ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮಹತ್ವಾಕಾಂಕ್ಷೆಯ ರೇಡಿಯೋ ಮಾಸಿಕ ಕಾರ್ಯಕ್ರಮ ‘ಮನ್ ಕಿ ಬಾತ್’ (Mann Ki Baat) 100ನೇ ಸಂಚಿಕೆ ಇಂದು ಪ್ರಸಾರಗೊಂಡಿತು. ಜಗದಗಲ ಇರುವ ಭಾರತೀಯರನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದರು. 2014ರ ಅಕ್ಟೋಬರ್ ತಿಂಗಳ 3ನೇ ತಾರೀಕಿನಿಂದು ಆರಂಭಗೊಂಡಿದ್ದ ಮನ್ ಕಿ ಬಾತ್ ಕಾರ್ಯಕ್ರಮ ಇಂದು 100ನೇ ಸಂಚಿಕೆಯನ್ನು(100 Episode Of Mann Ki Baat) ಪೂರೈಸಿದೆ.
ಪ್ರತೀ ತಿಂಗಳ ಕೊನೆಯ ಭಾನುವಾರದಂದು ಪ್ರಸಾರಗೊಳ್ಳುವ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಈ ವರೆಗೆ ಅನೇಕ ಮಹತ್ವದ ಸಂಗತಿಗಳನ್ನು ಉಲ್ಲೇಖಿಸಿದ್ದಾರೆ. ಹಳ್ಳಿ ಹಳ್ಳಿಯಲ್ಲಿ ಇರುವ ಪ್ರಮುಖ ಸಾಧಕರ ಹೆಸರನ್ನು ಪ್ರಸ್ತಾಪಿಸಿ ಅವರ ಕೊಡುಗೆಯನ್ನು ಕೊಂಡಾಡಿದ್ದಾರೆ. ಇದೀಗ ಮನ್ ಕಿ ಬಾತ್ ಕಾರ್ಯಕ್ರಮದ 100ನೇ ಸಂಚಿಕೆ ಕೂಡ ಭಾರೀ ಪ್ರಾಮುಖ್ಯತೆ ಗಳಿಸಿದ್ದು, ನರೇಂದ್ರ ಮೋದಿ ಅವರು ರೇಡಿಯೋ ಭಾಷಣದ ಈ ಸಂಚಿಕೆಯಲ್ಲಿ ಮಾತನಾಡಿರುವ ಪ್ರಮುಖ ಅಂಶಗಳನ್ನು ಇಲ್ಲಿ ಕೊಡಲಾಗಿದೆ.
ಇದನ್ನೂ ಓದಿ: Christians: ನರೇಂದ್ರ ಮೋದಿ ಆಡಳಿತದಲ್ಲಿ ಭಾರತದ ಕ್ರೈಸ್ತರು ಸುರಕ್ಷಿತವಾಗಿದ್ದಾರೆ: ಕೇಂದ್ರ ಸಚಿವ ಜಾನ್ ಬಾರ್ಲ
ಮನ್ ಕಿ ಬಾತ್‌ನಲ್ಲಿ ಮೋದಿ ಹೇಳಿದ್ದೇನು?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಮನ್ ಕಿ ಬಾತ್ ಅನ್ನೋದು ನನಗೆ ಕೇವಲ ಒಂದು ಕಾರ್ಯಕ್ರಮವಲ್ಲ. ಇದೊಂದು ವೃತ ಪೂಜೆ ಇದ್ದ ಹಾಗೆ. ನನಗೆ ಮನ್ ಕಿ ಬಾತ್ ಈಶ್ವರಿ ರೂಪವಾದ ಜನರ ಪೂಜೆಯಾಗಿದೆ. ಇಂದು ನಾವು ಮನ್ ಕಿ ಬಾತ್‌ನ 100ನೇ ಸಂಚಿಕೆಗೆ ತಲುಪಿದ್ದೇವೆ. ಮನ್ ಕಿ ಬಾತ್‌ನಲ್ಲಿ ಮಾತನಾಡುವಾಗ ನಾನು ಸಾಕಷ್ಟು ಬಾರಿ ಭಾವುಕನಾಗಿದ್ದೇನೆ ಎಂದು ಹೇಳಿದರು.
‘ಬೇಟಿ ಬಚಾವೋ ಬೇಟಿ ಪಡಾವೋ’ ಜಾಗೃತಿ
ಮುಂದುವರೆದು ಮಾತನಾಡಿರುವ ಪ್ರಧಾನಿ ಮೋದಿ, ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ದೇಶದ ಯುವಕರಿಗೆ ಆತ್ಮನಿರ್ಭರ್ ಯೋಜನೆ ಕುರಿತು ಮಾಹಿತಿ ನೀಡಲಾಯಿತು. ಶಿಕ್ಷಣ, ವೈದ್ಯಕೀಯ ಸೌಲಭ್ಯ, ಜಲ ಸಂರಕ್ಷಣೆ, ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಯಿತು. ವಿಶೇಷವಾಗಿ ‘ಬೇಟಿ ಬಚಾವೋ ಬೇಟಿ ಪಡಾವೋ’ ಕಾರ್ಯಕ್ರಮಕ್ಕೆ ಉತ್ತೇಜನ ನೀಡಲಾಯಿತು. ಇದರಿಂದ ನಾರಿಶಕ್ತಿಯ ಅನಾವರಣ ಆಯಿತು. ಇದೇ ವೇಳೆ ಹರ್ಯಾಣದ ಸುನಿಲ್ ಅವರ ‘ಸೆಲ್ಫಿ ವಿತ್ ಬೇಟಿ’ ಅಭಿಯಾನವನ್ನೂ ನೆನೆಯಬೇಕು. ಇವರ ಈ ಅಭಿಯಾನಕ್ಕೆ ದೇಶದಲ್ಲಿ ಸಾಕಷ್ಟು ಪ್ರಶಂಸೆ ಪಡೆಯಿತು. ಮನ್ ಕೀ ಬಾತ್ ಮೂಲಕ ಸ್ವಸಹಾಯ ಮಹಿಳಾ ಸಂಘಗಳು, ಯುವ ಉದ್ಯಮಿಗಳ ಜತೆ ಸಂವಾದ ನಡೆಸಲಾಗಿದೆ ಎಂದು ಮೋದಿ ಹೇಳಿದರು.
ಇದನ್ನೂ ಓದಿ: Pralhad Joshi: ಕರ್ನಾಟಕಕ್ಕೆ ನರೇಂದ್ರ ಮೋದಿ ಆದೇಶ ಪಾಲಿಸುವ ಸಿಎಂ ಮತ್ತು ಮಂತ್ರಿ ಬೇಕಾಗಿದೆ: ಪ್ರಹ್ಲಾದ್ ಜೋಶಿ
ವೋಕಲ್ ಫಾರ್ ಲೋಕಲ್ ಮಂತ್ರ
ವೋಕಲ್ ಫಾರ್ ಲೋಕಲ್ ಮಂತ್ರ ಮತ್ತಷ್ಟು ಗಟ್ಟಿಯಾಗಿದೆ ಎಂದ ಮೋದಿ, ಮನ್ ಕಿ ಬಾತ್‌ನಲ್ಲಿ ಸ್ಥಳೀಯ ಉದ್ಯಮಿಗಳಿಗೆ ಉತ್ತೇಜನವನ್ನು ನೀಡಲಾಗಿದೆ. ಗೊಂಬೆಗಳ ತಯಾರಿಕೆ ಮತ್ತು ಆತ್ಮ ನಿರ್ಭರ ಭಾರತಕ್ಕೆ ಸಾಕಷ್ಟು ಪ್ರಚಾರ ದೊರೆಯಿತು. ಮನ್ ಕೀ ಬಾತ್ ಮೂಲಕ ಸ್ವಚ್ಛ ಭಾರತಕ್ಕೆ ಮೈಲಿಗಲ್ಲು ದೊರೆಯಿತು. ಪ್ರವಾಸೋದ್ಯಮ ಸಾಕಷ್ಟು ಅಭಿವೃದ್ದಿಯಾಯಿತು. ಹರಿಯಾಣದಲ್ಲಿ ಲಿಂಗಾನುಪಾತ ಪ್ರಮಾಣ ಸುಧಾರಣೆಯಾಗಿದೆ. ಹೀಗಾಗಿ ಈ ಕಾರ್ಯಕ್ರಮದ ಮೂಲಕ ಬೇರೆಯವರಿಂದ ಕಲಿಯಲು ಅನುಕೂಲವಾಗಿದೆ. ಇದು ಸಮಾಜಕ್ಕೆ ಪ್ರೇರಣೆಯಾಗಿದೆ ಎಂದರು.
ಇನ್ನು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾಲದಲ್ಲಿ ಜಿ20 ಶೃಂಗಸಭೆಯ ಅಧ್ಯಕ್ಷತೆ ವಹಿಸಿದ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ನವ ಭಾರತವನ್ನು ನಿರ್ಮಾಣ ಮಾಡುವ ಸಲುವಾಗಿ ಎಲ್ಲರೂ ಒಟ್ಟಾಗಿ ದೇಶದ ಅಭಿವೃದ್ಧಿಗಾಗಿ ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ