• Home
 • »
 • News
 • »
 • national-international
 • »
 • Manmohan Singh: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಲು ನೋಟ್​ಬ್ಯಾನ್​ ನೀತಿಯೇ ಕಾರಣ; ಮನಮೋಹನ್​ ಸಿಂಗ್ ಆರೋಪ

Manmohan Singh: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಲು ನೋಟ್​ಬ್ಯಾನ್​ ನೀತಿಯೇ ಕಾರಣ; ಮನಮೋಹನ್​ ಸಿಂಗ್ ಆರೋಪ

ಮನಮೋಹನ್ ಸಿಂಗ್.

ಮನಮೋಹನ್ ಸಿಂಗ್.

ಸಂವಿಧಾನದಲ್ಲಿ ಪ್ರತಿಪಾದಿಸಿರುವಂತೆ ಭಾರತದ ಆರ್ಥಿಕ ಮತ್ತು ರಾಜಕೀಯ ತತ್ತ್ವಶಾಸ್ತ್ರದ ಮೂಲಾಧಾರವಾಗಿದ್ದ ಫೆಡರಲಿಸಂ ಮತ್ತು ರಾಜ್ಯಗಳೊಂದಿಗೆ ನಿಯಮಿತ ಸಮಾಲೋಚನೆಯನ್ನು ಈಗಿನ ಕೇಂದ್ರ ಸರ್ಕಾರ ಮಾಡುತ್ತಿಲ್ಲ ಎಂದು ಮನಮೋಹನ್​ ಸಿಂಗ್ ಆರೋಪಿಸಿದ್ದಾರೆ.

 • Share this:

  ನವ ದೆಹಲಿ (ಮಾರ್ಚ್​ 02); ದೇಶದ ಆರ್ಥಿಕತೆ ದಿನದಿಂದ ದಿನಕ್ಕೆ ಕುಸಿಯುತ್ತಲೇ ಇದೆ. ಎಲ್ಲೆಡೆ ನಿರುದ್ಯೋಗ ತಾಂಡವವಾಡುತ್ತಿದೆ. ಭಾರತದ ಯುವಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ದೇಶದ ಈ ಎಲ್ಲಾ ಅವಸ್ಥೆಗೂ ಕೇಂದ್ರ ಸರ್ಕಾರ 2016ರಲ್ಲಿ ಜಾರಿಗೆ ತಂದ ನೋಟ್​ ಬ್ಯಾನ್ ನೀತಿಯೇ ಕಾರಣ. ಈ ನೀತಿಯಿಂದಲೇ ದೇಶದ ಅನೌಪಚಾರಿಕ ವಲಯವು ಅಸ್ತವ್ಯಸ್ತವಾಗಿದೆ ಎಂದು ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​ ಇಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಹಲವು ವಿಚಾರಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯಗಳೊಂದಿಗೆ ನಿಯಮಿತವಾಗಿ ಸಮಾಲೋಚನೆ ನಡೆಸುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.


  ರಾಜೀವ್ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ಸ್ಟಡೀಸ್ ಆಯೋಜಿಸಿರುವ ಅಭಿವೃದ್ಧಿ ಶೃಂಗಸಭೆ "ಪ್ರತೀಕ್ಷ 2030" ವನ್ನು ಉದ್ಘಾಟಿಸಿ ಮಾತನಾಡಿರುವ ಮನಮೋಹನ್​ ಸಿಂಗ್, "ದೇಶದಲ್ಲಿ ನಿರುದ್ಯೋಗ ಹೆಚ್ಚಾಗಿದೆ ಮತ್ತು ಅನೌಪಚಾರಿಕ ವಲಯವು ಅಸ್ತವ್ಯಸ್ತವಾಗಿದೆ. ಇದು 2016 ಕೇಂದ್ರ ಸರ್ಕಾರ ಕೆಟ್ಟ ರೀತಿಯಲ್ಲಿ ಜಾರಿಗೆ ತಂದ ನೋಟ್‌‌ಬ್ಯಾನ್‌ನಿಂದಾಗಿ ಉಂಟಾದ ಬಿಕ್ಕಟ್ಟು. ಈ ಬಿಕ್ಕಟ್ಟನ್ನು ಸರಿ ಮಾಡುವ ನಿಟ್ಟಿನಲ್ಲೂ ಕೇಂದ್ರ ಸರ್ಕಾರ ಈವರೆಗೆ ಯಾವುದೇ ಮಹತ್ವದ ಹೆಜ್ಜೆ ಇಟ್ಟಿಲ್ಲ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


  ಇದನ್ನೂ ಓದಿ: Devendra Fadnavis: ಮೃತ ಮಹಿಳೆಯ ಮಾನಹಾನಿ ಪ್ರಕರಣ: ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ವಿರುದ್ಧ ಕೇಸ್


  ರಾಜ್ಯದ ಚುನಾವಣೆಗೆ ಮುಂಚಿತವಾಗಿ ಕೇರಳದ ಅಭಿವೃದ್ಧಿಯ ವಿಚಾರಗಳ ಚೌಕಟ್ಟಾದ ವಿಷನ್ ಡಾಕ್ಯುಮೆಂಟ್ ಅನ್ನು ಪ್ರಾರಂಭಿಸಲು ಈ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಕೇರಳ ಮತ್ತು ಇತರ ಅನೇಕ ರಾಜ್ಯಗಳಲ್ಲಿ, ರಾಜ್ಯಗಳು ಅತಿಯಾದ ಸಾಲವನ್ನು ಆಶ್ರಯಿಸಬೇಕಾಗಿರುವುದರಿಂದ ಸಾರ್ವಜನಿಕ ಹಣಕಾಸು ಅಸ್ತವ್ಯಸ್ತವಾಗಿದೆ, ಇದು ಭವಿಷ್ಯದ ಬಜೆಟ್ ಮೇಲೆ ಭಾರಿ ಹೊರೆ ಸೃಷ್ಟಿಸುತ್ತದೆ ಎಂದು ಅವರು ಹೇಳಿದ್ದಾರೆ.


  "ಸಂವಿಧಾನದಲ್ಲಿ ಪ್ರತಿಪಾದಿಸಿರುವಂತೆ ಭಾರತದ ಆರ್ಥಿಕ ಮತ್ತು ರಾಜಕೀಯ ತತ್ತ್ವಶಾಸ್ತ್ರದ ಮೂಲಾಧಾರವಾಗಿದ್ದ ಫೆಡರಲಿಸಂ ಮತ್ತು ರಾಜ್ಯಗಳೊಂದಿಗೆ ನಿಯಮಿತ ಸಮಾಲೋಚನೆಯನ್ನು ಈಗಿನ ಕೇಂದ್ರ ಸರ್ಕಾರ ಮಾಡುತ್ತಿಲ್ಲ" ಎಂದು ಮನಮೋಹನ್​ ಸಿಂಗ್ ಆರೋಪಿಸಿದ್ದಾರೆ. ಕೇರಳದ ಸಾಮಾಜಿಕ ಗುಣಮಟ್ಟ ಹೆಚ್ಚಾಗಿದ್ದರೆ, ಭವಿಷ್ಯದಲ್ಲಿ ಗಮನ ಹರಿಸಬೇಕಾದ ಇತರ ಕ್ಷೇತ್ರಗಳಿವೆ ಎಂದು ಅವರು ಸಭೆಯಲ್ಲಿ ಒತ್ತಿ ಹೇಳಿದ್ದಾರೆ.

  Published by:MAshok Kumar
  First published: