Virtual Marriage: ಅಮೆರಿಕದ ಯುವಕನೊಂದಿಗೆ ಆನ್​ಲೈನ್ ಮದುವೆ! ಭಾರತದ ಯುವತಿಗೆ ಕೋರ್ಟ್ ಅನುಮತಿ

ಮಹಿಳೆಯೊಬ್ಬರು ಭಾರತೀಯ ಮೂಲದ ಅಮೆರಿಕನ್ ಪ್ರಜೆಯನ್ನು (American Citizen) ವರ್ಚುವಲ್ ಮೋಡ್  (Virtual Wedding) ಮೂಲಕ ಮದುವೆಯಾಗಲು ಸಿದ್ಧರಾಗಿದ್ದಾರೆ. ಮದ್ರಾಸ್ ಹೈಕೋರ್ಟ್‌ನ (Madras High Court) ಮಧುರೈ ಬೆಂಚ್‌ಗೆ ಆನ್‌ಲೈನ್ ವಿವಾಹಕ್ಕೆ  (Online Marriage) ಅನುಮತಿ ನೀಡಿದೆ. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಚೆನ್ನೈ(ಆ.01): ತಮಿಳುನಾಡಿನ (Tamil Nadu) ಮಹಿಳೆಯೊಬ್ಬರು ಭಾರತೀಯ ಮೂಲದ ಅಮೆರಿಕನ್ ಪ್ರಜೆಯನ್ನು (American Citizen) ವರ್ಚುವಲ್ ಮೋಡ್  (Virtual Wedding) ಮೂಲಕ ಮದುವೆಯಾಗಲು ಸಿದ್ಧರಾಗಿದ್ದಾರೆ. ಮದ್ರಾಸ್ ಹೈಕೋರ್ಟ್‌ನ (Madras High Court) ಮಧುರೈ ಬೆಂಚ್‌ಗೆ ಆನ್‌ಲೈನ್ ವಿವಾಹಕ್ಕೆ  (Online Marriage) ಅನುಮತಿ ನೀಡಿದೆ. ಮದುವೆಯಾಗುವ ಹಕ್ಕು ಮೂಲಭೂತ ಮಾನವ ಹಕ್ಕು. ವಿಶೇಷ ವಿವಾಹ ಕಾಯಿದೆ (Special Marriage Act), 1954 ರ ಸೆಕ್ಷನ್ 12 ಮತ್ತು 13 ಈ ಹಕ್ಕನ್ನು ಜಾರಿಗೊಳಿಸುವ ರೀತಿಯಲ್ಲಿ ಅರ್ಥೈಸಿಕೊಳ್ಳಬೇಕು ಎಂದು ರಿಟ್ ಅರ್ಜಿಯನ್ನು ಆಲಿಸಿದ ನಂತರ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಹೇಳಿದರು. ಕಾಯ್ದೆಯ ಸೆಕ್ಷನ್ 12 (2) ಪಕ್ಷಗಳು ಅಳವಡಿಸಿಕೊಳ್ಳಲು ಆಯ್ಕೆಮಾಡಬಹುದಾದ ಯಾವುದೇ ರೂಪದಲ್ಲಿ ವಿವಾಹವನ್ನು ನಡೆಸಬಹುದು ಎಂದು ಹೇಳುತ್ತದೆ ಎಂದಿದ್ದಾರೆ.

ಈ ಸಂದರ್ಭದಲ್ಲಿ, ಜೋಡಿಯು ಆನ್‌ಲೈನ್ ಮೋಡ್ ಅನ್ನು ಆಯ್ಕೆ ಮಾಡಿಕೊಂಡಿವೆ. ಕಾನೂನು ತಂತ್ರಜ್ಞಾನದ ಬೆಳವಣಿಗೆ ವೇಗದ ಜೊತೆ ಹೊಂದಿರಬೇಕಾಗಿರುವುದರಿಂದ, ಇಲ್ಲಿ ಮದುವೆಯಾಗುವ ಜೋಡಿಯ ಆಯ್ಕೆಯು ಕಾನೂನು ಸಮ್ಮತವಾಗಿ ಸರಿಯಾಗಿದೆ. ವಾಸ್ಮಿ ಸುದರ್ಶಿನಿ ಪಿ ಎನ್, ಅರ್ಜಿದಾರರು ಪ್ರತಿವಾದಿ ಸಬ್ ರಿಜಿಸ್ಟ್ರಾರ್, ಕನ್ಯಾಕುಮಾರಿ ಅವರಿಗೆ ರಾಹುಲ್ ಎಲ್ ಮಧು ಅವರೊಂದಿಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ವಿವಾಹವನ್ನು ನೆರವೇರಿಸಲು ನಿರ್ದೇಶನವನ್ನು ಕೋರಿದ ನಂತರ ಈ ಬೆಳವಣಿಗೆ ತೀರ್ಪು ಬಂದಿದೆ.

1954ರ ವಿಶೇಷ ವಿವಾಹ ಕಾಯ್ದೆಯಡಿ ವಿವಾಹ ನೋಂದಣಿ ಮಾಡಿಸಿ ವಿವಾಹ ಪ್ರಮಾಣ ಪತ್ರ ನೀಡಬೇಕು ಎಂದು ಅವರು ತಮ್ಮ ಅರ್ಜಿಯಲ್ಲಿ ಕೇಳಿಕೊಂಡಿದ್ದರು.

ಮೂರು ಸಾಕ್ಷಿಗಳ ಸಮ್ಮುಖದಲ್ಲಿ ಮದುವೆ

ಮೂರು ಸಾಕ್ಷಿಗಳ ಸಮ್ಮುಖದಲ್ಲಿ ವರ್ಚುವಲ್ ಮೋಡ್ ಮೂಲಕ ರಿಟ್ ಅರ್ಜಿದಾರರ ವಿವಾಹವನ್ನು ರಾಹುಲ್ ಎಲ್ ಮಧು ಅವರೊಂದಿಗೆ ವಿವಾಹವಾಗಲು ಅನುಕೂಲವಾಗುವಂತೆ ನ್ಯಾಯಾಲಯವು ಸಬ್ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ.

ಇದನ್ನೂ ಓದಿ: Sanjay Raut: ಬಂಧಿಸಿದರೂ ಸರಿ, ಪಕ್ಷ ಬಿಡಲ್ಲ ಎಂದ ಶಿವಸೇನಾ ಸಂಸದ ಸಂಜಯ್ ರಾವತ್!

ವಿವಾಹದ ಕಕ್ಷಿದಾರರು ಮದುವೆಯ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ನ್ಯಾಯಮೂರ್ತಿ ಸ್ವಾಮಿನಾಥನ್ ಅವರು ತೀರ್ಪಿನಲ್ಲಿ ಬರೆದಿದ್ದಾರೆ. ಇಬ್ಬರೂ ಭಾರತೀಯ ಪ್ರಜೆಗಳಾಗಿರಬೇಕು ಎಂಬ ಅಗತ್ಯವಿಲ್ಲ ಎಂದು ತೀರ್ಪು ನೀಡಿದ್ದಾರೆ. ಆದ್ದರಿಂದ, ಮದುವೆಯನ್ನು ಶಾಸ್ತ್ರೋಕ್ತವಾಗಿ ನಡೆಸಲು ಯಾವುದೇ ಕಾನೂನು ಅಡೆತಡೆಗಳಿಲ್ಲ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.



ಮದುವೆ ಪ್ರಮಾಣಪತ್ರದಲ್ಲಿ ಸಹಿ ಹಾಕೋದು ಹೇಗೆ?

ಅರ್ಜಿದಾರರು ರಾಹುಲ್ ಎಲ್ ಮಧು ಅವರಿಂದ ಪವರ್ ಆಫ್ ಅಟಾರ್ನಿ ಹೊಂದಿದ್ದಾರೆ. ಮದುವೆಯ ನಂತರ, ಅರ್ಜಿದಾರರು ತನಗಾಗಿ ಮತ್ತು ರಾಹುಲ್ ಎಲ್ ಮಧು ಪರವಾಗಿ ಮದುವೆ ಪ್ರಮಾಣಪತ್ರ ಪುಸ್ತಕದಲ್ಲಿ ತನ್ನ ಸಹಿಯನ್ನು ಹಾಕಬಹುದು. ಅದರ ನಂತರ, ಪ್ರತಿವಾದಿಯಿಂದ ಕಾಯಿದೆಯ ಸೆಕ್ಷನ್ 13 ರ ಅಡಿಯಲ್ಲಿ ಮದುವೆಯ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಕನ್ಯಾಕುಮಾರಿ ನಿವಾಸಿ ಸುದರ್ಶಿನಿ ಹಾಗೂ ಅಮೆರಿಕ ಪ್ರಜೆ ರಾಹುಲ್ ಮಧು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರೂ ಮದುವೆಯಾಗಲು ಬಯಸಿದ್ದರು. ರಾಹುಲ್ ಭಾರತಕ್ಕೆ ಭೇಟಿ ನೀಡಿದ್ದರು.

ಇದನ್ನೂ ಓದಿ: Monkeypox: ಕೇರಳದಲ್ಲಿ ಮಂಕಿಪಾಕ್ಸ್​ಗೆ ಮೊದಲ ಸಾವು! ಫುಲ್ ಆ್ಯಕ್ಟಿವ್ ಆಗಿದ್ದ ಯುವಕ

ಮೇ 5, 2022 ರಂದು, ಅವರು ವಿಶೇಷ ವಿವಾಹ ಕಾಯಿದೆಯಡಿಯಲ್ಲಿ ಸಬ್ ರಿಜಿಸ್ಟ್ರಾರ್‌ಗೆ ಅರ್ಜಿದಾರರೊಂದಿಗೆ ಜಂಟಿ ಅರ್ಜಿಯನ್ನು ಸಲ್ಲಿಸಿದರು. ನೋಟಿಸ್ ಪ್ರಕಟವಾದ ನಂತರ, ರಾಹುಲ್ ತಂದೆ ಮತ್ತು ಇನ್ನೊಬ್ಬ ವ್ಯಕ್ತಿಯಿಂದ ಆಕ್ಷೇಪಣೆಗಳನ್ನು ಸ್ವೀಕರಿಸಲಾಯಿತು.

ವೀಸಾ ಅಗತ್ಯತೆಗಳ ಕಾರಣ ರಾಹುಲ್ ಹಿಂತಿರುಗಬೇಕಾಗಿದ್ದರಿಂದ ಹೆಚ್ಚು ಕಾಯಲು ಸಾಧ್ಯವಾಗಲಿಲ್ಲ. ವಧು ಭಾರತದಲ್ಲಿದ್ದರೂ, ಮದುಮಗ ಅಮೆರಿಕದಲ್ಲಿದ್ದರೂ ಕಾಯಿದೆಯ ಸೆಕ್ಷನ್ 12 ರ ಅಡಿಯಲ್ಲಿ ತಮ್ಮ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲು ಅವಕಾಶ ನೀಡಬೇಕು ಎಂದು ಇಬ್ಬರೂ ಕೇಳಿದ್ದರು.
Published by:Divya D
First published: