Arrest Trisha is trending| ಹಿಂದೂಗಳ ಭಾವನೆಗೆ ಧಕ್ಕೆ; ನಟಿ ತ್ರಿಶಾ, ನಿರ್ದೇಶಕ ಮಣಿರತ್ನಂ ಬಂಧನಕ್ಕೆ ಒತ್ತಾಯ

ಮದ್ರಾಸ್ ಟಾಕೀಸ್ ನಿರ್ಮಾಣದಲ್ಲಿ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದ ಚಿತ್ರೀಕರಣ ಇಂದೋರ್‌ನಲ್ಲಿರುವ ಹಳೆಯ ದೇವಸ್ಥಾನದಲ್ಲಿ ನಡೆಯುತ್ತಿತ್ತು. ಚಿತ್ರೀಕರಣದ ನಡುವೆ ತ್ರಿಷಾ ಪಾದರಕ್ಷೆಗಳನ್ನು ಧರಿಸಿ ದೇವಾಲಯದ ಆವರಣದಲ್ಲಿ ಓಡಾಡಿದ್ದಾರೆ ಎನ್ನಲಾಗಿದೆ.

ನಟಿ ತ್ರಿಶಾ-ನಿರ್ದೇಶಕ ಮಣಿರತ್ನಂ.

ನಟಿ ತ್ರಿಶಾ-ನಿರ್ದೇಶಕ ಮಣಿರತ್ನಂ.

 • Share this:
  ಚೆನ್ನೈ; ಕಾಲಿವುಡ್ ಸಿನಿಮಾ ಇಂಡಸ್ಟ್ರಿಯ ಬಹು ನಿರೀಕ್ಷೆಯ ಸಿನಿಮಾ ಪೊನ್ನಿಯಿನ್ ಸೆಲ್ವನ್. 10ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನು ಆಳ್ವಿಕೆ ಮಾಡಿದ್ದ ರಾಜ ರಾಜ ಚೋಳನ್ ಜೀವನ ಚರಿತ್ರೆಯನ್ನು ಖ್ಯಾತ ನಿರ್ದೇಶಕ ಮಣಿರತ್ನಂ ಚಿತ್ರವನ್ನಾಗಿಸು ತ್ತಿದ್ದಾರೆ. ಈ ಚಿತ್ರದಲ್ಲಿ ಇಡೀ ಕಾಲಿವುಡ್ ನಟ-ನಟಿಯರು ಅಭಿನಯಿಸುತ್ತಿದ್ದು, ಇದೊಂದು ಮಲ್ಟಿ ಸ್ಟಾರ್ ಸಿನಿಮಾ ಎಂಬ ಕಾರಣಕ್ಕೆ ಸಾಕಷ್ಟು ಕುತೂಹಲ ಮೂಡಿಸಿದೆ. ಆದರೆ, ಚಿತ್ರದ ಶೂಟಿಂಗ್ ವೇಳೆ ಹಿಂದೂಗಳ ಭಾವನೆಗೆ ಧಕ್ಕೆ ಮಾಡಲಾಗಿದೆ. ಹೀಗಾಗಿ ನಟಿ ತ್ರಿಶಾ ಮತ್ತು ನಿರ್ದೇಶಕ ಮಣಿರತ್ನಂ ಅವರನ್ನು ಬಂಧಿಸಿ ಎಂದು ಕೆಲವು ಹಿಂದೂಪರ ಸಂಘಟನೆಗಳು ಒತ್ತಾಯಿಸುತ್ತಿವೆ. ಇದು ಟ್ವಿಟರ್​ನಲ್ಲಿ ಪ್ರಸ್ತುತ ಟ್ರೆಂಡಿಂಗ್ ಆಗುತ್ತಿದೆ.

  ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ನಟಿ ತ್ರಿಷಾ ಕಾಣಿಸಿಕೊಂಡಿದ್ದು, ಚಿತ್ರದ ಚಿತ್ರಿಕರಣ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆಯುತ್ತಿತ್ತು. ಈ ವೇಳೆ ನಟಿ ಶಿವನ ದೇವಾಲಯದಲ್ಲಿ ಪಾದರಕ್ಷೆಗಳನ್ನು ಧರಿಸಿ ಓಡಾಡಿದ್ದಾರೆ ಎಂದು ಹೇಳಲಾಗಿದೆ.

  ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ನೋವುಂಟಾಗಿದೆ ಎಂದಿರುವ ಧಾರ್ಮಿಕ ಸಂಘಟನೆಗಳು ನಟಿ ಮತ್ತು ನಿರ್ದೇಶಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿವೆ.

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಚಿತ್ರ

  ವೈರಲ್ ಆಗಿರುವ ಚಿತ್ರ.


  ಮದ್ರಾಸ್ ಟಾಕೀಸ್ ನಿರ್ಮಾಣದಲ್ಲಿ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಚಿತ್ರದ ಚಿತ್ರೀಕರಣ ಇಂದೋರ್‌ನಲ್ಲಿರುವ ಹಳೆಯ ದೇವಸ್ಥಾನದಲ್ಲಿ ನಡೆಯುತ್ತಿತ್ತು. ನಟಿಯರಾದ ತ್ರಿಷಾ ಮತ್ತು ಐಶ್ವರ್ಯ ರೈ ಅವರ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿತ್ತು. ಚಿತ್ರೀಕರಣದ ನಡುವೆ ತ್ರಿಷಾ ಪಾದರಕ್ಷೆಗಳನ್ನು ಧರಿಸಿ ದೇವಾಲಯದ ಆವರಣದಲ್ಲಿ ಓಡಾಡಿದ್ದಾರೆ ಎನ್ನಲಾಗಿದೆ.

  ನಟಿ ತ್ರಿಷಾ ಶಿವಲಿಂಗ ಮತ್ತು ನಂದಿಯ ನಡುವೆ ಪಾದರಕ್ಷೆಗಳೊಂದಿಗೆ ಓಡಾಡುತ್ತಿರವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಆಕ್ರೋಶ ವ್ಯಕ್ತವಾಗಿತ್ತು. ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ#ArrestTrisha ಎಂಬುದು ವೈರಲ್ ಮಾಡಲಾಗಿತ್ತು.

  ಇದನ್ನೂ ಓದಿ: Mia Khalifa: ಕಾಲಿನ ಮೇಲೆ ಮಾಜಿ ನೀಲಿ ಚಿತ್ರ ತಾರೆಯ ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ; ವಿಡಿಯೋ ವೈರಲ್

  ಪೊನ್ನಿಯಿನ್ ಸೆಲ್ವನ್ ಚಿತ್ರದ ಕೆಲವು ಚಿತ್ರಗಳು ಸೋರಿಕೆಯಾದ ನಂತರ, ನಿರ್ಮಾಪಕರು ಚಿತ್ರೀಕರಣದ ಸಮಯದಲ್ಲಿ ಯಾವುದೇ ಛಾಯಾಚಿತ್ರಗಳನ್ನು ತೆಗೆದುಕೊಳ್ಳದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಚಿತ್ರಿಕರಣದ ಸಮಯದಲ್ಲಿ ಕುದುರೆಯೊಂದು ಸಾವನ್ನಪ್ಪಿತ್ತು. ಈ ಕುರಿತು ಮಣಿರತ್ನಂ ವಿರುದ್ಧ ದೂರು ದಾಖಲಾಗಿತ್ತು. ತನಿಖೆ ಪ್ರಗತಿಯಲ್ಲಿದೆ.
  Published by:MAshok Kumar
  First published: