news18-kannada Updated:February 10, 2020, 6:39 PM IST
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ
ಬೆಂಗಳೂರು(ಫೆ.01): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ 2020-21ನೇ ಸಾಲಿನ ಬಜೆಟ್ ಮಂಡನೆಯಾಗಿದೆ. ಕೇಂದ್ರ ಗೃಹ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆ ಹಲವು ಗಂಟೆಗಳ ಸುಧೀರ್ಘ ಭಾಷಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಇಂದು ಶನಿವಾರ ಬೆಳಗ್ಗೆ 11 ಗಂಟೆಗೆ ಬಜೆಟ್ ಭಾಷಣ ಆರಂಭಿಸಿದ ಸೀತಾರಾಮನ್, ಮಧ್ಯಾಹ್ನ 1:40ಕ್ಕೆ ಮುಗಿಸಿದರು. ಸುಮಾರು 2 ಗಂಟೆ 40 ನಿಮಿಷಗಳ ಕಾಲ ಬಜೆಟ್ ಮುಖ್ಯಾಂಶಗಳನ್ನು ಓದಿದರು. ಒಟ್ಟು 160 ನಿಮಿಷಗಳ ಬಜೆಟ್ ಭಾಷಣ ಮಾಡಿದ ಸೀತಾರಾಮನ್ ದಾಖಲೆ ನಿರ್ಮಿಸಿದರು. ಆದರೀಗ ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಇತಿಹಾಸದಲ್ಲೇ ಸುದೀರ್ಘವಾಗಿತ್ತು ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ಹೀಗೆ ಹೊಗಳುವ ರೀತಿಯಲ್ಲೇ ಕೇಂದ್ರ ಸರ್ಕಾರದ ಬಜೆಟ್ ಅನ್ನು ವಿಭಿನ್ನವಾಗಿ ಟೀಕಿಸಿದ್ದಾರೆ.
ದೇಶದಲ್ಲಿ ಉದ್ಯೋಗ ಸಮಸ್ಯೆ ವ್ಯಾಪಕವಾಗಿದೆ. ಕೇಂದ್ರ ಸರ್ಕಾರದ 2020ನೇ ಸಾಲಿನ ಬಜೆಟ್ ನಿರುದ್ಯೋಗ ನಿವಾರಣೆಗೆ ಯಾವುದೇ ಕಾರ್ಯತಂತ್ರ ಕೈಗೊಂಡಿಲ್ಲ. ಯುವಕರಿಗೆ ಉದ್ಯೋಗ ನೀಡುವ ನಿಟ್ಟಿಯಲ್ಲಿಯೂ ಯೋಜನೆಗಳು ಘೋಷಣೆ ಮಾಡಿಲ್ಲ. ಇದೊಂದು ದೂರದೃಷ್ಟಿಯಿಲ್ಲದ ಬಜೆಟ್ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಕುಟುಕಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಬಡವ ಮತ್ತು ರೈತರ ಪರ ಕಾಳಜಿಯಿಲ್ಲ. ದೇಶದ ಇತಿಹಾಸದಲ್ಲೇ ಇದು ಅತ್ಯಂತ ಉದ್ದದ ಬಜೆಟ್ ಆಗಿದೆ. ಇಷ್ಟೊಂದು ದೀರ್ಘ ಸಮಯ ತೆಗೆದುಕೊಂಡು ಬಜೆಟ್ ಮಂಡಿಸಿದರೂ ಜನರಿಗೆ ಬೇಕಾದ ಯೋಜನೆಗಳು ಘೋಷಿಸಿಲ್ಲ. ಬಹುಶಃ ಈ ಬಜೆಟ್ ಓದಿದ ಹಣಕಾಸು ಸಚಿವರೇ ಸುಸ್ತಾಗಿ ಹೋದರು. ಜನರಿಗೆ ಮಾತ್ರ ಈ ಬಜೆಟ್ನಿಂದ ನಯಾಪೈಸೆ ಉಪಯೋಗವಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಟೀಕಿಸಿದ್ದಾರೆ.
ಕೇಂದ್ರ ಗೃಹ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ತಯಾರಿಸುವಲ್ಲಿ ವಿಫರಾಗಿದ್ದಾರೆ. ದೇಶದ ಜಿಡಿಪಿ ಮತ್ತು ವಿತ್ತೀಯ ಕೊರತೆ ಸೇರಿದಂತೆ ಹಣ ಹೂಡಿಕೆ ಬಗ್ಗೆಯೂ ಯಾವುದೇ ಪ್ರಸ್ತಾಪವಿಲ್ಲ. ಹೀಗಾಗಿ ಇದೊಂದು ಭರವಸೆ ಇಲ್ಲದ ಬಜೆಟ್ ಎನ್ನುವ ಮೂಲಕ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಕಿಡಿಕಾರಿದ್ದಾರೆ.
ಇನ್ನು, ಬಜೆಟ್ ವಿಶ್ಲೇಷಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್, 'ಈ ಬಜೆಟ್ನಿಂದ ಜನರಿಗೆ ಯಾವುದೇ ಉಪಯೋಗವಿಲ್ಲ. ತೆರಿಗೆದಾರರಿಗೆ ವಿನಾಯಿತಿ ನೀಡಿರುವುದು ಹೊರತುಪಡಿಸಿ ಇನ್ನಾವುದೇ ಒಳ್ಳೆಯ ಘೋಷಣೆಗಳು ಬಜೆಟ್ನಲ್ಲಿ ಇಲ್ಲ ಎಂದಿದ್ದಾರೆ.
ಕೇಂದ್ರದ ಬಜೆಟ್ಗೆ ಪ್ರಶಂಸೆ
ಕೇಂದ್ರ ಸರ್ಕಾರದ 2020ನೇ ಸಾಲಿನ ಬಜೆಟ್ ರೈತ ಮತ್ತು ಅಭಿವೃದ್ದಿಪರವಾಗಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನು, ಪ್ರಧಾನಿ ಮೋದಿ ಸರ್ಕಾರದ ಬಜೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ, ತೆರಿಗೆದಾರರು ದೇಶದ ಆರ್ಥಿಕತೆಯ ಬೆನ್ನೆಲುಬು. ಇಂತಹ ತೆರಿಗೆದಾರರಿಗೆ ಕೇಂದ್ರದ ಬಜೆಟ್ನಲ್ಲಿ ರಿಯಾಯಿತಿ ಸಿಕ್ಕಿರುವುದು ಖುಷಿ ವಿಚಾರ ಎಂದಿದ್ದಾರೆ.
ಇದೊಂದು ಐತಿಹಾಸಿಕ ಬಜೆಟ್ ಈ ಬಜೆಟ್. ಸಮಾಜದ ಎಲ್ಲಾ ವರ್ಗಗಳನ್ನೂ ಗಮನದಲ್ಲಿಡುಕೊಂಡು ಬಜೆಟ್ ಮಂಡಿಸಲಾಗಿದೆ ಎಂದು ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: Budget 2020: ‘ಜನಸ್ನೇಹಿ ಮತ್ತು ದೂರದೃಷ್ಟಿ ಬಜೆಟ್ ಇದಾಗಿದೆ‘; ಸಿಎಂ ಯಡಿಯೂರಪ್ಪ
ಕೃಷಿಕರು, ಮಧ್ಯಮರ್ಗದವರು, ಉದ್ಯಮಿಗಳು, ನವೋದ್ಯಮಿಗಳು ಎಲ್ಲರ ಅಗತ್ಯವನ್ನೂ ಗಮನದಲ್ಲಿಟ್ಟುಕೊಂಡು ಈ ಬಜೆಟ್ ಮಂಡಿಸಲಾಗಿದೆ. ಇದು ರೈತರಿಗೆ ಬಹುವಾಗಿ ಸಹಾಯಕವಾಗಲಿದೆ ಎಂದರು ಅಮಿತ್ ಶಾ.
First published:
February 1, 2020, 4:42 PM IST