Russia-Ukraine War: ಉಕ್ರೇನ್‌ನಿಂದ ನಿಮ್ಮ ಮಕ್ಕಳು ಸೇಫ್ ಆಗಿ ಬರ್ತಾರೆ, Don't Worry ಇಲ್ಲಿದೆ ಹೆಲ್ಪ್‌ಲೈನ್

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ. ವಿಮಾನ ನಿಲ್ದಾಣಗಳು ಕ್ಲೋಸ್ ಆಗಿವೆ. ಅಲ್ಲಿ ವಿದ್ಯಾರ್ಥಿಗಳು ಭಯದಲ್ಲಿದ್ರೆ, ಇತ್ತ ಪೋಷಕರು ಕಂಗಾಲಾಗಿದ್ದಾರೆ. ಆದರೆ ಅವರ ಸಹಾಯಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಧಾವಿಸಿವೆ. ಉಕ್ರೇನ್‌ನಲ್ಲಿರುವ ಭಾರತೀಯರ ಸಹಾಯಕ್ಕೆ ಸ್ಥಾಪನೆಯಾಗಿರೋ ಹೆಲ್ಪ್‌ಲೈನ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ರಷ್ಯಾ (Russia) ಹಾಗೂ ಉಕ್ರೇನ್ (Ukraine) ನಡುವಿನ ಯುದ್ಧ (War) ಮುಂದುವರೆದಿದೆ. ಯುದ್ಧ ಪೀಡಿತ ದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರು (Indians) ಭಯದಲ್ಲೇ ಇರುವಂತಾಗಿದೆ. ಇತ್ತ ಇಲ್ಲಿರುವ ಅವರ ಪೋಷಕರು ಕಂಗಾಲಾಗಿದ್ದಾರೆ. ಇದೀಗ ಇವರ ಸಹಾಯಕ್ಕೆ ಕೇಂದ್ರ ಸರ್ಕಾರ (Central Government) ಧಾವಿಸಿದೆ. ಈಗಾಗಲೇ ಏರ್‌ ಲಿಫ್ಟ್ (Air Lift) ಮೂಲಕ ಹಲವರನ್ನು ಭಾರತಕ್ಕೆ ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ. ಆದರೆ ಉಕ್ರೇನ್‌ ವಿಮಾನ ನಿಲ್ದಾಣ ಮುಚ್ಟಿರುವುದರಿಂದ ಕಾರ್ಯಾಚರಣೆಗೆ ಅಡಚಣೆಯಾಗಿದೆ. ಆದರೂ ಉಕ್ರೇನ್ ಅಕ್ಕಪಕ್ಕದ ದೇಶಗಳಿಂದ ಉಕ್ರೇನ್‌ನಲ್ಲಿರುವ ಭಾರತೀಯರನ್ನು ಏರ್‌ ಲಿಫ್ಟ್ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಮುಂದಾಗಿದೆ. ಜೊತೆಗೆ ಉಕ್ರೇನ್‌ನಲ್ಲಿರುವ ಭಾರತೀಯರ ರಕ್ಷಣೆಗಾಗಿ ಹೆಲ್ಪ್‌ ಲೈನ್ (Help Line) ಸಹ ಸ್ಥಾಪಿಸಿದೆ. ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಭಾರತೀಯರು ಭಯ ಪಡದಂತೆ ಅಭಯ ನೀಡಿದೆ. ಕರ್ನಾಟಕ ಸರ್ಕಾರ ಕೂಡ ನೋಡಲ್ ಅಧಿಕಾರಿಗಳನ್ನು ನೇಮಿಸಿದೆ.

 ನಾಲ್ಕು ದೇಶಗಳ ಮೂಲಕ ಏರ್‌ಲಿಫ್ಟ್‌ಗೆ ನಿರ್ಧಾರ

ಉಕ್ರೇನ್ ಏರ್‌ಪೋರ್ಟ್‌ಗಳನ್ನು ಮುಚ್ಚಿರುವುದರಿಂದ ಭಾರತದ ವಿಮಾನ ಉಕ್ರೇನ್ ಗಡಿ ಪ್ರವೇಶಿಸಲು ಸಾಧ್ಯವಿಲ್ಲ. ಹೀಗಾಗಿ ಉಕ್ರೇನ್ ಸುತ್ತಮುತ್ತಲ ದೇಶಗಳ ನೆರವು ಪಡೆಯಲು ಭಾರತ ಸರ್ಕಾರ ಯೋಚಿಸಿದೆ. ಅಂದರೆ ಉಕ್ರೇನ್ ಸುತ್ತ ಇರುವ ಹಂಗೇರಿ, ಪೋಲೆಂಡ್, ರೊಮೇನಿಯಾ ಹಾಗೂ ಸ್ಲೋವಾಕಿಯಾದಿಂದ ಭಾರತೀಯ ವಿದ್ಯಾರ್ಥಿಗಳನ್ನು ಕರೆತರಲು ಪ್ಲಾನ್ ಮಾಡಿದೆ. ಉಕ್ರೇನ್‌ನಿಂದ ಭಾರತೀಯರನ್ನು ಸುರಕ್ಷಿತವಾಗಿ ಈ ದೇಶಗಳ ಗಡಿ ತಲುಪಿಸುವುದು ಉಕ್ರೇನ್ ಜವಾಬ್ದಾರಿ.  ಅಲ್ಲಿಂದ ಏರ್‌ಲಿಫ್ಟ್ ಮೂಲಕ ಭಾರತೀಯರನ್ನು ಸ್ವದೇಶಕ್ಕೆ ವಾಪಸ್ ಕರೆತರುವ ವ್ಯವಸ್ಥೆಯನ್ನು ಭಾರತೀಯ ಸರ್ಕಾರ ಮಾಡಿದೆ. ಈ ಕುರಿತಂತೆ ಕೇಂದ್ರ ಸರ್ಕಾರದ ಅಧಿಕೃತ ವಕ್ತಾರರು ಟ್ವೀಟ್ ಮಾಡಿದ್ದಾರೆ.ಭಾರತೀಯರ ಸಹಾಯಕ್ಕಾಗಿ ಹೆಲ್ಪ್‌ಲೈನ್ ಸ್ಥಾಪನೆ

ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಭಾರತ ಸರ್ಕಾರ ಸಹಾಯವಾಣಿ ಆರಂಭಿಸಿದೆ.  1800118797 (ಟೋಲ್ ಫ್ರೀ ಸಂಖ್ಯೆ) ಜೊತೆಗೆ +91 11 23012113, +91 11 23014104, +91 11 23017905 ಸಂಖ್ಯೆಗಳು ಹಾಗೂ  ಫ್ಯಾಕ್ಸ್‌ಗಾಗಿ +91 11 23088124 ಹಾಗೂ ಸಹಾಯ.ಕ್ಕಾಗಿ situationroom@mea.gov.in ಎಂಬ ಈ ಮೇಲೆ ರಚಿಸಿದೆ.

ಇದನ್ನೂ ಓದಿ: G7 Meet: ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಜಿ7 ರಾಷ್ಟ್ರಗಳ ಮಹತ್ವದ ಸಭೆ, ನಿರ್ಧಾರಗಳೇನು?

ಉಕ್ರೇನ್ ಸರ್ಕಾರದಿಂದಲೂ ಸಹಾಯವಾಣಿ

ಅತ್ತ ಉಕ್ರೇನ್ ಸರ್ಕಾರ ಸಹ ನಾಗರಿಕರ ಸಹಾಯಕ್ಕಾಗಿ ಸಹಾಯವಾಣಿ ತೆರೆದಿದೆ. 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ ತೆರೆದಿದ್ದು, ಜನರಿಗೆ ಅಗತ್ಯ ಸಲಹೆ, ಸೂಚನೆ ನೀಡುತ್ತಿದೆ. +380 997300428 ಹಾಗೂ +380 997300483 ನಂಬರ್‌ಗೆ ಸಂಪರ್ಕಿಸುವಂತೆ ಕೋರಿದೆ. ಜೊತೆಗೆ cons1.kyiv@mea.gov.in ಎಂಬ ಇಮೇಲ್ ಐಡಿ ತೆರೆದಿದೆ. ಹೆಚ್ಚಿನ ಮಾಹಿತಿಗೆ eoiukraine.gov.in ವೆಬ್‌ಸೈಟ್ ನೋಡುವಂತೆ ತಿಳಿಸಿದೆ.

ಕರ್ನಾಟಕ ಸರ್ಕಾರದಿಂದ ಅಧಿಕಾರಿ ನೇಮಕ

ಕರ್ನಾಟಕದ ವಿದ್ಯಾರ್ಥಿಗಳು ಮತ್ತು ಕನ್ನಡಿಗರನ್ನು ಕರೆತರಲು ಕರ್ನಾಟಕ ಸರ್ಕಾರವು ಐಎಫ್​ಎಸ್ ಅಧಿಕಾರಿ, ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿ ಡಾ.ಮನೋಜ್ ರಾಜನ್ ಅವರನ್ನು ನೋಡೆಲ್ ಅಧಿಕಾರಿಯಾಗಿ ನೇಮಿಸಿದೆ. ಮುಂದಿನ ದಿನಗಳಲ್ಲಿ ಇವರು ವಿದೇಶಾಂಗ ವ್ಯವಹಾರಗಳ ಇಲಾಖೆಯೊಂದಿಗೆ ಸಹಯೋಗದಿಂದ ಕೆಲಸ ಮಾಡಿ, ಉಕ್ರೇನ್​ನಲ್ಲಿರುವ ಕನ್ನಡಿಗರನ್ನು ವಾಪಸ್ ಕರ್ನಾಟಕಕ್ಕೆ ಕರೆತರಲು ಸಹಾಯ ಮಾಡಲಿದ್ದಾರೆ.

ಕನ್ನಡಿಗರಿಗಾಗಿ ಸಹಾಯವಾಣಿ ಆರಂಭ

ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭಿಸಲಾಗಿದೆ. ದಿನದ 24 ಗಂಟೆಯೂ 080 1070, 080 2234 0676  ಸಂಖ್ಯೆಗೆ ಕರೆಮಾಡಿ ಸಹಾಯ ಪಡೆಯಬಹುದಾಗಿದೆ. ಜೊತೆಗೆ manoarya@gmail.com ಹಾಗೂ revenuedmkar@gmail.com ಎಂಬ ಇಮೇಲ್ ಮೂಲಕವೂ ಸಂಪರ್ಕಿಸಬಹುದು.

ಇದನ್ನೂ ಓದಿ: Sushma Swaraj: ರಷ್ಯಾ-ಉಕ್ರೇನ್ ಯುದ್ಧೋನ್ಮಾದದಲ್ಲಿ ಸುಷ್ಮಾ ಸ್ವರಾಜ್ ಹೆಚ್ಚು ನೆನಪಾಗ್ತಿರೋದು ಯಾಕೆ..?

ಉಕ್ರೇನ್‌ನಲ್ಲಿ ಸುರಕ್ಷಿತವಾಗಿದ್ದಾರೆ ಭಾರತೀಯರು

ಉಕ್ರೇನ್‌ನಲ್ಲಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಅಂತ ಉಕ್ರೇನ್ ಸರ್ಕಾರ ತಿಳಿಸಿದೆ. ಅಲ್ಲಿ ಊಟ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿದೆ. ಬಂಕರ್‌ಗಳಲ್ಲಿ ಅವರಿಗೆ ವಾಸ್ತವ್ಯದ ವ್ಯವಸ್ಥೆ ಮಾಡಿದ್ದು, ತಮ್ಮ ದಾಖಲೆಗಳೊಂತಿಗೆ ಭಾರತಕ್ಕೆ ಬರಲು ಕಾಯುತ್ತಿದ್ದಾರೆ.
Published by:Annappa Achari
First published: