HOME » NEWS » National-international » HERES HOW TO CHECK IF YOUR AADHAAR CARD IS BEING MISUSED STG MAK

ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಿದೆಯೇ ಎಂದು ಪರಿಶೀಲಿಸುವುದು ಹೀಗೆ..!

ನಿಮ್ಮ ಆಧಾರ್‌ ಕಾರ್ಡ್‌ನ ಮಾಹಿತಿಗಳನ್ನು ಯಾರಾದರೂ ದುರುಪಯೋಗ ಪಡಿಸಿಕೊಂಡಿದ್ದಾರೇ ಎಂಬ ಮಾಹಿತಿ ನಿಮಗೆ ಗೊತ್ತಾಗಬಹುದು. ಅಥವಾ, ಆ ಬಗ್ಗೆ ಅನುಮಾನ ಸಹ ಮೂಡಬಹುದು. ಅದು ಹೇಗೆ ಅಂತೀರಾ?

news18-kannada
Updated:June 15, 2021, 5:44 PM IST
ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಿದೆಯೇ ಎಂದು ಪರಿಶೀಲಿಸುವುದು ಹೀಗೆ..!
ಆಧಾರ್​ ಕಾರ್ಡ್.
  • Share this:
ಆಧಾರ್ ಕಾರ್ಡ್ ಅನ್ನು ಭಾರತದ ಪ್ರಮುಖ ದಾಖಲೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಇದನ್ನು ಭಾರತದ ಬಹುತೇಕ ಎಲ್ಲ ಸ್ಥಳಗಳಲ್ಲಿ ಗುರುತಿನ ಚೀಟಿಯಾಗಿ ಬಳಸಲಾಗುತ್ತದೆ. ಸರ್ಕಾರದ ವಿವಿಧ ಸವಲತ್ತುಗಳನ್ನು ಪಡೆಯಲು ಸಹ ಇದನ್ನು ಬಳಸಲಾಗುತ್ತದೆ. ಇದು ಪ್ರಮುಖ ದಾಖಲೆಯಾಗಿರುವುದರಿಂದ ಇದನ್ನು ಯಾರಾದರೂ ಕದಿಯುವ, ದುರುಪಯೋಗ ಪಡಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚಿರುತ್ತದೆ. ಈ ರೀತಿ ದುರುಪಯೋಗವಾದರೆ ನಿಮಗೆ ನಾನಾ ವಿಧದ ತೊಂದರೆಗಳಾಗಬಹುದು. ಏಕೆಂದರೆ, ಆಧಾರ್‌ ಕಾರ್ಡ್‌ ನಿಮ್ಮ ಐಡೆಂಟಿಟಿ ಕಾರ್ಡ್‌ ಅಥವಾ ಗುರುತಿನ ಚೀಟಿ ಇದ್ದಂತೆ. ಇದು ನಿಮ್ಮ ಹೆಸರು, ವಸತಿ ವಿಳಾಸ ಮತ್ತು ಬೆರಳಚ್ಚುಗಳು, ಐರಿಸ್ ಸ್ಕ್ಯಾನ್ ಮತ್ತು ಮುಖದ ಚಿತ್ರದಂತಹ ಬಯೋಮೆಟ್ರಿಕ್ ರುಜುವಾತುಗಳನ್ನು ಒಳಗೊಂಡಿದೆ. ಈ ದಾಖಲೆಗಳನ್ನು ಹ್ಯಾಕರ್‌ಗಳು ಸಹ ಕದಿಯುವ ಸಾಧ್ಯತೆ ಇರುತ್ತದೆ. ಅಥವಾ ಖಾಸಗಿ ಕಂಪನಿಗಳು ಅಥವಾ ಮುಂತಾದವರು ಸಹ ನಿಮ್ಮ ಹಾಗೂ ನಿಮ್ಮ ಕುಟುಂಬದ ಖಾಸಗಿ ಮಾಹಿತಿಗಳನ್ನು ಕದಿಯುವ ಯತ್ನವಿರುತ್ತದೆ. 

ಈ ಹಿನ್ನೆಲೆ, ಪ್ರಸ್ತುತತೆಯ ಹಲವು ವಿವರಗಳೊಂದಿಗೆ, ನಿಮ್ಮ ಆಧಾರ್ ಕಾರ್ಡ್ ಅನ್ನು ಸುರಕ್ಷಿತವಾಗಿರಿಸುವುದು ನಿಮಗೆ ಅಗತ್ಯವಾಗುತ್ತದೆ. ‘ಆಧಾರ್ ದೃಢೀಕರಣ ಇತಿಹಾಸ’ ಎಂದು ಕರೆಯಲ್ಪಡುವ ನಿಮ್ಮ ಕಾರ್ಡ್ ಅನ್ನು ಯಾರಾದರೂ ದುರುಪಯೋಗಪಡಿಸಿಕೊಂಡಿದ್ದಾರೆಯೇ ಎಂದು ಪರಿಶೀಲಿಸುವ ಸೌಲಭ್ಯವನ್ನು ಆಧಾರ್ ಕಾರ್ಡ್‌ಗಳನ್ನು ನೀಡುವ ಸಂಸ್ಥೆ ಅನನ್ಯ ಗುರುತಿನ ಪ್ರಾಧಿಕಾರ (ಯುಐಡಿಎಐ) ಒದಗಿಸುತ್ತದೆ.

ಇದರಿಂದ ನಿಮ್ಮ ಆಧಾರ್‌ ಕಾರ್ಡ್‌ನ ಮಾಹಿತಿಗಳನ್ನು ಯಾರಾದರೂ ದುರುಪಯೋಗ ಪಡಿಸಿಕೊಂಡಿದ್ದಾರೇ ಎಂಬ ಮಾಹಿತಿ ನಿಮಗೆ ಗೊತ್ತಾಗಬಹುದು. ಅಥವಾ, ಆ ಬಗ್ಗೆ ಅನುಮಾನ ಸಹ ಮೂಡಬಹುದು. ಅದು ಹೇಗೆ ಅಂತೀರಾ..?

ಇದನ್ನೂ ಓದಿ: Mayawati: ಉತ್ತರಪ್ರದೇಶ ಚುನಾವಣೆಗೂ ಮುನ್ನವೇ ಮುರಿದು ಬೀಳಲಿದೆಯಾ ಬಿಎಸ್​ಪಿ ಪಕ್ಷ?; ಶಾಸಕರಿಂದ ಪ್ರತ್ಯೇಕ ಪಕ್ಷದ ಕೂಗು!

ಆಧಾರ್ ದೃಢೀಕರಣ ಇತಿಹಾಸವನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೀಗೆ.. 

1) ಯುಐಡಿಎಐನ ಅಧಿಕೃತ ವೆಬ್‌ಸೈಟ್: uidai.gov.inಗೆ ಭೇಟಿ ನೀಡಿ
2) 'ಮೈ ಆಧಾರ್‌'ಗೆ ಹೋಗಿ ಮತ್ತು ಆಧಾರ್ ಸೇವೆಗಳ ಅಡಿಯಲ್ಲಿ  'ಆಧಾರ್ ದೃಢೀಕರಣ ಇತಿಹಾಸ' ಕ್ಲಿಕ್ ಮಾಡಿ3) ನಿಮ್ಮ ಆಧಾರ್ ಸಂಖ್ಯೆ, ಭದ್ರತಾ ಕೋಡ್ ಬಳಸಿ ಲಾಗಿನ್ ಮಾಡಿ ಮತ್ತು 'ಸೆಂಡ್‌ ಒಟಿಪಿ' ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ
4) ಪರಿಶೀಲನೆಗಾಗಿ ಆ ಒಟಿಪಿಯನ್ನು ಭರ್ತಿ ಮಾಡಿ ಮತ್ತು ಮುಂದುವರಿಯಿರಿ
5) ನಿಮ್ಮ ಆಧಾರ್ ಕಾರ್ಡ್‌ನ ಎಲ್ಲಾ ವಿವರಗಳು ಮತ್ತು ಈ ಹಿಂದಿನ ದೃಢೀಕರಣ ವಿನಂತಿಗಳು ಪರದೆಯ ಮೇಲೆ ಕಾಣಿಸಿಕೊಳ್ಳುತ್ತದೆ
6) ಒಂದು ವೇಳೆ ನೀವು ಯಾವುದೇ ದುರುಪಯೋಗವನ್ನು ಅನುಮಾನಿಸಿದರೆ, ಅಥವಾ ನಿಮ್ಮ ಆಧಾರ್ ಬಳಕೆಯಲ್ಲಿ ಕೆಲವು ಅಕ್ರಮಗಳನ್ನು ಕಂಡುಕೊಂಡರೆ, ನೀವು ತಕ್ಷಣ ಯುಐಡಿಎಐ ಅನ್ನು ಅದರ ಟೋಲ್ ಫ್ರೀ ಸಂಖ್ಯೆ - 1947 ನಲ್ಲಿ ಸಂಪರ್ಕಿಸಬಹುದು ಅಥವಾ help@uidai.gov.in ನಲ್ಲಿ ಇಮೇಲ್ ಮೂಲಕ ಸಂಪರ್ಕಿಸಬಹುದು.
ಈ ಮೇಲಿನ ಹಂತಗಳ ಮೂಲಕ ನಿಮ್ಮ ಆಧಾರ್‌ ಕಾರ್ಡ್‌ನಲ್ಲಿ ಇರುವ ಮಹತ್ವದ ಮಾಹಿತಿ ಸುರಕ್ಷಿತವಾಗಿದೆಯೋ ಇಲ್ಲವೋ ಎಂಬುದು ಸಹ ಗೊತ್ತಾಗಲಿದೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: MAshok Kumar
First published: June 15, 2021, 5:44 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories