Viral News : ಪತ್ನಿ ಆದಾಯದ ಮೇಲೆ ಪತಿ ಕಣ್ಣು: `ಹಣದ ಹಸು’ ಎಂದವನಿಗೆ ವಿಚ್ಚೇದನ ಕೊಡಿಸಿದ ಕೋರ್ಟ್!

Viral News : ಪತಿ ತನ್ನ ಪತ್ನಿಯನ್ನು “ಹಣದ ಹಸು” ವಿನಂತೆ ಕಾಣುತ್ತಿದ್ದನು ಮತ್ತು ದೆಹಲಿ ಪೋಲಿಸ್ ಇಲಾಖೆಯಲ್ಲಿ ಆಕೆಗೆ ಕೆಲಸ ದೊರೆತ ಬಳಿಕವಷ್ಟೇ ಆಕೆಯಲ್ಲಿ ಆಸಕ್ತನಾದನು ಎಂಬುದನ್ನು ಗಮನಿಸಿದ ನಂತರ ನ್ಯಾಯಾಲಯ ಈ ಆಜ್ಞೆ ನೀಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ತನ್ನ ಗಂಡ ನಿರುದ್ಯೋಗಿ(Unemployed), ಕುಡುಕ(Drunkard), ದೈಹಿಕವಾಗಿ ಹಿಂಸಿಸುತ್ತಾನೆ ಮತ್ತು ಹಣಕ್ಕಾಗಿ ಬೇಡಿಕೆ ಇಡುತ್ತಾನೆ ಎಂದು ದೂರಿ ಮಹಿಳೆಯೊಬ್ಬಳು ವಿಚ್ಚೇದನ ಕೋರಿದ್ದಳು. ಈ ಪ್ರಕರಣದಲ್ಲಿ ಎರಡೂ ಪಕ್ಷದವರು ಬಡತನದ ಹಿನ್ನೆಲೆಗೆ ಸೇರಿದವರು. ಪತಿ ಮತ್ತು ಪತ್ನಿಗೆ ಕ್ರಮವಾಗಿ, 13 ವರ್ಷ ವಯಸ್ಸಿದ್ದಾಗ ಈ ವಿವಾಹವನ್ನು ನೆರವೇರಿಸಲಾಗಿತ್ತು. ದೆಹಲಿ ಹೈ ಕೋರ್ಟ್ , ಪತಿಯಿಂದ ಮಾನಸಿಕ ಕ್ರೌರ್ಯ ಅನುಭವಿಸುತ್ತಿದ್ದ ಕಾರಣದ ಆಧಾರದ ಮೇಲೆ ಓರ್ವ ದಂಪತಿಗೆ ವಿಚ್ಚೇದನಕ್ಕೆ ಅನುಮತಿ ನೀಡಿದೆ. ಪತಿ ತನ್ನ ಪತ್ನಿಯನ್ನು “ಹಣದ ಹಸು” ವಿನಂತೆ ಕಾಣುತ್ತಿದ್ದನು ಮತ್ತು ದೆಹಲಿ ಪೋಲಿಸ್ ಇಲಾಖೆಯಲ್ಲಿ ಆಕೆಗೆ ಕೆಲಸ ದೊರೆತ ಬಳಿಕವಷ್ಟೇ ಆಕೆಯಲ್ಲಿ ಆಸಕ್ತನಾದನು ಎಂಬುದನ್ನು ಗಮನಿಸಿದ ನಂತರ ನ್ಯಾಯಾಲಯ ಈ ಆಜ್ಞೆ ನೀಡಿದೆ.


ಪತ್ನಿ ಆದಾಯದ ಮೇಲೆ ಪತಿ ಕಣ್ಣು!

ನ್ಯಾಯ ಮೂರ್ತಿ ವಿಪಿನ್ ಸಂಘಿ ನೇತೃತ್ವದ ಪೀಠವು, ಯಾವುದೇ ಭಾವನಾತ್ಮಕ ಸಂಬಂಧಗಳಿಲ್ಲದ , ಐಹಿಕ ಮನೋಭಾವವು ಪತ್ನಿಗೆ ಮಾನಸಿಕ ಯಾತನೆ ಮತ್ತು ಆಘಾತವನ್ನು ಉಂಟು ಮಾಡುತ್ತದೆ, ಇದು ಅವಳ ಮೇಲೆ ಕ್ರೌರ್ಯವನ್ನು ಉಂಟು ಮಾಡಲು ಸಾಕಾಗುತ್ತದೆ ಎಂದು ಹೇಳಿದೆ. ಕುಟುಂಬವನ್ನು ಆರಂಭಿಸುವುದು ಪ್ರತಿಯೊಬ್ಬ ಮಹಿಳೆಯ ಬಯಕೆಯಾಗಿರುತ್ತದೆ, ಆದರೆ ಈ ಪ್ರಕರಣದಲ್ಲಿ ಗಂಡನಿಗೆ “ಮದುವೆಯನ್ನು ಪೋಷಿಸುವ ಮನಸ್ಸಿಲ್ಲ, ಆದರೆ ಹೆಂಡತಿಯ ಆದಾಯದ ಮೇಲೆ ಮಾತ್ರ ಆಸಕ್ತಿ ಇರುವಂತೆ” ಕಾಣುತ್ತಿದೆ ಎಂದು ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರನ್ನು ಕೂಡ ಒಳಗೊಂಡ ಪೀಠವು ಹೇಳಿದೆ.


ಇದನ್ನು ಓದಿ: ಬಸ್-ಟ್ಯಾಂಕರ್​ ನಡುವೆ ಭೀಕರ ಅಪಘಾತ; 12 ಮಂದಿ ಸಜೀವ ದಹನ: ಮೋದಿ ಸಂತಾಪ

ದೆಹಲಿ ಹೈಕೋರ್ಟ್, ಪತ್ನಿಯ ವಿಚ್ಚೇದನದ ಅರ್ಜಿಯನ್ನು ತಿರಸ್ಕರಿಸಿದ ಕೌಟುಂಬಿಕ ನ್ಯಾಯಲಯ ಆದೇಶವನ್ನು ತಳ್ಳಿಹಾಕಿತು, ಮತ್ತು ಹಿಂದೂ ವಿವಾಹ ಕಾಯ್ದೆಯಡಿ ಆ ದಂಪತಿಯ ನಡುವಿನ ಮದುವೆಯನ್ನು ವಿಸರ್ಜಿಸಿತು. ತನ್ನ ಗಂಡ ನಿರುದ್ಯೋಗಿ, ಕುಡುಕ, ದೈಹಿಕವಾಗಿ ಹಿಂಸಿಸುತ್ತಾನೆ ಮತ್ತು ಹಣಕ್ಕಾಗಿ ಬೇಡಿಕೆ ಇಡುತ್ತಾನೆ ಎಂದು ದೂರಿ ಆಕೆ ವಿಚ್ಚೇದನ ಕೋರಿದ್ದಳು. ಈ ಪ್ರಕರಣದಲ್ಲಿ ಎರಡೂ ಪಕ್ಷದವರು ಬಡತನದ ಹಿನ್ನೆಲೆಗೆ ಸೇರಿದವರು. ಪತಿ ಮತ್ತು ಪತ್ನಿಗೆ ಕ್ರಮವಾಗಿ, 13 ವರ್ಷ ವಯಸ್ಸಿದ್ದಾಗ ಈ ವಿವಾಹವನ್ನು ನೆರವೇರಿಸಲಾಗಿತ್ತು. 2005 ರ ನಂತರವೂ, ನವಂವರ್ 2014 ರ ವರೆಗೆ ಅಂದರೆ , ಆಕೆ ದೆಹಲಿ ಪೊಲೀಸ್ ಇಲಾಖೆಯಲ್ಲಿ ಒಂದು ಕೆಲಸ ಸಿಗುವ ವರೆಗೂ ಗಂಡನ ಮನೆಗೆ ಕರೆದುಕೊಂಡು ಹೋಗಿರಲಿಲ್ಲ.


ಪತ್ನಿ ಹಣಕ್ಕಾಗಿ ಆಕೆ ಕಿರುಕುಳ


“ ಅಪೀಲುದಾರರು (ಪತ್ನಿ) ವಯಸ್ಸಿಗೆ ಬಂದ ನಂತರವು ಇಬ್ಬರ ನಡುವೆ ಅಂತರವನ್ನು ಮುಂದುವರೆಸಿರುವುದು ಸ್ವತಃ ಆಘಾತವನ್ನು ಉಂಟು ಮಾಡಿರುತ್ತದೆ ಮತ್ತು ಎಲ್ಲದರ ಹೊರತಾಗಿಯೂ ಅಪೀಲುದಾರರ ಮೇಲೆ ಕ್ರೌರ್ಯವನ್ನು ಉಂಟು ಮಾಡಿದಂತಾಗಿದೆ. ಪ್ರತಿವಾದಿಯೂ (ಪತಿ) ಸ್ವತಃ ನಿರುದ್ಯೋಗಿಯಾಗಿದ್ದ, ಹಾಗಾಗಿ ಮೇಲ್ಮನವಿದಾರಳ ಆದಾಯವನ್ನು ಜೇಬಿಗಿಳಿಸಲು ಕಿರುಕುಳ ನೀಡಿದ್ದನು ಎಂಬುದನ್ನು , ಪರಿಸ್ಥಿತಿಯು ಮೇಲ್ಮನವಿದಾರನ ನಿಲುವನ್ನು ಸಂಭವನೀಯಗೊಳಿಸುತ್ತದೆ” ಎಂದು ನ್ಯಾಯಾಲಯವು ತಿಳಿಸಿದೆ.


ಇದನ್ನು ಓದಿ : ಕಿಡ್ನಾಪ್​ ಆಗಿದ್ದ 16 ವರ್ಷದ ಬಾಲಕಿ ಕಿರಾತಕರಿಂದ ಎಸ್ಕೇಪ್​ ಆಗಿದ್ದೇ ಬಲು ರೋಚಕ..!

ಜಡ್ಜ್​ ಬಳಿ ಸುಳ್ಳು ಹೇಳಿದ್ದ ಪತಿರಾಯ

ಪತ್ನಿಯ ವಿದ್ಯಾಭ್ಯಾಸಕ್ಕೆ ತಾನು ಧನ ಸಹಾಯ ಮಾಡಿದ್ದರ ಆಧಾರದ ಮೇಲೆ, ಪತಿಯು ಮದುವೆಯನ್ನು ವಿಸರ್ಜಿಸಿದ ತೀರ್ಮಾನವನ್ನು ವಿರೋಧಿಸಿದ್ದಾನೆ.ಪತ್ನಿಯು , 2014 ರ ವರೆಗೆ ತನ್ನ ಹೆತ್ತವರ ಬಳಿಯೇ ವಾಸಿಸುತ್ತಿದ್ದರಿಂದ “ ಆಕೆಯ ಜೀವನ ಮತ್ತು ಪೋಷಣೆಯ ಎಲ್ಲಾ ಖರ್ಚು ವೆಚ್ಚಗಳನ್ನು ಆಕೆಯ ಪೋಷಕರೇ ಭರಿಸುತ್ತಿದ್ದರು ಎಂಬುವುದು ಸ್ಪಷ್ಟವಾಗುತ್ತದೆ” ಇದಕ್ಕೆ ವಿರುದ್ಧವಾಗಿ ತೋರಿಸಲು ಏನೂ ಇಲ್ಲ ಎಂಬುದನ್ನು ನ್ಯಾಯಾಲಯವು ತಿಳಿಸಿದೆ.


Published by:Vasudeva M
First published: