Investment Guide: ಆರ್ಥಿಕ ಪ್ರಗತಿಗಾಗಿ ಯಾವ ಹೂಡಿಕೆ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು? ಲಾಭ ಗಳಿಸುವುದು ಹೇಗೆ?

Easy Investment Tips: ನೀವು ಹೂಡಿಕೆ ಕ್ಷೇತ್ರಕ್ಕೆ ಹೊಸಬರಾಗಿರಬಹುದು ಅಥವಾ ಈ ಕ್ಷೇತ್ರದಲ್ಲಿ ಅನುಭವ ಪಡೆದಿರುವವರೂ ಆಗಿರಬಹುದು ಆದರೆ ಹೂಡಿಕೆ ಕ್ಷೇತ್ರದಲ್ಲಿನ ಕೆಲವೊಂದು ತಂತ್ರಗಳನ್ನು ಅನುಸರಿಸುವುದು ಹಣಕಾಸಿನ ಗುರಿಗಳನ್ನು ಸಾಧಿಸುವಲ್ಲಿ ಸಹಾಯ ಮಾಡುತ್ತದೆ ಇದರಿಂದ ಉತ್ತಮ ಲಾಭವನ್ನು ನೀವು ಪಡೆಯಬಹುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Savings Tips: ಉಳಿತಾಯ ಮತ್ತು ಹೂಡಿಕೆ (Savings and Investments Tips) ಎಂಬುದು ಜೀವನದಲ್ಲಿ ಅತಿಮುಖ್ಯವಾಗಿದ್ದು ತಿಂಗಳ ವೇತನವನ್ನು ಸಂಪೂರ್ಣವಾಗಿ ಖರ್ಚುಮಾಡುವ ಮುನ್ನ ಅದನ್ನು ಹೂಡಿಕೆ ಮಾಡಿ ಭವಿಷ್ಯವನ್ನು ಸುಸ್ಥಿರವಾಗಿಟ್ಟುಕೊಳ್ಳಿ ಎಂಬುದೇ ಆರ್ಥಿಕ ತಜ್ಞರ ಅಭಿಪ್ರಾಯವಾಗಿದೆ. ನಿಮ್ಮಲ್ಲಿ ಹಣ ಉಳಿಯುತ್ತಿದ್ದರೆ ಯಾವ ಹೂಡಿಕೆಯಲ್ಲಿ ಎಷ್ಟು ಹಣ ವಿನಿಯೋಗಿಸಿದರೆ ಲಾಭ ಎಂಬುದರ ಕುರಿತೂ ನೀವು ಮಾಹಿತಿ ಹೊಂದಿರಬೇಕಾಗುತ್ತದೆ. ನೀವು ಹೂಡಿಕೆ ಕ್ಷೇತ್ರಕ್ಕೆ ಹೊಸಬರಾಗಿರಬಹುದು ಅಥವಾ ಈ ಕ್ಷೇತ್ರದಲ್ಲಿ ಅನುಭವ ಪಡೆದಿರುವವರೂ ಆಗಿರಬಹುದು ಆದರೆ ಹೂಡಿಕೆ ಕ್ಷೇತ್ರದಲ್ಲಿನ ಕೆಲವೊಂದು ತಂತ್ರಗಳನ್ನು ಅನುಸರಿಸುವುದು ಹಣಕಾಸಿನ ಗುರಿಗಳನ್ನು ಸಾಧಿಸುವಲ್ಲಿ ಸಹಾಯ ಮಾಡುತ್ತದೆ ಇದರಿಂದ ಉತ್ತಮ ಲಾಭವನ್ನು ನೀವು ಪಡೆಯಬಹುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿದುಕೊಳ್ಳೋಣ.

  ಸಾಧ್ಯವಾದಷ್ಟು ಶೀಘ್ರವೇ ಆರಂಭಿಸಿ:

  ಆರ್ಥಿಕ ಸ್ಥಿತಿಯನ್ನು ಅಭಿವೃದ್ಧಿಪಡಿಸುವ ವಿಚಾರದಲ್ಲಿ ಸಮಯ ವ್ಯರ್ಥಮಾಡದಿರಿ. ಸಮಯ ಮುಖ್ಯ ಆಯುಧವಾಗಿದೆ ಹಾಗಾಗಿ ನೀವು ಹೂಡಿಕೆ ಮಾಡಲು ನೀವು ಸಾಕಷ್ಟು ಸಮಯ ವ್ಯಯಿಸಿದಲ್ಲಿ ನೀವು ಹೆಚ್ಚಿನ ಬೆಳವಣಿಗೆಯನ್ನು ಆನಂದಿಸಬಹುದು. ತಿಂಗಳಿನ ಹೂಡಿಕೆಯಲ್ಲಿ ರಿಟರ್ನ್ ಕಡಿಮೆ ಇರುತ್ತದೆ ಎಂಬ ಅಂಶವನ್ನು ಗಮನಿಸಿಕೊಳ್ಳಿ. ನೀವು 20 ವರ್ಷಗಳ ಕಾಲ ಹೂಡಿಕೆ ನಡೆಸಿದಲ್ಲಿ ನಿಮಗೆ ಉತ್ತಮ ರಿಟರ್ನ್ ಬರುತ್ತದೆ. ಅಂದರೆ ಹೂಡಿಕೆ ಅವಧಿ ದೀರ್ಘವಾಗಿರಲಿ.

  ಹೂಡಿಕೆ ಬಂಡವಾಳ ವೈವಿಧ್ಯಮಯವಾಗಿರಲಿ:

  ಬೇರೆ ಬೇರೆ ಸ್ವತ್ತುಗಳ ಮೇಲೆ ಹೂಡಿಕೆ ಮಾಡುವುದರಿಂದ ಕೂಡ ಆರ್ಥಿಕ ಪ್ರಗತಿ ಕಂಡುಕೊಳ್ಳಬಹುದಾಗಿದೆ. ಕೆಲವರು ಸ್ಟಾಕ್ ಮಾರ್ಕೆಟ್ (Stock Market Investments) ಅನ್ನು ಮಾತ್ರವೇ ನೆಚ್ಚಿಕೊಂಡಿರುತ್ತಾರೆ ಹೀಗಾಗಿ ಅಲ್ಲಿನ ಏರಿಳಿತಗಳೊಂದಿಗೆ ಇವರ ಹೂಡಿಕೆಯೂ ಏರಿಳಿತಗಳಿಗೆ ಒಳಗಾಗುತ್ತಿರುತ್ತದೆ. Cryptocurrencyಯಲ್ಲಿ ಹೂಡಿಕೆ ಮಾಡುವುದೂ ಇನ್ನೊಂದು ಉಪಾಯವಾಗಿದೆ. Index Fundsನಂತಹ ಯೋಜನೆಗಳಲ್ಲೂ ನೀವು ಹೂಡಿಕೆ ಮಾಡಬಹುದಾಗಿದೆ.

  ತೆರಿಗೆ ತಿಳುವಳಿಕೆ ಇರಲಿ:

  ಹೂಡಿಕೆಯ ಲಾಭದ ಮೇಲೆ ನೀವು ಕಡಿಮೆ ತೆರಿಗೆ ಪಾವತಿ ಮಾಡಿದಷ್ಟೂ ನಿಮ್ಮ ಆರ್ಥಿಕ ಪ್ರಗತಿ ಉಂಟಾಗುತ್ತದೆ. IRA ನಂತಹ ಯೋಜನೆಯಲ್ಲಿ ನೀವು ಹೂಡಿಕೆ ಮಾಡಿದರೆ ತೆರಿಗೆ ಮೇಲಿನ ಪ್ರಯೋಜನಗಳನ್ನು ಒದಗಿಸುತ್ತದೆ. ಕೆಲವೊಂದು IRAs ಹಾಗೂ 401 ಗಳು ತೆರಿಗೆ ರಹಿತ ಕೊಡುಗೆಗಳನ್ನು ಅನುಮತಿಸುತ್ತವೆ ಇದು ಹೇಗೆಂದರೆ ನಿಮ್ಮ ಖಾತೆಯನ್ನು ನೀವು ಹಿಂಪಡೆಯುವವರೆಗೆ ಹೂಡಿಕೆಯ ಲಾಭದ ಮೇಲೆ ತೆರಿಗೆ ಪಾವತಿಸುವಂತಿಲ್ಲ. IRA ಗಳು ಮತ್ತು 401 (k) ಗಳು ತೆರಿಗೆ ರಹಿತ ಹೂಡಿಕೆಯ ಲಾಭಗಳನ್ನು ನೀಡುತ್ತವೆ, ಮತ್ತು ನಿವೃತ್ತಿ ಸಮಯದಲ್ಲಿ ಹಿಂಪಡೆಯುವಿಕೆಯು ತೆರಿಗೆಯಿಂದ ವಿನಾಯಿತಿ ಪಡೆಯುತ್ತದೆ, ಆದರೂ ಕೊಡುಗೆಗಳು ನಿಮ್ಮ ತೆರಿಗೆಯ ಆದಾಯವನ್ನು ವರ್ಷಕ್ಕೆ ಕಡಿಮೆ ಮಾಡುವುದಿಲ್ಲ.

  ಇದನ್ನೂ ಓದಿ: Investment Tips: ಮಾರುಕಟ್ಟೆ ಪರಿಣಿತರಿಂದ ಉತ್ತಮ ಹೂಡಿಕೆ ಸಲಹೆಗಳು; ಹೇಗೆ ಹೂಡಿಕೆ ಮಾಡಬೇಕು?

  ಒಟ್ಟಿನಲ್ಲಿ ಹೂಡಿಕೆಯ ತಂತ್ರಗಳನ್ನು ಅಳವಡಿಸಿಕೊಂಡು ನೀವು ಆರ್ಥಿಕ ಪ್ರಗತಿಯನ್ನು ಸಾಧಿಸಬಹುದಾಗಿದೆ. ವೇತನವನ್ನು ಸಂಪೂರ್ಣವಾಗಿ ಖರ್ಚು ಮಾಡುವ ಬದಲಿಗೆ ಹೂಡಿಕೆ ಯೋಜನೆಗಳಲ್ಲಿ ಹಣವನ್ನು ವಿನಿಯೋಗಿಸುವುದರಿಂದ ಲಾಭ ನಿಮಗೆ ಉಂಟಾಗುತ್ತದೆ ಎಂಬುದನ್ನು ಮರೆಯದಿರಿ. ಹೂಡಿಕೆಯಲ್ಲಿ ಕೂಡ ಕೆಲವೊಂದು ಸಲಹೆಗಳನ್ನು ಪಾಲಿಸುವುದರಿಂದ ನೀವು ಲಾಭವನ್ನು ಆನಂದಿಸಬಹುದಾಗಿದೆ. ನಿಮಗೆ ಚೆನ್ನಾಗಿ ಕಾರ್ಯನಿರ್ವಹಿಸುವ ಹೂಡಿಕೆ ತಂತ್ರವನ್ನು ಕೈಗೆತ್ತಿಕೊಳ್ಳಿ.

  Post Office Schemes - ಗಂಡು ಮಗು ಯೋಜನೆ - Postal PPF Saving Scheme for Male child:

  ಹೆಣ್ಣು ಮಕ್ಕಳಿಗಾಗಿ ಸಾಕಷ್ಟು ಯೋಜನೆಗಳು ಲಭ್ಯವಿದ್ದು ಅದರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಒಂದಾಗಿದೆ. ಇದು ಹೆಚ್ಚು ಜನಪ್ರಿಯ ಹೂಡಿಕೆ ಯೋಜನೆ ಎಂದೆನಿಸಿದೆ. ಆದರೆ ಗಂಡು ಹುಡುಗರಿಗಾಗಿ ಕೆಲವು ಸೀಮಿತ ಯೋಜನೆಗಳಿವೆ. ಅದರಲ್ಲೊಂದು ಪೊನ್‌ಮಗನ್ ಪೊದುವಾಯಿಪ್ಪ್ ನಿಧಿ. ಈ ಯೋಜನೆಯನ್ನು ತಮಿಳು ನಾಡು ಜಾರಿಗೆ ತಂದಿದ್ದು ಮಗುವಿಗೆ 10 ವರ್ಷವಾಗುವ ಮುನ್ನ ಆ ರಾಜ್ಯದ ಪೋಷಕರು ಮಗುವಿನ ಹೆಸರಿನಲ್ಲಿ ಪೋಸ್ಟ್ ಆಫೀಸ್‌ನಲ್ಲಿ ಖಾತೆ ತೆರೆಯಬಹುದಾಗಿದೆ.

  ಕಿಸಾನ್ ವಿಕಾಸ್ ಪಾತ್ರ (Kisan Vikas Patra):

  ಇದನ್ನು ಮೊದಲು 1988 ರಲ್ಲಿ ಪರಿಚಯಿಸಲಾಯಿತು ಹಾಗೂ ಕೆಲವೊಂದು ಬೇಡಿಕೆಗಳ ಮೇರೆಗೆ 2014 ರಲ್ಲಿ ಮರುಪರಿಚಯಿಸಲಾಯಿತು. ಇದು ಹೆಚ್ಚು ಜನಪ್ರಿಯ ಯೋಜನೆಯಾಗಿದೆ ಹಾಗೂ ಕೆಳ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಪ್ರಯೋಜನಕಾರಿಯಾಗಿದೆ. ಸರಕಾರದ ಉಳಿತಾಯ ಯೋಜನೆ ಇದಾಗಿದ್ದು ವಾರ್ಷಿಕವಾಗಿ ಆಕೆಯ/ಆತನ ಉಳಿತಾಯವನ್ನು ಒಂದು ದೊಡ್ಡ ಮೊತ್ತದಲ್ಲಿ ಹೂಡಿಕೆ ಮಾಡಬಹುದು. ಇದಕ್ಕೆ ಸರಕಾರವು ನಿರ್ಧರಿಸಿದ ಬಡ್ಡಿಯ ಮೊತ್ತವನ್ನು ಪಾವತಿಸುತ್ತದೆ. ಈ ಯೋಜನೆಯಡಿ ಹೂಡಿಕೆ ಮಾಡುವ ಮೊತ್ತ ಕನಿಷ್ಠ ರೂ 1000 ಆಗಿದೆ. ಹಾಗೂ ಗಂಡು ಮಗುವಿನ ವಯಸ್ಸು 18 ಕ್ಕಿಂತ ಕಡಿಮೆ ಇರಬೇಕು.

  ಇದನ್ನೂ ಓದಿ: Post Office Savings: 5 ವರ್ಷಕ್ಕೆ 14 ಲಕ್ಷ ಗ್ಯಾರಂಟಿ, ಅಂಚೆ ಹೂಡಿಕೆಯ ಈ ಸ್ಕೀಂ ಬಗ್ಗೆ ನಿಮಗೆ ಗೊತ್ತಾ?

  ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme):

  ಮಾರುಕಟ್ಟೆಯಲ್ಲಿ ಲಭ್ಯವಿರುವ ಸುರಕ್ಷಿತ ಹಾಗೂ ಸುಭದ್ರ ಉಳಿತಾಯ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಸರಕಾರವು ಹೂಡಿಕೆ ಮತ್ತು ರಿಟರ್ನ್‌ಗಳೆರಡನ್ನೂ ನಿರ್ವಹಿಸುತ್ತದೆ ಮತ್ತು ಹೂಡಿಕೆದಾರರಿಗೆ ಪಾವತಿಸುವ ಮಾಸಿಕ ಪಾವತಿಗಳನ್ನು ಖಾತ್ರಿಪಡಿಸುತ್ತದೆ. ಮಗುವು 10 ಹಾಗೂ 18 ವಯಸ್ಸಿನ ಒಳಗಿರಬೇಕು.

  ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಸಾರ್ವಜನಿಕ ಭವಿಷ್ಯ ನಿಧಿ - Public Provident Fund):

  ಇದೊಂದು ಉಳಿತಾಯ ಯೋಜನೆಯಾಗಿದ್ದು ತೆರಿಗೆ ಉಳಿಸುವ ಗುರಿ ಹೊಂದಿದೆ. ಸಾರ್ವಜನಿಕ ಭವಿಷ್ಯ ನಿಧಿಯನ್ನು ಮೊದಲ ಬಾರಿಗೆ 1968 ರಲ್ಲಿ ಪರಿಚಯಿಸಲಾಯಿತು. ನೀವು ಹೂಡಿಕೆದಾರರಾಗಿ ಈ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು ಹಾಗೂ ನೀವು ಹೂಡಿಕೆ ಮಾಡಿದ ಮೊತ್ತಕ್ಕೆ ವಿವಿಧ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು.

  ಇದನ್ನೂ ಓದಿ: Savings Tips: ಗಂಡು ಮಗುವಿನ ಉತ್ತಮ ಭವಿಷ್ಯಕ್ಕಾಗಿ ಯಾವ ಯೋಜನೆಗಳು ಉತ್ತಮ? ಇಲ್ಲಿದೆ ಸಂಪೂರ್ಣ ವಿವರ

  ಮೇಲೆ ತಿಳಿಸಿದ ಕೆಲವೊಂದು ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು ಗಂಡು ಮಕ್ಕಳಿಗಾಗಿ ಭಾರತದಲ್ಲಿ ಲಭ್ಯವಿರುವ ಯೋಜನೆಗಳಾಗಿವೆ. ನಿಮ್ಮ ಅಗತ್ಯಗಳು ಹಾಗೂ ಸಾಮರ್ಥ್ಯಗಳಿಗೆ ಅನುಗುಣವಾಗಿ ನಿಮ್ಮ ಹೆಸರು ಅಥವಾ ಮಗುವಿನ ಹೆಸರಿನಲ್ಲಿ ಯೋಜನೆಗಳಿಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹಣ ಉಳಿತಾಯ ಮಾಡಲು ಹಾಗೂ ನಿಮ್ಮ ಮಗುವಿನ ಸುರಕ್ಷಿತ ಭವಿಷ್ಯಕ್ಕಾಗಿ ಈ ಯೋಜನೆಗಳನ್ನು ವಿನ್ಯಾಸಗೊಳಿಸಲಾಗಿದೆ.
  Published by:Sharath Sharma Kalagaru
  First published: