International Dog Day 2021: ಶ್ವಾನಗಳು ನಿಮ್ಮ ಬೆಸ್ಟ್ ಫ್ರೆಂಡ್ ಯಾಕೆ ಗೊತ್ತಾ?

Dog Love: ನಾಯಿಗಳು ತಮ್ಮ  ಮಾಲೀಕರ ಜೀವಗಳನ್ನು ಉಳಿಸಲು  ಯಾವ ಕೆಲಸವನ್ನು ಮಾಡಲು ಸಿದ್ದರಿರುತ್ತವೆ. ಸಾಕು ಪ್ರಾಣಿಗಳು ತಮ್ಮ ಮನುಷ್ಯರನ್ನು ಯಾವುದೇ ಅಪಾಯದಿಂದ ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಉದಾಹರಣೆಗಳು ಬಹಳಷ್ಟಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಅಂತರಾಷ್ಟ್ರೀಯ ಶ್ವಾನ ದಿನದ ಶುಭಾಶಯಗಳು. ಈ ದಿನ ಶ್ವಾನ ಪ್ರಿಯರಿಗೆ ಬಹಳ ಇಷ್ಟ. ಶ್ವಾನಗಳೇ ಹಾಗೆ ಬಹಳ ಮುದ್ದಾಗಿರುತ್ತವೆ. ಅದು ಹೇಗೆ ನಮ್ಮ ಜೀವನವನ್ನು ಆವರಿಸಿಕೊಳ್ಳುತ್ತದೆ ಎಂಬುದು ಅರಿವಿಗೆ ಬರುವುದಿಲ್ಲ. ಪ್ರತಿದಿನ, ಪ್ರತಿ ಕ್ಷಣ ಶ್ವಾನಗಳು ನಮಗೆ ಹತ್ತಿರವಾಗುತ್ತವೆ. ಶ್ವಾನಗಳು ನಮ್ಮ ನೊವು ನಲಿವುಗಳನ್ನು ಅರ್ಥ ಮಾಡಿಕೊಂಡು, ಅದಕ್ಕೆ ತಕ್ಕಂತೆ ವರ್ತಿಸುತ್ತವೆ.

ಅಂತರಾಷ್ಟ್ರೀಯ ಶ್ವಾನ ದಿನದಂದು ಅವುಗಳ 5 ಮುದ್ದಾದ ಗುಣಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ.

ಪರಸ್ಪರ ಒಳ್ಳೆಯ ಸಂಬಂಧ ಹೊಂದಬಹುದು

ಆಹಾರ, ಪ್ರೀತಿ ಮತ್ತು ಆಶ್ರಯಕ್ಕಾಗಿ ನಾಯಿಗಳು ನಮ್ಮೊಂದಿಗೆ ಇರುತ್ತವೆ, ಆದರೆ ನಾವು ಅವರೊಂದಿಗೆ ಇರಲು ಕಾರಣ, ಶ್ವಾನಗಳು ನಮಗೆ ನೀಡುವ ಪ್ರೀತಿ ಮತ್ತು ಭಾವನಾತ್ಮಕ ಸಂಬಂಧದ ಕಾರಣ. ಅಲ್ಲದೇ ಹೆಚ್ಚು ನಿಷ್ಠಾವಂತರಾಗಿರುತ್ತವೆ.  ನಮ್ಮ ಸುತ್ತಲೂ ಇದ್ದಷ್ಟು ನಮ್ಮ ಮನಸಿಗೆ ಸಂತೋಷವನ್ನು ನೀಡುತ್ತವೆ. ಶ್ವಾನಗಳಿಗಿಂತ ಉತ್ತಮ ಸ್ನೇಹಿತರು ಬೇರೆ ಯಾರು ಇಲ್ಲ ಎಂಬುದು ನಿಜಕ್ಕೂ ಸತ್ಯ. ನಮಗೆ ಬೇಸರವಾಗಿದ್ದಲ್ಲಿ ಅವುಗಳು ಕೂಡ ಬೇಸರದಿಂದ ಮೂಲೆಯಲ್ಲಿ ಕುಳಿತುಕೊಳ್ಳುತ್ತವೆ, ನಾವು ಸಂತೋಷವಾಗಿದ್ದರೆ ನಮ್ಮ ಸುತ್ತ ಕುಣಿದು ಕುಪ್ಪಳಿಸುತ್ತವೆ.

ಮಾಲೀಕನ ಜೀವ ಉಳಿಸಲು ಏನು ಬೇಕಾದರೂ ಮಾಡಲು ಸಿದ್ಧರಿರುತ್ತವೆ. ನಾಯಿಗಳು ತಮ್ಮ  ಮಾಲೀಕರ ಜೀವಗಳನ್ನು ಉಳಿಸಲು  ಯಾವ ಕೆಲಸವನ್ನು ಮಾಡಲು ಸಿದ್ದರಿರುತ್ತವೆ. ಸಾಕು ಪ್ರಾಣಿಗಳು ತಮ್ಮ ಮನುಷ್ಯರನ್ನು ಯಾವುದೇ ಅಪಾಯದಿಂದ ರಕ್ಷಿಸಲು ತಮ್ಮ ಪ್ರಾಣವನ್ನು ಪಣಕ್ಕಿಟ್ಟ ಉದಾಹರಣೆಗಳು ಬಹಳಷ್ಟಿವೆ. ನಾವು ಒಮ್ಮೆ ಅವರುಗಳಿಗೆ ತೋರುವ ಪ್ರೀತಿಗೆ ಅವುಗಳು ದುಪ್ಪಟ್ಟು ಪ್ರೀತಿಯನ್ನು ಮರಳಿ ನೀಡುತ್ತವೆ. ಅವುಗಳ ಪ್ರೀತಿಗೆ ಯಾವುದೇ ಮಿತಿ ಇರುವುದಿಲ್ಲ. ಅವುಗಳು ಯಾವಾಗಲೂ ನಮ್ಮನ್ನೆ ಆಯ್ಕೆ ಮಾಡಿಕೊಳ್ಳುತ್ತವೆ.

ಇದನ್ನೂ ಓದಿ: ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ನಿಮಗೆಷ್ಟು ಗೊತ್ತು?

ನೀವು  ಗಮನಿಸಿ ನೋಡಿ, ನೀವು ಕೆಲಸಕ್ಕೆ ಹೊರಟಾಗ ಅವುಗಳ ಮುಖ ಬಾಡುತ್ತದೆ. ಬೇಸರದಿಂದ ಕಳಿಸಿಕೊಡುತ್ತವೆ. ಅದೇ ನೀವು ಮನೆಗೆ ಹಿಂತಿರುಗಿದಾಗ ಅವುಗಳ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಮನೆಗೆ ಬಂದು ಅವುಗಳನ್ನು ತಬ್ಬಿಕೊಂಡರೆ ಅವುಗಳಿಗೆ ಬಹಳ ಖುಷಿ.ನೀವು ಕೆಲಸದ ಒತ್ತಡದಿಂದ ಮನೆಗೆ ಬನ್ನಿ, ಆ ಒತ್ತಡವನ್ನು ನಿವಾರಣೆ ಮಾಡುವ ಶಕ್ತಿ ಅವುಗಳಿಗಿದೆ. ನಿಮ್ಮ ಮೈ ಮೇಲೆ ಹಾರುತ್ತವೆ, ಬಾಲ ಅಲ್ಲಾಡಿಸುತ್ತವೆ ಹೀಗೆ. ಇನ್ನು ನಾವು ಅವುಗಳ ಜೊತೆ ಇಲ್ಲದಿದ್ದಾಗ ತುಂಬಾ ಮಿಸ್ ಮಾಡಿಕೊಳ್ಳುತ್ತವೆ. ನಾವು ಬರುವವರೆಗೆ ಕಾಯುತ್ತವೆ ಕೂಡ. ಶ್ವಾನಗಳು ನಮ್ಮ ಮನೆ ಮತ್ತು ಮನಸ್ಸನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ.

ಶ್ವಾನಗಳು ನಮ್ಮ ಜೊತೆ ಎಂದಿಗೂ ಇರುತ್ತವೆ. ಯಾರೂ ನಮ್ಮ ಜೀವನದಿಂದ ಹೊರ ಹೋಗಲಿ, ಏನೇ ಆಗಲಿ, ನಾವು ಎಲ್ಲೇ ಇದ್ದರೂ ಅವುಗಳು ನಮ್ಮನ್ನ ಬಿಡುವುದಿಲ್ಲ. ನೀವೆ ಕೇಳಿರಬಹುದು ಕಳೆದ ಹೋದ ನಾಯಿ ಮಾಲೀಕನನ್ನ ಹಲವು ಬಾರಿ ಹುಡುಕಿಕೊಂಡು ಬಂದಿದೆ ಎಂಬುದನ್ನ. ಅಲ್ಲದೇ ,ಮನೆಯಲ್ಲಿ ಯಾರು ಅದನ್ನು ಹೆಚ್ಚು ಪ್ರೀತಿ ಮಾಡುತ್ತಾರೊ ಅವರಿಗೆ ಯಾವಾಗಲೂ ರಕ್ಷಾ ಕವಚವಾಗಿರುತ್ತದೆ.

ಜೀವನದ ಬಗ್ಗೆ ನಮಗೆ ಕಲಿಸುತ್ತವೆ. ನಮಗೆ ಬದುಕಿನ ಪಾಠಗಳನ್ನು ಈ ಶ್ವಾನಗಳು ಕಲಿಸಿಕೊಡುತ್ತವೆ. ಯಾವಾಗಲೂ ಸಂತೋಷವಾಗಿರುತ್ತವೆ. ಉತ್ಸಾಹ ಭರಿತವಾಗಿ ಬದುಕುತ್ತವೆ. ಅವುಗಳು ಅನಾರೊಗ್ಯದಿಂದ ಇದ್ದರೂ ಸಹ ನಮ್ಮನ್ನ ಕಂಡಾಗ ಸಂತೋಷಪಡುತ್ತವೆ. ಬೇಷರತ್ತಾಗಿ ಪ್ರೀತಿಸುವುದು, ನಿಷ್ಠೆ ಮತ್ತು ಸಮರ್ಪಣೆ, ಮತ್ತು ಎಲ್ಲಾ ಕಷ್ಟ ಮತ್ತು ಸುಖದ ಸಂದರ್ಭಗಳಲ್ಲಿ ನಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆ  ಹೇಗೆ ಇರಬೇಕೆಂದು ಅವುಗಳು ನಮಗೆ ಕಲಿಸುತ್ತವೆ.
Published by:Sandhya M
First published: