Smuggling: ಅಬ್ಬಾ ಎಂಥಾ ಚಾಣಾಕ್ಷ..! ಹಳೇ ಐಡಿಯಾ, 30 ಲಕ್ಷದ ಚಿನ್ನ ಅಕ್ರಮ ಸಾಗಣೆ, ಆದರೂ ಸಿಕ್ಕಿಬಿದ್ದ

ಇಲ್ಲೊಬ್ಬ ಚಾಣಾಕ್ಷ ಕಳ್ಳ ಹಳೇ ಐಡಿಯಾ ಮಾಡಿ ಚಿನ್ನ ಸಾಗಣೆಗೆ ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಬರೋಬ್ಬರಿ 30 ಲಕ್ಷದ ಚಿನ್ನ ಕದ್ದು ಸಾಗಿಸಲು ಹೊರಟ ಇವನ ಸ್ಟೋರಿ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸ್ಮಗ್ಲಿಂಗ್ (Smuggling) ಮಾಡುವವರಿಗೆ ಒಂದು ಭಂಡ ಧೈರ್ಯ. ಹೀಗಿದ್ದರೂ ಬಹಳಷ್ಟು ಸಲ ಏರ್ಪೋರ್ಟ್​ನಲ್ಲಿ (Airport) ಸಿಕ್ಕಿ ಹಾಕಿಕೊಳ್ಳುತ್ತಾರೆ. ದಿನನಿತ್ಯ ಇಂಥಹ ಬಹಳಷ್ಟು ಘಟನೆ ವರದಿಯಾದರೂ ತಾನು ಸಿಕ್ಕಿಬೀಳಲ್ಲ ಎಂದು ಚಾಣಾಕ್ಷತನ ತೋರಿಸೋ ಕಳ್ಳರಿಗೇನೂ ಕಮ್ಮಿ ಇಲ್ಲ.  ಇಲ್ಲೊಬ್ಬ ವ್ಯಕ್ತಿ ಹಳೆ ಐಡಿಯಾ ಮಾಡಿ ಚಿನ್ನ ಸಾಗಿಸಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಆತ ಧರಿಸಿದ್ದ ವಿಗ್‌ನಲ್ಲಿ ಮತ್ತು ಗುದನಾಳದಲ್ಲಿ ಬಚ್ಚಿಟ್ಟು ಸುಮಾರು ₹ 30 ಲಕ್ಷ ಮೌಲ್ಯದ ಚಿನ್ನವನ್ನು (Gold worth 30 lakh Rs) ದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಇಲ್ಲಿನ ಕಸ್ಟಮ್ಸ್ ಅಧಿಕಾರಿಗಳು (Customs officers) ಬುಧವಾರ ಬಂಧಿಸಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಸೋಮವಾರ ಅಬುಧಾಬಿಯಿಂದ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಆರೋಪಿಯನ್ನು ಅಧಿಕಾರಿಗಳು ತಡೆದರು.

ಪ್ರಯಾಣಿಕನ ವಿವರವಾದ ವೈಯಕ್ತಿಕ ಮತ್ತು ಸಾಮಾನು ಸರಂಜಾಮು ಶೋಧನೆಯು 686 ಗ್ರಾಂನ ಒಟ್ಟು ತೂಕವನ್ನು ಹೊಂದಿರುವ ಅಂಟುಪಟ್ಟಿಯಿಂದ ಸುತ್ತಿದ ಮೂರು ಚೀಲಗಳನ್ನು ಅವರು ಧರಿಸಿರುವ ವಿಗ್ (ಒಂದು ಚೀಲ) ಮತ್ತು ಅವನ ಗುದನಾಳದೊಳಗೆ (ಎರಡು ಕ್ಯಾಪ್ಸುಲ್ ಆಕಾರದ ಚೀಲ) ಮರೆಮಾಡಲಾಗಿತ್ತು ಎಂದು ದೆಹಲಿ ಕಸ್ಟಮ್ಸ್ ಹೊರಡಿಸಿದ ಹೇಳಿಕೆ ತಿಳಿಸಿದೆ.

30.55 ಲಕ್ಷ ಮೌಲ್ಯದ ಚಿನ್ನ

ಈ ಪೌಚ್‌ಗಳಲ್ಲಿ ಬಚ್ಚಿಟ್ಟಿದ್ದ ₹ 30.55 ಲಕ್ಷ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದ್ದು, ಭಾರತೀಯ ಪಾಸ್‌ಪೋರ್ಟ್ ಹೊಂದಿರುವ ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಅದು ತಿಳಿಸಿದೆ.

ಚೆನ್ನೈನಲ್ಲೂ ಇದೇ ರೀತಿಯ ಘಟನೆ

ಚೆನ್ನೈ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ದುಬೈನಿಂದ ಬಂದ ಇಬ್ಬರು ಪ್ರಯಾಣಿಕರಿಂದ 57 ಲಕ್ಷ ಮೌಲ್ಯದ 1.2 ಕೆಜಿ ಚಿನ್ನವನ್ನು ಏರ್ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಪ್ರಯಾಣಿಕರು ತಮ್ಮ ಗುದನಾಳದಲ್ಲಿ ಮತ್ತು ಪ್ಯಾಂಟ್‌ನ ಸೊಂಟದ ಬೆಲ್ಟ್‌ನಲ್ಲಿ ಚಿನ್ನವನ್ನು ಬಚ್ಚಿಟ್ಟಿರುವುದು ಕಂಡುಬಂದ ನಂತರ ಅವರನ್ನು ಬಂಧಿಸಲಾಯಿತು.

ಇದನ್ನೂ ಓದಿ: Kidnap: ಅಪ್ರಾಪ್ತೆಯನ್ನು ಅಪಹರಿಸಿ ಮದುವೆ, ಬೆಂಗಳೂರಿನ ಮನೆಯಲ್ಲಿಟ್ಟುಕೊಂಡು ದೈಹಿಕ ಸಂಪರ್ಕ ಬೆಳೆಸಿದವ ಅರೆಸ್ಟ್

ಬೆಳಗಿನ ಜಾವ 2.10ಕ್ಕೆ ಎಮಿರೇಟ್ಸ್ ವಿಮಾನದಲ್ಲಿ ಬಂದ ಐ ಅಬೂಬಕರ್ ಮತ್ತು ಎಸ್ ಮೊಹಮ್ಮದ್ ಮಿಲ್ಖಾನ್ ಎಂಬ ಪ್ರಯಾಣಿಕರನ್ನು ಕಸ್ಟಮ್ಸ್ ಅಧಿಕಾರಿಗಳು ತಡೆದರು. ಅವರ ಮೇಲೆ ನಾಲ್ಕು ಕಟ್ಟುಗಳ ಚಿನ್ನದ ಪೇಸ್ಟ್ ಪತ್ತೆಯಾಗಿದೆ

ದೇಹದ ಯಾವ್ಯಾವುದೋ ಭಾಗದಲ್ಲಿ ಅಡಗಿಸಿಟ್ಟುಕೊಂಡು ವಿದೇಶಗಳಿಂದ ವಿಮಾನದ ಮೂಲಕ ಚಿನ್ನ ಕದ್ದು ತರೋದನ್ನು ನೋಡಿದ್ದೇವೆ. ಹುಬ್ಬಳ್ಳಿಯಲ್ಲೊಬ್ಬ ಬೆಲ್ಟ್ ನಲ್ಲಿ ಚಿನ್ನದ ಗಟ್ಟಿಗಳನ್ನು (Gold Smuggling) ಅಡಗಿಸಿಟ್ಟುಕೊಂಡು ಅಕ್ರಮವಾಗಿ ಸಾಗಿಸುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಹತ್ತಿರ ಹತ್ತಿರ ಒಂದು ಕೆ.ಜಿ.ಯಷ್ಟು ತೂಕದ ಎರಡು ಚಿನ್ನದ ಗಟ್ಟಿಗಳನ್ನು ಬೆಲ್ಟ್ ನಲ್ಲಿ ಅಡಗಿಸಿಟ್ಟುಕೊಂಡು ಸಾಗಿಸೋ ವೇಳೆ ಪೊಲೀಸರ (Hubballi Police) ಬಲೆಗೆ ಬಿದ್ದಿದ್ದಾನೆ.

ಅಕ್ರಮ ಚಿನ್ನ ಸಾಗಾಟಗಾರನ ಬಂಧನ

ಗಾಂಜಾ ಮಾರಾಟ ಪ್ರಕರಣದಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹುಬ್ಬಳ್ಳಿ ಪೊಲೀಸರು, ಇದೀಗ ಮತ್ತೊಂದು ಕಾರಣಕ್ಕೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಅಕ್ರಮ ಚಿನ್ನ ಸಾಗಾಟಗಾರನನ್ನು ಬಂಧಿಸೋ ಮೂಲಕ ಗಮನ ಸೆಳೆದಿದ್ದಾರೆ. ಹುಬ್ಬಳ್ಳಿ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿರೋ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬಂಧಿತ ವ್ಯಕ್ತಿಯಿಂದ 38 ಲಕ್ಷ ಮೌಲ್ಯದ ಚಿನ್ನದ ಗಟ್ಟಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: BrahMos: ಸೇನಾ ನೌಕೆಗೆ ಬಲವಾಗಿ ಹೊಡೆದ ಬ್ರಹ್ಮೋಸ್ ಸೂಪರ್​ಸೋನಿಕ್ ಮಿಸೈಲ್! ಇದರ ಪವರ್ ಸೂಪರ್

ತಡರಾತ್ರಿ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಪೊಲೀಸರು, ಹುಬ್ಬಳ್ಳಿಯ ಕೇಶ್ವಾಪುರದ ಚೇತನ್ ಎಂಬಾತನನ್ನು ಬಂಧಿಸಿದ್ದರು. ಬಂಧಿತನಿಂದ 804 ಗ್ರಾಂ ತೂಕದ ಎರಡು ಚಿನ್ನ ಗಟ್ಟಿಗಳನ್ನು ಜಪ್ತಿ ಮಾಡಿದ್ದಾರೆ. ಹುಬ್ಬಳ್ಳಿಯ ಗಿರಣಿಚಾಳ ಬಳಿ ಚಿನ್ನ ಸಾಗಟ ಮಾಡುತ್ತಿದ್ದ ವೇಳೆ ಖದೀಮ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಚೇತನ್ ತನ್ನ ಬೆಲ್ಟ್ ನಲ್ಲಿ ಚಿನ್ನ ಸಾಗಾಟ ಮಾಡುತ್ತಿದ್ದ. ಯಾರ ಕಣ್ಣಿಗೂ ಬೀಳಬಾರದೆಂದು ಸದ್ದಿಲ್ಲದೆ ಹೋಗುತ್ತಿದ್ದ ಚೇತನ್ ನನ್ನು ಗಿರಿಣಿ ಚಾಳದ ಏಳು ಮಕ್ಕಳ ತಾಯಿ ಗುಡಿಯ ಬಳಿ ಬಂಧಿಸಿ, ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಲಾಗಿದೆ.
Published by:Divya D
First published: