Mumbai Rain| ಮುಂಬೈಗೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ; ಭಾನುವಾರ, ಸೋಮವಾರ ಭಾರೀ ಮಳೆ ಸಾಧ್ಯತೆ

ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ರೆಡ್​ ಅಲರ್ಟ್​​ ಘೋಷಣೆ ಮಾಡಿದೆ. ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ.

ಮುಂಬೈ ಮಳೆಯ ದೃಶ್ಯ.

ಮುಂಬೈ ಮಳೆಯ ದೃಶ್ಯ.

 • Share this:
  ಮುಂಬೈ (ಜೂನ್ 11); ಮಹಾನಗರಿ ಮುಂಬೈನಲ್ಲಿ ಮಳೆಯ ಆರ್ಭಟ ಜೋರಾಗಿದೆ. ಶುಕ್ರವಾರ ಸಹ ಭಾರೀ ಮಳೆಯಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಈ ವರ್ಷದ ಮೊದಲ ಮುಂಗಾರು ಮಳೆಗೆ ರಸ್ತೆಗಳು ಜಲಾವೃತಗೊಂಡು ನದಿಯಂತಾಗಿದ್ದವು. ಅನೇಕ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ನಡುವೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಮುಂಬೈನಲ್ಲಿ ಭಾನುವಾರ ಮತ್ತು ಸೋಮವಾರ ಮತ್ತೆ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ. ಮಹಾರಾಷ್ಟ್ರದ ಕರಾವಳಿ ಜಿಲ್ಲೆಗಳಲ್ಲಿ ಅಧಿಕ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ರೆಡ್​ ಅಲರ್ಟ್​​ ಘೋಷಣೆ ಮಾಡಿದೆ. ರಾಜ್ಯದಲ್ಲಿ ಇನ್ನೂ 4 ದಿನ ಮಳೆ ಮುಂದುವರೆಯುವ ಸಾಧ್ಯತೆ ಇದೆ. ಭಾರೀ ಮಳೆಯಾಗುವ ಕರಾವಳಿ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮವಾಗಿ 15 ಎನ್​ಡಿಆರ್​​ಎಫ್​ ತಂಡಗಳು ಈಗಾಗಲೇ ಬೀಡು ಬಿಟ್ಟಿವೆ. ಅವುಗಳಲ್ಲಿ 3 ತಂಡ ಮುಂಬೈನಲ್ಲಿ, 4 ತಂಡ ಸಿಂಧುದರ್ಗ್​​​ನಲ್ಲಿ, ಎರಡೆರಡು ತಂಡ ಥಾಣೆ, ರಾಯ್​​ಗಢ, ಪಾಲ್ಗರ್​​​​ ಹಾಗೂ ರತ್ನಗಿರಿಯಲ್ಲಿ ಬೀಡು ಬಿಟ್ಟಿವೆ.

  ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಮುಂಬೈ ಕಾರ್ಪೊರೇಷನ್​ ಈಗಾಗಲೇ ತನ್ನ ಎಲ್ಲಾ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ವರದಿ ಮಾಡುವಂತೆ ಕೇಳಿಕೊಂಡಿದೆ ಮತ್ತು ನಿರೀಕ್ಷಿತ ಹವಾಮಾನ ಸ್ಥಿತಿಯ ಬಗ್ಗೆ ಬೆಸ್ಟ್ ಮತ್ತು ಅದಾನಿ ವಿದ್ಯುತ್ ಸಬ್‌ ಸ್ಟೇಶನ್‌ಗಳಿಗೆ ಎಚ್ಚರಿಕೆ ನೀಡಿದೆ. ಅಗ್ನಿಶಾಮಕ ದಳವನ್ನು ಸಹ ಎಚ್ಚರಿಸಲಾಗಿದೆ.

  ಮುಂಬೈ ಮತ್ತು ನೆರೆಯ ಪ್ರದೇಶಗಳು ಭಾನುವಾರ ಪ್ರತ್ಯೇಕ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತನ್ನ ಶುಕ್ರವಾರ ಸಂಜೆ ವರದಿಯಲ್ಲಿ ತಿಳಿಸಿದ ನಂತರ ಮುಂಬೈ ಕಾರ್ಪೊರೇಷನ್ ಎಚ್ಚೆತ್ತಿದೆ. ರತ್ನಾಗಿರಿ ಮತ್ತು ರಾಯಗಡಕ್ಕೂ ಇದೇ ರೀತಿಯ 'ರೆಡ್ ಅಲರ್ಟ್' ಹೊರಡಿಸಲಾಗಿದೆ. ಕರಾವಳಿ ಮಹಾರಾಷ್ಟ್ರದ ಜಿಲ್ಲೆಗಳು, ಮುಂಬೈ ಮತ್ತು ನೆರೆಯ ಥಾಣೆಯ ಕೆಲವು ಸ್ಥಳಗಳಲ್ಲಿ ಶನಿವಾರವೂ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

  ಇದನ್ನೂ ಓದಿ: West Bengal| ಬಂಗಾಳದಲ್ಲಿ ಮುಂದುವರೆದ ಘರ್ ವಾಪಸಿ; ಬಿಜೆಪಿ ಬಿಟ್ಟು ಮತ್ತೆ ಟಿಎಂಸಿ ಕಡೆ ಮುಖ ಮಾಡಿದ ಮುಕುಲ್ ರಾಯ್

  24 ಗಂಟೆಗಳಲ್ಲಿ 204.5 ಮಿ.ಮೀ ಗಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಅಂದಾಜಿಸಲಾಗಿದೆ. "ಮುಂಬೈ, ಥಾಣೆ, ರಾಯಗಡ್ ಮತ್ತು ರತ್ನಾಗಿರಿ ಜಿಲ್ಲೆಗಳಲ್ಲಿ ಭಾನುವಾರ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ. ರಾಯಘಡ ಮತ್ತು ರತ್ನಾಗಿರಿ ಜಿಲ್ಲೆಗಳು ಶನಿವಾರದಂದು ಇದೇ ರೀತಿಯ ಎಚ್ಚರಿಕೆಯನ್ನು ನೀಡಲಾಗಿದೆ" ಎಂದು ಇಲ್ಲಿನ ಐಎಂಡಿಯ ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ.

  ಇದನ್ನೂ ಓದಿ: Mumbai Rains: ಮುಂಬೈನಲ್ಲಿ ಭಾರೀ ಮಳೆ; ರಸ್ತೆ, ಮನೆಗಳು ಜಲಾವೃತ; ಇಂದು ರೆಡ್ ಅಲರ್ಟ್ ಘೋಷಣೆ
  ಮಹಾರಾಷ್ಟ್ರದ ಉಳಿದ ಭಾಗಗಳಲ್ಲಿ ಮುಂದಿನ ಎರಡು ದಿನಗಳಲ್ಲಿ ಗುಡುಗು ಮತ್ತು ಮಿಂಚಿನೊಂದಿಗೆ ಮಧ್ಯಮ ಮಳೆಯಾಗಲಿದೆ ಎಂದು ಮುನ್ಸೂಚನೆ ತಿಳಿಸಿದೆ. ಭಾರತದ ಆರ್ಥಿಕ ರಾಜಧಾನಿ ಮುಂಬೈನಲ್ಲಿ ಸೋಮವಾರ ಮುಂಗಾರು ಪ್ರವೇಶ ಮಾಡಿದ್ದು, ಮೊದಲ ದಿನವೇ ಭಾರೀ ಮಳೆಯಾಗಿತ್ತು. ಪರಿಣಾಮ ರಸ್ತೆಗಳ ನದಿಯಂತೆ ಬದಲಾಗಿದ್ದು, ಕೆಲ ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಇದೀಗ ಮತ್ತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಭಾರೀ ಮಳೆಯನ್ನು ಎದುರಿಸಲು ಮಹಾರಾಷ್ಟ್ರ ಸಿದ್ಧವಾಗತೊಡಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:MAshok Kumar
  First published: