• Home
 • »
 • News
 • »
 • national-international
 • »
 • Finland: ಫಿನ್‌ಲ್ಯಾಂಡ್‌ನಲ್ಲಿ ಸಂತೋಷವಾಗಿರಲು ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ 3 ಅಂಶಗಳಿವು!

Finland: ಫಿನ್‌ಲ್ಯಾಂಡ್‌ನಲ್ಲಿ ಸಂತೋಷವಾಗಿರಲು ಗಮನದಲ್ಲಿಟ್ಟುಕೊಳ್ಳಬೇಕಾದ ಪ್ರಮುಖ 3 ಅಂಶಗಳಿವು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪ್ರತಿಯೊಂದು ದೇಶದಲ್ಲಿ ಸಂಪೂರ್ಣವಾಗಿ ತೃಪ್ತರಾಗಿರುವುದಿಲ್ಲ. ಏನಾದರೊಂದು ಸಮಸ್ಯೆಗಳು ಇದ್ದೇ ಇರುತ್ತದೆ. ಆದರೆ ಈ ಸಮಸ್ಯೆಗಳನ್ನು ಹೋಗಲಾಡಿಸುವುದು ಹೇಗೆ ಎಂಬುದರ ಪ್ರಶ್ನೆಯನ್ನೇ ಕಂಡುಕೊಳ್ಳತ್ತಾ ಇರುತ್ತಾರೆ. ಆದರೆ ಫಿನ್​ಲ್ಯಾಂಡ್​ನ ಜನ ಈ ಸಮಸ್ಯೆಯನ್ನೆಲ್ಲಾ ದೂರ ಮಾಡಿ ಅದಕ್ಕಾಗಿಯೇ ಕೆಲವೊಂದು ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಹಾಗಿದ್ರೆ ಅವರು ಹೇಳಿರುವ ಆ ಮೂರು ವಿಷಯಗಳು ಯಾವವು ಅನ್ನೋದನ್ನು ನೋಡೋಣ.

ಮುಂದೆ ಓದಿ ...
 • Share this:

  ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ (World Happines Report) ಪ್ರಕಾರ, ಸತತ ಐದು ವರ್ಷಗಳ ಕಾಲ ವಿಶ್ವದ ಅತ್ಯಂತ ಸಂತೋಷದ ದೇಶಗಳ ಪಟ್ಟಿಯಲ್ಲಿ ಫಿನ್‌ಲ್ಯಾಂಡ್ (Finland) ನಂ.1 ಸ್ಥಾನದಲ್ಲಿದೆ. ಇಲ್ಲಿನ ಜನರು ತಮ್ಮ ಜೀವನದಲ್ಲಿ ಸಂಪೂರ್ಣ ತೃಪ್ತರಾಗಿರುತ್ತಾರೆ. ಈ ಬಗ್ಗೆ ತತ್ವಜ್ಞಾನಿ ಮತ್ತು ಮನೋವಿಜ್ಞಾನದ ಸಂಶೋಧಕರಾಗಿರುವ (Psychology Expert) ಫ್ರಾಂಕ್ ಮಾರ್ಟೆಲಾ ಅವರು, ಫಿನ್‌ಲ್ಯಾಂಡ್‌ನ ಜನರು ಅತ್ಯುತ್ತಮ ಜೀವನ ಮಟ್ಟವನ್ನು ಕಾಯ್ದುಕೊಳ್ಳಲು ಈ 3 ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ ಎಂದಿದ್ದಾರೆ.


  ಹೌದು, ಪ್ರತಿಯೊಂದು ದೇಶದಲ್ಲಿ ಸಂಪೂರ್ಣವಾಗಿ ತೃಪ್ತರಾಗಿರುವುದಿಲ್ಲ. ಏನಾದರೊಂದು ಸಮಸ್ಯೆಗಳು ಇದ್ದೇ ಇರುತ್ತದೆ. ಆದರೆ ಈ ಸಮಸ್ಯೆಗಳನ್ನು ಹೋಗಲಾಡಿಸುವುದು ಹೇಗೆ ಎಂಬುದರ ಪ್ರಶ್ನೆಯನ್ನೇ ಕಂಡುಕೊಳ್ಳತ್ತಾ ಇರುತ್ತಾರೆ. ಆದರೆ ಫಿನ್​ಲ್ಯಾಂಡ್​ನ ಜನ ಈ ಸಮಸ್ಯೆಯನ್ನೆಲ್ಲಾ ದೂರ ಮಾಡಿ ಅದಕ್ಕಾಗಿಯೇ ಕೆಲವೊಂದು ಮಾರ್ಗಗಳನ್ನು ಕಂಡುಕೊಂಡಿದ್ದಾರೆ.


  ಹಾಗಿದ್ರೆ ಅವರು ಹೇಳಿರುವ ಆ ಮೂರು ವಿಷಯಗಳು ಯಾವವು ಅನ್ನೋದನ್ನು ನೋಡೋಣ.


  1.ನಮ್ಮ ನೆರೆಹೊರೆಯವರೊಂದಿಗೆ ನಮ್ಮನ್ನು ಹೋಲಿಸಿಕೊಳ್ಳುವುದಿಲ್ಲ:


  ಬೇರೆಯವರೊಂದಿಗೆ ಹೋಲಿಸಿಕೊಳ್ಳದೇ ಹೋದಲ್ಲಿ ನಾವು ಹೆಚ್ಚು ಸಂತೋಷವಾಗಿರುತ್ತೇವೆ. ಫಿನ್‌ಲ್ಯಾಂಡ್‌ ಜನರು ಇದನ್ನು ಅಕ್ಷರಶಃ ಪಾಲಿಸುತ್ತಾರೆ. ಅದರಲ್ಲೂ ವಿಶೇಷವಾಗಿ ವಸ್ತುಗಳ ವಿಷಯ ಹಾಗೂ ಸಂಪತ್ತಿನ ಬಹಿರಂಗ ಪ್ರದರ್ಶನಕ್ಕೆ ಬಂದಾಗ ಇದನ್ನು ಹೆಚ್ಚಾಗಿ ಪಾಲಿಸುತ್ತಾರೆ. ಉದಾಹರಣೆಗೆ ಇಲ್ಲಿನ ಅನೇಕ ಜನರು ಶ್ರೀಮಂತರಾಗಿದ್ದರೂ, ದುಬಾರಿ ಕಾರು ಹೊಂದಿದ್ದರೂ ಅನೇಕ ಸಂದರ್ಭಗಳಲ್ಲಿ ಸಾರ್ವಜನಿಕ ಸಾರಿಗೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.


  ಇದನ್ನೂ ಓದಿ: ಲೋಕಸಭೆ ಚುನಾವಣೆಗೂ ಮುನ್ನ ಪಕ್ಷಗಳಿಗೆ ಅಗ್ನಿಪರೀಕ್ಷೆ, ಈ ವರ್ಷ ದೇಶದ 9 ರಾಜ್ಯಗಳಲ್ಲಿ ಅಸೆಂಬ್ಲಿ ಎಲೆಕ್ಷನ್‌


  ಹಾಗಾಗಿ ನಿಮಗೆ ಯಾವುದು ಸಂತೋಷವನ್ನು ನೀಡುತ್ತದೆ ಎಂಬುದರ ಮೇಲೆ ಹೆಚ್ಚು ಗಮನಹರಿಸಿ ಹೊರತಾಗಿ ಆಡಂಬರದ ಮೇಲೆ ಗಮನ ಕಡಿಮೆ ಮಾಡಿ. ನಿಮ್ಮನ್ನು ಇತರರೊಂದಿಗೆ ಹೋಲಿಸುವ ಬದಲು ನಿಮ್ಮ ಸ್ವಂತ ಮಾನದಂಡಗಳನ್ನು ಹೊಂದಿಸುವುದು ನಿಜವಾದ ಸಂತೋಷಕ್ಕೆ ಮೊದಲ ಹೆಜ್ಜೆ ಎಂಬುದನ್ನು ನೆನಪಿಡಿ.


  2. ನಾವು ಪ್ರಕೃತಿಯ ಪ್ರಯೋಜನಗಳನ್ನು ಕಡೆಗಣಿಸುವುದಿಲ್ಲ :


  2021 ರ ಸಮೀಕ್ಷೆಯ ಪ್ರಕಾರ, 87% ಫಿನ್‌ ಜನರು ಪ್ರಕೃತಿಯು ಮುಖ್ಯವೆಂದು ಭಾವಿಸುತ್ತಾರೆ. ಏಕೆಂದರೆ ಅದು ಮನಸ್ಸಿಗೆ ಶಾಂತಿ, ಶಕ್ತಿ ಮತ್ತು ವಿಶ್ರಾಂತಿ ನೀಡುತ್ತದೆ. ಫಿನ್‌ಲ್ಯಾಂಡ್‌ನಲ್ಲಿ, ಉದ್ಯೋಗಿಗಳು ನಾಲ್ಕು ವಾರಗಳ ಬೇಸಿಗೆ ರಜೆಗೆ ಅರ್ಹರಾಗಿರುತ್ತಾರೆ. ಆಗ ಅನೇಕರು ಆ ಸಮಯವನ್ನು ಹಳ್ಳಿಗಾಡಿನಲ್ಲಿ ಕಳೆಯಲು ಅಥವಾ ಪ್ರಕೃತಿ ಮಧ್ಯೆ ಸಮಯ ಕಳೆಯಲು ಬಯಸುತ್ತಾರೆ.


  ಸಾಂದರ್ಭಿಕ ಚಿತ್ರ


  ಕಡಿಮೆ ಸೌಕರ್ಯಗಳಿದ್ದರೂ ಅವರು ಅದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇನ್ನು ಬಹಳಷ್ಟು ಫಿನ್ನಿಷ್ ನಗರಗಳನ್ನು ದಟ್ಟವಾದ ಹಸಿರಿನಲ್ಲಿ ನಿರ್ಮಿಸಲಾಗಿದೆ. ಅದರರ್ಥ ಅನೇಕ ಜನರು ತಮ್ಮ ಮನೆ ಬಾಗಿಲಿಗೆ ಪ್ರಕೃತಿಯ ಪ್ರವೇಶವನ್ನು ಹೊಂದಿದ್ದಾರೆ. ಪ್ರಕೃತಿ ಮಧ್ಯೆ ಸಮಯ ಕಳೆಯುವುದು ನಮ್ಮ ಚೈತನ್ಯವನ್ನು ಹೆಚ್ಚಿಸುತ್ತದೆ. ಆರೋಗ್ಯವನ್ನು ನೀಡುತ್ತದೆ. ಜೊತೆಗೆ ವೈಯಕ್ತಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಹಾಗಾಗಿ ನಿಮ್ಮ ಮನೆಗೆ ಕೆಲ ಸಸ್ಯಗಳನ್ನು ತಂದು ನೆಡುವುದಾದರೂ ಸರಿ... ಜೀವನದಲ್ಲಿ ಹಸಿರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿ.
  3. ನಾವು ನಮ್ಮೊಳಗಿನ ನಂಬಿಕೆಯನ್ನು ಮುರಿಯುವುದಿಲ್ಲ :


  ಒಂದು ದೇಶದೊಳಗೆ ನಂಬಿಕೆಯ ಮಟ್ಟ ಹೆಚ್ಚಾದಷ್ಟೂ ಅದರ ಪ್ರಜೆಗಳು ಸಂತೋಷವಾಗಿರುತ್ತಾರೆ ಎಂದು ಸಂಶೋಧನೆಗಳು ಹೇಳುತ್ತವೆ. 2022 ರಲ್ಲಿ "ಕಳೆದುಹೋದ ವಾಲೆಟ್" ಪ್ರಯೋಗವನ್ನು ಪ್ರಪಂಚದ 16 ನಗರಗಳಲ್ಲಿ ನಡೆಸಲಾಗಿತ್ತು. 192 ವ್ಯಾಲೆಟ್‌ಗಳನ್ನು ಕಳೆದುಹೋಗುವಂತೆ ಮಾಡಲಾಯ್ತು.


  ಈ ಪರೀಕ್ಷೆಯಲ್ಲಿ ಜನರು ಎಷ್ಟು ಪ್ರಾಮಾಣಿಕರು ಎಂಬುದನ್ನು ನೋಡಲಾಯ್ತು. ಇದಲ್ಲಿ ಫಿನ್‌ಲ್ಯಾಂಡ್‌ ರಾಜಧಾನಿ ಹೆಲ್ಸಿಂಕಿಯಲ್ಲಿ, 12 ವ್ಯಾಲೆಟ್‌ಗಳಲ್ಲಿ ಹನ್ನೊಂದನ್ನು ಅವರವರ ಮಾಲೀಕರಿಗೆ ಹಿಂತಿರುಗಿಸಲಾಗಿದೆ. ಹಾಗಾಗಿ ಫಿನ್ನಿಷ್ ಜನರು ಪರಸ್ಪರ ನಂಬುತ್ತಾರೆ. ಪ್ರಾಮಾಣಿಕತೆಯನ್ನು ಗೌರವಿಸುತ್ತಾರೆ. ನೀವು ಇಲ್ಲಿನ ಲೈಬ್ರರಿಯಲ್ಲಿ ನಿಮ್ಮ ಲ್ಯಾಪ್‌ಟಾಪ್ ಅನ್ನು ಮರೆತರೆ ಅಥವಾ ರೈಲಿನಲ್ಲಿ ನಿಮ್ಮ ಫೋನ್ ಕಳೆದುಕೊಂಡರೆ, ನೀವು ಅದನ್ನು ಮರಳಿ ಪಡೆಯುತ್ತೀರಿ ಎಂಬ ವಿಶ್ವಾಸ ಹೊಂದಬಹುದಾಗಿದೆ.


  ಇಲ್ಲಿನ ಮಕ್ಕಳು ಸಾಮಾನ್ಯವಾಗಿ ಶಾಲೆಯಿಂದ ಮನೆಗೆ ಸಾರ್ವಜನಿಕ ಸಾರಿಗೆಯಲ್ಲೇ ಓಡಾಡುತ್ತಾರೆ. ಅಲ್ದೇ ಮೇಲ್ವಿಚಾರಣೆಯಿಲ್ಲದೆ ಹೊರಗೆ ಆಡುತ್ತಾರೆ. ಹಾಗಾಗಿ ನೀವು ನಿಮ್ಮ ಸಮುದಾಯಕ್ಕಾಗಿ ಹೇಗೆ ಪ್ರಾಮಾಣಿಕರಾಗಿರಬಹುದು ಎಂಬುದನ್ನು ಯೋಚಿಸಿ. ವಿಶ್ವಾಸ ಹಾಗೂ ಪ್ರಾಮಾಣಿಕತೆ ಒಟ್ಟುಗೂಡಿದಾಗ ಮಾತ್ರ ಒಂದು ಆರೋಗ್ಯಕರ ಸಮುದಾಯ ರೂಪುಗೊಳ್ಳಲು ಸಾಧ್ಯ.

  Published by:Prajwal B
  First published: