಮತ್ತೆ ಬಂದಿಲ್ಲ!
ಕಳೆದ ನಾಲ್ಕು ದಶಕಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಒಮ್ಮೆ ಅಧಿಕಾರಕ್ಕೆ ಬಂದ ಪಕ್ಷ ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿಲ್ಲ. 


ಸದ್ಯದ ಮಾಹಿತಿ ಪ್ರಕಾರ (ಸಂಜೆ 5 ಗಂಟೆ) ಕಾಂಗ್ರೆಸ್​ 39 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಜೈರಾಮ್ ಠಾಕೂರ್ ಬಿಜೆಪಿಯ ಸೋಲೊಪ್ಪಿಕೊಂಡಿದ್ದಾರೆ.


ಇದನ್ನೂ ಓದಿ: Himachal Pradesh Assembly Elections 2022: ಯಾರಾಗ್ತಾರೆ ಹಿಮಾಚಲದ ಮುಖ್ಯಮಂತ್ರಿ, ಈ ಮಹಿಳಾ ನಾಯಕಿ ಕೈಗೆ ರಾಜ್ಯದ ಚುಕ್ಕಾಣಿ?


ರಾಜೀನಾಮೆ ಸಲ್ಲಿಸಲಿರುವ ಜೈರಾಮ್ ಠಾಕೂರ್
ತಮ್ಮ ಗೆಲುವು ಮತ್ತು ಬಿಜೆಪಿಯ ಸೋಲಿನ ಕುರಿತು ಪ್ರತಿಕ್ರಿಯಿಸಿದ ಜೈರಾಮ್ ಠಾಕೂರ್, ಕಳೆದ 5 ವರ್ಷಗಳಿಂದ ಮಾರ್ಗದರ್ಶನ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅಲ್ಲದೇ, ರಾಜ್ಯಪಾಲರಿಗೆ ರಾಜೀನಾಮೆ ಪತ್ರ ರವಾನಿಸುವುದಾಗಿಯೂ ತಿಳಿಸಿದ್ದಾರೆ.


ಮತ್ತೆ ಶುರುವಾಗುತ್ತಾ ಪಕ್ಷಾಂತರ ಪರ್ವ?
ಹಿಮಾಚಲ ಪ್ರದೇಶದಲ್ಲಿ ಚಳಿಯ ನಡುವೆಯೂ ಚುನಾವಣೆಯ ಕಾವು ಜೋರಾಗಿದೆ. ಕಾಂಗ್ರೆಸ್ ಬಹುಮತಕ್ಕೆ ಬೇಕಾಗುವಷ್ಟು ಕ್ಷೇತ್ರಗಳಲ್ಲಿ ಗೆದ್ದಿದೆ. ಆದ್ರೆ, ಆಪರೇಷನ್ ಕಮಲದ ಭೀತಿ ಕೈಪಡೆಯನ್ನು ಕಾಡ್ತಿದೆ. ಆದ್ದರಿಂದ ಕಾಂಗ್ರೆಸ್​​ ಶಾಸಕರನ್ನು ಶಿಮ್ಲಾ, ರಾಜಸ್ಥಾನ ಇಲ್ಲವೇ ಛತ್ತಿಸ್​ಗಢಕ್ಕೆ ಶಿಫ್ಟ್ ಮಾಡುವ ಸಾಧ್ಯತೆ ದಟ್ಟವಾಗಿದೆ.


ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು?
ಹಿಮಾಚಲ ಪ್ರದೇಶ ರಾಜ್ಯ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್, ಮಾಜಿ ರಾಜ್ಯಾಧ್ಯಕ್ಷ ಸುಖವಿಂದರ್ ಸಿಂಗ್ ಸುಖು, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿಮ್, ಹಿರಿಯ ನಾಯಕ ಸುಧೀರ್ ಶರ್ಮಾ ಮತ್ತು ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದಾರೆ.


ಇದನ್ನೂ ಓದಿ: Gujarat Election Result 2022: ದೇಶದಲ್ಲಿ ಹೊಸ ರಾಷ್ಟ್ರೀಯ ಪಕ್ಷದ ಉಗಮ! 10 ವರ್ಷಕ್ಕೇ ಈ ಸಾಧನೆ


ಮಹಿಳೆ ಸಿಎಂ ಆಗ್ತಾರಾ?
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸ್ಥಾನದ ರೇಸ್‌ನಲ್ಲಿ ಪ್ರತಿಭಾ ಸಿಂಗ್ ಮುನ್ನಡೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಅವರನ್ನು ಮುಖ್ಯಮಂತ್ರಿ ಮಾಡಿದರೆ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.

Published by:ಗುರುಗಣೇಶ ಡಬ್ಗುಳಿ
First published: