ನವದೆಹಲಿ(ಫೆ. 04): ದೆಹಲಿ ವಿಧಾನಸಭಾ ಚುನಾವಣೆಗೆ ನಾಲ್ಕು ದಿನಗಳು ಇರುವಂತೆ ಆಮ್ ಆದ್ಮಿ ಪಕ್ಷ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಇಷ್ಟು ದಿನ ತನ್ನ ಐದು ವರ್ಷಗಳ ಆಡಳಿತದ ಸಾಧನೆಗಳನ್ನು ಜನರ ಮುಂದಿಟ್ಟು ಮತ ಯಾಚಿಸುತ್ತಿದ್ದ ಅರವಿಂದ್ ಕೇಜ್ರಿವಾಲ್ ಇದೀಗ ಮುಂದಿನ ಐದು ವರ್ಷಕ್ಕೆ ತಾವೇನು ಮಾಡಲಿದ್ದೇವೆ ಎಂಬುದನ್ನು ವಿವರಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ದೆಹಲಿಗೆ ಪೂರ್ಣಪ್ರಮಾಣದ ರಾಜ್ಯದ ಸ್ಥಾನ ಮಾನ ಸಿಗುವಂತೆ ಹೋರಾಟ ಮಾಡುವುದಾಗಿ ಆಮ್ ಆದ್ಮಿ ಪಕ್ಷ ಹೇಳಿಕೊಂಡಿದೆ. ಹಾಗೆಯೇ ಜನಲೋಕಪಾಲ್, ಉತ್ಕೃಷ್ಟ ಮೆಟ್ರೋ ನೆಟ್ವರ್ಕ್, ಮನೆ ಬಾಗಿಲಿಗೆ ಪಡಿತರ ತಲುಪಿಸುವುದು ಇವೇ ಮುಂತಾದ ಭರವಸೆಗಳನ್ನು ನೀಡಿದೆ.
ಫೆ. 8ರಂದು
ದೆಹಲಿ ವಿಧಾನಸಭೆಯ 70 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ಸತತ ಎರಡು ಬಾರಿ ಸಿಎಂ ಆಗಿರುವ
ಕೇಜ್ರಿವಾಲ್ ಹ್ಯಾಟ್ರಿಕ್ ಸಿಎಂ ಆಗಲು ಹೊರಟಿದ್ದಾರೆ. ಕಳೆದ ಚುನಾವಣೆಯಲ್ಲಿ ಬರೋಬ್ಬರಿ 67 ಸ್ಥಾನಗಳನ್ನು ಗೆದ್ದಿದ್ದ
ಆಮ್ ಆದ್ಮಿ ಪಕ್ಷ ಈ ಬಾರಿಯೂ ನಿಚ್ಚಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಬಹುದು ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳುತ್ತಿವೆ.
ಇದನ್ನೂ ಓದಿ: ‘ನಾಳೆ ಮಧ್ಯಾಹ್ನದೊಳಗೆ ತಾಕತ್ತಿದ್ದರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಿ‘: ಬಿಜೆಪಿಗೆ ಸಿಎಂ ಅರವಿಂದ ಕೇಜ್ರಿವಾಲ್ ಸವಾಲ್
ಆಪ್ ಪ್ರಣಾಳಿಕೆಯ ಮುಖ್ಯಾಂಶಗಳು:
1) ಜನಲೋಕಪಾಲ್ ಜಾರಿ
2) ದೆಹಲಿಗೆ ಪೂರ್ಣಪ್ರಮಾಣದ ರಾಜ್ಯ ಸ್ಥಾನಮಾನ
3) ಮನೆಬಾಗಿಲಿಗೆ ಪಡಿತರ ತಲುಪಿಸುವ ವ್ಯವಸ್ಥೆ
4) 10 ಲಕ್ಷ ವಯೋವೃದ್ಧರಿಗೆ ತೀರ್ಥ ಯಾತ್ರೆಯ ಯೋಜನೆ
5) ದೇಶಪ್ರೇಮದ ಶಿಕ್ಷಣ
6) ಯುವ ಸಮುದಾಯದ ಉಜ್ವಲ ಭವಿಷ್ಯಕ್ಕಾಗಿ ಸ್ಪೋಕನ್ ಇಂಗ್ಲೀಷ್ (ಆಂಗ್ಲ ಭಾಷಾ ಸಂವಹನ ಕಲೆ)
7) ವಿಶ್ವದಲ್ಲೇ ಅತ್ಯಂತ ದೊಡ್ಡ ಮೆಟ್ರೋ ನೆಟ್ವರ್ಕ್
8) ಯಮುನಾ ನದಿ ಪಾತ್ರದ ಅಭಿವೃದ್ಧಿ=
9) ಅಂತಾರಾಷ್ಟ್ರೀಯ ಗುಣಮಟ್ಟದ ರಸ್ತೆಗಳು
10) ಸ್ವಚ್ಛ ಕಾರ್ಮಿಕರು ಮೃತಪಟ್ಟರೆ ಅವರ ಕುಟುಂಬಕ್ಕೆ 1 ಕೋಟಿ ಪರಿಹಾರ
11) ರೆಡ್ ಟೇಪಿಸಂ ಅಂತ್ಯ
12) ಸೀಲಿಂಗ್ ಸುರಕ್ಷತೆ
13) ಮಾರುಕಟ್ಟೆ ಮತ್ತು ಔದ್ಯಮಿಕ ವಲಯಗಳ ಅಭಿವೃದ್ಧಿ
14) ಹಳೆಯ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಪ್ರಕರಣ ಮಾಫಿ ಮಾಡುವ ಯೋಜನೆ
15) ದಿಲ್ಲಿಯಲ್ಲಿ ದಿನಕ್ಕೆ 24 ಗಂಟೆ ಮಾರುಕಟ್ಟೆ ವ್ಯವಸ್ಥೆ
16) ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು
17) ಪುನರ್ವಸತಿ ಪ್ರದೇಶಗಳಲ್ಲಿ ಜನರಿಗೆ ಮಾಲಿಕತ್ವ
18) ಅನಧಿಕೃತ ಕಾಲೊನಿಗಳ ನೊಂದಣಿ ಮತ್ತು ನಿಯಂತ್ರಣ
19) ಓಬಿಸಿ ಪ್ರಮಾಣಪತ್ರ ಪಡೆಯಲು ಸರಳೀಕೃತ ವ್ಯವಸ್ಥೆ
20) ಭೋಜಪುರಿ ಭಾಷೆಗೆ ಮಾನ್ಯತೆ
21) ಗುತ್ತಿಗೆದಾರ ನೌಕರರ ಹುದ್ದೆ ಖಾಯಮಾತಿ
22) ರೈತರ ಲಾಭವಾಗುವಂತೆ ಭೂ ಸುಧಾರಣಾ ಕಾಯ್ದೆಯಲ್ಲಿ ತಿದ್ದುಪಡಿ
23) ಬೆಳೆ ನಷ್ಟಗೊಂಡ ರೈತರಿಗೆ ಪರಿಹಾರ ಯೋಜನೆ ಮುಂದುವರಿಕೆ
24) ಬೀದಿಬದಿ ವ್ಯಾಪಾರಿಗಳಿಗೆ ಕಾನೂನು ಸಂರಕ್ಷಣೆ
25) ಹೊಸ ಸ್ವಚ್ಛತಾ ಕಾರ್ಮಿಕರ ನೇಮಕಾತಿ
26) ಸರ್ಕಲ್ ದರ (ನಿವೇಶನ/ನಿವಾಸ/ಕಟ್ಟಡ ಮಾರಾಟಕ್ಕೆ ನಿಗದಿಯಾದ ಕನಿಷ್ಠ ದರ) ಪರಿಷ್ಕರಣೆ
27) 1984ರ ಸಿಖ್ ವಿರೋಧಿ ದಂಗೆಯಲ್ಲಿ ನೊಂದವರಿಗೆ ನ್ಯಾಯ
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ