Women’s Equality Day 2021: ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ನಿಮಗೆಷ್ಟು ಗೊತ್ತು?

Constitutional Rights: ಒಂದು ಸಮಾಜವು ಅಭಿವೃದ್ಧಿಯಾಗಬೇಕಾದರೆ ಮಹಿಳೆಯ ಪಾತ್ರ ಮುಖ್ಯವಾಗುತ್ತದೆ. ಮಹಿಳೆಯರಿಗೆ ಕಾನೂನುಗಳಿಂದ ರಕ್ಷಣೆ ನೀಡುವುದು ಅತ್ಯಗತ್ಯ, ಮತ್ತು  ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿದಿರಬೇಕು

Constitutional Rights: ಒಂದು ಸಮಾಜವು ಅಭಿವೃದ್ಧಿಯಾಗಬೇಕಾದರೆ ಮಹಿಳೆಯ ಪಾತ್ರ ಮುಖ್ಯವಾಗುತ್ತದೆ. ಮಹಿಳೆಯರಿಗೆ ಕಾನೂನುಗಳಿಂದ ರಕ್ಷಣೆ ನೀಡುವುದು ಅತ್ಯಗತ್ಯ, ಮತ್ತು  ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿದಿರಬೇಕು

Constitutional Rights: ಒಂದು ಸಮಾಜವು ಅಭಿವೃದ್ಧಿಯಾಗಬೇಕಾದರೆ ಮಹಿಳೆಯ ಪಾತ್ರ ಮುಖ್ಯವಾಗುತ್ತದೆ. ಮಹಿಳೆಯರಿಗೆ ಕಾನೂನುಗಳಿಂದ ರಕ್ಷಣೆ ನೀಡುವುದು ಅತ್ಯಗತ್ಯ, ಮತ್ತು  ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿದಿರಬೇಕು

  • Share this:
 ಪ್ರತಿ ವರ್ಷ ಆಗಸ್ಟ್ 26 ಅನ್ನು ಮಹಿಳಾ ಸಮಾನತೆಯ ದಿನವಾಗಿ ಅಮೆರಿಕಾದಲ್ಲಿಆಚರಣೆ ಮಾಡಲಾಗುತ್ತದೆ. ಇದನ್ನು 1971 ರಲ್ಲಿ ಜಾರಿಗೆ ತರಲಾಯಿತು. ಈ ದಿನವನ್ನು  1920 ರ ಸಂವಿಧಾನದ 19 ನೇ ತಿದ್ದುಪಡಿಯನ್ನುಅಂಗೀಕರಿಸಿದ ನೆನಪಿನಲ್ಲಿ ಆಚರಣೆ ಮಾಡಲಾಗುತ್ತದೆ. ,19 ನೇ ತಿದ್ದುಪಡಿಯು ಅಮೆರಿಕನ್ ಮಹಿಳೆಯರಿಗೆ ಮತದಾನದ ಸಾಂವಿಧಾನಿಕ ಹಕ್ಕನ್ನು ನೀಡಿದೆ. ಮಹಿಳಾ ಸಮಾನತೆಯ ದಿನವು ಲಿಂಗ ತಾರತಮ್ಯವನ್ನು ತೊಡೆದುಹಾಕಲು ಮತ್ತು ಜೀವನದ ಎಲ್ಲಾ ಹಂತಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನೀಡುವ ಪ್ರಯತ್ನವಾಗಿದೆ.

ಒಂದು ಸಮಾಜವು ಅಭಿವೃದ್ಧಿಯಾಗಬೇಕಾದರೆ ಮಹಿಳೆಯ ಪಾತ್ರ ಮುಖ್ಯವಾಗುತ್ತದೆ. ಮಹಿಳೆಯರಿಗೆ ಕಾನೂನುಗಳಿಂದ ರಕ್ಷಣೆ ನೀಡುವುದು ಅತ್ಯಗತ್ಯ, ಮತ್ತು  ಮಹಿಳೆಯರ ಹಕ್ಕುಗಳ ಬಗ್ಗೆ ತಿಳಿದಿರಬೇಕು. ಮಾನವ ಹಕ್ಕುಗಳು ಮಹಿಳೆಯರ ಹಕ್ಕುಗಳು  ಹಾಗೆಯೇ ಮಹಿಳಾ ಹಕ್ಕುಗಳು ಮಾನವ ಹಕ್ಕುಗಳು ಎಂಬ ಮಾತನ್ನ ಒಮ್ಮೆ 1995 ರಲ್ಲಿ ನಡೆದ ನಾಲ್ಕನೇ ವಿಶ್ವ ಸಮ್ಮೇಳನದಲ್ಲಿ  ಹಿಲರಿ ಕ್ಲಿಂಟನ್ ಹೇಳಿದ್ದರು.

ಅಂತರಾಷ್ಟ್ರೀಯ ಮಹಿಳಾ ಸಮಾನತೆಯ ದಿನದಂದು, ಭಾರತದಲ್ಲಿ ಮಹಿಳೆಯರನ್ನು ರಕ್ಷಿಸುವ 5 ಮುಖ್ಯ ಸಾಂವಿಧಾನಿಕ ಹಕ್ಕುಗಳ ಬಗ್ಗೆ ತಿಳಿದುಕೊಳ್ಳೋಣ:

ಕೌಟುಂಬಿಕ ದೌರ್ಜನ್ಯ ವಿರುದ್ಧದ ಹಕ್ಕು(Domestic Violence) ಭಾರತೀಯ

ಸಂವಿಧಾನದ ಸೆಕ್ಷನ್ 498 ರ ಪ್ರಕಾರ, ಮಹಿಳೆಯರಿಗೆ (ಹೆಂಡತಿ, ತಾಯಿ, ಸಹೋದರಿ, ಸ್ತ್ರೀ ಲೈವ್-ಇನ್ ಪಾರ್ಟ್ನರ್ ) ಯಾರೇ ಆಗಿರಲಿ ಮೌಖಿಕವಾಗಿ, ಆರ್ಥಿಕವಾಗಿ ಅಥವಾ ಭಾವನಾತ್ಮಕ ಮತ್ತು ಲೈಂಗಿಕವಾಗಿ ದೌರ್ಜನ್ಯ  ಅನುಭವಿಸಿದ್ದಲ್ಲಿ ಅದನ್ನು  ಕೌಟುಂಬಿಕ ದೌರ್ಜನ್ಯ ಎಂದು ಪರಿಗಣಿಸಲಾಗುತ್ತದೆ. ಹಾಗೂ ಅದರಿಂದ ರಕ್ಷಿಸಿಕೊಳ್ಳುವ ಹಕ್ಕು ಮಹಿಳೆಯರಿಗಿದೆ. ಅಂತಹ ಕೌಟುಂಬಿಕ ದೌರ್ಜನ್ಯವನ್ನು ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ ಮತ್ತು ಜಾಮೀನು ರಹಿತ ಜೈಲು ಶಿಕ್ಷೆ ನೀಡಲಾಗುತ್ತದೆ.

ಇದನ್ನೂ ಓದಿ: ಸೆಪ್ಟೆಂಬರ್​ನಲ್ಲಿ ಎಷ್ಟು ಬ್ಯಾಂಕ್ ರಜೆಗಳಿದೆ ಗೊತ್ತಾ? ಇಲ್ಲಿದೆ ಲಿಸ್ಟ್

Zero ಎಫ್ಐಆರ್  ಹಕ್ಕು

ಘಟನೆ ನಡೆದ ಸ್ಥಳವನ್ನು ಲೆಕ್ಕಿಸದೆ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಮಹಿಳೆಯರಿಗೆ ಕಾನೂನುಬದ್ಧ ಹಕ್ಕಿದೆ. ಸುಪ್ರೀಂ ಕೋರ್ಟ್‌ನ ಈ ನಿರ್ಧಾರವು ಬಹಳ ಮುಖ್ಯವಾಗಿದೆ ಏಕೆಂದರೆ ಇದು ಸರಿಯಾದ ಪೊಲೀಸ್ ಠಾಣೆಯನ್ನು ಹುಡುಕುವಲ್ಲಿ ಸಮಯ ವ್ಯರ್ಥವಾಗುವುದರಿಂದ  ಅದೇ ಸಮಯದಲ್ಲಿ  ಅಪರಾಧಿ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಯಾವುದೇ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು. ಎಫ್‌ಐಆರ್ ಅನ್ನು ನಂತರ ಪೊಲೀಸ್ ಠಾಣೆಗೆ ವರ್ಗಾಯಿಸಬಹುದು.

ಕೆಲಸದ ಸ್ಥಳದಲ್ಲಿ ದೌರ್ಜನ್ಯ

ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ ಕಾಯಿದೆಯ ಪ್ರಕಾರ, ಮಹಿಳೆ ತನ್ನ ಕೆಲಸದ ಸ್ಥಳದಲ್ಲಿ ಯಾವುದೇ ರೀತಿಯ ಲೈಂಗಿಕ ಕಿರುಕುಳ ಅನುಭವಿಸಿದರೆ ಲಿಖಿತ ದೂರನ್ನು ಆಂತರಿಕ ದೂರು ಸಮಿತಿಗೆ (ಐಸಿಸಿ) ಸಲ್ಲಿಸಬಹುದು.

ಸಮಾನ ಪಾವತಿಗೆ ಹಕ್ಕು

ಇದು ಸಂವಿಧಾನಾತ್ಮಕ ಹಕ್ಕುಗಳಲ್ಲಿ ಒಂದಾಗಿದೆ, ಇದು ವೇತನ ಶ್ರೇಣಿಯ ಅಸಮಾನತೆಯ ವಿರುದ್ಧ ಮಹಿಳೆಯರು ಹೋರಾಡಲು ಸಹಾಯ ಮಾಡುತ್ತದೆ. ಸಮಾನ ಸಂಭಾವನೆ ಕಾಯಿದೆಯಡಿ ತಿಳಿಸಲಾದ  ಹಕ್ಕುಗಳ ಪ್ರಕಾರ ಮಹಿಳೆಯರಿಗೆ ಸಂಬಳ ನೀಡುವಾಗ ಲಿಂಗ ತಾರತಮ್ಯ ಮಾಡಬಾರದು.

ಹಿಂಬಾಲಿಸುವವರ ವಿರುದ್ಧ ರಕ್ಷಣೆಯ

ಹಕ್ಕುಮಹಿಳೆಯನ್ನು ಆನ್​ ಲೈನ್​ ನಲ್ಲಿ ಮತ್ತು ರಸ್ತೆ ಅಥವಾ ಬೇರೆ ಪ್ರದೇಶಗಳಲ್ಲಿ ಹಿಂಬಾಲಿಸಿದರೆ, ಮತ್ತು ಆಕೆಯೊಂದಿಗೆ ಬಲವಂತವಾಗಿ ಮಾತನಾಡಲು ಪ್ರಯತ್ನಿಸಿದರೆ ಐಪಿಸಿ ಸೆಕ್ಷನ್ 354 ಡಿ ಪ್ರಕಾರ,  ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.

 
Published by:Sandhya M
First published: