Republic Day 2022: ದೆಹಲಿಯ ಗಣರಾಜ್ಯೋತ್ಸವದಲ್ಲಿ ಏನೇನೆಲ್ಲಾ ಉಂಟು-ಇಲ್ಲಿದೆ ಸಂಪೂರ್ಣ ವಿವರ

Republic Day: ಈ ಬಾರಿಯ ಗಣರಾಜ್ಯೋತ್ಸವದ ಪರೆಡ್ ನ ಇನ್ನೊಂದು ವಿಶೇಷ ಅಂದರೆ ವಿವಿಧ ದಶಕಗಳಲ್ಲಿ ಭಾರತೀಯ ಸೇನೆ ಧರಿಸಿರುವ ಸಮವಸ್ತ್ರಗಳು ಹಾಗೂ ಅದು ಬಳಸಿದ ಆಯುಧಗಳ ಪ್ರದರ್ಶನವಾಗಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ, ಜ. 25: ದೇಶದ ಕಲೆ, ಸಂಸ್ಕೃತಿ, ಪರಂಪರೆ, ಜನ-ಜೀವನ, ವೈವಿಧ್ಯತೆಗಳನ್ನು ಹಾಗೂ ಭಾರತೀಯ ಸೇನೆಯ ಅಂದಿನ-ಇಂದಿನ ಸಾಮರ್ಥ್ಯವನ್ನು ಪ್ರತಿವರ್ಷ ಜನವರಿ 26ರಂದು ರಾಷ್ಟ್ರ ರಾಜಧಾನಿ ದೆಹಲಿಯ (Dehli) ರಾಜಪಥದಲ್ಲಿ ನಡೆಯುವ ಗಣರಾಜ್ಯೋತ್ಸವ ಪಥಸಂಚಲನದಲ್ಲಿ (Republic Parade) ಬಿಂಬಿಸುವುದು ರೂಢಿ. ಈ ಬಾರಿಯೂ ಅಂಥದೇ ವೈಭವ, ಅಂಥದೇ ಸಂಭ್ರಮ. ಈ ಬಾರಿ ಕರ್ನಾಟಕದ (Karnataka) ವತಿಯಿಂದ 'ಪಾರಂಪರಿಕ ಕರಕುಶಲ ವಸ್ತುಗಳ ತೊಟ್ಟಿಲು ಎಂಬ ವಿಷಯಾಧಾರಿತ ಸ್ತಬ್ದಚಿತ್ರವೂ (Tableaux) ಸೇರಿದಂತೆ ಹಲವು ಸಂಗತಿಗಳನ್ನು ಕಣ್ತುಂಬಿಕೊಳ್ಳಬಹುದು. ಅವುಗಳ ಸಂಪೂರ್ಣ ವಿವರವನ್ನು ನ್ಯೂಸ್ ‌18 ನಿಮ್ಮ‌ ಮುಂದಿಡುತ್ತಿದೆ.

ದಕ್ಷಿಣ ಭಾರತದಿಂದ ಕರ್ನಾಟಕ ಮಾತ್ರ ಭಾಗಿ
ದೆಹಲಿಯ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕರ್ನಾಟಕವು ಸತತವಾಗಿ 13 ವರ್ಷದಿಂದ ತನ್ನ ಸ್ತಬ್ಧಚಿತ್ತವನ್ನು ಪ್ರಸ್ತುತ ಪಡಿಸುತ್ತಿದೆ. ಈ ಬಾರಿ ಇಡೀ ದಕ್ಷಿಣ ಭಾರತದಿಂದ ಕರ್ನಾಟಕದ ಸ್ತಬ್ದಚಿತ್ರ ಮಾತ್ರ ಪ್ರದರ್ಶನವಾಗುತ್ತಿದೆ. ಈ ಬಾರಿ  ಒಟ್ಟು 21 ಸ್ತಬ್ದಚಿತ್ರಗಳ ಪ್ರದರ್ಶನ ಆಗುತ್ತಿದೆ. ಆ ಪೈಕಿ 12 ರಾಜ್ಯ ಸರ್ಕಾರಗಳು ಹಾಗೂ ಕೇಂದ್ರ ಸರ್ಕಾರದ 9 ಇಲಾಖೆಗಳು ಸ್ತಬ್ದಚಿತ್ರಗಳನ್ನು‌ ರಚಿಸಿವೆ.

ರಾಷ್ಟ್ರ ರಾಜಧಾನಿಯಲ್ಲಿ ಈ‌ ಭಾರೀ ತೀವ್ರವಾದ ಚಳಿ‌ ಹಾಗೂ ಶೀತಗಾಳಿ ಇರುವ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಗಳು ತಡವಾಗಿ ಆರಂಭವಾಗಲಿವೆ ಎಂದು ರಕ್ಷಣಾ ಇಲಾಖೆಯ ಮೂಲಗಳಿಂದ ತಿಳಿದುಬಂದಿದೆ. ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ರಾಜಪಥದ ಪಥಸಂಚಲನ ಬೆಳಿಗ್ಗೆ 10.30ಕ್ಕೆ ಆರಂಭವಾಗಲಿದೆ. ರಾಜ್‌ಪಥ್‌ದಿಂದ ರಾಷ್ಟ್ರೀಯ ಕ್ರೀಡಾಂಗಣದವರೆಗೆ ಸಾಗುವ ಪರೆಡ್ ಅಂತಿಮವಾಗಿ ಕೆಂಪು ಕೋಟೆಯನ್ನು ತಲುಪುತ್ತದೆ.

ಇದನ್ನೂ ಓದಿ: ರಾಜ್ಯದ ಐವರಿಗೆ ಪದ್ಮ ಪ್ರಶಸ್ತಿ; ಜ. ಬಿಪಿನ್ ರಾವತ್​ಗೆ ಮರಣೋತ್ತರ ಪದ್ಮ ವಿಭೂಷಣ

ಸಶಸ್ತ್ರ ಪಡೆಗಳ ಬಲಾಬಲ ಪ್ರತಿಬಿಂಬ
ಗಣರಾಜ್ಯೋತ್ಸವದ ಪರೆಡ್ ನಲ್ಲಿ ಎಂದಿನಂತೆ ಈ‌‌ ಬಾರಿ ಕೂಡ ಸಶಸ್ತ್ರ ಪಡೆಗಳ ಬಲಾಬಲ ಪ್ರತಿಬಿಂಬವಾಗಲಿದೆ. ಭೂಸೇನೆಯ 6, ನೌಕಾಪಡೆ ಮತ್ತು ವಾಯುಪಡೆಯ ಒಂದೊಂದು ತುಕಡಿಗಳು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲಿವೆ. ಇದಲ್ಲದೆ 4 ಕೇಂದ್ರ ಸಶಸ್ತ್ರ ಪಡೆಗಳು, 2 NCC ಪದಾತಿದಳಗಳು, 1 ದೆಹಲಿ ಪೊಲೀಸ್ ಮತ್ತು 1 NSS ಪದಾತಿದಳಗಳ ಪರೆಡ್  ಇರಲಿದೆ.

ವಿವಿಧ ದಶಕಗಳ ಸಮವಸ್ತ್ರ ಮತ್ತು ಆಯುಧಗಳ ಪ್ರದರ್ಶನ
ಈ ಬಾರಿಯ ಗಣರಾಜ್ಯೋತ್ಸವದ ಪರೆಡ್ ನ ಇನ್ನೊಂದು ವಿಶೇಷ ಅಂದರೆ ವಿವಿಧ ದಶಕಗಳಲ್ಲಿ ಭಾರತೀಯ ಸೇನೆ ಧರಿಸಿರುವ ಸಮವಸ್ತ್ರಗಳು ಹಾಗೂ ಅದು ಬಳಸಿದ ಆಯುಧಗಳ ಪ್ರದರ್ಶನವಾಗಲಿದೆ. ಅವುಗಳೆಂದರೆ,

1) 1950ರ ರಜಪೂತ್ ರೆಜಿಮೆಂಟ್‌ನ ಏಕರೂಪದ 303 ರೈಫಲ್

2) 1960ರ ಯುನಿಫಾರ್ಮ್ 303 ರೈಫಲ್‌ನೊಂದಿಗೆ ಅಸ್ಸಾಂ ರೆಜಿಮೆಂಟ್‌ ಸ್ಕ್ವಾಡ್

3) 1970ರ ಸಮವಸ್ತ್ರ ಹಾಗೂ 7.62mm ಸ್ವಯಂ-ಲೋಡಿಂಗ್ ರೈಫಲ್‌

4) ಸಿಖ್ ಪದಾತಿ ದಳ ಮತ್ತು ಆರ್ಮಿ ಆರ್ಡನೆನ್ಸ್ ಕಾರ್ಪ್ಸ್

5) 6ನೇ ಸ್ಕ್ವಾಡ್ ಪ್ಯಾರಾಚೂಟ್ ರೆಜಿಮೆಂಟ್ 6) ಹೊಸ ಯುದ್ಧ ಸಮವಸ್ತ್ರದೊಂದಿಗೆ ಟಾವರ್ ರೈಫಲ್‌ ಪ್ರದರ್ಶನ

7) ಆರ್ಮರ್ ಕಾಲಮ್‌ನಲ್ಲಿರುವ ಹಳೆಯ ಟ್ಯಾಂಕ್‌ಗಳು,

8) 1965, 1971ರ ಯುದ್ಧಗಳಲ್ಲಿ ಭಾಗಿಯಾಗಿದ್ದ ಸೆಂಚುರಿಯನ್ ಟ್ಯಾಂಕ್‌ಗಳು

9) ಇಂದಿನ ಅರ್ಜುನ ಟ್ಯಾಂಕ್ ಮತ್ತು ಮುಖ್ಯ ಯುದ್ಧ ಟ್ಯಾಂಕ್ ಗಳು

10) ಯಾಂತ್ರಿಕೃತ ಪದಾತಿಸೈನ್ಯ,  ವಾಯು ರಕ್ಷಣಾ ವಿಂಟೇಜ್ ಗಳು

27 ಬ್ಯಾಂಡ್‌ಗಳ ಸಂಭ್ರಮ

ಇದನ್ನೂ ಓದಿ: ಕೊರೊನಾ ಲಸಿಕೆ ಯಶಸ್ವಿಗೊಳಿಸಿದ ಭಾರತೀಯರಿಗೆ ಧನ್ಯವಾದ ಅರ್ಪಿಸಿದ ರಾಷ್ಟ್ರಪತಿ

ಈ‌ ಬಾರಿಯ ಗಣರಾಜ್ಯೋತ್ಸವದ ಪರೆಡ್ ನಲ್ಲಿ 27 ಬ್ಯಾಂಡ್‌ಗಳು ಮೊಳಗಲಿವೆ. ಆ ಪೈಕಿ 22 ಭಾರತೀಯ ಸಶಸ್ತ್ರ ಪಡೆಗಳ ಬ್ಯಾಂಡ್‌ಗಳು. ವಂದೇ ಭಾರತಂ ಸ್ಪರ್ಧೆಯಿಂದ ಆಯ್ಕೆಯಾದ ಕಲಾವಿದರು ಬ್ಯಾಂಡ್‌ಗಳಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಪರೆಡ್ ನಲ್ಲಿ 2 ಮೋಟಾರ್ ಸೈಕಲ್ ಪ್ರದರ್ಶನ ಕೂಡ ಇರಲಿದೆ. BSFನ ಮಹಿಳಾ ಮುಖ್ಯ ತಂಡದಿಂದ ಪಥಸಂಚಲನ ಕೂಡ ಇರಲಿದೆ. ಅಮೃತ ಮಹೋತ್ಸಹವದ ಹಿನ್ನಲೆಯಲ್ಲಿ 75 ವಿಮಾನಗಳಿಂದ ವೈಮಾನಿಕ ಪ್ರದರ್ಶನ ಇರಲಿದೆ. ಈ 75 ಯುದ್ಧ ವಿಮಾನಗಳ ಪೈಕಿ ಹೊಸದಾಗಿ ಭಾರತ ಸೇನೆ ಸೇರಿದ 5 ರಪೇಲ್ ವಿಮಾನಗಳು ಕೂಡ ಇರಲಿವೆ.
Published by:Sandhya M
First published: