• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Uddhav Thackeray: ಫೇಸ್‌ಬುಕ್‌ ಲೈವ್‌ನಲ್ಲಿ ಉದ್ಧವ್ ಭಾವನಾತ್ಮಕ ವಿದಾಯ, ಜುಲೈ 1ಕ್ಕೆ ಫಡ್ನವೀಸ್ ಪ್ರಮಾಣವಚನ?

Uddhav Thackeray: ಫೇಸ್‌ಬುಕ್‌ ಲೈವ್‌ನಲ್ಲಿ ಉದ್ಧವ್ ಭಾವನಾತ್ಮಕ ವಿದಾಯ, ಜುಲೈ 1ಕ್ಕೆ ಫಡ್ನವೀಸ್ ಪ್ರಮಾಣವಚನ?

ಉದ್ಧವ್ ಠಾಕ್ರೆ

ಉದ್ಧವ್ ಠಾಕ್ರೆ

ಎರಡೂವರೆ ವರ್ಷಗಳ ಶಿವಸೇನೆ (Shiv Sene), ಎನ್‌ಸಿಪಿ (NCP) ಹಾಗೂ ಕಾಂಗ್ರೆಸ್ (Congress) ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ (Maha Vikas Aghadi) ಸರ್ಕಾರ (Government) ಪತನವಾಗಿದೆ. ಇದೀಗ ಬಿಜೆಪಿ (BJP) ಸರ್ಕಾರ ರಚನೆ ಕಸರತ್ತು ನಡೆಸಿದ್ದು, ಜುಲೈ 1ಕ್ಕೆ ನೂತನ ಸರ್ಕಾರ ರಚನೆಯಾಗುವ ಸಾಧ್ಯತೆಗಳಿವೆ.

ಮುಂದೆ ಓದಿ ...
  • Share this:

ಮಹಾರಾಷ್ಟ್ರ: ಮುಖ್ಯಮಂತ್ರಿ (CM) ಸ್ಥಾನಕ್ಕೆ ಉದ್ಧವ್ ಠಾಕ್ರೆ (Uddhav Thackrey) ರಾಜೀನಾಮೆ (Resign) ನೀಡಿದ್ದಾರೆ. ನಾಳೆ ವಿಶ್ವಾಸಮತ ಸಾಬೀತು ಪಡಿಸುವಂತೆ ಸುಪ್ರೀಂಕೋರ್ಟ್ (Supreme Court) ಸೂಚನೆ ನೀಡಿತ್ತು. ಅದಕ್ಕೂ ಮುನ್ನವೇ ಉದ್ಧವ್ ರಾಜೀನಾಮೆ ಘೋಷಿಸಿದ್ದಾರೆ. ಫೇಸ್‌ಬುಕ್‌ ಲೈವ್‌ನಲ್ಲೇ (Facebook Live) ರಾಜೀನಾಮೆ ಬಗ್ಗೆ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ. ಸಿಎಂ ಸ್ಥಾನದ ಜೊತೆಗೆ ವಿಧಾನ ಪರಿಷತ್ ಸದಸ್ಯತ್ವಕ್ಕೂ (MLC) ಉದ್ಧವ್ ರಾಜೀನಾಮೆ ನೀಡಿದ್ದಾರೆ. ಇದರೊಂದಿಗೆ ಎರಡೂವರೆ ವರ್ಷಗಳ ಶಿವಸೇನೆ (Shiv Sene), ಎನ್‌ಸಿಪಿ (NCP) ಹಾಗೂ ಕಾಂಗ್ರೆಸ್ (Congress) ಮೈತ್ರಿಕೂಟದ ಮಹಾ ವಿಕಾಸ್ ಅಘಾಡಿ (Maha Vikas Aghadi) ಸರ್ಕಾರ (Government) ಪತನವಾಗಿದೆ. ಇದೀಗ ಬಿಜೆಪಿ (BJP) ಸರ್ಕಾರ ರಚನೆ ಕಸರತ್ತು ನಡೆಸಿದ್ದು, ಜುಲೈ 1ಕ್ಕೆ ನೂತನ ಸರ್ಕಾರ ರಚನೆಯಾಗುವ ಸಾಧ್ಯತೆಗಳಿವೆ.


ಫೇಸ್‌ಬುಕ್‌ ಲೈವ್‌ನಲ್ಲೇ ರಾಜೀನಾಮೆ ಘೋಷಣೆ


ಉದ್ಧವ್ ಠಾಕ್ರೆ ಫೇಸ್‌ಬುಕ್ ಲೈವ್‌ನಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಈ ವೇಳೆ ಭಾವನಾತ್ಮಕವಾಗಿ ವಿದಾಯ ಭಾಷಣ ಮಾಡಿದ್ದಾರೆ. “ಎಲ್ಲರ ಸಹಕಾರದಿಂದ ನಾನು ಬಾಳ್ ಠಾಕ್ರೆ ಅವರ ಮಹತ್ವಾಕಾಂಕ್ಷೆಯನ್ನು ಪೂರೈಸಲು ಸಾಧ್ಯವಾಯಿತು" ಎಂದು ಸಿಎಂ ಉದ್ಧವ್ ಠಾಕ್ರೆ ಹೇಳಿದ್ದಾರೆ. ಎಲ್ಲಾ 3 ಪಕ್ಷಗಳು ಒಗ್ಗೂಡಿ 2.5 ವರ್ಷಗಳಲ್ಲಿ ಉತ್ತಮ ಕೆಲಸ ಮಾಡಿದ್ದೇವೆ ಎಂದಿದ್ದಾರೆ.


“ನಗರಗಳ ಮರುನಾಮಕರಣದ ಬಗ್ಗೆ ತೃಪ್ತಿ ಇದೆ”


ನಾವು ಅಧಿಕೃತವಾಗಿ ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮತ್ತು ಉಸ್ಮಾನಾಬಾದ್ ಅನ್ನು ಧಾರಾಶಿವ್ ಎಂದು ಮರುನಾಮಕರಣ ಮಾಡಿದ್ದೇವೆ. ಈ ಬಗ್ಗೆ ನನಗೆ ತೃಪ್ತಿ ಇದೆ ಎಂದಿದ್ದಾರೆ. ಈ ಮೂಲಕ ಬಾಳಾಸಾಹೇಬ್ ಠಾಕ್ರೆ ಹೆಸರಿಸಿದ ನಗರಗಳ ಮರುನಾಮಕರಣವಾಗಿದೆ ಎಂದು ಹೇಳಿದ್ರು.


ಇದನ್ನೂ ಓದಿ: Breaking News: ಮಹಾರಾಷ್ಟ್ರ ಸಿಎಂ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ! ಎರಡೂವರೆ ವರ್ಷಕ್ಕೆ ಮಹಾ ಅಘಾಡಿ ಸರ್ಕಾರ ಪತನ


“ನಮ್ಮದೇ ಪಕ್ಷದ ಶಾಸಕರಿಂದ ನನಗೆ ಬೆಂಬಲ ಸಿಗಲಿಲ್ಲ”


ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಜನರಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ ಎಂದಿದ್ದಾರೆ  ಆದರೆ ದುರದೃಷ್ಟವಶಾತ್ ನಮ್ಮದೆ ಪಕ್ಷದ ಬೆಂಬಲ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದು.


ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ


ಇನ್ನು ಬಿಜೆಪಿ 105 ಸ್ಥಾನಗಳನ್ನು ಹೊಂದಿದ್ದರೂ ಅಧಿಕಾರ ವಂಚಿತವಾಗಿತ್ತು. ಇದೀಗ 40ರಷ್ಟಿರುವ  ಶಿವಸೇನೆ ರೆಬೆಲ್ ಶಾಸಕರ ಬೆಂಬಲ ಪಡೆಯಲು ಬಿಜೆಪಿ ತಂತ್ರ ಹೂಡಿದೆ. ಮೂಲಗಳ ಪ್ರಕಾರ ದೇವೇಂದ್ರ ಫಡ್ನವೀಸ್ ಸಿಎಂ ಆಗಲಿದ್ದು, ಏಕನಾಥ್ ಶಿಂಧೆಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ. ನಾಳೆ ಅಥವಾ ನಾಡಿದ್ದು ಹೊಸ ಸರ್ಕಾರ ರಚನೆ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ.


ಸರ್ಕಾರ ರಚನೆಗೆ ಹಕ್ಕು ಮಂಡಿಸಲಿರುವ ಬಿಜೆಪಿ


ಉದ್ಧವ್ ಠಾಕ್ರೆ ರಾಜೀನಾಮೆ ನೀಡುತ್ತಿದ್ದಂತೆ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ಶುರುವಾಗಿದೆ. ನಿನ್ನೆಯೇ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಕೇಂದ್ರ ಗೃಹಸಚಿವ ಅಮಿತ್ ಶಾ ಜೊತೆ ಚರ್ಚೆ ನಡೆಸಿದ್ದರು. ಇದೀಗ ಬಿಜೆಪಿಯಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಮೂಲಗಳ ಪ್ರಕಾರ ನಾಳೆ ರಾಜ್ಯಪಾಲರನ್ನು ಭೇಟಿಯಾಗಲಿರುವ ಬಿಜೆಪಿ ನಾಯಕರು, ಸರ್ಕಾರ ರಚನೆಗೆ ಹಕ್ಕು ಮಂಡಿಸುವ ಸಾಧ್ಯತೆಗಳಿವೆ.


ಇದನ್ನೂ ಓದಿ: Maharashtra Politics: ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಶಿಂಧೆ ಟೀಂ!


ಜುಲೈ 1ರಂದು ಹೊಸ ಸರ್ಕಾರ ಸ್ಥಾಪನೆ?


40ರಷ್ಟಿರುವ  ಶಿವಸೇನೆ ರೆಬೆಲ್ ಶಾಸಕರ ಬೆಂಬಲ ಪಡೆಯಲು ಬಿಜೆಪಿ ತಂತ್ರ ಹೂಡಿದೆ. ಮೂಲಗಳ ಪ್ರಕಾರ ದೇವೇಂದ್ರ ಫಡ್ನವೀಸ್ ಸಿಎಂ ಆಗಲಿದ್ದು, ಏಕನಾಥ್ ಶಿಂಧೆಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವ ಸಾಧ್ಯತೆ ಇದೆ. ನಾಳೆ ಅಥವಾ ನಾಡಿದ್ದು ಹೊಸ ಸರ್ಕಾರ ರಚನೆ ಬಗ್ಗೆ ಘೋಷಣೆ ಹೊರಬೀಳುವ ಸಾಧ್ಯತೆಗಳಿವೆ. ಮೂಲಗಳ ಪ್ರಕಾರ ಜುಲೈ 1 ರಂದು ಬಿಜೆಪಿ ನೇತೃತ್ವದ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಗಳಿವೆ.

First published: