ಸಿಬಿಐ VS ಸಿಬಿಐ: ರಾಕೇಶ್​ ಅಸ್ಥಾನ ಭ್ರಷ್ಟಾಚಾರ ಸಂಬಂಧ ಪ್ರಮುಖ ಸಾಕ್ಷಿಗಳು ಲಭ್ಯವಾಗಿತ್ತು; ಅಲೋಕ್​ ವರ್ಮಾ

ಸಾಕ್ಷಿಗಳು ಲಭ್ಯವಾಗಿದ್ದ ಹಿನ್ನೆಲೆಯಲ್ಲಿ ತನಿಖೆ ಅನಿವಾರ್ಯವಾಗಿತ್ತು ಮತ್ತು ಆ ಮೂಲಕ ಸಾರ್ವಜನಿಕರ ಕಣ್ಣಲ್ಲಿ ತನಿಖಾ ಸಂಸ್ಥೆಯ ಗೌರವವನ್ನು ಉಳಿಸುವ ಇರಾದೆ ತಮ್ಮದಾಗಿತ್ತು ಎಂದು ವರ್ಮಾ ಹೇಳಿದ್ದಾರೆ

news18
Updated:December 7, 2018, 12:54 PM IST
ಸಿಬಿಐ VS ಸಿಬಿಐ: ರಾಕೇಶ್​ ಅಸ್ಥಾನ ಭ್ರಷ್ಟಾಚಾರ ಸಂಬಂಧ ಪ್ರಮುಖ ಸಾಕ್ಷಿಗಳು ಲಭ್ಯವಾಗಿತ್ತು; ಅಲೋಕ್​ ವರ್ಮಾ
ಸಾಂದರ್ಭಿಕ ಚಿತ್ರ
news18
Updated: December 7, 2018, 12:54 PM IST
ದೇಬಾಯನ್​ ರಾಯ್​

ನವದೆಹಲಿ: ಕಡ್ಡಾಯ ರಜೆ ಮೇಲೆ ಕಳಿಸಲ್ಪಟ್ಟಿರುವ ಸಿಬಿಐ ನಿರ್ದೇಶಕ ಅಲೋಕ್​ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್​ ಅಸ್ಥಾನ ಅರ್ಜಿಗಳ ವಿಚಾರಣೆ ದೆಹಲಿ ಹೈ ಕೋರ್ಟ್​ನಲ್ಲಿ ನಡೆಯುತ್ತಿದೆ. ತಮ್ಮ ಮೇಲೆ ರಾಕೇಶ್​ ಅಸ್ಥಾನ ಮಾಡಿದ್ದ ಎಲ್ಲಾ ಆರೋಪಗಳನ್ನೂ ಶುಕ್ರವಾರ ಕೋರ್ಟ್​ನಲ್ಲಿ ಅಲೋಕ್​ ವರ್ಮಾ ತಳ್ಳಿ ಹಾಕಿದ್ದಾರೆ. ಜತೆಗೆ ಅಸ್ಥಾನ ಮಾಡಿರುವ ಆರೋಪಗಳು ಕೇವಲ ಕಲ್ಪಿತ ಎಂದಿದ್ದಾರೆ.

ದೆಹಲಿ ಹೈಕೋರ್ಟ್​ಗೆ ವರ್ಮಾ ಸಲ್ಲಿಸಿರುವ ಅಫಿಡವಿಟ್​ನಲ್ಲಿ ರಾಕೇಶ್​ ಅಸ್ಥಾನ ವಿರುದ್ಧ ಪ್ರಮುಖ ಸಾಕ್ಷಿಗಳು ಲಭ್ಯವಾಗಿತ್ತು ಎಂದೂ ಹೇಳಿದ್ದಾರೆ. ಸಾಕ್ಷಿಗಳು ಲಭ್ಯವಾಗಿದ್ದ ಹಿನ್ನೆಲೆಯಲ್ಲಿ ತನಿಖೆ ಅನಿವಾರ್ಯವಾಗಿತ್ತು ಮತ್ತು ಆ ಮೂಲಕ ಸಾರ್ವಜನಿಕರ ಕಣ್ಣಲ್ಲಿ ತನಿಖಾ ಸಂಸ್ಥೆಯ ಗೌರವವನ್ನು ಉಳಿಸುವ ಇರಾದೆ ತಮ್ಮದಾಗಿತ್ತು ಎಂದು ಅಫಿಡವಿಟ್​ನಲ್ಲಿ ವರ್ಮಾ ಹೇಳಿದ್ದಾರೆ.

ತಮ್ಮ ವಿರುದ್ಧ ಸಿಬಿಐನಲ್ಲಿ ದಾಖಲಾಗಿದ್ದ ಎಫ್​ಐಆರ್​ ರದ್ದುಗೊಳಿಸುವಂತೆ ಮತ್ತು ತಮಗೆ ಮತ್ತೆ ಅಧಿಕಾರ ನೀಡುವಂತೆ ಅಸ್ಥಾನ ದೆಹಲಿ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗೆ ಸಂಬಂಧಿಸಿದಂತೆ ವರ್ಮಾ ಅಫಿಡವಿಟ್​ ಸಲ್ಲಿಸಿದ್ದಾರೆ. ರಾಕೇಶ್​ ಅಸ್ಥಾನ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ಸ್ಪಷ್ಟ ಮಾಹಿತಿಯಿದೆ ಎಂದು ವರ್ಮಾ ಅಫಿಡವಿಟ್​ನಲ್ಲಿ ಹೇಳಿದ್ದಾರೆ. ಜತೆಗೆ ಎಫ್​ಐಆರ್​ ದಾಖಲಿಸಲು ಸರ್ಕಾರದ ಅನುಮತಿ ಅವಶ್ಯವಲ್ಲ ಎಂದೂ ಅಲೋಕ್​ ವರ್ಮಾ ಹೇಳಿದ್ದಾರೆ.

ದೆಹಲಿ ಹೈ ಕೋರ್ಟ್​ನಲ್ಲಿ ನಡೆಯುತ್ತಿರುವ ವಿಚಾರಣೆಗೂ ಸುಪ್ರೀಂ ಕೋರ್ಟ್​ನಲ್ಲಿರುವ ಅರ್ಜಿ ವಿಚಾರಣೆಗೂ ಸಂಬಂಧವಿಲ್ಲ. ಕಡ್ಡಾಯ ರಜೆಯ ಮೇಲೆ ಕಳಿಸಿರುವ ಕೇಂದ್ರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್​ನಲ್ಲಿ ವರ್ಮಾ ಸಲ್ಲಿಸಿರುವ ಅರ್ಜಿ ಸಂಬಂಧ ಈಗಾಗಲೇ ಆದೇಶ ಕಾಯ್ದಿರಿಸಲಾಗಿದೆ.

ರಾಕೇಶ್​ ಅಸ್ಥಾನ ವಿರುದ್ಧ ಸಿಬಿಐನಲ್ಲಿರುವ ಎಫ್​ಐಆರ್​ ರದ್ದು ಮಾಡದಂತೆ ದೆಹಲಿ ಹೈಕೋರ್ಟ್​ಗೆ ಮನವಿ ಮಾಡಿರುವ ವರ್ಮಾ, ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದು ತನಿಖೆ ಅಗತ್ಯವಿದೆ ಎಂದಿದ್ದಾರೆ.

ಕೇಂದ್ರ ವಿಚಕ್ಷಣಾ ಆಯೋಗದಲ್ಲಿರುವ ಅಸ್ಥಾನ ಪ್ರಕರಣದ ಫೈಲನ್ನು ನೋಡಲು ಅಲೋಕ್​ ವರ್ಮಾ ಮತ್ತು ಸಿಬಿಐ ಜಂಟಿ ನಿರ್ದೇಶಕ ಎ.ಕೆ. ಶರ್ಮಾ ಅವರಿಗೆ ಕೋರ್ಟ್​ ಈ ಹಿಂದೆ ಅನುಮತಿ ನೀಡಿತ್ತು. ಅಸ್ಥಾನ ಸಲ್ಲಿಸಿರುವ ಅರ್ಜಿಯಲ್ಲಿ ಮಾಡಿರುವ ಕೆಲ ಆರೋಪಗಳನ್ನು ನೋಡಿದರೆ, ಕೇಸ್​ ಫೈಲ್​ನಲ್ಲಿನ ಅಂಶಗಳನ್ನು ತಿರುಚಿರುವ ಸಾಧ್ಯತೆಯಿದೆ ಎಂದು ವರ್ಮಾ ಅಭಿಪ್ರಾಯ ಪಟ್ಟಿದ್ದರು.
Loading...

ಇದನ್ನೂ ಓದಿ: ಸಿಬಿಐ ವರ್ಸಸ್​​ ಸಿಬಿಐ: ಅಲೋಕ್​​​ ‘ವರ್ಮಾ’ರ ಕಡ್ಡಾಯ ರಜೆ ಕುರಿತು ಸುಪ್ರೀಂಗೆ ಕೇಂದ್ರ ಸ್ಪಷ್ಟನೆ!

ಪ್ರಕರಣದ ವಿಚಾರಣೆ ದೆಹಲಿ ಹೈಕೋರ್ಟ್​ನಲ್ಲಿ ಮುಂದುವರೆಯಲಿದ್ದು, ರಾಕೇಶ್​ ಅಸ್ಥಾನ ಮೇಲಿರುವ ಪ್ರಕರಣ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್​ ಸಿಬಿಐಗೆ ನಿರ್ದೇಶಿಸಿದೆ.

First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ