International Tiger Day 2020: ಅಂತಾರಾಷ್ಟ್ರೀಯ ಹುಲಿ ದಿನಾಚರಣೆ ಬಗ್ಗೆ ಇಲ್ಲಿವೆ ಒಂದಷ್ಟು ವಿಶೇಷ ವಿಚಾರಗಳು

ಇತ್ತೀಚಿನ ವರ್ಷಗಳಲ್ಲಿ ಹುಲಿಯನ್ನು ಬೇಟೆಯಾಡಿ ಅವುಗಳ ಚರ್ಮ, ಹಲ್ಲು ಹಾಗೂ ಮೂಳೆಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ, ಈ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೂಡ ಕೈಗೊಳ್ಳಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ನವದೆಹಲಿ (ಜು.29): ಇಂದು ಅಂತಾರಾಷ್ಟ್ರಿಯ ಹುಲಿ ದಿನಾಚರಣೆ. ವಿಶ್ವಾದ್ಯಂತ ಹುಲಿಗಳ ಸಂಖ್ಯೆ ದಿನೇ ದಿನೆ ಕಡಿಮೆ ಆಗುತ್ತಿದ್ದು, ಅವುಗಳ ರಕ್ಷಣೆಗೆ ಸರ್ಕಾರ ಪಣ ತೊಟ್ಟಿದೆ. ಈ ಮಧ್ಯೆ ಹುಲಿ ದಿನಾಚರಣೆಯನ್ನು ಆಚರಣೆ ಮಾಡಲು ವಿಶೇಷ ಕಾರಣ ಕೂಡ ಇದೆ.

  2010ರಲ್ಲಿ ರಷ್ಯಾದಲ್ಲಿ ಸೇಂಟ್​ ಪೀಟರ್ಸ್​ಬರ್ಗ್​​ ಘೋಷಣೆಗೆ ಸಹಿ ಹಾಕುವ ವೇಳೆ 13 ರಾಷ್ಟ್ರಗಳು ಸೇರಿದ್ದವು. ಈ ವೇಳೆ ಜುಲೈ 29ಅನ್ನು ಅಂತಾರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಣೆ ಮಾಡಲು ನಿರ್ಧರಿಸಲಾಯಿತು. ಹುಲಿಗಳ ರಕ್ಷಣೆ ಇದರ ಪ್ರಮುಖ ಉದ್ದೇಶವಾಗಿದೆ. 2022ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗಣ ಮಾಡುವ ಉದ್ದೇಶವನ್ನು ಕೂಡ ಹೊಂದಲಾಗಿದೆ.

  ಇತ್ತೀಚಿನ ವರ್ಷಗಳಲ್ಲಿ ಹುಲಿಯನ್ನು ಬೇಟೆಯಾಡಿ ಅವುಗಳ ಚರ್ಮ, ಹಲ್ಲು ಹಾಗೂ ಮೂಳೆಗಳನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ. ಇದನ್ನು ತಡೆಯಲು ಸರ್ಕಾರ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೆ, ಈ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮ ಕೂಡ ಕೈಗೊಳ್ಳಲಾಗುತ್ತಿದೆ.

  ನೂರು ವರ್ಷಗಳ ಹಿಂದೆ ವಿಶ್ವದಲ್ಲಿ ಸುಮಾರು 1 ಲಕ್ಷ ಹುಲಿಗಳು ಇದ್ದವು. ಆಘಾತಕಾರಿ ವಿಚಾರ ಎಂದರೆ ಕಳೆದ 100 ವರ್ಷಗಳಲ್ಲಿ ಶೇ.97ರಷ್ಟು ಹುಲಿಗಳು ನಾಶ ಹೊಂದಿವೆ. ಹೀಗಾಗಿ ವಿಶ್ವಾದ್ಯಂತ ಉಳಿದುಕೊಂಡಿರುವುದು ಕೇವಲ 3000 ಹುಲಿಗಳು ಮಾತ್ರ! ಈ ವರದಿ ಸಾಕಷ್ಟು ಆತಂಕ ಮೂಡಿಸಿದೆ. ವಿಶೇಷ ಎಂದರೆ 3000 ಹುಲಿಗಳ ಪೈಕಿ ಭಾರತದಲ್ಲಿಯೇ 300 ಹುಲಿಗಳಿವೆ.  ಇದನ್ನೂ ಓದಿ: ಭಾರತದ ರಫೇಲ್, ಪಾಕಿಸ್ತಾನದ ಜೆಎಫ್-17 ಮತ್ತು ಚೀನಾದ ಜೆ-20 ಯುದ್ಧವಿಮಾನಗಳಲ್ಲಿ ಯಾವುದು ಬೆಸ್ಟ್?

  ಅಂತಾರಾಷ್ಟ್ರಿಯ ಹುಲಿ ದಿನಾಚರಣೆ ಅಂಗವಾಗಿ ಮಾತನಾಡಿರುವ ಕೇಂದ್ರ ಸಚಿವ ಪ್ರಕಾಶ್​ ಜಾವ್ಡೇಕರ್​, ಭಾರತದಲ್ಲಿ ಒಟ್ಟೂ 50 ಹುಲಿ ಸಂರಕ್ಷಣಾ ಕೇಂದ್ರಗಳಿವೆ. ಇವುಗಳಲ್ಲಿ ಯಾವ ಕೇಂದ್ರ ಕಳಪೆ ಗುಣಮಟ್ಟ ಹೊಂದಿಲ್ಲ. ನಾವು ಹುಲಿಗಳ ರಕ್ಷಣೆಗೆ ಪಣ ತೊಟ್ಟಿದ್ದು, 2022ರ ವೇಳೆಗೆ ಹುಲಿಗಳ ಸಂಖ್ಯೆಯನ್ನು ದ್ವಿಗುಣ ಮಾಡುವ ಗುರಿ ಹೊಂದಿದ್ದೇವೆ ಎಂದರು.
  Published by:Rajesh Duggumane
  First published: