Union Budget 2021 – ಈ ಬಾರಿಯ ಬಜೆಟ್​ನಿಂದ ಜನಸಾಮಾನ್ಯನಿಗಿರುವ ಕೆಲ ನಿರೀಕ್ಷೆಗಳು

ಕೊರೋನಾ ಸಂಕಷ್ಟ ಕಾಲದಲ್ಲಿ ಸರ್ಕಾರ ಪ್ರಕಟಿಸಿದ ಆರ್ಥಿಕ ಸುಧಾರಣಾ ಕ್ರಮಗಳು ಹಾಗೂ ಪರಿಹಾರ ಪ್ಯಾಕೇಜ್​​ಗಳು ದೇಶದ ಆರ್ಥಿಕತೆಯನ್ನ ಬಲಗೊಳಿಸಿದೆ. ಈ ಬಾರಿಯ ಬಜೆಟ್​ನಲ್ಲಿ ಇನ್ನೂ ಹೆಚ್ಚಿನ ಸುಧಾರಣಾ ಕ್ರಮಗಳನ್ನ ನಿರೀಕ್ಷಿಸಬಹುದು.

ನಿರ್ಮಲಾ ಸೀತಾರಾಮನ್

ನಿರ್ಮಲಾ ಸೀತಾರಾಮನ್

 • News18
 • Last Updated :
 • Share this:
  ನವದೆಹಲಿ: ಕೊರೋನಾ ವೈರಸ್ ಸಾಂಕ್ರಾಮಿಕ ಪಿಡುಗ ಉದ್ಭವಿಸಿ ಭಾರತ ಸೇರಿದಂತೆ ವಿಶ್ವಾದ್ಯಂತ ಆರ್ಥಿಕ ಸಂಕಷ್ಟ ತಂದಿಟ್ಟಿದೆ. ಇದೀಗ ಬಹುತೇಕ ದೇಶಗಳು ಚೇತರಿಸಿಕೊಳ್ಳುತ್ತಿವೆ. ಭಾರತ ಕೂಡ ಕೋವಿಡ್​ನಿಂತ ಮತ್ತು ಆರ್ಥಿಕ ಸಂಕಷ್ಟದಿಂದ ನಿರೀಕ್ಷೆಮೀರಿ ಚೇತರಿಕೆ ಕಾಣುತ್ತಿದೆ. ಪಿಡುಗು ಬಂದ ನಂತರ ಸರ್ಕಾರ ಘೋಷಿಸಿದ ಹಲವು ಆರ್ಥಿಕ ಪ್ಯಾಕೇಜ್ ಮತ್ತು ಸುಧಾರಣೆಗಳ ಮೂಲಕ ಆರ್ಥಿಕತೆ ಶಕ್ತಿಯುತವಾಗಿದೆ. ಈ ಹಿನ್ನೆಲೆಯಲ್ಲಿ 2021 ಬಜೆಟ್​ನಲ್ಲಿ ಇನ್ನೂ ಆರ್ಥಿಕ ಪುಷ್ಟಿ ನೀಡುವ ಹಲವು ಕ್ರಮಗಳನ್ನ ಸಹಜವಾಗಿಯೇ ನಿರೀಕ್ಷಿಸಬಹುದಾಗಿದೆ.

  2021ರ ಬಜೆಟ್​ನಲ್ಲಿ ಅಂಥ ಕೆಲ ನಿರೀಕ್ಷೆಗಳ ವಿವರ ಇಲ್ಲಿವೆ:

  1) ವರ್ಕ್ ಫ್ರಂ ಹೋಂ ಉದ್ಯೋಗಿಗಳಿಗೆ ಉತ್ತೇಜನ:

  ಕೋವಿಡ್-19 ಮಹಾಮಾರಿ ತಂದಿತ್ತ ಸಂಕಷ್ಟವು ಅನೇಕ ಜೀವನಶೈಲಿ ಮತ್ತು ಕಾರ್ಯಸ್ಥಳ ವೈಖರಿ ಬದಲಾವಣೆಗಳಾಗಿವೆ. ವಿಶ್ವಾದ್ಯಂತ ಅನೇಕ ಕಂಪನಿಗಳು ಸಾಧ್ಯವಾದಷ್ಟೂ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮಾಡಿವೆ. ಕೋವಿಡ್ ಸಂಕಷ್ಟ ಕಾಲಕ್ಕೆಂದು ರೂಪಿಸಲಾದ ಈ ತಾತ್ಕಾಲಿಕ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಈಗ ಖಾಯಂ ಆಗಿ ಉಳಿದುಹೋಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್​ನಲ್ಲಿ ಮನೆಯಿಂದ ಕಚೇರಿ ಕೆಲಸ ಮಾಡುವ ಉದ್ಯೋಗಿಗಳಿಗೆ ಉತ್ತೇಜನ ನೀಡುವಂತಹ ಕ್ರಮಗಳನ್ನ ಪ್ರಕಟಿಸುವ ನಿರೀಕ್ಷೆಯಂತೂ ಇದೆ. ಮನೆಯಲ್ಲಿ ಕೆಲಸ ಮಾಡುವಾಗ ಅಗತ್ಯವಾದ ಪೀಠೋಪಕರಣಗಳು, ಕಂಟ್ಯೂಟರ್ ಉಪಕರಣಗಳು, ಡೇಟಾ ಕಾರ್ಡ್ ಇತ್ಯಾದಿ ಖರೀದಿಗಾಗಿ ವೆಚ್ಚವಾಗುತ್ತದೆ. ಅಂಥ ನಿರ್ದಿಷ್ಟ ವೆಚ್ಚಗಳಿಗೆ ತೆರಿಗೆ ವಿನಾಯಿತಿ ನೀಡುವುದು ಸೇರಿದಂತೆ ವಿವಿಧ ಕ್ರಮಗಳನ್ನ ನಿರೀಕ್ಷಿಸಲಡ್ಡಿಯಿಲ್ಲ.

  2) ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಮತ್ತು 80ಡಿ ಅಡಿಯಲ್ಲಿ ಮಿತಿ ಹೆಚ್ಚಳ:

  ಈ ಎರಡು ಸೆಕ್ಷನ್ ಅಡಿಯಲ್ಲಿ ಮಿತಿ ಹೆಚ್ಚಳ ಮಾಡುವುದರಿಂದ ಜನರಲ್ಲಿ ಹೂಡಿಕೆ ಪ್ರವೃತ್ತಿ ಹೆಚ್ಚಿಸಬಹುದು. ಇದು ಆರ್ಥಿಕ ಪುನಶ್ಚೇತನಕ್ಕೆ ಬಹಳ ಅನುಕೂಲವಾಗುತ್ತದೆ. ಸೆಕ್ಷನ್ ಡಿ ಅಡಿಯಲ್ಲಿ ಹಿರಿಯ ನಾಗರಿಕರಲ್ಲದ ವ್ಯಕ್ತಿಗಳ ಮೆಡಿಕ್ಲೈಮ್ ಕವರೇಜ್​ನ ಡಿಡಕ್ಷನ್ ಅನ್ನು 25 ಸಾವಿರದಿಂದ 50 ಸಾವಿರ ರೂಗೆ ಏರಿಸಬೇಕು. ಸೀನಿಯರ್ ಸಿಟಿಜನ್​ರಿಗೆ ಈ ಡಿಡಕ್ಷನ್ ಮೊತ್ತವನ್ನು 50 ಸಾವಿರದಿಮದ 75 ಸಾವಿರ ರೂಗೆ ಹೆಚ್ಚಿಸಬೇಕು. ಇದರಿಂದ ಕೋವಿಡ್-19ರಂತಹ ತುರ್ತು ಆರೋಗ್ಯ ಬಿಕ್ಕಟ್ಟನ್ನ ಎದುರಿಸಲು ನಾಗರಿಕರಿಗೆ ಸುಲಭವಾಗುತ್ತದೆ.

  3) ಗ್ರಾಹಕರ ವೆಚ್ಚ ಸಾಮರ್ಥ್ಯದಲ್ಲಿ ಹೆಚ್ಚಳ:

  ಈ ಬಾರಿ ಬಜೆಟ್​ನಲ್ಲಿ ಕೆಲ ತೆರಿಗೆ ಸುಧಾರಣೆಗಳ ಜೊತೆಗೆ ಗ್ರಾಹಕರ ವೆಚ್ಚ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಉತ್ತೇಜನ ಸಿಗುವಂತಹ ಕ್ರಮಗಳಾಗಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ಧಾರೆ. ತೆರಿಗೆ ಮೂಲಸೌಕರ್ಯವು ಇನ್ನಷ್ಟು ಸರಳವಾಗಬೇಕು. ಸ್ಟಾರ್ಟಪ್​ಗಳು ಮತ್ತು ಸಣ್ಣ ಕೈಗಾರಿಕೆಗಳಿಗೆ ತೆರಿಗೆ ವಿನಾಯಿತಿ ಕೊಡುವುದರಿಂದ ಉದ್ಯೋಗಗಳಿಗೂ ಪುಷ್ಟಿ ಸಿಗುತ್ತದೆ ಎನ್ನಲಾಗುತ್ತಿದೆ.

  4) ಈಕ್ವಿಟ್ ಶೇರ್ ಮತ್ತು ಈಕ್ವಿಟಿ ಮ್ಯುಚುಯಲ್ ಫಂಡ್​ಗಳಲ್ಲಿ ದೀರ್ಘಕಾಲದ ಹಣ ಗಳಿಕೆ:

  ಲಿಸ್ಟೆಡ್ ಈಕ್ವಿಟಿ ಶೇರ್ ಮತ್ತು ಈಕ್ವಿಟಿ ಮುಚುವಲ್ ಫಂಡ್​ಗಳ ಮಾರಾಟದಿಂದ ಬರುವ ಹಣದ ಲಾಭದಲ್ಲಿ 1 ಲಕ್ಷದವರೆಗೆ ತೆರಿಗೆ ವಿನಾಯಿತಿ ಇದೆ. 1 ಲಕ್ಷಕ್ಕಿಂತ ಮೇಲ್ಪಟ್ಟ ಲಾಭಕ್ಕೆ ಶೇ. 10ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತೆರಿಗೆ ವಿನಾಯಿತಿ ಸಿಗುವ ಈ ಲಾಭದ ಮಿತಿಯನ್ನು 2 ಲಕ್ಷಕ್ಕೆ ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೋಳ್ಳಬೇಕಿದೆ. ಶೇ. 10 ಇರುವ ಆ ತೆರಿಗೆಯನ್ನ ಶೇ. 5ಕ್ಕೆ ಇಳಿಸಿದರೂ ಮಾರುಕಟ್ಟೆಗೆ ಒಳ್ಳೆಯ ಪುಷ್ಟಿ ಸಿಗುತ್ತದೆ.

  5) ಹಿರಿಯರಿಗೆ ಪೆನ್ಷನ್ ಸ್ಕೀಮ್:

  ದೇಶದ ಬಹುಸಂಖ್ಯಾತ ಹಿರಿಯ ನಾಗರಿಗೆ ಪಿಂಚಣಿ ಯೋಜನೆಯ ಲಾಭವೇ ಇಲ್ಲವಾಗಿದೆ. ಸಾರ್ವತ್ರಿಕ ಪೆನ್ಷನ್ ಯೋಜನೆ (Universal Pension Program) ಮೂಲಕ ಹಿರಿಯ ನಾಗರಿಕರಿಗೆ ಬಹಳ ಸುಲಭವಾದ ತೆರಿಗೆ ರಚನೆ ಒದಗಿಸಿದರೆ ಬಹಳ ಅನುಕೂಲವಾಗುವ ನಿರೀಕ್ಷೆ ಇದೆ. ಇದರಿಂದ ಹಿರಿಯ ಜೀವಗಳಿಗೂ ಹಣಕಾಸು ಸಂಕೋಲೆ ತುಸು ಸಡಿಲಗೊಂಡಂತಾಗುತ್ತದೆ.

  ಸೋಮವಾರದ ಕೇಂದ್ರ ಬಜೆಟ್​ನಲ್ಲಿ ಮೇಲೆ ಹೇಳಿದ ಕೆಲ ಅಂಶಗಳನ್ನ ಪರಿಗಣಿಸುವ ನಿರೀಕ್ಷೆ ಇದೆ. ಇದರಿಂದ ಮುಂಬರುವ ವರ್ಷಗಳಲ್ಲಿ ದೇಶದ ಆರ್ಥಿಕ ರಚನೆ ಇನ್ನೂ ವ್ಯವಸ್ಥಿತವಾಗಿ ಪ್ರಬಲವಾಗಿ ರೂಪುಗೊಳ್ಳಲು ಸಾಧ್ಯವಿದೆ.

  ಮಾಹಿತಿ: ರಿಚಾ ಮುಖರ್ಜಿ, CNN-News18
  Published by:Vijayasarthy SN
  First published: