8 ಮಂದಿ ಸಜೀವ ದಹನ ಪ್ರಕರಣ: ಘಟನಾ ಸ್ಥಳಗಳಲ್ಲಿ CCTV ಅಳವಡಿಕೆಗೆ High Court ಆದೇಶ

ಇಂದು ಕೋಲ್ಕತ್ತಾ ಹೈಕೋರ್ಟ್, ಸ್ವಯಂಪ್ರೇರಿತ ವಿಚಾರಣೆ ನಡೆಸಿತು. ಹಿಂಸಾಚಾರ ನಡೆದ ಸ್ಥಳಗಳನ್ನು ಎಲ್ಲ ಆಯಾಮಗಳಿಂದಲೂ ತೋರಿಸುವ ರೀತಿಯಲ್ಲಿ ಆ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು ಎಂದು ಆದೇಶಿಸಿದೆ.

ಬಿರ್ಭೂಮ್‌ ಹಿಂಸಾಚಾರ ಸ್ಥಳ

ಬಿರ್ಭೂಮ್‌ ಹಿಂಸಾಚಾರ ಸ್ಥಳ

 • Share this:
  ಪಶ್ಚಿಮ ಬಂಗಾಳದ ಬಿರ್ಭೂಮ್‌ (West Bengal Birbhum) ನಲ್ಲಿ ಟಿಎಂಸಿ (TMC) ನಾಯಕನ ಹತ್ಯೆಯ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ (Violence) 8 ಜನರು ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಇಟ್ಟುಕೊಂಡು ಬಿಜೆಪಿ (BJP) ನಿರಂತರವಾಗಿ ಮಮತಾ ಬ್ಯಾನರ್ಜಿ (Mamata Banerjee) ಸರ್ಕಾರಕ್ಕೆ ಛಾಟಿ ಬೀಸುತ್ತಲೇ ಇದೆ. ಹೀಗಿರುವಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇದೀಗ ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ಇದು ಪಶ್ಚಿಮ ಬಂಗಾಳವೇ ಹೊರತು ಇದು ಉತ್ತರ ಪ್ರದೇಶ ಅಲ್ಲ ಎಂದು ಮಮತಾ ತಿರುಗೇಟು ಕೊಟ್ಟಿದ್ದಾರೆ. ನಾನು ಹತ್ರಾಸ್‌ಗೆ ಟಿಎಂಸಿ ನಿಯೋಗವನ್ನು ಕಳುಹಿಸಿದ್ದೆ. ಆದರೆ ಅಲ್ಲಿ ನಿಯೋಗಕ್ಕೆ ಹೋಗಲು ಅನುಮತಿ ನೀಡಿಲ್ಲ. ಆದರೆ ನಾವು ಯಾರನ್ನೂ ಬಿರ್ಭೂಮ್‌ಗೆ ಬರುವುದನ್ನು ತಡೆಯುತ್ತಿಲ್ಲ ಎಂದು ಹೇಳಿದ್ದಾರೆ.

  ಸಿಸಿಟಿವಿ ಕ್ಯಾಮರಾ (CCTV) ಅಳವಡಿಸುವಂತೆ ಹೈಕೋರ್ಟ್ ಆದೇಶ

  ಪ್ರಕರಣ ಸಂಬಂಧ ಇಂದು ಕೋಲ್ಕತ್ತಾ ಹೈಕೋರ್ಟ್, ಸುಮೊಟೊ (ಸ್ವಯಂಪ್ರೇರಿತ) ವಿಚಾರಣೆ ನಡೆಸಿತು. ಸೂಕ್ತ ವಿಚಾರಣೆ ನಡೆದು ತೀರ್ಪು ಹೊರಬರಬೇಕಾದರೆ ಸಾಕ್ಷಿಗಳನ್ನು ರಕ್ಷಿಸಬೇಕು. ಹೀಗಾಗಿ ಹಿಂಸಾಚಾರ ನಡೆದ ಸ್ಥಳಗಳನ್ನು ಎಲ್ಲ ಆಯಾಮಗಳಿಂದಲೂ ತೋರಿಸುವ ರೀತಿಯಲ್ಲಿ ಆ ಜಾಗದಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಬೇಕು. ಸಿಸಿಟಿವಿಯಲ್ಲಿ ಸಾಕಷ್ಟು ಸ್ಟೋರೇಜ್​​ಗೆ ಅವಕಾಶ ಇರಬೇಕು. ಸಾಕ್ಷಿ ನಾಶಕ್ಕೆ ಅವಕಾಶ ಕೊಡಬಾರದು ಮತ್ತು ಈ ಕೆಲಸವನ್ನು ಜಿಲ್ಲಾ ನ್ಯಾಯಾಧೀಶರಾದ ಪುರ್ಬಾ ಭುರ್ದಾವನ್ ಸಮ್ಮುಖದಲ್ಲಿಯೇ ನಡೆಸಬೇಕು ಎಂದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

  ಇದನ್ನೂ ಓದಿ: ಮೋಹಿನಿಯಾಟ್ಟಂ ಪ್ರದರ್ಶನವನ್ನು ಅರ್ಧಕ್ಕೆ ನಿಲ್ಲಿಸಿದ ಜಡ್ಜ್ ಪಾಷಾ.. ಕಲಾವಿದೆಯ ಕಣ್ಣೀರು..!

  ಸಾಕ್ಷಿ ನಾಶವಾಗದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆ

  ಘಟನೆಗೆ ಸಂಬಂಧಪಟ್ಟಂತೆ ಯಾವುದೇ ಚಿಕ್ಕ ಹಾಗೂ ಒಂದೂ ಸಾಕ್ಷಿ ಕೂಡ ನಾಶವಾಗದಂತೆ ನೋಡಿಕೊಳ್ಳುವುದು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರದ ಹೊಣೆ ಎಂದು ಕೋಲ್ಕತ್ತಾ ಹೈಕೋರ್ಟ್ ಹೇಳಿದೆ. ಯಾವುದೇ ರೀತಿಯಲ್ಲಿ ತಡ ಮಾಡದೇ ಅಪರಾಧ ನಡೆದ ಸ್ಥಳಕ್ಕೆ ಭೇಟಿ ನೀಡಿ. ವಿಧಿವಿಜ್ಞಾನ ಪರೀಕ್ಷೆಗೆ ಏನೆಲ್ಲ ವಸ್ತುಗಳ ಸಂಗ್ರಹ ಅಗತ್ಯವೋ ಅದನ್ನು ಕೂಡಲೇ ಮಾಡಬೇಕು ಎಂದು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಸಿಎಫ್‌ಎಸ್‌ಎಲ್)  ಸೂಚನೆ ನೀಡಿದೆ.

  ನಾಳೆ ಮಧ್ಯಾಹ್ನ 2 ಗಂಟೆಯೊಳಗೆ ಕೇಸ್ ಡೈರಿ ಹಾಜರುಪಡಿಸಬೇಕು

  ನಾಳೆ ಮಧ್ಯಾಹ್ನ 2 ಗಂಟೆಯೊಳಗೆ ಕೇಸ್ ಡೈರಿಯನ್ನು ಈ ನ್ಯಾಯಾಲಯಕ್ಕೆ ಹಾಜರುಪಡಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ. ಯಾವುದೇ ಸಾಕ್ಷಿ ನಾಶವಾಗದಿರಲಿ. ಜಿಲ್ಲಾ ನ್ಯಾಯಾಲಯ ಮತ್ತು ರಾಜ್ಯ ಡಿಜಿಪಿ ಪ್ರತಿ ಗ್ರಾಮಸ್ಥರು ಮತ್ತು ಸಾಕ್ಷಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಬೇಕು. ಯಾವುದೇ ಮರಣೋತ್ತರ ಪರೀಕ್ಷೆ ಬಾಕಿಯಿದ್ದರೆ, ಅದನ್ನು ವೀಡಿಯೊಗ್ರಾಫ್ ಮಾಡಬೇಕಾಗುತ್ತದೆ.

  ಕೋರ್ಟ್ ಆದೇಶ ನೀಡಿದರೆ ತನಿಖೆಗೆ ಸಿದ್ಧ ಎಂದು ಸಿಬಿಐ ಹೇಳಿದೆ

  ಬಿರ್ಭೂಮ್ ಹಿಂಸಾಚಾರದ ಕುರಿತು ಕಲ್ಕತ್ತಾ ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು ಆದೇಶಿಸಿದರೆ ಹಿಂಸಾಚಾರದ ತನಿಖೆಗೆ ಸಂಸ್ಥೆ ಸಿದ್ಧವಾಗಿದೆ ಎಂದು ಸಿಬಿಐ ಹೇಳಿದೆ.

  ಹಿಂಸಾಚಾರ ಭುಗಿಲೆದ್ದು 8 ಮಂದಿ ಸಜೀವ ದಹನ ಪ್ರಕರಣ

  ಪಶ್ಚಿಮ ಬಂಗಾಳದ ಬಿರ್ಭೂಮ್​​ ಜಿಲ್ಲೆಯ ರಾಂಪುರಹತ್​​ನ ಬರೋಸಾಲ್ ಗ್ರಾಮ ಪಂಚಾಯಿತಿ ಉಪಪ್ರಧಾನ್​ (ಉಪಾಧ್ಯಕ್ಷ) ಭಡು ಶೇಖ್​ ಎಂಬುವರ ಹತ್ಯೆ ನಡೆದ ಬೆನ್ನಲ್ಲೇ ಹಿಂಸಾಚಾರ ಭುಗಿಲೆದ್ದಿತ್ತು. ಈ ಹಿಂಸಾಚಾರದಲ್ಲಿ 12ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಇಡಲಾಗಿತ್ತು. ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿ 8 ಮಂದಿ ಸಜೀವ ದಹನಗೊಂಡಿದ್ದರು.

  ಬಿಜೆಪಿಗೆ ಮಮತಾ ತಿರುಗೇಟು

  ನಮ್ಮ ರಾಜ್ಯದ ಜನರ ಬಗ್ಗೆ ನಮಗೆ ಕಾಳಜಿ ಇದೆ. ಈ ಸರ್ಕಾರ ನಮ್ಮದು. ನಮಗೆ ನಮ್ಮ ರಾಜ್ಯದ ಜನರ ಬಗ್ಗೆ ಕಾಳಜಿ ಇದೆ. ಯಾರೂ ಅಸಮಾಧಾನಗೊಳ್ಳುವುದನ್ನು ನಾವು ನೋಡಲಾಗುವುದಿಲ್ಲ. ಬಿರ್ಭೂಮ್ ಘಟನೆ ದುರದೃಷ್ಟಕರ. ಕೂಡಲೇ ಓಸಿ ಮತ್ತು ಎಸ್ಪಿಡಿಒ ಅವರನ್ನು ತೆಗೆದು ಹಾಕಿದ್ದೆ. ನಾನೇ ನಾಳೆ ಅಲ್ಲಿಗೆ ಹೋಗುತ್ತೇನೆ ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

  ಗುಜರಾತ್ ಮತ್ತು ರಾಜಸ್ಥಾನದಲ್ಲೂ ಹಿಂಸಾಚಾರ

  ಗುಜರಾತ್ ಮತ್ತು ರಾಜಸ್ಥಾನದಲ್ಲೂ ಇಂತಹ ಘಟನೆಗಳು ನಡೆಯುತ್ತಿವೆ. ಆದರೆ ನಾನು ಈ ಘಟನೆಗಳನ್ನು ಸಮರ್ಥಿಸುತ್ತಿಲ್ಲ. ಈ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಹೈಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯುವ ಮೊದಲು, ಬಿರ್ಭೂಮ್‌ನ ರಾಮ್‌ಪುರಹತ್‌ನಲ್ಲಿ ನಡೆದ ಹಿಂಸಾಚಾರದ ಕುರಿತು ಕೋಲ್ಕತ್ತಾ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸುತ್ತಿದೆ ಎಂದಿದ್ದಾರೆ.

  ಇದನ್ನೂ ಓದಿ:ತಂಗಿಯನ್ನ ಗಂಡನ ಮನೆಯಿಂದ ಕರೆತಂದು ನಿರಂತರ ರೇಪ್ ಮಾಡಿದ ಅಣ್ಣ

  “ಬಂಗಾಳದಲ್ಲಿ ರಾಕ್ಷಸರ ಸರ್ಕಾರವಿದೆ”

  ಬಿರ್ಭೂಮ್ ಹಿಂಸಾಚಾರದ ಕುರಿತು ಕೇಳಿದ ಪ್ರಶ್ನೆಗೆ ಅಧೀರ್ ರಂಜನ್ ಚೌಧರಿ, ಬಂಗಾಳದಲ್ಲಿ ರಾಕ್ಷಸರ ಸರ್ಕಾರವಿದೆ. ರಾಕ್ಷಸ ರಾಜ್ಯವಿದೆ. ಬಂಗಾಳದಲ್ಲಿ ಮನುಷ್ಯರ ಆಡಳಿತವಿಲ್ಲ. ಅಧ್ಯಕ್ಷರನ್ನು ಭೇಟಿ ಮಾಡುತ್ತೇನೆ ಎಂದರು.
  Published by:renukadariyannavar
  First published: