Reliance Jio-ADIA Deal: ಜಿಯೋದಲ್ಲಿ 5,683 ಕೋಟಿ ರೂ. ಹೂಡಿಕೆ ಮಾಡಿದ್ದ ADIA ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು

ಭಾರತದ ಪ್ರಮುಖ ಸಂಸ್ಥೆಯಾದ ನ್ಯಾಷನಲ್​​​ ಇನ್ವೆಸ್ಟ್​ಮೆಂಟ್​​​ ಅಂಡ್​​​ ಇನ್ಫ್ರಾಸ್ಟ್ರಕ್ಚರ್ ಫಂಡ್​​(NIIF) ಸಹಯೋಗದಲ್ಲಿ ಎಡಿಐಎ, 2019 ಏಪ್ರಿಲ್​​ನಲ್ಲಿ ಏರ್ಪೋರ್ಟ್​ನ ಸಮೂಹ ಸಂಸ್ಥೆಯಾಗಿರುವ ಕಾಂಗ್ಲೋಮೆರೇಟ್​​ನ ಶೇ.49ರಷ್ಟು ಪಾಲು ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು.

news18-kannada
Updated:June 8, 2020, 3:15 PM IST
Reliance Jio-ADIA Deal: ಜಿಯೋದಲ್ಲಿ 5,683 ಕೋಟಿ ರೂ. ಹೂಡಿಕೆ ಮಾಡಿದ್ದ ADIA ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು
ರಿಲಾಯನ್ಸ್ ಇಂಡಸ್ಟ್ರೀಸ್
  • Share this:
ನವದೆಹಲಿ(ಜೂ.08): ಇತ್ತೀಚೆಗಷ್ಟೇ ಮುಖೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆಯಲ್ಲಿ ಅಬು ಧಾಬಿ ಮೂಲದ ಮತ್ತೊಂದು ಸಂಸ್ಥೆ ಬಂಡವಾಳ ಹೂಡಿಕೆ ಮಾಡಿದೆ. ಅಬು ಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ (ADIA) ಎಂಬ ಸಂಸ್ಥೆ ಜಿಯೋದ ಶೇ 1.16ರಷ್ಟು ಷೇರುಗಳನ್ನು5,683 ಕೋಟಿ ರೂಗಳಿಗೆ ಖರೀದಿಸಿದೆ. ಈ ಸಂಸ್ಥೆ ಬಗ್ಗೆ ಸಾರ್ವಜನಿಕರು ತಿಳಿದುಕೊಳ್ಳಲೇಬೇಕಾದ ಕೆಲವು ಸಂಗತಿಗಳು ಹೀಗಿವೆ.

ಅಬು ಧಾಬಿ ಇನ್ವೆಸ್ಟ್​ಮೆಂಟ್ ಅಥಾರಿಟಿ ಸಂಸ್ಥೆಯೂ ಇದುವರೆಗೂ ಸುಮಾರು 18 ಕಂಪನಿಗಳಲ್ಲಿ700 ಬಿಲಿಯನ್​ ಡಾಲರ್​​ನಷ್ಟು ತನ್ನ ಹಣವನ್ನು ಹೂಡಿಕೆ ಮಾಡಿದೆ. ಭಾರತದ ಪ್ರಮುಖ ಕಂಪನಿಗಳಲ್ಲೇ ಹತ್ತಾರು ವರ್ಷಗಳಿಂದ ಸಾವಿರಾರು ಕೋಟಿ ರೂ. ಹಣ ಹೂಡಿಕೆ ಮಾಡಿಕೊಂಡು ಬಂದಿದೆ ಎನ್ನುತ್ತಿವೆ ಮೂಲಗಳು.

ಮೊದಲಿಗೆ ಆರಂಭಿಕ ಸಾರ್ವಜನಿಕ ಕೊಡುಗೆಯಲ್ಲಿ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದ್ದ ಎಡಿಐಎ ಸಂಸ್ಥೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಹಣ ಇನ್ವೆಸ್ಟ್​ ಮಾಡಿದೆ. ರಿಯಲ್​ ಎಸ್ಟೇಟ್​, ಖಾಸಗಿ ಸಂಸ್ಥೆಗಳು ಸೇರಿದಂತೆ ಹಲವು ಕ್ಷೇತ್ರಗಳ ಕಂಪನಿಗಳ ಷೇರುಗಳನ್ನು ಹಣ ನೀಡಿ ಖರೀದಿಸಿದೆ.

ಭಾರತದ ಪ್ರಮುಖ ಸಂಸ್ಥೆಯಾದ ನ್ಯಾಷನಲ್​​​ ಇನ್ವೆಸ್ಟ್​ಮೆಂಟ್​​​ ಅಂಡ್​​​ ಇನ್ಫ್ರಾಸ್ಟ್ರಕ್ಚರ್ ಫಂಡ್​​(NIIF) ಸಹಯೋಗದಲ್ಲಿ ಎಡಿಐಎ, 2019 ಏಪ್ರಿಲ್​​ನಲ್ಲಿ ಏರ್ಪೋರ್ಟ್​ನ ಸಮೂಹ ಸಂಸ್ಥೆಯಾಗಿರುವ ಕಾಂಗ್ಲೋಮೆರೇಟ್​​ನ ಶೇ.49ರಷ್ಟು ಪಾಲು ಖರೀದಿಸುವ ಒಪ್ಪಂದ ಮಾಡಿಕೊಂಡಿತ್ತು.

ಇದನ್ನೂ ಓದಿ: Jio-ADIA deal - ಜಿಯೋಗೆ ಮತ್ತೊಂದು ಸಂಸ್ಥೆಯಿಂದ ಬಂಡವಾಳ; ADIAನಿಂದ 5,683 ಕೋಟಿ ರೂ ಹೂಡಿಕೆ

ಇನ್ನು, ಎಡಿಐಎ ವಿಂಡ್, ಸೋಲಾರ್​​​ ಮತ್ತು ಹೈಡ್ರೋ ಪ್ರಾಜೆಕ್ಟ್​ಗಳಲ್ಲಿಯೂ ಸುಮಾರು 495 ಬಿಲಿಯನ್​​ ಡಾಲರ್​​ನಷ್ಟು ಹಣ ಹೂಡಿಕೆ ಮಾಡಿದೆ. ಈ ಕಂಪನಿ 1976ರಿಂದಲೂ ಅಬು ಧಾಬಿ ಸರ್ಕಾರದ ಅಧಿಕೃತ ಪ್ರತಿನಿಧಿಯಾಗಿ ಜಾಗತಿಕವಾಗಿ ಹೂಡಿಕೆ ಮಾಡುತ್ತಾ ಬಂದಿದೆ. ವಿಶ್ವದೆಲ್ಲೆಡೆ ಹತ್ತಾರು ಕಂಪನಿಗಳಲ್ಲಿ ಅದು ಹೂಡಿಕೆ ಮಾಡಿ ನಿರ್ವಹಣೆ ನಡೆಸುತ್ತಿದೆ.

ಅಬುಧಾಬಿ ಹೂಡಿಕೆ ಪ್ರಾಧಿಕಾರ ಜಿಯೋದ ಶೇ 1.16 ರಷ್ಟು ಪಾಲು 5,683 ಕೋಟಿ ರೂ. ಗಳಿಗೆ ಖರೀದಿಸಿದೆ. ಈ ಮೂಲಕ ಜಿಯೋ ಸಂಸ್ಥೆಯ ಮೇಲೆ ಸತತ ಜಾಗತಿಕ ಹೂಡಿಕೆಯ ಒಟ್ಟು ಮೌಲ್ಯ 97,885.65 ಕೋಟಿ ರೂ.ಗಳಿಗೆ ಏರಿಕೆಯಾಗಲು ಸಹಾಯ ಮಾಡಿದೆ ಎಂದು ರಿಲಾಯನ್ಸ್ ಸಂಸ್ಥೆಯೇ ಅಧಿಕೃತವಾಗಿ ಹೇಳಿತ್ತು.
First published: June 8, 2020, 3:06 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading