CNBC-TV18 IBLA 2020: ಇಂಡಿಯಾ ಬ್ಯುಸಿನೆಸ್ ಲೀಡರ್ ಪ್ರಶಸ್ತಿ ಕಾರ್ಯಕ್ರಮ; ಇಲ್ಲಿದೆ ವಿಜೇತರ ಪಟ್ಟಿ

ಇನ್ನು ಭಾರತೀಯ ಆರ್ಥಿಕತೆಗೆ ನೀಡಿರುವ ಕೊಡುಗೆ ಪರಿಗಣಿಸಿ ದಿವಂಗತ ಅರುಣ್ ಜೇಟ್ಲಿ ಅವರಿಗೆ ‘Hall of Fame’ ಗೌರವ ನೀಡಲಾಯ್ತು. ವರ್ಷದ ರಾಜ್ಯ ಪ್ರಶಸ್ತಿ ಮಹಾರಾಷ್ಟ್ರದ ಪಾಲಾಯ್ತು. ದಶಕದ ಐಕಾನಿಕ್ ಬ್ಯುಸಿನೆಸ್ ಲೀಡರ್ ಪ್ರಶಸ್ತಿ ಮುಕೇಶ್ ಅಂಬಾನಿಗೆ ಸಂದಾಯ ಮಾಡಲಾಯ್ತು. ಕರಣ್​​ ಜೋಹರ್​​ಗೆ "ಐಕಾನಿಕ್​ ಎಂಟರ್​ಟೈನ್​ಮೆಂಟ್​ ಆಫ್​ ದಿ ಡಿಕೇಡ್​" ಪ್ರಶಸ್ತಿ ಸಿಕ್ಕಿತು.

ಪ್ರಶಸ್ತಿ ವಿಜೇತರು

ಪ್ರಶಸ್ತಿ ವಿಜೇತರು

 • Share this:
  ನವದೆಹಲಿ(ಫೆ.28): ಭಾರತದ ಅತ್ಯಂತ ಪ್ರತಿಷ್ಠಿತ ಇಂಡಿಯಾ ಬ್ಯುಸಿನೆಸ್ ಲೀಡರ್ ಪ್ರಶಸ್ತಿ(CNBC-TV18 IBLA 2020) ಕಾರ್ಯಕ್ರಮ ಮುಂಬೈನಲ್ಲಿ ಆಯೋಜಿಸಲಾಗಿತ್ತು. ಇಲ್ಲಿ ನಡೆದ ಈ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಹಣಕಾಸು ಸಚಿವರು, ಆರ್​​ಬಿಐ​​ ಗವರ್ನರ್ ಸೇರಿದಂತೆ ಉನ್ನತ ಉದ್ಯಮಿಗಳು ಭಾಗಿಯಾಗಿದ್ದರು. ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ ಗವರ್ನರ್‌ ಶಕ್ತಿಕಾಂತ ದಾಸ್, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​​​ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು. ಜತೆಗೆ ಹೆಚ್​ಡಿಎಫ್​ಸಿ ಬ್ಯಾಂಕ್ ಸಂಸ್ಥೆಯ ಆದಿತ್ಯ ಪುರಿ ಮತ್ತು ದೀಪಕ್ ಪರೇಖ್ ಬ್ಯುಸಿನೆಸ್ ಲೀಡರ್ ಪ್ರಶಸ್ತಿ ಕಾರ್ಯಕ್ರಮಕ್ಕೆ ಆಗಮಿದ್ದರು. ಇವರಂತೆಯೇ ಸಾಕಷ್ಟು ಉನ್ನತ ಉದ್ಯಮಿಗಳು ಹಾಜರಾಗಿದ್ದರು.

  ಇನ್ನು ವೇದಿಕೆಯನ್ನುದ್ದೇಶಿಸಿ ಮಾತಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಬ್ಯಾಂಕುಗಳು ಸಾಲ ಕೊಡಲು ಹಿಂದೇಟು ಹಾಕುತ್ತಿರುವುದೇಕೆ ಎಂಬ ಪ್ರಶ್ನೆಗೆ ಉತ್ತರ ನೀಡಿದರು. ನಿರ್ಮಲಾ ಸೀತಾರಾಮನ್​​​ ಬಳಿಕ ಮಾತಾಡಿದ ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್ ಮುಕೇಶ್ ಅಂಬಾನಿ, “ನನಗೆ ಐಕಾನಿಕ್ ಲೀಡರ್ ಎಂದರೆ ನನ್ನ ತಂದೆ ಧೀರೂಭಾಯ್ ಅಂಬಾನಿ ಮಾತ್ರ. ಭಾರತಕ್ಕೆ ಮತ್ತು ರಿಲಾಯನ್ಸ್ ಸಂಸ್ಥೆಗಾಗಿ ದೊಡ್ಡ ಕನಸು ಕಾಣಲು ಅವರು ಹೇಳಿಕೊಟ್ಟಿದ್ದಾರೆೆ" ಎಂದರು.

  ಇನ್ನು ಭಾರತೀಯ ಆರ್ಥಿಕತೆಗೆ ನೀಡಿರುವ ಕೊಡುಗೆ ಪರಿಗಣಿಸಿ ದಿವಂಗತ ಅರುಣ್ ಜೇಟ್ಲಿ ಅವರಿಗೆ ‘Hall of Fame’ ಗೌರವ ನೀಡಲಾಯ್ತು. ವರ್ಷದ ರಾಜ್ಯ ಪ್ರಶಸ್ತಿ ಮಹಾರಾಷ್ಟ್ರದ ಪಾಲಾಯ್ತು. ದಶಕದ ಐಕಾನಿಕ್ ಬ್ಯುಸಿನೆಸ್ ಲೀಡರ್ ಪ್ರಶಸ್ತಿ ಮುಕೇಶ್ ಅಂಬಾನಿಗೆ ಸಂದಾಯ ಮಾಡಲಾಯ್ತು. ಕರಣ್​​ ಜೋಹರ್​​ಗೆ "ಐಕಾನಿಕ್​ ಎಂಟರ್​ಟೈನ್​ಮೆಂಟ್​ ಆಫ್​ ದಿ ಡಿಕೇಡ್​" ಪ್ರಶಸ್ತಿ ಸಿಕ್ಕಿತು.

  CNBC-TV18 IBLA 2020 ವಿವಿಧ ಕ್ಷೇತ್ರಗಳ ಪ್ರಶಸ್ತಿ ವಿಜೇತರು ಪಟ್ಟಿ ಹೀಗಿದೆ...

  • ಯಂಗ್​​ ಟರ್ಕ್​​ ಆಫ್​​ ದಿ ಇಯರ್​​ - ಗಜಲ್​​​ ಕಲ್ರಾ, ಕೋ ಫೌಂಡರ್​​​​, ರಿವಿಗೋ

  • ಯಂಗ್​​ ಟರ್ಕ್ಸ್​​​​ ಸ್ಟಾರ್ಟಪ್​​ ಆಫ್​​ ದಿ ಇಯರ್​​ - ವಿದಿತ್​​ ಆತ್ರೆ, ಫೌಂಡರ್​​​ ಮತ್ತು ಸಿಇಒ, ಮಿಸೋ

  • ಮೋಸ್ಟ್​​​ ಪ್ರಾಮಿಸಿಂಗ್​​​ ಕಂಪನಿ ಆಫ್​​ ದಿ ಇಯರ್​​​ - ವಿನತಿ ಸರಫ್​​ ಮುತ್ರೇಜ್​​​, ಎಂಡಿ ಮತ್ತು ಸಿಇಒ, ವಿನತಿ ಆರ್ಗಾನಿಕ್ಸ್​​​

  • ದಿ ಡಿಸ್ಟ್ರಕ್ಟರ್ಸ್​​​ - ದಿಲೀಪ್​ ಎಬ್ಸೆ ಎಂಡಿ, ಯುಪಿಐ

  • ಜ್ಯೂರಿ ಪತ್ಯೇಕ ರೆಕಮಂಡೇಷನ್​​(ದಿ ಡಿಸ್ಟ್ರಪ್ಟರ್ಸ್​​​) - ನೈಕಾ ಡಾಟ್​​​​ ಕಾಮ್​​​, ಫಾಲ್ಗುಣಿ ನಾಯರ್​​, ಫೌಂಡರ್​​, ಸಿಇಒ, ಬ್ರಾಂಡ್​​​​ ಕ್ಯಾಂಪೇನ್​​ ಆಫ್​ ದಿ ಇಯರ್- ಫೆವಿಕಾಲ್​​​​: ಮಧುಕರ್ ಪರೇಖ್​​, ಛೇರ್ಮನ್​​​ ಪಿಡಿಲೈಟ್​​​ ಇಂಡಸ್ಟ್ರೀಸ್​​​, ಪಿಯೂಶ್​​​​ ಪಾಂಡೆ, ಸಿಸಿವೊ ವರ್ಲ್ಡ್​​​​ ವೈಡ್​​, ಎಕ್ಸಿಕ್ಯೂಟಿವ್​​​​​ ಛೇರ್ಮನ್​​​​ ಇಂಡಿಯಾ, ಓಗಿಲ್ವಿ

  • ಔಟ್​​ ಸ್ಟಾಂಡಿಂಗ್​​​​ ಬ್ಯುಸಿನೆಸ್​​​​ ಲೀಡರ್​​ ಆಫ್​ ದಿ ಇಯರ್​​ - ರಾಜೇಶ್​​​ ಗೋಪಿನಾಥನ್​​, ಎಂಡಿ, ಸಿಇಒ, ಟಾಟಾ ಕನ್ಸಲ್ಟೆನ್ಸಿ ಸರ್ವೀಸೆಸ್​​​

  • ಔಟ್​​​​ ಸ್ಟಾಂಡಿಂಗ್​​ ಕಂಪನಿ ಆಫ್​​ ದಿ ಇಯರ್​​ - ಆದಿತ್ಯ ಪುರಿ, ಎಂಡಿ, ಹೆಚ್​​​ಡಿಎಫ್​ಸಿ ಬ್ಯಾಂಕ್​​​​​

  • ಸ್ಟೇಟ್​ ಆಫ್​​ ದಿ ಇಯರ್​​​ - ಸಿಎಂ ಉದ್ದವ್​​ ಠಾಕ್ರೆ, ಮಹಾರಾಷ್ಟ್ರ

  • ಗ್ಲೋಬಲ್​​​ ಇಂಡಿಯನ್​​​ ಬ್ಯುಸಿನೆಸ್​​​​ ಐಕಾನ್​​ - ಸತ್ಯಾ ನಾದೆಲ್ಲಾ

  • ಐಕಾನಿಕ್​ ಸ್ಟಾರ್ಸ್​​ ಲೀಡರ್​​ ಆಫ್​​ ದಿ ಡಿಕೇಡ್​​​ - ಪುಲ್ಲೆಲ್​​ ಗೋಪಿಚಂದ್​​

  • ಐಕಾನಿಕ್​​​ ಎಂಟರ್​​​ಟೈನ್​​​​​ಮೆಂಟ್​​​ ಲೀಡರ್​ ಆಫ್​ ದಿ ಡಿಕೇಡ್​​ - ಕರಣ್​​ ಜೋಹರ್​

  • ಐಕಾನಿಕ್​​ ಕಂಪನಿ ಆಫ್​​ ದಿ ಡಿಕೇಡ್​​​ - ​ಟಾಟಾ ಕನ್ಸಲ್ಟೆನ್ಸಿ- ರಾಜೇಶ್​ ಗೋಪಿನಾಥ್​​ನ್​​, ಎಂಡಿ ಮತ್ತು ಸಿಇಒ

  • ಐಕಾನಿಕ್​​​ ಬ್ಯುಸಿನೆಸ್​​​ ಲೀಡರ್​​ ಆಫ್​​ ದಿ ಡಿಕೇಡ್​​​ - ಮುಕೇಶ್ ಅಂಬಾನಿ, ರಿಲಾಯನ್ಸ್ ಇಂಡಸ್ಟ್ರೀಸ್ ಛೇರ್ಮನ್

  • ಲೈಫ್​​​ ಅಚೀವ್​​ಮೆಂಟ್​​ ಅವಾರ್ಡ್​​​ - ದೀಪಕ್​​​ ಪಾರೇಖ್​​, ಎಚ್​​ಡಿಎಫ್​​ಸಿ ಲಿಮಿಟೆಡ್​​


     First published: