HOME » NEWS » National-international » HIMACHAL BJP CHIEFS OBSCENE SLUR FOR RAHUL GANDHI

ರಾಹುಲ್ ಗಾಂಧಿ ವಿರುದ್ಧ ತೀರಾ ಅಶ್ಲೀಲ ಪದ ಬಳಕೆ ಮಾಡಿದ ಹಿಮಾಚಲಪ್ರದೇಶ ಬಿಜೆಪಿ ಮುಖ್ಯಸ್ಥ; ಕ್ಷಮಾಪಣೆಗೆ ಕಾಂಗ್ರೆಸ್ ಆಗ್ರಹ

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕುಲದೀಪ್ ರಾಥೋರ್ ಮಾತನಾಡಿ, ಒಬ್ಬ ಹಿರಿಯ ರಾಜಕಾರಣಿಯಿಂದ ನಾವು ಈ ರೀತಿಯ ಅಸಹ್ಯ ಭಾಷೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

HR Ramesh | news18
Updated:April 15, 2019, 6:06 PM IST
ರಾಹುಲ್ ಗಾಂಧಿ ವಿರುದ್ಧ ತೀರಾ ಅಶ್ಲೀಲ ಪದ ಬಳಕೆ ಮಾಡಿದ ಹಿಮಾಚಲಪ್ರದೇಶ ಬಿಜೆಪಿ ಮುಖ್ಯಸ್ಥ; ಕ್ಷಮಾಪಣೆಗೆ ಕಾಂಗ್ರೆಸ್ ಆಗ್ರಹ
ರಾಹುಲ್ ಗಾಂಧಿ
  • News18
  • Last Updated: April 15, 2019, 6:06 PM IST
  • Share this:
ಶಿಮ್ಲಾ (ಹಿಮಾಚಲಪ್ರದೇಶ): ಶಿಮ್ಲಾ ಲೋಕಸಭಾ ಕ್ಷೇತ್ರದ ಬಡ್ಡಿ ನಗರದಲ್ಲಿ ಇಂದು ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಸತ್ಪಾಲ್​ ಸಿಂಗ್​ ಸತ್ತಿ ಅವರು ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ತೀರಾ ಅಶ್ಲೀಲ ಪದ ಬಳಕೆ ಮಾಡುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. 

"ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಚೌಕಿದಾರ್ ಚೋರ್​ ಹೈ ಎನ್ನುತ್ತಿದ್ದಾರೆ. ಕಳ್ಳನೇ ಬೇರೊಬ್ಬರನ್ನು ಕಳ್ಳ ಎನ್ನುತ್ತಿದ್ದಾನೆ. ರಾಹುಲ್​ ಗಾಂಧಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ತಾಯಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಭಾವ ಜಾಮೀನಿನ ಮೇಲೆ ಹೊರಗಿದ್ದಾರೆ. ಇಂತಹವರು ಪ್ರಧಾನಿಯನ್ನು ಕಳ್ಳ ಎಂದು ಕರೆಯುತ್ತಿದ್ದಾರೆ. ಪ್ರಧಾನಿ ಮೋದಿ ಕಳ್ಳನಾದರೆ, ರಾಹುಲ್ ಗಾಂಧಿ ಮಾದಾರ್........." ಎಂದು ಸತ್ಪಾಲ್​ ಸಿಂಗ್​ ತೀರಾ ಅಸಹ್ಯ ಪದ ಬಳಕೆ ಮಾಡಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಜಿಪಿ ರಾಜ್ಯಾಧ್ಯಕ್ಷ ಸತ್ಪಾಲ್ ಸಿಂಗ್​ ಅವರಿಂದ ಕ್ಷಮಾಪಣೆಗೆ ಆಗ್ರಹಿಸಿರುವ ರಾಜ್ಯ ಕಾಂಗ್ರೆಸ್ ಘಟಕ, ಈ ಹೇಳಿಕೆ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. "ನಾವು ನಮ್ಮ ಕಾನೂನು ತಜ್ಞರಿಂದ ಅಭಿಪ್ರಾಯ ಕೇಳಿದ್ದೇವೆ. ಸದ್ಯಕ್ಕೆ ಈಗ ದೂರು ನೀಡಿದ್ದೇವೆ ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್​ ವಕ್ತಾರ ನರೇಶ್​ ಚೌಹ್ಹಾಣ್ ತಿಳಿಸಿದ್ದಾರೆ.ಇದನ್ನು ಓದಿ: ‘ಜಿಲ್ಲೆಯಲ್ಲಿ ಒಕ್ಕಲಿಗರನ್ನು ಹದ್ದುಬಸ್ತಿನಲ್ಲಿ ಇಟ್ಟಿದ್ದೇನೆ’ ಎಂಬ ಕೆ.ಎಚ್.ಮುನಿಯಪ್ಪ ವಿವಾದಾಸ್ಪದ ಹೇಳಿಕೆ; ವಿಡಿಯೋ ವೈರಲ್

ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕುಲದೀಪ್ ರಾಥೋರ್ ಮಾತನಾಡಿ, ಒಬ್ಬ ಹಿರಿಯ ರಾಜಕಾರಣಿಯಿಂದ ನಾವು ಈ ರೀತಿಯ ಅಸಹ್ಯ ಭಾಷೆಯನ್ನು ನಿರೀಕ್ಷಿಸಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

 

First published: April 15, 2019, 6:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading