ಪಂಚರಾಜ್ಯ ಫಲಿತಾಂಶ ಬೆನ್ನಲ್ಲೇ ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ತುಸು ಏರಿಕೆ!

ಈ ಹಿಂದೆಯೂ ತೈಲ ಬೆಲೆ ಏರಿಕೆ ವಿರೋಧಿಸಿ ವಿರೋಧ ಪಕ್ಷಗಳು ಭಾರತ್​ ಬಂದ್​ ನಡೆಸಿದ ಬಳಿಕವೂ ಪೆಟ್ರೋಲ್​ ಬೆಲೆಯಲ್ಲಿ ಏರಿಕೆ ಕಂಡಿತ್ತು. ರಾಜಧಾನಿ ನವದೆಹಲಿ, ಮುಂಬೈ ಸೇರಿದಂತೆ ಇನ್ನೂ ಪ್ರಮುಖ ನಗರಗಳಲ್ಲಿ ಡೀಸೆಲ್​ ಮತ್ತು ಪೆಟ್ರೋಲ್​ ದರ ನಿನ್ನೆಗಿಂತ ಅಧಿಕವಾಗಿತ್ತು.

Ganesh Nachikethu
Updated:December 14, 2018, 4:13 PM IST
ಪಂಚರಾಜ್ಯ ಫಲಿತಾಂಶ ಬೆನ್ನಲ್ಲೇ ಪೆಟ್ರೋಲ್​​-ಡೀಸೆಲ್​​ ಬೆಲೆಯಲ್ಲಿ ತುಸು ಏರಿಕೆ!
ಪೆಟ್ರೋಲ್​​-ಡೀಸೆಲ್
  • Share this:
ನವದೆಹಲಿ(ಡಿ.14): ಪಂಚರಾಜ್ಯ ಚುನಾವಣೆ ಫಲಿತಾಂಶದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆ ಮತ್ತೆ ಏರಿಕೆಯಾಗಿದೆ. ಕಳೆದ ಎರಡು ತಿಂಗಳಿನಿಂದ ಸತತವಾಗಿ ಪೆಟ್ರೋಲ್​​-ಡೀಸೆಲ್​​ ಬೆಲೆ ಇಳಿಮುಖವಾಗಿತ್ತು. ಸುಮಾರು ಶೇ 15ರಷ್ಟು ಇಳಿಕೆಯಾಗುವ ಮೂಲಕ ವಾಹನ ಸವಾರರಿಗೆ ರಿಲೀಫ್​​ ಸಿಕ್ಕಿತ್ತು. ಸದ್ಯ ಮತ್ತೆ ಪೆಟ್ರೋಲ್​​ ಡೀಸೆಲ್​​ ಬೆಲೆ ಏರಿಕೆ ಕಂಡಿದ್ದು, ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ದೇಶದ ನಾಲ್ಕು ನಗರಗಳಲ್ಲಿ ಹೊರತುಪಡಿಸಿ ಬೇರೆ ಎಲ್ಲೆಡೆ ಪೆಟ್ರೋಲ್​-ಡೀಸೆಲ್​​ ಬೆಲೆ ಏರಿಕೆಯಾಗಿದೆ ಎನ್ನಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ 70.83 ರೂ ಮತ್ತು ಡೀಸೆಲ್‌ ದರ 64.90 ರೂ, ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 70.29 ರೂ , ಮತ್ತು ಡೀಸೆಲ್‌ ದರ 64.57 ರೂ, ಮುಂಬೈನಲ್ಲಿ ಇಂದಿನ ಪೆಟ್ರೋಲ್‌ ದರ 75.88 ರೂ, ಡೀಸೆಲ್ ಬೆಲೆ 67.55 ರೂ, ಕೋಲ್ಕತ್ತಾದಲ್ಲಿ ಪೆಟ್ರೋಲ್‌ ಬೆಲೆ 73.35 ರೂ, ಮತ್ತು ಡೀಸೆಲ್ ಬೆಲೆ 66.30 ರೂ ಗಳಾಗಿವೆ ಎಂದು ಹೇಳಲಾಗುತ್ತಿದೆ.

ಇತ್ತೇಚೆಗೆ ನಿರಂತರ ಇಳಿಕೆಯಾಗಿದ್ದ ಡೀಸೆಲ್ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಜಾಗತಿಕ ಮಾರುಕಟ್ಟೆಯಲ್ಲಿಯೂ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 60.38 ಡಾಲರ್ ನಷ್ಟಿದೆ. ಆದರೂ ದೆಹಲಿಯಲ್ಲಿ 9 ಪೈಸೆ, ಮುಂಬೈ 11, ಚೆನ್ನೈನಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 13ಪೈಸೆ ಏರಿಕೆಯಾಗಿದ್ದು, ಕೋಲ್ಕತ್ತಾದಲ್ಲಿ ಮಾತ್ರ ಪೆಟ್ರೋಲ್ ದರ 90 ಪೈಸೆ ಇಳಿಕೆಯಾಗಿದೆ.

ಇದನ್ನೂ ಓದಿ: ಕೊನೆಗೂ ಅಶೋಕ್​ ಗೆಹ್ಲೂಟ್ ಪಾಲಾದ ರಾಜಸ್ಥಾನ ಸಿಎಂ ಸ್ಥಾನ, ಡಿಸಿಎಂ ಪದವಿಗೆ ತೃಪ್ತಿಪಟ್ಟುಕೊಂಡ ಪೈಲಟ್​

ಭಾರತ್​​ ಬಂದ್​: ಈ ಹಿಂದೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಕ್ಷೇಪಿಸಿ ಕಾಂಗ್ರೆಸ್ ಪಕ್ಷ ಭಾರತ್ ಬಂದ್​ಗೆ ಕರೆ ನೀಡಿತ್ತು. ಈ ವೇಳೆ ಬಂದ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. 21 ವಿಪಕ್ಷಗಳ ಬೆಂಬಲವಿದ್ದ ಈ ಬಂದ್​ ವೇಳೆ ಕೆಲ ಕಡೆ ಹಿಂಸಾಚಾರಗಳಾಗಿದ್ದವು. ಅನೇಕ ಕಡೆ ಟಯರ್ ಸುಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿತ್ತು. ಹಲವೆಡೆ ಬಂದ್​ಗೆ ಓಗೊಟ್ಟು ಜನರು ಸ್ವಯಂಪ್ರೇರಿತವಾಗಿ ಅಂಗಡಿ ಮುಂಗಟ್ಟು ಮುಚ್ಚಿದ್ದರು. ಇನ್ನೂ ಹಲವೆಡೆ ಬಲವಂತವಾಗಿ ಮಳಿಗೆಗಳನ್ನ ಮುಚ್ಚಿಸಲಾಯಿತು.

ಕರ್ನಾಟಕ, ಪಂಜಾಬ್, ಬಿಹಾರ, ಮಹಾರಾಷ್ಟ್ರ, ತ್ರಿಪುರಾ ರಾಜ್ಯಗಳಲ್ಲಿ ಬಂದ್ ಬಹುತೇಕ ಯಶಸ್ವಿಯಾಗಿದೆ. ಪ್ರವಾಹಪೀಡಿತ ಕೇರಳದಲ್ಲಿ ಮೌನವಾಗಿಯೇ ಬಂದ್ ಆಚರಿಸಲಾಗಿತ್ತು. ಗುಜರಾತ್, ತೆಲೆಂಗಾಣ, ಆಂಧ್ರ ಮೊದಲಾದ ರಾಜ್ಯಗಳಲ್ಲಿ ಭಾರತ್ ಬಂದ್​ಗೆ ಮಿಶ್ರ ಸ್ಪಂದನೆ ಸಿಕ್ಕಿತು. ದೆಹಲಿ, ಉತ್ತರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಮೊದಲಾದ ರಾಜ್ಯಗಳಲ್ಲಿ ಜನಜೀವನಕ್ಕೆ ಅಂತಹ ತೊಂದರೆ ಆಗಲಿಲ್ಲ. ಒಟ್ನಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತದಾದ್ಯಂತ ಬಂದ್ ಯಶಸ್ವಿಯಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿತ್ತು.

ಇದನ್ನೂ ಓದಿ: ಇಂದಿರಾ ಕ್ಯಾಂಟೀನ್​ಗಳಲ್ಲಿ ಗುತ್ತಿಗೆದಾರರಿಂದ ಹಗಲುದರೋಡೆ: ದಾಖಲೆ ಸಮೇತ ಬಿಜೆಪಿ ಗಂಭೀರ ಆರೋಪ
Loading...

ಬಂದ್​​ ಬಿಸಿಯಿಂದ ಬೆಲೆ ಇಳಿಕೆ: ಕೇಂದ್ರ ಸರಕಾರವು ಪೆಟ್ರೋಲ್ ಮೇಲೆ ವಿಧಿಸುತ್ತಿರುವ ಅಬಕಾರಿ ಸುಂಕದ ದರವನ್ನು ಇಳಿಸಬೇಕೆಂದು ವಿಪಕ್ಷಗಳು ಬಲವಾಗಿ ಆಗ್ರಹಿಸಿದ್ದವು. ಆದರೆ, ಪೆಟ್ರೋಲ್ ಬೆಲೆ ಏರಿಕೆಗೆ ಕೇಂದ್ರ ಕಾರಣವಲ್ಲ. ಅಂತಾರಾಷ್ಟ್ರೀಯ ತೈಲ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಬೆಲೆ ನಿಗದಿಯಾಗಿದೆ ಎಂದು ಬಿಜೆಪಿ ತನ್ನ ವಾದ ಮುಂದುವರಿಸಿತ್ತು. ಇದರ ಪರಿಣಾಮ ಸತತವಾಗಿ ಪೆಟ್ರೋಲ್​​-ಡೀಸೆಲ್​​ ಬೆಲೆ ಇಳಿಕೆಯಾಗಿತ್ತು ಎನ್ನುತ್ತಿವೆ ಮೂಲಗಳು.

ಗಗನಕ್ಕೇರಿದ್ದ ಬೆಲೆ: ತೈಲ ಬೆಲೆ ಏರಿಕೆ ವಿರೋಧಿಸಿ ವಿರೋಧ ಪಕ್ಷಗಳು ಭಾರತ್​ ಬಂದ್​ ನಡೆಸಿದ ಬಳಿಕವೂ ಪೆಟ್ರೋಲ್​ ಬೆಲೆಯಲ್ಲಿ ಏರಿಕೆ ಕಂಡಿತ್ತು. ರಾಜಧಾನಿ ನವದೆಹಲಿ, ಮುಂಬೈ ಸೇರಿದಂತೆ ಇನ್ನೂ ಪ್ರಮುಖ ನಗರಗಳಲ್ಲಿ ಡೀಸೆಲ್​ ಮತ್ತು ಪೆಟ್ರೋಲ್​ ದರ ನಿನ್ನೆಗಿಂತ ಅಧಿಕವಾಗಿತ್ತು. ದೆಹಲಿಯಲ್ಲಿ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 80.87 ರೂ.  ಡೀಸೆಲ್​ ಬೆಲೆ ಪ್ರತಿ ಲೀಟರ್​ಗೆ 72.97 ರೂ.ತಲುಪಿತ್ತು. ಮುಂಬೈನಲ್ಲಿ ಪೆಟ್ರೋಲ್​ಗೆ  88.26 ರೂ.  ಡೀಸೆಲ್​ಗೆ 77.47 ರೂ. ಅಧಿಕವಾಗಿದೆ. ಮಹಾರಾಷ್ಟ್ರದ ಪರ್ಬಾನಿ ನಗರದಲ್ಲಿ ಮಂಗಳವಾರ ಪೆಟ್ರೋಲ್​ ಬೆಲೆ ಪ್ರತಿ ಲೀಟರ್​ಗೆ 90.05 ಆಗಿತ್ತು.

---------------------
ಶಾಸಕರ ನಡೆಗೆ ಸ್ಪೀಕರ್ ರಮೇಶ್ ಕುಮಾರ್ ಬೇಸರ
First published:December 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...