Election Results 2021: ತಮಿಳುನಾಡು, ಕೇರಳ, ಬಂಗಾಳ ಸೇರಿದಂತೆ ಪಂಚ ರಾಜ್ಯಗಳ ಅಂತಿಮ ಫಲಿತಾಂಶ ಇಲ್ಲಿದೆ!

ತಮಿಳುನಾಡು-ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದ್ದರೆ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಗೆಲುವು ಸಾಧಿಸುವ ಮೂಲಕ ನಿಟ್ಟುಸಿರು ಬಿಟ್ಟಿದೆ.

ಪ್ರಮುಖ ನಾಯಕರು.

ಪ್ರಮುಖ ನಾಯಕರು.

  • Share this:
    ಕೊರೋನಾ ಸಂಕಷ್ಟದಲ್ಲೂ ಸಾಕಷ್ಟು ಕುತೂಹಲ ಮೂಡಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಭಾಗಶಃ ಮುಗಿದಿದೆ. ದಕ್ಷಿಣದಲ್ಲಿ ತಮಿಳುನಾಡು-ಕೇರಳ ಚುನಾವಣೆ ಫಲಿತಾಂಶದ ಮೇಲೆ ಎಲ್ಲರ ಗಮನವಿದ್ದರೆ, ಉತ್ತರದಲ್ಲಿ ಪಶ್ಚಿಮ ಬಂಗಾಳದ ಫಲಿತಾಂಶ ಇಡೀ ದೇಶದ ಗಮನ ಸೆಳೆದಿತ್ತು. ತಮಿಳುನಾಡು-ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದ್ದರೆ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ಗೆಲುವು ಸಾಧಿಸುವ ಮೂಲಕ ನಿಟ್ಟುಸಿರು ಬಿಟ್ಟಿದೆ. ಆದರೆ, ಬಿಜೆಪಿ ತುಂಬಾ ನಿರೀಕ್ಷೆ ಮೂಡಿಸಿದ್ದ ಬಂಗಾಳದಲ್ಲಿ ಎಡವಿದೆ. ಇನ್ನೂ ಟಿಎಂಸಿ ಬಹುಮತ ಸಾಧಿಸಿದ್ದು, ಮಮತಾ ಬ್ಯಾನರ್ಜಿ ಮತ್ತೊಂದು ಅವಧಿಗೆ ಸಿಎಂ ಆಗುವುದು ಖಚಿತವಾಗಿದೆ.

    ಮಮತಾ ಬ್ಯಾನರ್ಜಿ ಸ್ಪರ್ಧಿಸಿದ್ದ ನಂದಿಗ್ರಾಮದ ಫಲಿತಾಂಶ ಸಾಕಷ್ಟು ಗೊಂದಲ ಮೂಡಿಸಿದ್ದರೂ, ಕೊನೆಗೆ ಗೆದ್ದವರು ಯಾರು ಎಂದು ಈವರೆಗೆ ಸ್ಪಷ್ಟವಾಗಿಲ್ಲ. ಈ ಮೂಲಕ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಒಂದು ಕಾಲದ ಆಪ್ತ, ಬಿಜೆಪಿಯ ಅಭ್ಯರ್ಥಿ ಸುವೆಂಧು ಅಧಿಕಾರಿ ವಿರುದ್ದ ಕೊನೆಗೂ ಸವಾಲಿನಂತೆ ಗೆಲುವು ಸಾಧಿಸಿದರೆ ಎಂಬುದು ಗೋಡೆ ಮೇಲಿನ ದೀಪದಂತಾಗಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ "ನಂದಿಗ್ರಾಮದ ಜನತೆ ಯಾವುದೇ ತೀರ್ಪು ಕೊಟ್ಟರೂ ಸ್ವೀಕರಿಸುತ್ತೇನೆ. ಆದರೆ ನಾವು ಇಡೀ ರಾಜ್ಯವನ್ನು ಗೆದ್ದಿದ್ದೇವೆ. ಇದುವರೆಗೆ ಏನಾಗಿದೆಯೊ ಅದು ನಮಗೆ ಒಳಿತಾಗಿದೆ" ಎಂದು ತಿಳಿಸಿದ್ದಾರೆ.

    ರಾಜ್ಯದ ಎಲ್ಲಾ 292 ಕ್ಷೇತ್ರಗಳಲ್ಲಿ ಎಣಿಕೆ ಮುಕ್ತಾಯದ ಹಂತಕ್ಕೆ ತಲುಪಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸ್ಪಷ್ಟ ಬಹುಮತ ಪಡೆದು ಇನ್ನೂ ಮುನ್ನಡೆಯಲ್ಲಿದೆ.

    ಪಶ್ಚಿಮಬಂಗಾಳ – 292 ಕ್ಷೇತ್ರಗಳು

    TMC ► 212 Wins | ಮುನ್ನಡೆ ► 03
    BJP ► Wins 73 | ಮುನ್ನಡೆ ► 02
    Cong & Left ►Wins 1 | ಮುನ್ನಡೆ ► 0
    ಇತರೆ ► Wins 1 | ಮುನ್ನಡೆ ► 0

    ಕೇರಳ – 140 ಕ್ಷೇತ್ರಗಳು

    ಕೇರಳದ ರಾಜಕೀಯ ಸಂಪ್ರದಾಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಬದಲಾಯಿಸಿದೆ. ನಾಲ್ಕು ದಶಕಗಳ ನಂತರ ಕೇರಳದಲ್ಲಿ ಸತತವಾಗಿ ಮೈತ್ರಿಕೂಟವೊಂದು ಅಧಿಕಾರ ಹಿಡಿಯಲಿದೆ. ಆದರೆ ಈ ಹಿಂದೆ ಇದ್ದ ಒಂದು ಕ್ಷೇತ್ರವನ್ನು ಕೂಡಾ ಬಿಜೆಪಿ ಕಳೆದುಕೊಂಡಿದೆ.

    ಆರಂಭದಲ್ಲಿ ಕೇರಳದ ಪಾಲಕ್ಕಾಡ್, ಕಾಸರಗೋಡ್‌, ನೇಮಂನಲ್ಲಿ ಬಿಜೆಪಿ ಮುನ್ನಡೆಯಲ್ಲಿತ್ತು. ಇದೀಗ ಎಲ್ಲಾ ಕ್ಷೇತ್ರದಲ್ಲೂ ಬಿಜೆಪಿ ಮುಗ್ಗರಿಸಿದೆ.

    ಮುಖ್ಯಮಂತ್ರಿ ಪಿಣರಾಯಿ ಈ ಹಿಂದೆ ಬಿಜೆಪಿಗೆ ಇರುವ ಒಂದು ಕ್ಷೇತ್ರವನ್ನು ಕೂಡಾ ‘ಕ್ಲೋಸ್’ ಮಾಡುವುದಾಗಿ ಹೇಳಿದ್ದರು. ಇದೀಗ ಕೇರಳದಲ್ಲಿ ಎಲ್‌ಡಿಎಫ್‌ 99 ಕ್ಷೇತ್ರಗಳೊಂದಿಗೆ ಬಹುಮತ ಪಡೆದಿದೆ.

    ಸಿಪಿಎಂ ನೇತೃತ್ವದ LDF ► 99 Wins
    ಕಾಂಗ್ರೆಸ್ ನೇತೃತ್ವದ UDF ► 41
    ಬಿಜೆಪಿ ನೇತೃತ್ವದ NDA► 0 Wins

    ತಮಿಳುನಾಡು- 234 ಕ್ಷೇತ್ರಗಳು

    ತಮಿಳುನಾಡಿನಲ್ಲಿ ಚುನಾವಣೋತ್ತರ ಸಮೀಕ್ಷೆಗಳ ಮಾಹಿತಿಯಂತೆ ವಿರೋಧ ಪಕ್ಷವಾದ ಡಿಎಂಕೆ ದಶಕಗಳ ನಂತರ ಅಧಿಕಾರ ಹಿಡಿಯುವತ್ತ ಹೊರಟಿದೆ. ಆದರೆ ಡ್ರಾವಿಡನಾಡಿನಲ್ಲಿ ಬಿಜೆಪಿಯು ಮೊದಲ ಬಾರಿಗೆ ಖಾತೆಯನ್ನು ತೆರೆದಿದೆ. 234 ಕ್ಷೇತ್ರಗಳ ಮತ ಎಣಿಕೆಯು ಅಂತಿಮ ಹಂತದಲ್ಲಿದೆ.

    DMK ಒಕ್ಕೂಟ ► 125 Wins | ಮುನ್ನಡೆ ► 33
    AIADMK ಒಕ್ಕೂಟ ► 51 Wins | ಮುನ್ನಡೆ ► 25
    (ಬಿಜೆಪಿ 2 ಕ್ಷೇತ್ರಗಳಲ್ಲಿ ಮುನ್ನಡೆ, ಮೊದಲ ಬಾರಿಗೆ ತಮಿಳುನಾಡಿನಲ್ಲಿ 2 ಕ್ಷೇತ್ರವನ್ನು ಗೆದ್ದುಕೊಂಡಿದೆ)

    ಇದನ್ನೂ ಓದಿ: Election Results 2021: ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿಗೆ ಸೋಲು; ಕೋರ್ಟ್​ ಮೋರೆ ಹೋಗಲಿರುವ ದೀದಿ!

    ಅಸ್ಸಾಂ – 126 ಕ್ಷೇತ್ರಗಳು

    ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಆಡಳಿತ ಪಕ್ಷಗಳ ಮೈತ್ರಿಕೂಟಕ್ಕೆ ಬಹುಮತ ದೊರಕಿದೆ. ಈ ಮೂಲಕ ಆಡಳಿತರೂಢ ಬಿಜೆಪಿ ನೇತೃತ್ವದ ಮೈತ್ರಿ ಮತ್ತೆಅಧಿಕಾರ ಹಿಡಿಯುವತ್ತ ದಾಪುಗಾಲಿಟ್ಟಿದೆ.

    BJP ಮೈತ್ರಿ ► 74 Wins | ಮುನ್ನಡೆ ► 1
    ಕಾಂಗ್ರೆಸ್ ಮೈತ್ರಿ ► 47 Wins | ಮುನ್ನಡೆ ► 3
    ಇತರೆ ► 1 Wins

    ಪುದುಚೇರಿ – 30 ಕ್ಷೇತ್ರಗಳು

    ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಬಿಜೆಪಿ ಮೈತ್ರಿಕೂಟಕ್ಕೆ ಬಹುಮತ ದೊರಕಿದೆ. ಇಲ್ಲಿ ಈ ಹಿಂದೆ ಬಿಜೆಪಿಯು ಆಪರೇಷನ್ ಕಮಲ ನಡೆಸಿ ಸರ್ಕಾರವನ್ನು ಕೆಡವಿಹಾಕಿತ್ತು. 30 ಕ್ಷೇತ್ರಗಳಲ್ಲಿ ಇದುವರೆಗೂ 29 ಕ್ಷೇತ್ರಗಳ ಮತ ಎಣಿಕೆ ನಡೆದಿದೆ.

    BJP ಮೈತ್ರಿ ► 15 Wins | ಮುನ್ನಡೆ ► 0
    ಕಾಂಗ್ರೆಸ್ ಮೈತ್ರಿ ► 7 Wins | ಮುನ್ನಡೆ ► 2
    ಪಕ್ಷೇತರ ► 4 Wins | ಮುನ್ನಡೆ ► 1
    Published by:MAshok Kumar
    First published: