• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Election Results 2021: ಕೇರಳದಲ್ಲಿ ಮತ್ತೆ ಪಿಣರಾಯಿಗೆ ‘ವಿಜಯ’ಮಾಲೆ? ಅಸ್ಸಾಂ-ಪುದುಚೇರಿ ಬಿಜೆಪಿ ತೆಕ್ಕೆಗೆ?

Election Results 2021: ಕೇರಳದಲ್ಲಿ ಮತ್ತೆ ಪಿಣರಾಯಿಗೆ ‘ವಿಜಯ’ಮಾಲೆ? ಅಸ್ಸಾಂ-ಪುದುಚೇರಿ ಬಿಜೆಪಿ ತೆಕ್ಕೆಗೆ?

ಪಿಣರಾಯಿ ವಿಜಯನ್

ಪಿಣರಾಯಿ ವಿಜಯನ್

2ನೇ ಬಾರಿಗೆ ಕೇರಳದ ಮುಖ್ಯಮಂತ್ರಿ ಆಗುತ್ತಾರಾ ಪಿಣರಾಯಿ ವಿಜಯನ್​..? ಅಸ್ಸಾಂ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಮಲ ಪಕ್ಷ ಲಕಲಕ ಎನ್ನಲಿದೆಯಾ..?

  • Share this:

ಬೆಂಗಳೂರು: ಪಂಚ ರಾಜ್ಯಗಳ ಮತಎಣಿಕೆ ಬಿರುಸು ಪಡೆದುಕೊಂಡಿದ್ದು ಫಲಿತಾಂಶ ಸ್ಪಷ್ಟ ಚಿತ್ರಣದತ್ತ ದಾಪುಗಾಲಿಡುತ್ತಿದೆ. ಕೇರಳ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಆಡಳಿತಾರೂಢ ಪಕ್ಷವೇ ಪುನರ್​ ಆಯ್ಕೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಪಿಣರಾಯಿ ವಿಜಯನ್​ ನೇತೃತ್ವದಲ್ಲಿ ಚುನಾವಣೆ ಎದುರಿಸಿದ ಎಲ್​ಡಿಎಫ್​ ಮೈತ್ರಿಕೂಟ ಮಧ್ಯಾಹ್ನ 12 ಗಂಟೆ ಹೊತ್ತಿಗೆ 95 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಪ್ರತಿಪಕ್ಷ ಸ್ಥಾನದಲ್ಲಿದ್ದ ಯುಡಿಎಫ್​ 45 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮೆಟ್ರೋಮ್ಯಾನ್​ ಶ್ರೀಧರ್​​ ಮುನ್ನಡೆ ಕಾಯ್ದುಕೊಂಡಿದ್ದಾರಾದರೂ ಕೇರಳದಲ್ಲಿ ಬಿಜೆಪಿ ಕೇವಲ 3 ಕ್ಷೇತ್ರಗಳ ಮತ ಎಣಿಕೆಯಲ್ಲಿ ಮಾತ್ರ ಮುಂದಿದೆ.


ಕೇರಳದ ಇತಿಹಾಸದಲ್ಲಿ ಎಂದಿಗೂ ಒಂದೇ ಪಕ್ಷ ಸತತ 2 ಬಾರಿ ಅಧಿಕಾರದ ಗದ್ದುಗೆ ಹಿಡಿದಿಲ್ಲ. ಇದನ್ನು ಇಂದು ಪಿಣರಾಯಿ ವಿಜಯನ್​ ಮುರಿದು ಮತ್ತೆ ಸಿಎಂ ಗಾದ್ದಗೆಯೇರುತ್ತಾರೆ ಎನ್ನಲಾಗ್ತಿದೆ. ಕೊರೋನಾ ಪರಿಸ್ಥಿತಿ ನಿರ್ವಹಣೆ, ಅಯ್ಯಪ್ಪ ಸ್ವಾಮಿ ದೇಗುಲ ವಿವಾದವನ್ನು ಸಮರ್ಥವಾಗಿ ಎದುರಿಸಿದಕ್ಕಾಗಿಯೇ ಜನ ನಮ್ಮ ಕೈ ಹಿಡಿಯಲಿದ್ದಾರೆ ಎಂದು ಎಲ್​ಡಿಎಫ್​ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದರು. ಮಲೆಯಾಳಿಗಳು ಮತ್ತೊಮ್ಮೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್​-ಬಿಜೆಪಿಗೆ ಮಣೆ ಹಾಕದಿರುವುದು ಸ್ಪಷ್ಟವಾಗುತ್ತಿದೆ.


ಇನ್ನು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಕಮಲ ಅರಳೋದು ಬಹುತೇಕ ಪಕ್ಕಾ ಆಗಿದೆ. ಒಟ್ಟು 30 ಕ್ಷೇತ್ರಗಳ ಪೈಕಿ 11 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಮೈತ್ರಿಕೂಟ 5 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, 1 ಕ್ಷೇತ್ರದಲ್ಲಿ ಗೆಲುವಿನ ಗೆರೆ ದಾಟಿದೆ. ಇನ್ನು ಅಸ್ಸಾಂನಲ್ಲೂ ಬಿಜೆಪಿಗೆ ಸಿಹಿಸುದ್ದಿ ಸಿಗಲಿದೆ. ಮಧ್ಯಾಹ್ನ 12 ಗಂಟೆ ವೇಳೆಗೆ ಬಿಜೆಪಿ+ 85 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಮ್ಯಾಜಿಕ್​ ನಂಬರ್​ ದಾಟುವುದು ಖಚಿತವಾಗುತ್ತಿದೆ. ಮಧ್ಯಾಹ್ನ 2 ಗಂಟೆಯ ನಂತರ ಎಲ್ಲಾ ರಾಜ್ಯಗಳ ಚುನಾವಣಾ ಫಲಿತಾಂಶದ ಸ್ಪಷ್ಟ ಚಿತ್ರಣ ಸಿಗಲಿದೆ.

top videos
    First published: