• Home
  • »
  • News
  • »
  • national-international
  • »
  • Real Hero: 5ನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ಕ್ಯಾಚ್​ ಹಿಡಿದ ರಿಯಲ್​ ಹೀರೋ!

Real Hero: 5ನೇ ಮಹಡಿಯಿಂದ ಬೀಳುತ್ತಿದ್ದ ಮಗುವನ್ನು ಕ್ಯಾಚ್​ ಹಿಡಿದ ರಿಯಲ್​ ಹೀರೋ!

ಮಗು ರಕ್ಷಿಸುತ್ತಿರುವುದು

ಮಗು ರಕ್ಷಿಸುತ್ತಿರುವುದು

ಚೀನಾದಲ್ಲಿ 5ನೇ ಮಹಡಿಯ ಕಿಟಕಿಯಿಂದ ಇನ್ನೇನು 2 ವರ್ಷದ ಮಗು ಬಿದ್ದು ಅನಾಹುತವಾಗಿ ಬಿಡುತ್ತಿತ್ತು. ಅಷ್ಟರಲ್ಲೇ ಅದನ್ನು ನೋಡಿದ ವ್ಯಕ್ತಿಯೊಬ್ಬ ಮೇಲಿಂದ ಬಿದ್ದ ಮಗುವನ್ನು ಕೈಯಲ್ಲಿ ಹಿಡಿದು ಪ್ರಾಣ ಉಳಿಸಿದ್ದಾನೆ. ಮಗು ರಕ್ಷಿಸೋ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಮುಂದೆ ಓದಿ ...
  • Share this:

ಮಕ್ಕಳನ್ನು, ಅದರಲ್ಲೂ ಚಿಕ್ಕ ಮಕ್ಕಳನ್ನು ಎಷ್ಟೇ ಸುರಕ್ಷಿತವಾಗಿ ನೋಡಿಕೊಂಡ್ರು ಕಡಿಮೆ. ಆ ಮಕ್ಕಳಿಗೆ ತಿಳಿಯುವುದೇ ಇಲ್ಲ. ಬೇಡ, ಬೇಡ ಅಂದ್ರು ರೋಡಿಗೆ ಹೋಗುತ್ತವೆ. ಇಲ್ಲ ಬೇಡ ಎಂದು ಕೆಲಸಗಳನ್ನೇ ಹೆಚ್ಚಾಗಿ ಮಾಡುತ್ತವೆ. ಅದ್ರಲ್ಲೂ ನೀವೇನದ್ರೂ ಬಹುಮಹಡಿ ಕಟ್ಟಡದಲ್ಲಿ ವಾಸವಾಗಿದ್ರೆ ಇನ್ನೂ ಎಚ್ಚರಿಕೆಯಿಂದ ಇರಬೇಕು. ಸ್ಪಲ್ಪ ಯಾಮಾರಿದ್ರೂ ಮಕ್ಕಳು ಮೇಲಿಂದ ಕೆಳಗೆ ಬಿದ್ದು ಹೋಗೋ ಸಾಧ್ಯತೆ ಇರುತ್ತದೆ. ನಾವು ಎಷ್ಟೋ ಜೋಪಾನವಾಗಿ ನೋಡಿಕೊಳ್ಳುತ್ತೇವೋ, ಅಷ್ಟೇ ಒಳ್ಳೆಯದು. ಹೌದು ಚೀನಾ (China) ದಲ್ಲಿ 5ನೇ ಮಹಡಿಯ (Fifth floor) ಕಿಟಕಿಯಿಂದ ಇನ್ನೇನು 2 ವರ್ಷದ (2 years) ಮಗು (Child) ಬಿದ್ದು ಅನಾಹುತವಾಗಿ ಬಿಡುತ್ತಿತ್ತು. ಅಷ್ಟರಲ್ಲೇ ಅದನ್ನು ನೋಡಿದ ವ್ಯಕ್ತಿಯೊಬ್ಬ ಮೇಲಿಂದ ಬಿದ್ದ ಮಗುವನ್ನು ಕೈಯಲ್ಲಿ ಹಿಡಿದು (Catches) ಪ್ರಾಣ ಉಳಿಸಿದ್ದಾನೆ. ಮಗು ರಕ್ಷಿಸೋ (Save) ವಿಡಿಯೋ (Video) ಎಲ್ಲೆಡೆ ವೈರಲ್ (Viral) ಆಗಿದ್ದು, ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.


ಬೀಳುತ್ತಿದ್ದ 2 ವರ್ಷದ ಮಗು ರಕ್ಷಣೆ
ಚೀನಾದ ಝೆಜಿಯಾಂಗ್ ಪ್ರಾಂತ್ಯದ ಟೊಂಗ್‍ಕ್ಸಿಯಾಂಗ್‍ನಲ್ಲಿ 2 ವರ್ಷದ ಹೆಣ್ಣು ಮಗುವೊಂದು 5ನೇ ಮಹಡಿಯ ಕಿಟಕಿಯಿಂದ ಬೀಳುತ್ತಿತ್ತು. ಆಗ ರಸ್ತೆ ಪಕ್ಕದಲ್ಲಿ ಕಾರು ಪಾರ್ಕ್ ಮಾಡುತ್ತಿದ್ದ ಶೆನ್ ಡಾಂಗ್ ಎಂಬ ವ್ಯಕ್ತಿ ಮಗು ಬೀಳುತ್ತಿರುವುದನ್ನು ನೋಡಿದ್ದಾರೆ. ತಕ್ಷಣವೇ ಓಡಿ ಹೋಗಿ ಆ ಕಂದಮ್ಮನನ್ನು ರಕ್ಷಿಸಿದ್ದಾರೆ. ಶೆನ್ ಅದೇ ರಸ್ತೆಯ ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಮಗು ಬೀಳುವುದನ್ನು ನೋಡಿದ ಶೆನ್ ಮೊದಲು ತುರ್ತು ಸೇವಾ ಘಟಕಕ್ಕೆ ಕರೆ ಮಾಡಲು ಯತ್ನಿಸುತ್ತಾರೆ. ನಂತರ ಅವರೇ ಮಗುವನ್ನು ಕ್ಯಾಚ್ ಹಿಡಿದು ರಕ್ಷಿಸುತ್ತಾರೆ.


ಮಗು ಪಾಲಿಗೆ ಹೀರೋ ಆದ ಶೇನ್
31 ವರ್ಷದ ಶೇನ್ ತನ್ನ ಬ್ಯಾಂಕ್ ಕೆಲಸಕ್ಕೆ ಹೋಗಲು ಕಾರನ್ನು ನಿಲ್ಲಿಸುತ್ತಿದ್ದನು. ಆಗ ಮಗು ಅಳುವ ಶಬ್ಧ ಕೇಳುತ್ತೆ. ತಕ್ಷಣ ಏನು ಎಂದು ನೋಡಿದಾಗ ಮಗು ಬೀಳುತ್ತಿರುವುದು ತಿಳಿಯುತ್ತೆ. ಮಗು ನೆಲಕ್ಕೆ ಬೀಳುವುದನ್ನು ತಪ್ಪಿಸಲು, ತಾನೇ ಧೈರ್ಯ ಮಾಡಿ ಮಗುವನ್ನು ಹಿಡಿದಿದ್ದಾರೆ.


ಇದನ್ನೂ ಓದಿ: Bengaluru News: ಬಸ್ಸಿನಡಿ ಬಿದ್ದರೂ ಬದುಕುಳಿದ ಯುವಕ! ವೈರಲ್ ಆಯಿತು ವೀಡಿಯೋ


ಆ ಘಟನೆ ಬಳಿಕ ಮಾತನಾಡಿದ ಶೇನ್, ಆ ಸಮಯಕ್ಕೆ ನನಗೆ ನನಗಾಗುವ ಯಾವುದೇ ನೋವಿನ ಬಗ್ಗೆ ಯೋಚನೆ ಬರಲಿಲ್ಲ. ಅವಳನ್ನು ಆ ಸಮಸ್ಯೆಯಿಂದ ಪಾರು ಮಾಡಬೇಕೆನ್ನುವುದ ಅಷ್ಟೆ ನನ್ನ ತಲೆಯಲ್ಲಿತ್ತು ಎಂದು ಹೇಳಿದ್ದಾರೆ. ಆ ಮಗುವನ್ನು ಕಾಪಾಡಿ ಶೇನ್ ಹೀರೋ ಆಗಿದ್ದಾರೆ.


ವಿಡಿಯೋ ಟ್ವಿಟರ್‍ನಲ್ಲಿ ಹಾಕಿಕೊಂಡ ಚೀನಾ ಅಧಿಕಾರಿ
ಶೇನ್ ಮಗುವನ್ನು ರಕ್ಷಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಲ್ಲೆಡೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚೀನಾದ ಸರ್ಕಾರಿ ಅಧಿಕಾರಿ ಲಿಜಿಯಾನ್ ಝಾವೋ ಅವರು ವಿಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೀರೋಗಳು ನಮ್ಮ ಜೊತೆಯೇ ಇರುತ್ತಾರೆ ಎಂದು ಅದಕ್ಕೆ ಶಿರ್ಷಿಕೆ ಹಾಕಿಕೊಂಡಿದ್ದಾರೆ.


ಇದನ್ನೂ ಓದಿ: Viral Video: ಅಮ್ಮನೊಂದಿಗೆ ಸಂಸ್ಕೃತ ಶ್ಲೋಕ ಪಠಿಸುವ ಕಂದಮ್ಮ! ಆಧುನಿಕ ಅಭಿಮನ್ಯುವಿನ ವಿಡಿಯೋ ನೀವೂ ನೋಡಿ


68 ಸಾವಿರಕ್ಕೂ ಹೆಚ್ಚು ಜನ ವೀಕ್ಷಣೆ
ಚೀನಾದ ಸರ್ಕಾರಿ ಅಧಿಕಾರಿ ಲಿಜಿಯಾನ್ ಝಾವೋ ಹಾಕಿರುವ ವಿಡಿಯೋವನ್ನು 68 ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅಲ್ಲದೇ ಶೇನ್ ಅವರು ಧೈರ್ಯಕ್ಕೆ ಎಲ್ಲರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸದ್ಯ ಮಗು ಪ್ರಾಣ ಉಳಿಯಿತು. ನೀವೇ ಆ ಮಗುವಿನ ಹೀರೋ, ನಮ್ಮ ನಡುವೆಯೇ ಹೀರೋ ಇರುತ್ತಾರೆ. ದೇವರು ನಿಮಗೆ , ನಿಮ್ಮ ಕುಟುಂಬಕ್ಕೆ ಒಳ್ಳೆಯದು ಮಾಡಲಿ ಎಂದು ಕಾಮೆಂಟ್‍ಗಳನ್ನು ಹಾಕಿದ್ದಾರೆ. ಅಲ್ಲದೇ ಮಗು ರಕ್ಷಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎಲ್ಲರ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಇವರೇ ನಿಜವಾದ ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್ ಎಂದು ಹಾಡಿ ಹೊಗಳುತ್ತಿದ್ದಾರೆ.

Published by:Savitha Savitha
First published: