ಈ ಸ್ವಿಮ್ಮಿಂಗ್ ಪೂಲ್​ನಲ್ಲಿ ಈಜೋಕೆ ಭಾರೀ ಧೈರ್ಯ ಬೇಕು, ಇದು ಪ್ರಪಂಚದ ಅತ್ಯಂತ ಆಳದ ಈಜುಕೊಳ !

ದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅವರು ಜೂನ್ ತಿಂಗಳಲ್ಲಿಯೇ ಬಂದು ಈ ಅತಿದೊಡ್ಡ ಪೂಲ್​ನ ಆಳವನ್ನು ಪರಿಶೀಲಿಸಿ ಹೋಗಿದ್ದಾರೆ. ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದ ಪ್ರಕಾರ ಪೂಲ್ 60.2 ಮೀಟರ್ ಆಳವಿದ್ದು, ಅದರಲ್ಲಿ ಬೇರೆ ಬೇರೆ ಹಂತಗಳಲ್ಲಿ ಅನೇಕ ತರಹದ ವಿನ್ಯಾಸಗಳನ್ನು ತಯಾರಿಸಿದ್ದು ಈಜುಗಾರರಿಗೆ ತುಂಬಾ ಬೇರೆ ತರಹದ್ದೇ ಅನುಭವನ್ನು ಕಟ್ಟಿ ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ

ಅತಿ ದೊಡ್ಡ ಪೂಲ್​

ಅತಿ ದೊಡ್ಡ ಪೂಲ್​

  • Share this:
ನಾವೆಲ್ಲಾ ಸ್ವಿಮ್ಮಿಂಗ್ ಪೂಲ್ ಎಂದರೆ ಒಂದು ಅಂದಾಜು ಆರು ಅಡಿ ಅಬ್ಬಬ್ಬಾ ಅಂದರೆ ಹತ್ತು ಹನ್ನೆರಡು ಅಡಿ ಆಳದ್ದನ್ನು ನೋಡಿರಬಹುದು ಅಥವಾ ಕೇಳಿರಲೂಬಹುದು. ಆದರೆ ದುಬೈಯಲ್ಲಿ ನಿರ್ಮಿಸಿದಂತಹ ಪೂಲ್​ನ ವಿಡಿಯೋವನ್ನು ನೀವು ನೋಡಿದರೆ, ಅಬ್ಬಬ್ಬಾ ಎಷ್ಟೊಂದು ಆಳವಾಗಿದೆ ಈ ಪೂಲ್ ಮತ್ತು ಎಷ್ಟೊಂದು ಭವ್ಯವಾಗಿ ನಿರ್ಮಿಸಿದ್ದಾರೆ ಇದನ್ನು ಎಂದು ಮನಸ್ಸಿನಲ್ಲಿ ಅಂದುಕೊಳ್ಳುವುದಂತೂ ಗ್ಯಾರಂಟಿ. ಹೌದು, ಇದರ ಹೆಸರು ದುಬೈನ ಡೀಪ್ ಡೈವ್ ಪೂಲ್ ಅಂತ ಇಟ್ಟಿದ್ದಾರೆ. ದುಬೈನ ರಾಜಕುಮಾರ ಹಮ್ಧನ್ ಬಿನ್ ಮೊಹಮ್ಮದ್ ಅಲ್ ಮಕ್ತೋಮ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಪ್ರಪಂಚದಲ್ಲೇ ಅತೀ ದೊಡ್ಡ ಮತ್ತು ಆಳವಾದಂತಹ ಪೂಲ್ನ ವಿಡಿಯೋವನ್ನು ಹಾಕಿಕೊಂಡಿದ್ದು, ಹಲವಾರು ಜನರಲ್ಲಿ ಈ ವಿಶ್ವದ ಅತಿ ದೊಡ್ಡ ಪೂಲ್ ಬಗ್ಗೆ ಆಸಕ್ತಿ ಹುಟ್ಟಿಸಿರುವುದಂತೂ ನಿಜ.

ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಾಕಿಕೊಂಡ ವಿಡಿಯೋದಲ್ಲಿ ಸ್ವಿಮ್ಮರ್​ಗಳು ಈ ಆಳವಾದಂತಹ ಪೂಲ್ಗೆ ಧುಮುಕುತ್ತಿರುವುದನ್ನ ಕಾಣಬಹುದಾಗಿದೆ. ಅದರ ಕೆಳಗೆ ಹಮ್ಧನ್ ಬಿನ್ ಮೊಹಮ್ಮದ್ ಅಲ್ ಮಕ್ತೋಮ್ ಅವರು ಇಡೀ ಪ್ರಪಂಚದ ಜನರನ್ನೇ 60 ಮೀಟರ್ (196 ಅಡಿ) ಆಳವಿರುವ ದುಬೈನ ಡೀಪ್ ಡೈವ್ ಪೂಲ್ ಎದುರು ನೋಡುತ್ತಿದೆ ಎಂದು ಚಿಕ್ಕ ಮತ್ತು ಸುಂದರವಾದಂತಹ ಶೀರ್ಷಿಕೆಯನ್ನು ಬರೆದಿದ್ದಾರೆ.ದುಬೈನ ರಾಜಕುಮಾರ ಅವರು ತಮ್ಮ ಟ್ವಿಟ್ಟರ್​ನಲ್ಲಿ ಹಾಕಿಕೊಂಡ ವಿಡಿಯೋದಲ್ಲಿ ಜನರು ಈ ಆಳವಾದಂತಹ ಪೂಲ್ ಗೆ ಧುಮುಕಿ ಸಮುದ್ರದಾಳದಲ್ಲಿ ಈಜುವಂತೆ ಪೂರ್ತಿ ಪೂಲ್ ಅನ್ನು ಸುತ್ತಿದ್ದು, ಪೂಲ್ ಅನ್ನು ತುಂಬಾ ವೈಭವ ಪೂರಕವಾಗಿ ನಿರ್ಮಿಸಿದ್ದು ಕಂಡು ಬರುತ್ತದೆ. ಅಬ್ಬಾ ಎಂತಹ ಅನುಭವ ವಿಡಿಯೋ ನೋಡಿದರೆ ಮೈ ಜುಮ್ಮೆನಿಸುತ್ತದೆ. ಇನ್ನೂ ಪೂಲ್ ಇರುವ ಜಾಗಕ್ಕೆ ಹೋಗಿ ಅದರಲ್ಲಿ ನೋಡಿದರೆ ಅಬ್ಬಾ ಅದೊಂದು ಬೇರೆಯ ಸ್ವರ್ಗವೇ ಸರಿ .

ಇದನ್ನೂ ಓದಿ: ಮೋಸದಾಟ ಆಡಿದ ದಿವ್ಯಾ ಉರುಡುಗ: ಆರೋಪಿಸಿದ ಶಮಂತ್ ಗೌಡ​-ಪ್ರಶಾಂತ್​ ಸಂಬರಗಿ

ದ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅವರು ಜೂನ್ ತಿಂಗಳಲ್ಲಿಯೇ ಬಂದು ಈ ಅತಿದೊಡ್ಡ ಪೂಲ್​ನ ಆಳವನ್ನು ಪರಿಶೀಲಿಸಿ ಹೋಗಿದ್ದಾರೆ. ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದ ಪ್ರಕಾರ ಪೂಲ್ 60.2 ಮೀಟರ್ ಆಳವಿದ್ದು, ಅದರಲ್ಲಿ ಬೇರೆ ಬೇರೆ ಹಂತಗಳಲ್ಲಿ ಅನೇಕ ತರಹದ ವಿನ್ಯಾಸಗಳನ್ನು ತಯಾರಿಸಿದ್ದು ಈಜುಗಾರರಿಗೆ ತುಂಬಾ ಬೇರೆ ತರಹದ್ದೇ ಅನುಭವನ್ನು ಕಟ್ಟಿ ಕೊಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಇದು ಮೊದಲು ಖಾಸಗಿ ಉಪಯೋಗಕ್ಕೆ ಎಂದು ಹೇಳಲಾಗಿತ್ತು. ಆದರೆ, ಈಗ ಜುಲೈ ತಿಂಗಳಿಂದ ಸಾರ್ವಜನಿಕರಿಗಾಗಿ ತೆರೆದಿದೆ.

ಇದನ್ನೂ ಓದಿ: Bigg Boss 8 Kannada: ಎಡವಟ್ಟಿನ ಮೇಲೆ ಎಡವಟ್ಟು: ಮತ್ತೆ ಟ್ರೋಲ್​ ಆಗುತ್ತಿರುವ ಬಿಗ್​ ಬಾಸ್​ ಸ್ಪರ್ಧಿ ಕೆ ಪಿ ಅರವಿಂದ್​..!

ದುಬೈನ ಡೀಪ್ ಡೈವ್ ಪೂಲ್ ಈಗ ಎಲ್ಲರಿಗೂ ತನ್ನತ್ತ ಬರಮಾಡಿಕೊಳ್ಳುತ್ತಿದ್ದು, ಈಜು ಉತ್ಸಾಹಿಗಳು ಮತ್ತು ಯುವ ಉತ್ಸಾಹಿಗಳು ಸಹ ಬಂದು ಈ ಪೂಲ್ ನಲ್ಲಿ ಧುಮುಕಿ ಭವ್ಯವಾದಂತಹ ಪೂಲ್ ನ ವೀಕ್ಷಣೆ ಮಾಡಬಹುದು ಎಂದು ಹೇಳಲಾಗಿದೆ. ಪೊಲ್ಯಾನ್ಡ್ನಲ್ಲಿರುವಂತಹ 45.5 ಮೀಟರ್ (150 ಅಡಿ) ಆಳದ ಡೀಪ್ ಸ್ಪಾಟ್ ಎಂಬ ಹೆಸರಿನ ಪೂಲ್ ಅತೀ ಆಳವಾದಂತಹ ಪೂಲ್ ಆಗಿತ್ತು, ಆದರೆ ಈಗ ದುಬೈನ ಡೀಪ್ ಡೈವ್ ಪೂಲ್ ಆ ಹಿರಿಮೆಯನ್ನು ತನ್ನದಾಗಿಸಿಕೊಂಡಿದೆ. ಟ್ವಿಟ್ಟರ್ ಅಕೌಂಟ್ ನಲ್ಲಿ ಈ ಹೊಸ ಪೂಲ್ನ ವಿಡಿಯೋ ನೋಡಿದ ಅನೇಕ ಜನರು ಇದಕ್ಕೆ ಭೇಟಿ ನೀಡಲು ಕಾತುರತೆಯಿಂದ ಕಾಯುತ್ತಿದ್ದೇವೆ ಎಂದು ಬರೆದಿದ್ದಾರೆ.
Published by:Anitha E
First published: