Gujarat ಪ್ರಾಣಿ ಸಂಗ್ರಹಾಲಯಕ್ಕೆ 1000 ಮೊಸಳೆಗಳ ಸ್ಥಳಾಂತರ; ಹೈಕೋರ್ಟ್‌ ಸಮ್ಮತಿ

Reliance Industries Limited: ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಬೆಂಬಲದ ಜಿ.ಝೆಡ್.ಆರ್.ಆರ್ ಸೆಂಟರ್‌ನಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಪರಿಣಿತರು ಮೆಚ್ಚುಗೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಕೋರ್ಟ್‌ ಮಧ್ಯಪ್ರವೇಶಿಸಲು ನಿರಾಕರಿಸಿದೆ.

ಮೊಸಳೆ

ಮೊಸಳೆ

 • Share this:
  ಚೆನ್ನೈ, ಆಗಸ್ಟ್‌ 2022: ಗುಜರಾತ್‌ನ ಗ್ರೀನ್ಸ್‌ ಝೂಆಲಾಜಿಕಲ್‌ ರೆಸ್ಕ್ಯೂ ಆಂಡ್ ರಿಹ್ಯಾಬಿಲಿಟೇಶನ್‌ (Greens Zoological, Rescue & Rehabilitation ) ಸೆಂಟರ್‌ಗೆ ಮದ್ರಾಸ್ ಕ್ರೊಕೊಡೈಲ್‌ ಟ್ರಸ್ಟ್‌ (MCBT) ಇಂದ 1,000 ಮೊಸಳೆಗಳನ್ನು (Crocodile) ಸ್ಥಳಾಂತರ ಮಾಡುವ ಕುರಿತು ತಮಿಳುನಾಡು ಸರ್ಕಾರದ (Tamilnadu Government) ಕ್ರಮವನ್ನು ಮದ್ರಾಸ್ ಹೈಕೋರ್ಟ್‌ ಎತ್ತಿಹಿಡಿದಿದೆ. ಈ ಕುರಿತು ಎ ವಿಶ್ವನಾಥನ್‌ ಎಂಬುವವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಂ ಎನ್ ಭಂಡಾರಿ ಮತ್ತು ನ್ಯಾಯಮೂರ್ತಿ ಎನ್‌ ಮಾಲಾ ಅವರನ್ನು ಒಳಗೊಂಡ ಪೀಠ ತಳ್ಳಿಹಾಕಿದೆ.

  ರಿಲಯನ್ಸ್‌ ಇಂಡಸ್ಟ್ರೀಸ್‌ ಲಿಮಿಟೆಡ್‌ ಬೆಂಬಲದ ಜಿ.ಝೆಡ್.ಆರ್.ಆರ್ ಸೆಂಟರ್‌ನಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಪರಿಣಿತರು ಮೆಚ್ಚುಗೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ವಿಷಯದಲ್ಲಿ ಕೋರ್ಟ್‌ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಪರಿಣಿತರು ತೆಗೆದುಕೊಂಡ ನಿರ್ಧಾರಕ್ಕೆ ವಿರುದ್ಧವಾದ ಅಭಿಪ್ರಾಯಗಳ ಸಾಕ್ಷ್ಯವನ್ನು ಅರ್ಜಿದಾರರು ಸಲ್ಲಿಸಿಲ್ಲ ಎಂದು ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.

  ಇಷ್ಟು ಸಂಖ್ಯೆಯ ಮೊಸಳೆಗಳನ್ನು ನೋಡಿಕೊಳ್ಳಲು ತಮ್ಮ ಬಳಿ ಸಾಕಷ್ಟು ಹಣಕಾಸಿನ ಅನುಕೂಲವಿಲ್ಲ. ಹೀಗಾಗಿ, ಇವುಗಳನ್ನು ಗುಜರಾತ್‌ನ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗುತ್ತಿದೆ. ಈ ಸೆಂಟರ್‌ನಲ್ಲಿ ಅತ್ಯಾಧುನಿಕ ಸೌಲಭ್ಯಗಳಿವೆ ಎಂಬುದಾಗಿ ಎಂಸಿಬಿಟಿ ಈ ಹಿಂದೆ ಒಪ್ಪಿಕೊಂಡಿದೆ. ಅಷ್ಟೇ ಅಲ್ಲ, ಎಂಸಿಬಿಟಿ ಒದಗಿಸಿದ ಫೋಟೋಗಳನ್ನು ಪರಿಶೀಲಿಸಲಾಗಿದ್ದು, ಮೊಸಳೆಗಳಿಗೆ ಅಲ್ಲಿ ಲಭ್ಯವಿರುವ ಅನುಕೂಲವನ್ನು ಗಮನಿಸಿ ಗುಜರಾತ್‌ ಕೇಂದ್ರಕ್ಕೆ ಸ್ಥಳಾಂತರ ಮಾಡಲು ನಾವು ಒಪ್ಪಿದ್ದೇವೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

  ಇದನ್ನೂ ಓದಿ: Jio Independence Day special plan: 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಭರ್ಜರಿ ಬೆನಿಫಿಟ್ಸ್​ಗಳೊಂದಿಗೆ 750 ರೂಪಾಯಿಯ ಸ್ಪೆಷಲ್​ ಪ್ಲಾನ್​ ಪರಿಚಯಿಸಿದ ಜಿಯೋ!

  Reliance Jewels: ವರಲಕ್ಷ್ಮಿ ಕಲೆಕ್ಷನ್ 2022 ಅನಾವರಣಗೊಳಿಸಿದ ರಿಲಯನ್ಸ್‌ ಜ್ಯುವೆಲ್ಸ್‌!

  ಭಾರತದ ಪ್ರಮುಖ ಆಭರಣ ಬ್ರ್ಯಾಂಡ್‌ ರಿಲಯನ್ಸ್‌ ಜ್ಯುವೆಲ್ಸ್‌ (Reliance jewels) ವಿಶೇಷ ವರಲಕ್ಷ್ಮಿ ಕಲೆಕ್ಷನ್‌ 2022 (Varalakshmi Collection 2022) ಅನ್ನು ಅನಾವರಣಗೊಳಿಸಿದೆ. ಇದು ವರಲಕ್ಷ್ಮಿ ವ್ರತದ ಸಂದರ್ಭದಲ್ಲಿ ಅನಾವರಣಗೊಂಡಿರುವುದು ಅತ್ಯಂತ ವಿಶೇಷವಾಗಿದೆ. 'ಗ್ಲೋ ಲೈಕ್ ಎ ಗಾಡೆಸ್‌' ಎಂಬ ಹೆಸರಿನ ಕಲೆಕ್ಷನ್‌ ಒಳಗೊಂಡಿರುವ ಬ್ರ್ಯಾಂಡ್‌ನ ಕ್ಯಾಂಪೇನ್‌ ದೇವತೆಯಂತಹ ಮಹಿಳೆಯರು (Womens) ಈ ಹಬ್ಬವನ್ನು ಸಂಭ್ರಮಾಚರಣೆ ಮಾಡಲು ಅನುವು ಮಾಡುವ ಉದ್ದೇಶವನ್ನು ಹೊಂದಿದೆ. ಲಕ್ಷ್ಮಿ (Laxmi) ದೇವಿಯ ದೈವೀ ಭಾವದಿಂದ ಸ್ಫೂರ್ತಿಗೊಂಡಿರುವ ಈ ಕಲೆಕ್ಷನ್‌ ಮಹಿಳೆಯರು ತಮ್ಮೊಳಗಿನ ದೈವೀ ಭಾವವನ್ನು ಸ್ಫುರಿಸುವುದಕ್ಕೆ ಸ್ಫೂರ್ತಿಯಾಗಲಿದೆ. ದಕ್ಷಿಣ ಭಾರತದ ಸಮೃದ್ಧ ಸಂಪ್ರದಾಯ ಮತ್ತು ಪರಂಪರೆಯನ್ನು ಮೇಳೈಸಿರುವ ಈ ಆಭರಣವು ಪ್ರಾದೇಶಿಕತೆ, ಸಾಂಸ್ಕೃತಿಕ ಸಂಗತಿಗಳು ಮತ್ತು ಸ್ಟೈಲ್‌ಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಂಡಿದೆ. ವಿನ್ಯಾಸ ಮತ್ತು ಕ್ಯಾಂಪೇನ್‌ "ಕಲ್ಪವೃಕ್ಷ"ದ ಸ್ಪೂರ್ತಿಯನ್ನು ಹೊಂದಿದೆ. ಇದು ಆಳವಾದ ಅಧ್ಯಾತ್ಮ ಭಾವವನ್ನು ನೀಡುತ್ತದೆ ಎಂದು ಭಾವಿಸಲಾಗಿದ್ದು, ಸಮುದ್ರ ಮಂಥನದ ಪುರಾತನ ಐತಿಹ್ಯಕ್ಕೂ ಇದು ಸಂಬಂಧ ಹೊಂದಿದೆ.

  ಇದನ್ನೂ ಓದಿ: Parle G: 25 ವರ್ಷ ಜಸ್ಟ್ 4 ರೂಪಾಯಿಗೆ ಮಾರಾಟವಾಗ್ತಿತ್ತು ಪಾರ್ಲೆ ಜಿ, ಇದರ ಹಿಂದಿದೆ ಒಂದು ರಣ ರೋಚಕ ಕಾರಣ!

  ಸೂಕ್ಷ್ಮವಾಗಿ ಕೆತ್ತನೆ ಮಾಡಿದ ಸಾಂಪ್ರದಾಯಿಕ ಆಭರಣದಲ್ಲಿ ನೆಕ್‌ಲೇಸ್‌ಗಳು, ಕಿವಿಯೋಲೆಗಳು, ಬಳೆಗಳು ಮತ್ತು ರಿಂಗ್‌ಗಳು ಇವೆ. 22 ಕ್ಯಾರೆಟ್‌ ಹಳದಿ ಚಿನ್ನದಲ್ಲಿ ವಿನ್ಯಾಸ ಮಾಡಲಾಗಿದೆ. ಪುರಾತನ ಚಿನ್ನದ ದೇಗುಲ ವಿನ್ಯಾಸಗಳು ಮತ್ತು ವರ್ಣಮಯ ಹವಳಗಳನ್ನು ಒಳಗೊಂಡಿದೆ. ಪ್ರತಿ ಚಿನ್ನದ ಆಭರಣದ ವಿನ್ಯಾಸವೂ ವಿಭಿನ್ನವಾಗಿದ್ದು, ಕಲೆಕ್ಷನ್‌ ಎಲ್ಲ ರೀತಿಯಲ್ಲೂ ವಿಶಿಷ್ಟವಾಗಿದೆ. ಅತ್ಯಾಕರ್ಷಕ ವಜ್ರದ ಕಲೆಕ್ಷನ್‌ನಲ್ಲಿ ಚೋಕರ್‌ಗಳು ಮತ್ತು ಹರಾಮ್‌ ಸೆಟ್‌ಗಳಿವೆ. ಜೊತೆಗೆ ವಜ್ರಗಳು, ವಿವಿಧ ಬಣ್ಣಗಳ ಹವಳಗಳು ಮತ್ತು ಪರ್ಲ್‌ ಡ್ರಾಪ್‌ಗಳೂ ಕೂಡ ಇದರಲ್ಲಿವೆ. ಆಭರಣದ ಪ್ರತಿ ತುಣುಕಿನಲ್ಲೂ ದೇವಿಯ ದೈವಿಭಾವ, ಸಮೃದ್ಧಿಯನ್ನು ಚಿತ್ರಿಸಲಾಗಿದೆ ಮತ್ತು ಹಬ್ಬದ ಸಂದರ್ಭದಲ್ಲಿ ಪ್ರತಿ ಮಹಿಳೆಗೂ ಇದು ಅತ್ಯಂತ ಹೊಂದುವ ಆಭರಣವಾಗಿರಲಿದೆ.


  ಕಲೆಕ್ಷನ್‌ ಬಿಡುಗಡೆಯ ಸಂದರ್ಭದಲ್ಲಿ ಮಾತನಾಡಿದ ರಿಲಯನ್ಸ್‌ ಜ್ಯುವೆಲ್ಸ್‌ನ ಸಿಇಒ ಸುನೀಲ್‌ ನಾಯಕ್‌ "ಈ ಮಂಗಳಕರ ಹಬ್ಬದ ಭಾವವನ್ನು ಮೂಡಿಸುವುದು ನಮ್ಮ ಇಡೀ ಕಲೆಕ್ಷನ್‌ ಧ್ಯೇಯವಾಗಿದೆ. ಈ ವಿಶಿಷ್ಟ ಸ್ಟೈಲ್‌ಗಳನ್ನು ಈ ಪ್ರದೇಶದ ಗ್ರಾಹಕರ ಆಸಕ್ತಿಗೆ ತಕ್ಕಂತೆ ರೂಪಿಸಿದ್ದೇವೆ. ದಕ್ಷಿಣ ಭಾರತದ ನಮ್ಮ ಅತ್ಯಂತ ಕುಶಲ ವಿನ್ಯಾಸ ತಂಡವು ಈ ಕಲೆಕ್ಷನ್‌ ರೂಪಿಸುವಲ್ಲಿ ಅಪಾರ ಶ್ರಮ ವಹಿಸಿದೆ. ಪ್ರತಿ ಸೂಕ್ಷ್ಮ ವಿನ್ಯಾಸವನ್ನೂ ಇದು ಅತ್ಯಂತ ಕಾಳಜಿಯಿಂದ ರೂಪಿಸಿದೆ.

  Published by:Harshith AS
  First published: