BH Series: ಹೊಸ ಬಿಎಚ್ ಸರಣಿಯ ವಾಹನ ಸಂಖ್ಯೆ ಪಡೆಯುವುದು ಹೇಗೆ? ಇಲ್ಲಿದೆ ವಿಧಾನ

ವಾಹನಗಳ ನೊಂದಣಿಯಲ್ಲಿನ ಕೆಲ ಗೊಂದಲಗಳನ್ನ ತಪ್ಪಿಸಲು ಕೇಂದ್ರ ಸರ್ಕಾರದ ಹೊಸದಾದ ಭಾರತ್ ಸರಣಿಯ ನೊಂದಣಿ ಸಂಖ್ಯೆಯ ಕ್ರಮವನ್ನು ಜಾರಿಗೆ ತಂದಿದೆ. ಬಿಎಚ್ ಸರಣಿಯ ವಾಹನ ನೊಂದಣಿ ಸಂಖ್ಯೆ ಪಡೆಯುವ ವಿಧಾನ ಇಲ್ಲಿದೆ:

ವಾಹನ ನೊಂದಣಿ

ವಾಹನ ನೊಂದಣಿ

  • News18
  • Last Updated :
  • Share this:
    ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವ ಅಥವಾ ಕೆಲಸಕ್ಕೆ ಹೋಗುವ ಜನರು ತಮ್ಮ ವಾಹನಗಳನ್ನ ಜೊತೆಗೆ ಕೊಂಡೊಯ್ಯಬೇಕಾಗುತ್ತದೆ. ಆಗ ಹೊಸ ಸ್ಥಳದಲ್ಲಿ ಪ್ರತ್ಯೇಕವಾಗಿ ವಾಹನದ ನೊಂದಣಿ ಸಂಖ್ಯೆ ಪಡೆಯಬೇಕಾಗುತ್ತದೆ. ಪದೇ ಪದೇ ರಾಜ್ಯಗಳನ್ನ ಬದಲಿಸುವವರಿಗೆ ಇದು ದೊಡ್ಡ ತಲೆನೋವಾಗುತ್ತದೆ. ಇದನ್ನ ತಪ್ಪಿಸಲು ಕೇಂದ್ರ ಸಾರಿಗೆ ಇಲಾಖೆಯು ಹೊಸ ರೀತಿಯ ನೊಂದಣಿ ಸರಣಿಯ ಸಂಖ್ಯೆಯ ವ್ಯವಸ್ಥೆ ಮಾಡಿದೆ. ಮುಂಬರುವ ಎಲ್ಲಾ ವಾಹನಗಳಿಗೂ ಭಾರತ್ ಸರಣಿಯ ನೊಂದಣಿ ಸಂಖ್ಯೆ ನೀಡಲಾಗುತ್ತದೆ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವಾಹನಗಳನ್ನ ರವಾನೆ ಮಾಡಬೇಕಾದರೆ ನೊಂದಣಿಯನ್ನೂ ರವಾನೆ ಮಾಡುವ ಅಗತ್ಯ ಇರುವುದಿಲ್ಲ.

    ರಕ್ಷಣಾ ಇಲಾಖೆಯ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಉದ್ಯೋಗಿಗಳಿಗೆ ಈ ವ್ಯವಸ್ಥೆ ಉಪಯೋಗಕ್ಕೆ ಬರುತ್ತದೆ. ಹಾಗೆಯೇ, ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಕಚೇರಿ ಹೊಂದಿರುವ ಖಾಸಗಿ ಕಂಪನಿಗಳ ಉದ್ಯೋಗಿಗಳೂ ಇದರ ಪ್ರಯೋಜನ ಪಡೆಯಬಹುದು. ಈ ಮೊದಲು ಇದ್ದ ಕಾನೂನಿನ ಪ್ರಕಾರ, ವಾಹನದ ಮಾಲೀಕ ಬೇರೆ ರಾಜ್ಯಕ್ಕೆ ಹೋದರೆ ಅಲ್ಲಿ ಅದೇ ನೊಂದಣಿ ಸಂಖ್ಯೆಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಇಟ್ಟುಕೊಳ್ಳುವಂತಿಲ್ಲ. ಒಂದು ವರ್ಷಕ್ಕಿಂತ ಮೇಲ್ಪಟ್ಟು ಇರಬೇಕೆಂದರೆ ಆ ರಾಜ್ಯದ ಹೊಸ ನೊಂದಣಿ ಸಂಖ್ಯೆ ಪಡೆಯಬೇಕಾಗುತ್ತದೆ. ಈಗ ಭಾರತ್ ಸರಣಿಯ ನೊಂದಣಿ ವ್ಯವಸ್ಥೆಯಿಂದ ಈ ರಗಳೆಯಿಂದ ಮುಕ್ತಗೊಳ್ಳುವ ನಿರೀಕ್ಷೆ ಇದೆ.

    ಭಾರತ್ ಸರಣಿಯ ನೊಂದಣಿ ಸಂಖ್ಯೆ ಪಡೆಯುವ ಕ್ರಮಗಳು: 

    1) ವಾಹನ ಮಾಲೀಕರು ಮೊದಲು ತಾವಿರುವ ರಾಜ್ಯದಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (NOC) ಪಡೆಯಬೇಕು.

    2) ಹೊಸ ರಾಜ್ಯದಲ್ಲಿ ಪ್ರೋರೇಟಾ ಆಧಾರದ ಮೇಲೆ (ಅನುಗುಣವಾದ ಮೊತ್ತ) ರೋಡ್ ಟ್ಯಾಕ್ಸ್ ಕಟ್ಟಬೇಕು. ಆ ಬಳಿಕ ಹೊಸ ನೊಂದಣಿ ಸಂಖ್ಯೆ ನೀಡಲಾಗುತ್ತದೆ.

    3) ತನ್ನ ಮೊದಲಿನ ರಾಜ್ಯದಲ್ಲಿ ರಸ್ತೆ ತೆರಿಗೆಯ ರೀಫಂಡ್ ಪಡೆಯಲು ಅರ್ಜಿ ಸಲ್ಲಿಸಬೇಕು. ಆದರೆ, ಈ ಪ್ರಕ್ರಿಯೆ ಸ್ವಲ್ಪ ತ್ರಾಸದಾಯಕ ಅನಿಸಬಹುದು.

    ಇದನ್ನೂ ಓದಿ: Rs 1 Lunch- ಕೇವಲ 1 ರೂಗೆ ಊಟ; ಬಡವರ ಹೊಟ್ಟೆ ತುಂಬಿಸುತ್ತಿರುವ 80 ಯುವಕರ ತಂಡ

    ಭಾರತ್ ಸರಣಿಯ ನೊಂದಣಿ ಸಂಖ್ಯೆಯ ಸ್ವರೂಪ:

    ಹೊಸದಾಗಿ ಜಾರಿಗೆ ತರಲಾಗಿರುವ ಭಾರತ್ ಸರಣಿ (BH Series) ವಾಹನ ನೊಂದಣಿ ಸಂಖ್ಯೆ YY BH #### XX ಸ್ವರೂಪದಲ್ಲಿರುತ್ತದೆ. ಇಲ್ಲಿ YY ಎಂದರೆ ಮೊದಲು ನೊಂದಣಿಯಾದ ವರ್ಷವಾಗಿರುತ್ತದೆ. BH ಎಂದರೆ ಭಾರತ್ ಸೀರೀಸ್​ನ ಕೋಡ್ ನೇಮ್ ಆಗಿರುತ್ತದೆ. #### ಎಂಬುದು ಯಾದೃಚ್ಛಿಕವಾಗಿ (Ramdom ಆಗಿ) 0000-9999ರವರೆಗೆ ನೀಡುವ ಸಂಖ್ಯೆಯಾಗಿರುತ್ತದೆ. ಕೊನೆಯಲ್ಲಿರುವ XX ಎಂದರೆ AA ಯಿಂದ ZZ ವರೆಗೂ ಯಾವುದೇ ಆಂಗ್ಲ ಅಕ್ಷರಗಳಾಗಿರಬಹುದು.

    ಭಾರತ್ ಸರಣಿ ಅಡಿ ನೊಂದಣಿ ಆದರೆ ಪ್ರತೀ 2, 4, 6, ಅಥವಾ 8 ವರ್ಷಗಳಿಗೆ ವಾಹನ ತೆರಿಗೆ ನೀಡಬೇಕಾಗುತ್ತದೆ. 14ನೇ ವರ್ಷದಿಂದ ಮಾಲೀಕರು ಪ್ರತೀ ವರ್ಷ ತೆರಿಗೆ ಕಟ್ಟಬೇಕಾಗುತ್ತದೆ. ನಿನ್ನೆಯಿಂದ ಈ ಹೊಸ ಸೌಲಭ್ಯ ಜಾರಿಗೆ ಬಂದಿದೆ.

    ಇದನ್ನೂ ಓದಿ: Cheque Rule Change: ಇನ್ಮುಂದೆ ಈ ರೀತಿ ಚೆಕ್ ಬರೆದರೆ ಚೆಕ್ ಬೌನ್ಸ್ ಆಗುತ್ತೆ ಹುಷಾರ್..!

    (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
    Published by:Vijayasarthy SN
    First published: