ಟ್ರಂಪ್ ಹೆಂಡತಿಗೂ ಮಗಳು ಇವಾಂಕಾಗೂ ವಯಸ್ಸಿನ ಅಂತರ ಕೇವಲ 11 ವರ್ಷ!; ಏನಿದರ ಮರ್ಮ?

ಟ್ರಂಪ್​ ದೊಡ್ಡ ಉದ್ಯಮ ಹೊಂದಿದ್ದಾರೆ. ಇವರ ಆಸ್ತಿ ಮೌಲ್ಯ 22,281 ಕೋಟಿ ಎನ್ನಲಾಗಿದೆ.  ಈ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​ ಸ್ಪರ್ಧೆ ಮಾಡುತ್ತಿದ್ದಾರೆ. ಅವರ ಕುಟುಂಬದ ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ.

Rajesh Duggumane | news18-kannada
Updated:February 25, 2020, 11:22 AM IST
ಟ್ರಂಪ್ ಹೆಂಡತಿಗೂ ಮಗಳು ಇವಾಂಕಾಗೂ ವಯಸ್ಸಿನ ಅಂತರ ಕೇವಲ 11 ವರ್ಷ!; ಏನಿದರ ಮರ್ಮ?
ಡೊನಾಲ್ಡ್​ ಟ್ರಂಪ್​ ದಂಪತಿ-ಮಗಳು ಇವಾಂಕಾ
  • Share this:
ಡೊನಾಲ್ಡ್​​ ಟ್ರಂಪ್​ ಕುಟುಂಬ ಸಮೇತ ಭಾರತಕ್ಕೆ ಆಗಮಿಸಿದ್ದಾರೆ. ಟ್ರಂಪ್​ಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭೂತಪೂರ್ವ ಸ್ವಾಗತ ಕೋರಿದ್ದಾರೆ. ಟ್ರಂಪ್, ಮೋದಿ​ ಹೊರತುಪಡಿಸಿದರೆ ಈ ಪ್ರವಾಸದಲ್ಲಿ ಮಿಂಚಿದ್ದು, ಡೊನಾಲ್ಡ್​ ಟ್ರಂಪ್​ ಹೆಂಡತಿ ಮೆಲಾನಿಯಾ ಟ್ರಂಪ್​ ಹಾಗೂ ಟ್ರಂಪ್​ ಮಗಳು ಇವಾಂಕಾ​. ಮೇಲ್ನೋಟಕ್ಕೆ, ಇಬ್ಬರಿಗೂ ಒಂದೇ ವಯಸ್ಸು! ಅನೇಕರು ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದರು. ಹೀಗೆ ಅಚ್ಚರಿಪಡುವುದು ತಪ್ಪೇನಿಲ್ಲ. ಏಕೆಂದರೆ, ಮೆಲನಿಯಾ ಹಾಗೂ ಇವಾಂಕಾಗೂ ನಡುವಣ ವಯಸ್ಸಿನ ಅಂತರ ಕೇವಲ 11 ವರ್ಷ! ಏನಿದರ ಮರ್ಮ ಎನ್ನುವ ಪ್ರಶ್ನೆ ನಿಮ್ಮದೆ? ಇದಕ್ಕೆ ಇಲ್ಲಿದೆ ಉತ್ತರ.

ಡೊನಾಲ್ಡ್​ ಟ್ರಂಪ್​ಗೆ 74 ವರ್ಷ, ಮೆಲಾನಿಯಾಗೆ 49 ವರ್ಷ ಮತ್ತು ಇವಾಂಕಾಗೆ 38 ವರ್ಷ ವಯಸ್ಸು.  ಟ್ರಂಪ್​ಗೆ ಮೆಲನಿಯಾ ಮೂರನೆ ಹೆಂಡತಿ. ಇವಾಂಕಾ ಮೊದಲ ಹೆಂಡತಿಯ ಮಗಳು! ಹೀಗಾಗಿ ಮೆಲಾನಿಯಾ ಹಾಗೂ ಇವಾಂಕಾ ವಯಸ್ಸಿನ ಅಂತರ ಇಷ್ಟು ಕಡಿಮೆ.

ಡೊನಾಲ್ಡ್​ ಟ್ರಂಪ್ 1977ರಲ್ಲಿ ಮಾಡೆಲ್​ ಇವಾನಾ ಮೇರಿಯನ್ನು ಮದುವೆ ಆಗಿದ್ದರು. ಇವರಿಗೆ ಜಾನ್​ ಟ್ರಂಪ್​ (1977)​, ಇವಾಂಕಾ (1981) ಹಾಗೂ ಎರಿಕ್ (1984)​ ಹೆಸರಿನ ಮೂವರು ಮಕ್ಕಳು ಜನಿಸಿದ್ದರು. ಕಾರಣಾಂತರಗಳಿಂದ 1992ರಲ್ಲಿ ಇವರ ದಾಂಪತ್ಯ ಜೀವನ ಕೊನೆಯಾಯಿತು.

ಇದನ್ನೂ ಓದಿ: ತಾಜ್ ಮಹಲ್ ಹಾಗೂ ಪ್ರೇಮಕಥೆ ತಿಳಿದು ಭಾವುಕರಾದ ಡೊನಾಲ್ಡ್ ಟ್ರಂಪ್ ಮತ್ತವರ ಪತ್ನಿ

ಟ್ರಂಪ್​ ನಂತರ ನಟಿ ಮರ್ಲಾ ಮಾಪ್ಲೆಸ್​ ಜೊತೆ ಸಂಬಂಧ ಹೊಂದಿದ್ದರು. 1993ರಲ್ಲಿ ಇಬ್ಬರೂ ಮದುವೆ ಕೂಡ ಆದರು. ಇವರಿಗೆ ಜನಿಸಿದ್ದು, ಟಿಫಾನಿ (1993). 1999ರಲ್ಲಿ ಟ್ರಂಪ್​ ಹಾಗೂ ಮರ್ಲಾ ವಿಚ್ಛೇದನ ಪಡೆದುಕೊಂಡರು.

2005ರಲ್ಲಿ ಸ್ಲೊವೇನಿಯನ್ ಮಾಡೆಲ್​ ಮೆಲಾನಿಯಾರನ್ನು ಟ್ರಂಪ್​ ವಿವಾಹವಾದರು. ಇವರಿಗೆ ಬ್ಯಾರನ್​ (2006) ಹೆಸರಿನ ಮಗುವಿದೆ. 2006ರಲ್ಲಿ ಮೆಲಾನಿಯಾ ಅಮೆರಿಕ ಪೌರತ್ವ ಪಡೆದುಕೊಂಡರು. ಟ್ರಂಪ್​ ದೊಡ್ಡ ಉದ್ಯಮ ಹೊಂದಿದ್ದಾರೆ. ಇವರ ಆಸ್ತಿ ಮೌಲ್ಯ 3.1 ಬಿಲಿಯನ್ ಡಾಲರ್ (ಅಂದಾಜು 22,281 ಕೋಟಿ ರೂ) ಎನ್ನಲಾಗಿದೆ.  ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್​ ಸ್ಪರ್ಧೆ ಮಾಡುತ್ತಿದ್ದಾರೆ.
First published: February 25, 2020, 11:11 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading