• Home
 • »
 • News
 • »
 • national-international
 • »
 • ಎಚ್​​ಐವಿ ಕಳಂಕದ ವಿರುದ್ಧ ಹೋರಾಡುತ್ತಾ ಮಹಿಳೆಯರ ಆರೋಗ್ಯ ಉತ್ತೇಜಿಸುತ್ತಿರುವ ಮುಂಬೈನ ವೈದ್ಯೆ..!

ಎಚ್​​ಐವಿ ಕಳಂಕದ ವಿರುದ್ಧ ಹೋರಾಡುತ್ತಾ ಮಹಿಳೆಯರ ಆರೋಗ್ಯ ಉತ್ತೇಜಿಸುತ್ತಿರುವ ಮುಂಬೈನ ವೈದ್ಯೆ..!

ಡಾ. ರೇಖಾ

ಡಾ. ರೇಖಾ

ರೋಗಿಗಳ ಸೂಕ್ಷ್ಮತೆ ಮತ್ತು ಗೌಪ್ಯತೆ ಮುಖ್ಯವಾಯಿತು. ಜತೆಗೆ, ತಾಯಿಯಿಂದ ನವಜಾತ ಶಿಶುಗಳಿಗೆ ಎಚ್ಐವಿ ಹರಡುವುದನ್ನು ನಿಲ್ಲಿಸುವುದು ಡಾ. ರೇಖಾರ ಪ್ರಮುಖ ಕಾಳಜಿಯಾಗಿತ್ತು. ಈ ಬಗ್ಗೆ ವಿವರಿಸಿದ ಅವರು, "ಒಮ್ಮೆ ನಾವು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದಾಗ, ತಾಯಿಯಿಂದ ಮಗುವಿಗೆ ಹರಡುವಿಕೆಯನ್ನು ನಾವು ತೀವ್ರವಾಗಿ ಕಡಿಮೆ ಮಾಡಬಹುದು ಎಂದು ನಾವು ಅರಿತುಕೊಂಡೆವು" ಎಂದು ಹೇಳಿದರು

ಮುಂದೆ ಓದಿ ...
 • Share this:

  ಮುಂಬೈ(ಮಾ.12): 'ವೈದ್ಯೋ ನಾರಾಯಣೋ ಹರಿಃ' ಎಂದರೆ ವೈದ್ಯರು ದೇವರಿಗೆ ಸಮಾನ ಅಂತಾರೆ. ಇದಕ್ಕೆ ತಕ್ಕಂತೆ ಹೆಸರುವಾಸಿಯಾಗಿರುವ ಮಹಾರಾಷ್ಟ್ರ ರಾಜಧಾನಿ ಮುಂಬೈನ ಡಾ. ರೇಖಾ ದಾವರ್ ಏಡ್ಸ್ ಮತ್ತು ಮುಟ್ಟಿನೊಂದಿಗೆ ಸಂಬಂಧಿಸಿದ ಕಳಂಕದ ವಿರುದ್ಧ ಹೋರಾಡುತ್ತಿದ್ದಾರೆ. ಡಾ. ರೇಖಾ ತಾಯಿಯಿಂದ ಮಗುವಿಗೆ ಎಚ್‌ಐವಿ ಹರಡದಂತೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಿದ್ದಾರೆ. ಜತೆಗೆ, ಗ್ರಾಮೀಣ ಮತ್ತು ನಗರ ಮಹಾರಾಷ್ಟ್ರದಲ್ಲಿ ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯ ಜಾಗೃತಿಯನ್ನು ಪಟ್ಟುಬಿಡದೆ ಉತ್ತೇಜಿಸಿದ್ದಾರೆ.


  ಪ್ರಸ್ತುತ ಸರ್ ಎಚ್ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಮತ್ತು ಮುಂಬೈನ ಸರ್ ಜೆಜೆ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕ ಎಮೆರಿಟಸ್ ಆಗಿರುವ ಡೇವರ್ News18.comಗೆ ನೀಡಿದ ಸಂದರ್ಶನದ ವಿವರ ಹೀಗಿದೆ..


  ತನ್ನ ಪೋಷಕರು ಬಹಳ ಪ್ರಗತಿಪರರಾಗಿದ್ದರು ಮತ್ತು ಯಾವಾಗಲೂ ತನ್ನ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ಅವರು ಪ್ರೋತ್ಸಾಹಿಸುತ್ತಿದ್ದರು ಎಂದು ಡಾ. ರೇಖಾ ದಾವರ್ ಹೇಳಿದ್ದಾರೆ. ಅಲ್ಲದೆ, “ನನ್ನ ವೈದ್ಯಕೀಯ ಇಂಟರ್ನ್‌ಶಿಪ್ ನನ್ನ ವೃತ್ತಿಜೀವನದ ಮಹತ್ವದ ತಿರುವು. ನಮ್ಮನ್ನು ಗ್ರಾಮೀಣ ಪ್ರದೇಶದಲ್ಲಿ ಮೊದಲ 6 ತಿಂಗಳು ಪೋಸ್ಟ್‌ ಮಾಡಲಾಗಿತ್ತು. ನನ್ನ ಅನುಭವದಲ್ಲಿ, ಹೆಚ್ಚಿನ ಮಹಿಳೆಯರು ವೈದ್ಯರನ್ನು, ಅದರಲ್ಲೂ ಪುರುಷ ವೈದ್ಯರನ್ನು ಸಂಪರ್ಕಿಸಲು ಹೇಗೆ ಹಿಂಜರಿಯುತ್ತಾರೆಂದು ನಾನು ನೋಡಿದೆ'' ಎಂಬುದನ್ನೂ ಹೇಳಿದರು.


  “ನಾನು ಯಾವಾಗಲೂ ಸಮಾಜಕ್ಕೆ ಆರೋಗ್ಯ ಜಾಗೃತಿ ಮೂಡಿಸಲು ತುಂಬಾ ಉತ್ಸುಕನಾಗಿದ್ದೆ, ಮತ್ತು ನನ್ನ ಇಂಟರ್ನ್‌ಶಿಪ್ ಇದಕ್ಕೆ ಅವಕಾಶ ನೀಡಿತು. ಮಹಿಳೆಯರಿಗೆ ಗರ್ಭಧಾರಣೆ ಮತ್ತು ಪ್ರೌಢಾವಸ್ಥೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳ ಬಗ್ಗೆ ತಿಳಿದಿಲ್ಲವೆಂದು ನಾನು ನೋಡಿದೆ. ಅಂತಹ ವಿಷಯಗಳ ಬಗ್ಗೆ ಚರ್ಚಿಸಲು ಅವರಿಗೆ ಸುರಕ್ಷಿತ ಮತ್ತು ಮುಕ್ತ ಸ್ಥಳಗಳಿಲ್ಲದ ಕಾರಣ, ಯಾವುದೇ ಮಾಹಿತಿಯನ್ನು ಪ್ರವೇಶಿಸುವುದು ಅವರಿಗೆ ಕಷ್ಟಕರವಾಯಿತು, ”


  "ಜನರು ಸಾಮಾನ್ಯವಾಗಿ ಗ್ರಾಮೀಣ ಮಹಿಳೆಯರು ಅನಕ್ಷರಸ್ಥರಾಗಿರುವುದರಿಂದ ಅವರಿಗೆ ವೈದ್ಯಕೀಯ ಸಮಸ್ಯೆಗಳು ಅರ್ಥವಾಗುವುದಿಲ್ಲ ಎಂದು ಭಾವಿಸುತ್ತಾರೆ. ಆದರೆ, ಅದು ಸರಿಯಲ್ಲ. ಒಬ್ಬರು ಪ್ರಯತ್ನಿಸಿದರೆ ಮಹಿಳೆಯರಿಗೆ ಅರಿವು ಮೂಡಿಸಲು ಸಾಧ್ಯವಿದೆ. ಇದನ್ನು ನಾನು ಕಂಡುಕೊಂಡೆ,” ಎಂದು ಅವರು ವಿವರಿಸಿದರು.


  ಕುಡುಕರೇ ಎಚ್ಚರ..! ಹೈದರಾಬಾದ್‌ನಲ್ಲಿ ಕುಡಿದು ವಾಹನ ಚಲಾಯಿಸಿದ 32 ಮಂದಿಗೆ ಜೈಲು ಶಿಕ್ಷೆ..!


  ''ಆದರೂ, ಮಹಿಳೆಯರು ಲೈಂಗಿಕ ಅಥವಾ ಮುಟ್ಟಿನ ಸಮಸ್ಯೆಗಳ ಬಗ್ಗೆ ಮನಬಿಚ್ಚಿ ಮಾತನಾಡಲು ಹಿಂದೇಟು ಹಾಕುತ್ತಾರೆ. ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇದನ್ನು 1975 ರಲ್ಲಿ ವೈದ್ಯಕೀಯ ಇಂಟರ್ನ್ ಆಗಿದ್ದಾಗಲೂ ನೋಡಿದ್ದೆ. ಇಂದಿಗೂ ನೋಡುತ್ತೇನೆ'' ಎಂದು ಡಾ. ರೇಖಾ ಹೇಳಿದರು.


  ಪ್ರಾಧ್ಯಾಪಕಿಯೂ ಆಗಿರುವ ಡೇವರ್


  ಮಹಿಳೆಯರ ಸಂತಾನೋತ್ಪತ್ತಿ ಆರೋಗ್ಯದ ಬಗ್ಗೆ ಸಂಭಾಷಣೆಗಳನ್ನು ಹುಟ್ಟುಹಾಕಲು ಡೇವರ್‌ಗೆ ಹೆಚ್ಚು ಆಸಕ್ತಿ ಇತ್ತು. ಈ ಹಿನ್ನೆಲೆ ಯುವ ಸಹಾಯಕ ಪ್ರಾಧ್ಯಾಪಕರಾಗಿದ್ದ ಅವರನ್ನು ಆಕೆಯ ಪ್ರಾಧ್ಯಾಪಕರು ಆಗಾಗ್ಗೆ ಸಮುದಾಯ ಸಂವೇದನಾ ಕಾರ್ಯಕ್ರಮಗಳಿಗೆ ಕಳುಹಿಸುತ್ತಿದ್ದರು.


  ಈ ವೇಳೆ, ''ನಾನು ಆ ಸಮುದಾಯಗಳೊಂದಿಗೆ ಗರ್ಭನಿರೋಧಕ ಮತ್ತು ಸ್ತನ್ಯಪಾನದ ಬಗ್ಗೆ ಮಾತನಾಡಲು ಪ್ರಾರಂಭಿಸಿದೆ. ಇದು ಅಗತ್ಯವಾದ ಸಂಭಾಷಣೆಗಳಾಗಿದ್ದರೂ, ಆಗ ಯಾರೂ ಅವರ ಬಗ್ಗೆ ಮಾತನಾಡಲಿಲ್ಲ'' ಎಂದೂ ಹೇಳಿದರು.


  ಅಲ್ಲದೆ, ಡಾ. ರೇಖಾ ಮತ್ತು ಕುಟುಂಬ ಅಮೆರಿಕಕ್ಕೆ ಶಿಫ್ಟ್‌ ಆದಾಗ, ತನ್ನ ಶಿಕ್ಷಣದ ಕೌಶಲ್ಯ ಹೆಚ್ಚಿಸಿಕೊಳ್ಳಲು, ಹೂಸ್ಟನ್‌ನ ಬೇಲರ್ ಕಾಲೇಜ್ ಆಫ್ ಮೆಡಿಸಿನ್‌ನಿಂದ ‘ಲೇಸರ್ ಮತ್ತು ಮೈಕ್ರೋಸರ್ಜರಿ’ ಯಲ್ಲಿ ಸರ್ಟಿಫಿಕೇಟ್‌ ಕೋರ್ಸ್ ಮಾಡಿದರು. ಜತೆಗೆ, ಎಂಡೋಸ್ಕೋಪಿಕ್ ಸರ್ಜರಿ ಮತ್ತು ಇತರ ತಂತ್ರಜ್ಞಾನಗಳ ಬಗ್ಗೆಯೂ ತಿಳಿದುಕೊಂಡರು. ಆ ತಂತ್ರಜ್ಞಾನಗಳು ಭಾರತಕ್ಕೆ ಇನ್ನೂ ಬಂದಿಲ್ಲವೆಂಬುದನ್ನು ಅರಿತುಕೊಂಡ ಅವರು, ಸ್ವದೇಶಕ್ಕೆ ಬಂದ ಬಳಿಕ ಈ ಹೊಸ ತಂತ್ರಜ್ಞಾನಗಳನ್ನು ಭಾರತೀಯ ಸರ್ಕಾರಿ ಆಸ್ಪತ್ರೆಗಳಿಗೆ ಪರಿಚಯಿಸುವ ಬಗ್ಗೆ ಡೇವರ್ ಉತ್ಸುಕರಾಗಿದ್ದರು.


  ಎಚ್‌ಐವಿ ವಿರುದ್ಧ ಹೋರಾಟ ಆರಂಭವಾಗಿದ್ದು ಹೀಗೆ..!


  ಆದರೆ, ತಾನೊಂದು ಬಗೆದರೆ ದೈವವೊಂದು ಬಗೆದಂತೆ ಎನ್ನುವ ಹಾಗೆ, 1981-1983ರ ಅವಧಿಯಲ್ಲಿ ಅಮೆರಿಕದಲ್ಲಿ ದೊಡ್ಡ ಆರೋಗ್ಯ ಕಾಳಜಿಯಾಗಿದ್ದ ಎಚ್‌ಐವಿ ಬಗ್ಗೆ ಭಾರತದಲ್ಲಿ ಅಷ್ಟಾಗಿ ಅರಿವು ಇರದಿದ್ದ ಕಾರಣ, ಅದರ ವಿರುದ್ಧ ಹೋರಾಟ ಮಾಡಲು, ಅರಿವು ಮೂಡಿಸಲು ನಿರ್ಧರಿಸಿದರು.


  ''ಮುಂಬೈನ ಜೆಜೆ ಆಸ್ಪತ್ರೆಯು ನಗರದ ಪ್ರಮುಖ ಕೆಂಪು-ಬೆಳಕಿನ ಪ್ರದೇಶಗಳಿಗೆ ಹತ್ತಿರದಲ್ಲಿದೆ, ಮತ್ತು ಎಚ್‌ಐವಿ ಪಾಸಿಟಿವ್ ಆಗಿರುವ ಅನೇಕ ಲೈಂಗಿಕ ಕಾರ್ಯಕರ್ತರನ್ನು ನಾವು ಇಲ್ಲಿ ನೋಡಿದರೂ, ರೋಗಿಗಳಿಗೆ ಆ ಮಾಹಿತಿ ಇರಲಿಲ್ಲ. ಹೀಗಾಗಿ, ಈ ಮಹಿಳೆಯರು ರೋಗವನ್ನು ನಿರ್ವಹಿಸುವ ವಿಧಾನಗಳನ್ನು ವಿವರಿಸಿದೆವು. ಈ ಬಗ್ಗೆ ಜಾಗೃತಿ ಮೂಡಿಸುವುದು ನಿರ್ಣಾಯಕವಾಗಿತ್ತು'' ಎಂದು ಡಾ. ರೇಖಾ ಹೇಳಿದರು. ಮಹಿಳೆಯೊಬ್ಬರಿಗೆ ಎಚ್‌ಐವಿ ಇದೆ ಎಂದು ತಿಳಿಸಿದ ನಂತರ, ಆಕೆ ಸಾಯಲು ಹೊರಟಿದ್ದ ಬಗ್ಗೆಯೂ ವೈದ್ಯೆ ನೆನಪಿಸಿಕೊಂಡರು.


  ಆದ್ದರಿಂದ, ರೋಗಿಗಳ ಸೂಕ್ಷ್ಮತೆ ಮತ್ತು ಗೌಪ್ಯತೆ ಮುಖ್ಯವಾಯಿತು. ಜತೆಗೆ, ತಾಯಿಯಿಂದ ನವಜಾತ ಶಿಶುಗಳಿಗೆ ಎಚ್ಐವಿ ಹರಡುವುದನ್ನು ನಿಲ್ಲಿಸುವುದು ಡಾ. ರೇಖಾರ ಪ್ರಮುಖ ಕಾಳಜಿಯಾಗಿತ್ತು. ಈ ಬಗ್ಗೆ ವಿವರಿಸಿದ ಅವರು, "ಒಮ್ಮೆ ನಾವು ಅದರ ಮೇಲೆ ಕೆಲಸ ಮಾಡಲು ಪ್ರಾರಂಭಿಸಿದಾಗ, ತಾಯಿಯಿಂದ ಮಗುವಿಗೆ ಹರಡುವಿಕೆಯನ್ನು ನಾವು ತೀವ್ರವಾಗಿ ಕಡಿಮೆ ಮಾಡಬಹುದು ಎಂದು ನಾವು ಅರಿತುಕೊಂಡೆವು" ಎಂದು ಹೇಳಿದರು.


  ''ಸರಿಯಾದ ಪಿಪಿಇ ಮತ್ತು ಇತರ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೆ, ಚಿಂತೆ ಮಾಡಲು ಏನೂ ಇಲ್ಲ ಎಂದು ನಾವು ವಿವರಿಸಿದ್ದೇವೆ. ಎಚ್‌ಐವಿ ಯನ್ನು ಅಪವಿತ್ರಗೊಳಿಸುವ ಪ್ರಕ್ರಿಯೆಯು ದೀರ್ಘ ಕಠಿಣ ಯುದ್ಧವಾಗಿತ್ತು,” ಎಂದೂ ನೆನಪಿಸಿಕೊಳ್ಳುತ್ತಾರೆ.


  1999 ರಲ್ಲಿ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಡಾ. ರೇಖಾ, ಎಚ್‌ಐವಿ ಬಂದಿರುವ ತಾಯಿಯಿಂದ ಮಗುವಿಗೆ ಹರಡುವಿಕೆಯನ್ನು ತಡೆಗಟ್ಟುವ ಕುರಿತು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೊ) ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದರು. ಡಾ. ಡೇವರ್ ಅವರನ್ನು ಭಾರತ ಸರ್ಕಾರವು ರಾಷ್ಟ್ರೀಯ ಇಎಂಟಿಸಿಟಿಯ (ಎಚ್‌ಐವಿ ಹರಡುವ ತಾಯಿಯಿಂದ ಮಗುವಿಗೆ ಹರಡುವಿಕೆ ನಿರ್ಮೂಲನೆ) ಕೋರ್ ಗುಂಪಿನ ಭಾಗವಾಗಿ ನಾಮನಿರ್ದೇಶನ ಮಾಡಿತು.


  ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸುಧಾರಿಸುವ ಅವರ ಬದ್ಧತೆಯನ್ನು ವಿಶ್ವಸಂಸ್ಥೆಯ ಎಚ್‌ಐವಿ ಮತ್ತು ಏಡ್ಸ್ (ಯುಎನ್‌ಐಐಡಿಎಸ್) ಅಧಿಕಾರಿಗಳು ಗುರುತಿಸಿದ್ದಾರೆ.


  ಮಹಿಳಾ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಅವರು ನೀಡಿದ ಕೊಡುಗೆಗಾಗಿ, ಮಹಾರಾಷ್ಟ್ರ ಸರ್ಕಾರವು 2017 ರಲ್ಲಿ ಅವರಿಗೆ 'ಗೌರವ ಪ್ರಮಾಣಪತ್ರ' ನೀಡಿತು ಮತ್ತು ಭಾರತೀಯ ವೈದ್ಯಕೀಯ ಸಂಘವು ಅವರಿಗೆ 2018 ರಲ್ಲಿ 'ಡಿಸ್ಟಿಂಗ್ವಿಶ್ಡ್ ಡಾಕ್ಟರ್ ಅವಾರ್ಡ್' ನೀಡಿ ಗೌರವಿಸಿದೆ.

  Published by:Latha CG
  First published: