FACT CHECK: ಪ್ರಧಾನಿ ಮೋದಿ ಹೆಂಡತಿ ಜಶೋಧ ಬೆನ್ ನಿಜಕ್ಕೂ ಸಿಎಎ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ರಾ?

ಸ್ವತಃ ಮೋದಿ ಹೆಂಡತಿಯೇ ಸಿಎಎ ವಿರುದ್ಧ ನಿಂತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕೆಲಸಕ್ಕೆ ಹಲವರು ಮುಂದಾಗಿದ್ದರು. ರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳನ್ನು ಈ ಸುದ್ದಿಯನ್ನು ಬಿತ್ತರಿಸುವ ಮೂಲಕ ಜಶೋಧಾ ಬೆನ್​ ಬೆಳಕರಿಯುವುದರ ಒಳಗಾಗಿ ಸುದ್ದಿಯ ಕೇಂದ್ರವಸ್ತುವಾಗಿದ್ದರು.

MAshok Kumar | news18-kannada
Updated:January 23, 2020, 7:47 PM IST
FACT CHECK: ಪ್ರಧಾನಿ ಮೋದಿ ಹೆಂಡತಿ ಜಶೋಧ ಬೆನ್ ನಿಜಕ್ಕೂ ಸಿಎಎ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ರಾ?
ಕೆಲವರ ಮುಖಪುಟ ಬರವಣಿಗೆಗೆ ಬಳಕೆಯಾಗಿರುವ ಜಶೋಧಾ ಬೆನ್​ ಪೋಟೋ.
  • Share this:
ಪ್ರಧಾನಿ ನರೇಂದ್ರ ಮೋದಿ ಅವರ ಹೆಂಡತಿ ಜಶೋಧಾ ಬೆನ್ ಸಾರ್ವಜನಿಕವಾಗಿ ಅಷ್ಟಾಗಿ ಕಾಣಿಸಿಕೊಳ್ಳದ ವ್ಯಕ್ತಿ. ಆದರೆ, ಇತ್ತೀಚೆಗೆ ಅವರ ಪೋಟೋ ಒಂದು ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು. "ದೆಹಲಿಯ ಶಹೀನ್ ಭಾಗ್​ನಲ್ಲಿ ನಡೆದ ಸಿಎಎ ವಿರೋಧಿ ರ‍್ಯಾಲಿಯಲ್ಲಿ ಭಾಗಿಯಾದ ಮೋದಿ ಹೆಂಡತಿ ಜಶೋಧಾ ಬೆನ್" ಎಂಬ ಒಕ್ಕಣೆಯೊಂದಿಗೆ ಹರಿದಾಡಿದ ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ದೀಪಿಕಾ ಸಿಂಗ್ ರಾವತ್ ಎಂಬುವವರು ಜಶೋಧಾ ಬೆನ್ ಮುಸ್ಲಿಂ ಮಹಿಳೆಯರ ಜೊತೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವ ಈ ಚಿತ್ರವನ್ನು ತಮ್ಮ ಖಾಸಗಿ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇವರ ಬೆನ್ನಿಗೆ ಸಾಲು ಸಾಲು ಜನ ಈ ಪೊಟೋವನ್ನು ಹಂಚಿಕೊಳ್ಳುವ ಮೂಲಕ ದೊಡ್ಡ ಮಟ್ಟದ ಸುದ್ದಿಗೆ ಈ ಚಿತ್ರ ಗ್ರಾಸವಾಗಿತ್ತು.

ಜಶೋಧಾ ಬೆನ್.

ಸ್ವತಃ ಮೋದಿ ಹೆಂಡತಿಯೇ ಸಿಎಎ ವಿರುದ್ಧ ನಿಂತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆ ಮೂಲಕ ಸಾಮಾಜಿಕ ಜಾಲತಾಣದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಜನಾಭಿಪ್ರಾಯ ಮೂಡಿಸುವ ಕೆಲಸಕ್ಕೆ ಹಲವರು ಮುಂದಾಗಿದ್ದರು. ರಾಷ್ಟ್ರೀಯ ಮಟ್ಟದ ಸುದ್ದಿ ವಾಹಿನಿಗಳನ್ನು ಈ ಸುದ್ದಿಯನ್ನು ಬಿತ್ತರಿಸುವ ಮೂಲಕ ಜಶೋಧಾ ಬೆನ್​ ಬೆಳಕರಿಯುವುದರ ಒಳಗಾಗಿ ಸುದ್ದಿಯ ಕೇಂದ್ರವಸ್ತುವಾಗಿದ್ದರು.

ಜಶೋಧಾ ಬೆನ್.

ಆದರೆ, ಈ ಪೋಟೋ ಕುರಿತ ಸತ್ಯಾ ಸತ್ಯತೆ ಏನು? ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಸುದ್ದಿಯ ಆಳಕ್ಕೆ ಇಳಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.

ಜಶೋಧಾ ಬೆನ್ ಅಸಲಿ ಪೋಟೋ.
ಅಸಲಿಗೆ ಇದು ಮೂರು ವರ್ಷಗಳ ಹಿಂದೆ ತೆಗೆಯಲಾಗಿರುವ ಪೋಟೋ. ಮುಂಬೈನಲ್ಲಿರುವ ಸ್ಲಂಗಳನ್ನು ತೆರೆವುಗೊಳಿಸಲು ಮುಂದಾದ ಸರ್ಕಾರದ ಕ್ರಮದ ವಿರುದ್ದ ಜಶೋಧಾ ಬೆನ್ ಸ್ಥಳೀಯರ ಜೊತೆಗೆ ಒಟ್ಟಾಗಿ ಪ್ರತಿಭಟನೆ ನಡೆಸಿದ್ದರು. ಆದರೆ, ಪ್ರಸ್ತುತ ಸಿಎಎ ವಿರೋಧಿ ರ‍್ಯಾಲಿ ದೊಡ್ಡ ಮಟ್ಟದಲ್ಲಿ ಸುದ್ದಿಗೆ ಗ್ರಾಸವಾಗಿರುವ ಹಿನ್ನೆಲೆಯಲ್ಲಿ ಈ ಪೋಟೋವನ್ನು ತಿರುಚಿ ಸರ್ಕಾರದ ವಿರುದ್ಧ ಜನರನ್ನು ಕೆರಳಿಸುವ ದುರದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.

ಇದನ್ನೂ ಓದಿ : ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ಮಹತ್ವದ ಆದೇಶ; ರೋಹಿಂಗ್ಯಾ ನರಮೇಧವನ್ನು ತಡೆಯಲು ಮಯನ್ಮಾರ್​ಗೆ ತಾಕೀತು
First published:January 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading