ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ (Himachal Pradesh Assembly Elections) ಎಕ್ಸಿಟ್ ಪೋಲ್ (Exit Polls) ಫಲಿತಾಂಶ ಹೊರಬಿದ್ದಿದೆ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ (BJP and Congress) ನಡುವೆ ಸಮಬಲದ ಪೈಪೋಟಿ ಏರ್ಪಡಲಿದೆ ಎಂದು ಎಲ್ಲಾ ಸಂಸ್ಥೆಗಳು ಭವಿಷ್ಯ ನುಡಿದಿವೆ. ಹಿಮಾಚಲ ಪ್ರದೇಶವು 68 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಬಹುಮತಕ್ಕಾಗಿ 35 ರ ಸಂಖ್ಯೆಯನ್ನು ದಾಟಬೇಕಾಗಿದೆ. ಎಲ್ಲಾ ಎಕ್ಸಿಟ್ ಪೋಲ್ಗಳನ್ನು ನೋಡಿದರೆ ಅಲ್ಲೊಂದು ಇಲ್ಲೊಂದು 4 ಸೀಟು ಬಂದರೆ ಇಡೀ ಆಟವೇ ಬದಲಾಗುವ ಸಾಧ್ಯತೆ ಇದೆ.
ಇಂಡಿಯಾ ಟಿವಿ ತನ್ನ ಸಮೀಕ್ಷೆಯಲ್ಲಿ ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ 35-40 ಸ್ಥಾನಗಳು ಸಿಗುವ ಸಾಧ್ಯತೆ ಇದೆ ಎಂದಿದೆ. ಕಾಂಗ್ರೆಸ್ 26 ರಿಂದ 31 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿದೆ. ಆಪ್ ತೆಕ್ಕೆಗೆ ಇಲ್ಲಿ ಒಂದೇ ಒಂದು ಸ್ಥಾನ ಸಿಕ್ಕಿಲ್ಲ. ಇತರರು 3 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: Assembly Elections: ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ರೆಡಿಯಾಗಿದೆ ಬಿಜೆಪಿ ಮಾಸ್ಟರ್ ಪ್ಲಾನ್!
* ನ್ಯೂಸ್ ಎಕ್ಸ್ ರಾಜ್ಯದಲ್ಲಿ ಬಿಜೆಪಿಗೆ 32 ರಿಂದ 40 ಮತ್ತು ಕಾಂಗ್ರೆಸ್ಗೆ 27 ರಿಂದ 34 ಸ್ಥಾನಗಳಲ್ಲೆ ಗೆಲುವಿ ಸಿಗುವ ಭವಿಷ್ಯ ನುಡಿದಿದೆ. ಇಲ್ಲೂ ಎಎಪಿಗೆ ಶೂನ್ಯ ಸ್ಥಾನದ ಭವಿಷ್ಯ ನುಡಿಯಲಾಗಿದೆ.
* ರಿಪಬ್ಲಿಕ್ ಟಿವಿ ಕೂಡ ಇಲ್ಲಿ ಬಿಜೆಪಿಗೆ ಬಹುಮತ ತೋರಿಸಿದೆ. ಇದು ಬಿಜೆಪಿಗೆ 34-39 ಸ್ಥಾನಗಳನ್ನು ನೀಡಿದರೆ, ಕಾಂಗ್ರೆಸ್ 28-33 ಸ್ಥಾನಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂದಿದೆ.
* ಟೈಮ್ಸ್ ನೌ ಬಿಜೆಪಿ 34 ರಿಂದ 42 ಸ್ಥಾನಗಳನ್ನು ಮತ್ತು ಕಾಂಗ್ರೆಸ್ 24-32 ಸ್ಥಾನಗಳನ್ನು ಪಡೆಯುತ್ತದೆ ಎಂದು ಭವಿಷ್ಯ ನುಡಿದಿದೆ.
* ಝೀ ನ್ಯೂಸ್ BARC ಸಹಯೋಗದಲ್ಲಿ ಸಮೀಕ್ಷೆ ನಡೆಸಿದೆ. ಇದು ಹಿಮಾಚಲದಲ್ಲಿ ಬಿಜೆಪಿಗೆ 35 ರಿಂದ 40 ಮತ್ತು ಕಾಂಗ್ರೆಸ್ಗೆ 20 ರಿಂದ 25 ಸ್ಥಾನಗಳಲ್ಲಿ ಗೆಲುವು ಸಿಗುವ ಭವಿಷ್ಯ ನುಡಿದಿದೆ.
ಇದನ್ನೂ ಓದಿ: Himachal Pradesh: ಚುನಾವಣೆಗೂ ಮುನ್ನ ಕಾಂಗ್ರೆಸ್ಗೆ ಬಿಗ್ ಶಾಕ್, 26 ಕೈ ನಾಯಕರು ಬಿಜೆಪಿಗೆ ಸೇರ್ಪಡೆ!
ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಬಹುಮತ
ಇಂಡಿಯಾ ಟುಡೇ ತನ್ನ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಗೆ 24 ರಿಂದ 34 ಸ್ಥಾನಗಳು ಮತ್ತು ಕಾಂಗ್ರೆಸ್ಗೆ 30 ರಿಂದ 40 ಸ್ಥಾನಗಳಲ್ಲಿ ಗೆಲುವು ಸಿಗುವ ಭವಿಷ್ಯ ನುಡಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ