Love Jihad: ಸರ್ವಧರ್ಮೀಯ ಸಂಬಂಧಗಳಿಗೆ ಲವ್ ಜಿಹಾದ್ ಬಣ್ಣ ಹಚ್ಚಬೇಡಿ! ಬಾಂಬೆ ಹೈಕೋರ್ಟ್ ತಾಕೀತು

ಬಾಂಬೆ ಹೈಕೋರ್ಟ್​

ಬಾಂಬೆ ಹೈಕೋರ್ಟ್​

ಲವ್ ಜಿಹಾದ್ ಪದವನ್ನು ಹಿಂದೂ ಬಲಪಂಥೀಯ ಸಂಘಟನೆಗಳು ಬಳಸಿಕೊಳ್ಳುತ್ತಿದ್ದು, ಹಿಂದೂ ಮಹಿಳೆಯರ ಮನ ಪರಿವರ್ತಿಸಿ ಅವರನ್ನು ವಿವಾಹವಾಗುವ ಮೂಲಕ ಇಸ್ಲಾಂಗೆ ಮತಾಂತರಿಸುವ ಸಂಚು ಎಂಬುದನ್ನು ತಿಳಿಸುವ ಆಧಾರರಹಿತ ಪದವಾಗಿದೆ.

  • Share this:

ಪರಸ್ಪರ ಅನುರಕ್ತರಾದ ಹುಡುಗ (Boy) ಮತ್ತು ಹುಡುಗಿಯು (Girl) ಬೇರೆ ಬೇರೆ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ಸಂಬಂಧವನ್ನು ಲವ್ ಜಿಹಾದ್ (Love Jihad) ಎಂದು ಕರೆಯಲಾಗುವುದಿಲ್ಲವೆಂದು ಬಾಂಬೆ ಹೈಕೋರ್ಟ್‌ನ (Bomaby Highcourt) ಔರಂಗಾಬಾದ್ ಪೀಠ ಸ್ಪಷ್ಟಪಡಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮಹಿಳೆ ಹಾಗೂ ಆಕೆಯ ಕುಟುಂಬಕ್ಕೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡುವ ಸಮಯದಲ್ಲಿ ಪೀಠ ತಿಳಿಸಿದೆ. ನ್ಯಾಯಮೂರ್ತಿಗಳಾದ ವಿಭಾ ಕಂಕಣವಾಡಿ ಮತ್ತು ಅಭಯ್ ವಾಘವಾಸೆ ಅವರ ವಿಭಾಗೀಯ ಪೀಠವು ಫೆಬ್ರವರಿ 26 ರಂದು ನೀಡಿದ ಆದೇಶದಲ್ಲಿ ಔರಂಗಾಬಾದ್‌ನ ಸ್ಥಳೀಯ ನ್ಯಾಯಾಲಯದಿಂದ ಪರಿಹಾರ ನಿರಾಕರಿಸಿದ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಿದೆ.


ಲವ್ ಜಿಹಾದ್ ಪ್ರಕರಣ ಎಂದು ವಾದಿಸಿದ ವಕೀಲರು


ಮಾಜಿ ಪ್ರೇಮಿಯು ಮಹಿಳೆ ಮತ್ತು ಆಕೆಯ ಕುಟುಂಬಸ್ಥರ ಮೇಲೆ ಆರೋಪಗಳನ್ನು ನಡೆಸಿದ್ದು, ತನ್ನನ್ನು ಇಸ್ಲಾಂಗೆ ಮತಾಂತರಗೊಳ್ಳಲು ಹಾಗೂ ಸುನ್ನತಿಗೆ ಒಳಗಾಗುವಂತೆ ಒತ್ತಡ ಹೇರಿದ್ದಾರೆ ಎಂದು ತಿಳಿಸಿದ್ದಾನೆ. ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರ ಬಂಧನ ಪೂರ್ವ ಜಾಮೀನು ಅರ್ಜಿಗಳನ್ನು ವಿರೋಧಿಸಿದ ವ್ಯಕ್ತಿಯ ವಕೀಲರು, ಇದು 'ಲವ್ ಜಿಹಾದ್' ಪ್ರಕರಣ ಎಂದು ವಾದಿಸಿದ್ದಾರೆ.


ಲವ್ ಜಿಹಾದ್ ಎಂದರೇನು?


ಲವ್ ಜಿಹಾದ್ ಪದವನ್ನು ಹಿಂದೂ ಬಲಪಂಥೀಯ ಸಂಘಟನೆಗಳು ಬಳಸಿಕೊಳ್ಳುತ್ತಿದ್ದು, ಹಿಂದೂ ಮಹಿಳೆಯರ ಮನ ಪರಿವರ್ತಿಸಿ ಅವರನ್ನು ವಿವಾಹವಾಗುವ ಮೂಲಕ ಇಸ್ಲಾಂಗೆ ಮತಾಂತರಿಸುವ ಸಂಚು ಎಂಬುದನ್ನು ತಿಳಿಸುವ ಆಧಾರರಹಿತ ಪದವಾಗಿದೆ. ಅದಾಗ್ಯೂ ಇಲ್ಲಿ ಆರೋಪಿಯು ಒಬ್ಬ ವ್ಯಕ್ತಿಯಾಗಿದ್ದನು ಎಂಬುದು ಕುತೂಹಲಕಾರಿ ಅಂಶವಾಗಿದೆ.


ವಾದ ತಿರಸ್ಕರಿಸಿದ ಉಚ್ಛ ನ್ಯಾಯಾಲಯ


ವರದಿಯಲ್ಲಿ ತಾನು ಮಹಿಳೆಯೊಂದಿಗೆ ಸಂಬಂಧ ಹೊಂದಿರುವುದಾಗಿ ವ್ಯಕ್ತಿ ಒಪ್ಪಿಕೊಂಡಿದ್ದಾನೆ ಹಾಗೂ ಆತನಿಗೆ ಮಹಿಳೆಯ ಸಂಬಂಧವನ್ನು ತೊರೆಯುವ ಅವಕಾಶಗಳಿದ್ದರೂ ಆತ ಆಕೆಯೊಂದಿಗಿನ ಸಂಬಂಧವನ್ನು ಮುಂದುವರಿಸಿದ್ದಾನೆ ಎಂದು ಹೈಕೋರ್ಟ್ ತಿಳಿಸಿದೆ.


ಲವ್ ಜಿಹಾದ್ ಹೆಸರಿನಲ್ಲಿ ಬಣ್ಣ ಹಚ್ಚಬೇಡಿ


ದೃಷ್ಟಿಕೋನವನ್ನಿಟ್ಟುಕೊಂಡು ಈ ಪ್ರಕರಣವನ್ನು ಅಳೆಯುವುದು ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿದ್ದು ಹಾಗೂ ಪರಿಶುದ್ಧ ಪ್ರೀತಿಯ ಪ್ರಕರಣ ಇದಾಗಿರಬಹುದು ಎಂದು ಸೂಚಿಸಿದೆ.


ಇದನ್ನೂ ಓದಿ: ಇದು ವಿಶ್ವದ ಅತ್ಯಂತ ಐಷಾರಾಮಿ ರೆಸಾರ್ಟ್, ಒಂದು ರಾತ್ರಿಗೆ ತಗುಲುವ ವೆಚ್ಚದಲ್ಲಿ ಸ್ವಂತ ಮನೆನೇ ಕಟ್ಟಬಹುದು!


ಈ ಪ್ರಕರಣಕ್ಕೆ ಲವ್ ಜಿಹಾದ್ ಹೆಸರಿನಲ್ಲಿ ಅಡ್ಡಿ ಆತಂಕಗಳನ್ನುಂಟು ಮಾಡುವುದು ಸರಿಯಲ್ಲ ಎಂದು ನ್ಯಾಯಾಲಯ ತಿಳಿಸಿದ್ದು, ಪ್ರೀತಿಯನ್ನು ಸ್ವೀಕರಿಸಿದ ನಂತರ ಧರ್ಮದ ಹೆಸರಿನಲ್ಲಿ ವ್ಯಕ್ತಿಯನ್ನು ಸಿಲುಕಿಸುವ ಯಾವುದೇ ಸನ್ನಿವೇಶ ಅಲ್ಲಿ ಉದ್ಭವಿಸುವುದಿಲ್ಲ ಎಂದು ತಿಳಿಸಿದೆ.


ಮಹಿಳೆಗೆ ತನ್ನ ಜಾತಿ ಯಾವುದೆಂದು ತಿಳಿಸಿದ ವ್ಯಕ್ತಿ


ಪ್ರಾಸಿಕ್ಯೂಷನ್ ಪ್ರಕರಣದ ಪ್ರಕಾರ, ಪುರುಷ ಮತ್ತು ಮಹಿಳೆ ಮಾರ್ಚ್ 2018 ರಿಂದ ಸಂಬಂಧ ಹೊಂದಿದ್ದರು. ಪುರುಷ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವನಾಗಿದ್ದರೂ ಮಹಿಳೆಗೆ ಇದನ್ನು ಬಹಿರಂಗಪಡಿಸಿರಲಿಲ್ಲ.
ಮಹಿಳೆಯ ಪೋಷಕರಿಗೆ ವ್ಯಕ್ತಿಯು ತನ್ನ ಗುರುತನ್ನು ಬಹಿರಂಗಪಡಿಸಿದಾಗ ಆ ಮಹಿಳೆ ಇಸ್ಲಾಂಗೆ ಮತಾಂತರಗೊಂಡು ತನ್ನನ್ನು ವಿವಾಹವಾಗುವಂತೆ ಪುರುಷನಿಗೆ ಒತ್ತಡ ಹೇರಿದ್ದಾರೆ ಎಂಬುದು ತಿಳಿದು ಬಂದಿದೆ. ಮಹಿಳೆಯ ಪೋಷಕರು ಅವನ ಜಾತಿ ಗುರುತನ್ನು ವಿರೋಧಿಸಲಿಲ್ಲ ಮತ್ತು ಅದನ್ನು ಒಪ್ಪಿಕೊಳ್ಳುವಂತೆ ತಮ್ಮ ಮಗಳಿಗೆ ಮನವರಿಕೆ ಮಾಡಿದರು.


ಮಹಿಳೆ ಹಾಗೂ ಕುಟುಂಬಸ್ಥರ ಮೇಲೆ ಆರೋಪ ಹೊರಿಸಿದ ವ್ಯಕ್ತಿ
ಆದರೆ ಈ ಸಂಬಂಧವು ನಂತರ ಹದಗೆಟ್ಟಿತು ತದನಂತರ ಆ ವ್ಯಕ್ತಿಯು ಮಹಿಳೆ ಹಾಗೂ ಆಕೆಯ ಕುಟುಂಬಸ್ಥರ ವಿರುದ್ಧ ಡಿಸೆಂಬರ್ 2022 ರಲ್ಲಿ ಪ್ರಕರಣವನ್ನು ದಾಖಲಿಸಿದನು. ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡುವ ಸಮಯದಲ್ಲಿ ಹೈಕೋರ್ಟ್, ಪ್ರಕರಣದ ತನಿಖೆ ಬಹುತೇಕ ಮುಗಿದಿರುವುದರಿಂದ ಅವರ ಕಸ್ಟಡಿ ಅಗತ್ಯವಿಲ್ಲ ಎಂದು ತಿಳಿಸಿದೆ.

Published by:ವಾಸುದೇವ್ ಎಂ
First published: