ಈ ಅಂಡರ್​​ವೇರ್​ ತೊಳೆಯದೆ ಧರಿಸಬಹುದಂತೆ!; ಕಂಪನಿ ಉತ್ಪಾದಿಸಿದೆ ಕ್ರಿಬಿ ಹೆಸರಿನ ವಿಭಿನ್ನ ಒಳಉಡುಪು!

ಹರ್ಕ್ಲಿಯಾನ್​ ಎಂಬ ಕಂಪನಿ ಈ  ವಿಭಿನ್ನವಾದ ಒಳುಡುಪವನ್ನು ಸಿದ್ಧಪಡಿಸಿದೆ.. ಅದಕ್ಕೆ ‘ದ ವಲ್ಡ್ಸ್​​​​ ಕ್ಲೀನೆಸ್ಟ್​ ಅಂಡರ್​ ವೇರ್​’ ಎಂದು ಟ್ಯಾಗ್​ಲೈನ್​ ನೀಡಿದೆ. ಸದ್ಯ ಹರ್ಕ್ಲಿಯಾನ್ ಸಿದ್ಧಪಡಿಸಿದ ಅಂಡರ್​ವೇರ್​ ವಿಶೇಷತೆ ಭಾರೀ ಸುದ್ದಿಯಾಗುತ್ತಿದೆ.

ಕ್ರಿಬಿ ಅಂಡರ್​ವೇರ್

ಕ್ರಿಬಿ ಅಂಡರ್​ವೇರ್

 • Share this:
  ಮಾರುಕಟ್ಟೆಯಲ್ಲಿ ನಾನಾ ಕಂಪನಿಗಳ ಬ್ರಾಂಡೆಡ್​ ಒಳಉಡುಪುಗಳಿವೆ. ಕೆಲ ಕಂಪೆನಿಗಳು ಒಳಉಡುಪು ಸಿದ್ಧಪಡಿಸುವುದರಲ್ಲಿ ಫೇಮಸ್​. ಆದರೆ ಆ ಒಳಉಡುವನ್ನು ಒಂದು ಬಾರಿ ಧರಿಸಿ ನಂತರ ತೊಳೆಯಬೇಕಿದೆ. ಈವರೆಗೆ ಬಂದ ಅಂಡರ್​ವೇರ್​ಗಳನ್ನು ತೊಳೆದು ಒಣಗಿಸಿ ಧರಿಸುವಂತೆ ಉತ್ಪಾದಿಸಿದೆ. ಆದರೆ ಇಲ್ಲೊಂದು ಕಂಪನಿಯೊಂದು ತಿಂಗಳುಗಟ್ಟಲೆ ತೊಳೆಯದೆ ಧರಿಸಬಹುದಾದ ಉಳಉಡುಪನ್ನು ಸಿದ್ಧಪಡಿಸಿದೆ!.

  ಹೌದು. ಹರ್ಕ್ಲಿಯಾನ್​ ಎಂಬ ಕಂಪನಿ ಈ  ವಿಭಿನ್ನವಾದ ಒಳುಡುಪವನ್ನು ಸಿದ್ಧಪಡಿಸಿದೆ.. ಅದಕ್ಕೆ ‘ದ ವಲ್ಡ್ಸ್​​​​ ಕ್ಲೀನೆಸ್ಟ್​ ಅಂಡರ್​ ವೇರ್​’ ಎಂದು ಟ್ಯಾಗ್​ಲೈನ್​ ನೀಡಿದೆ. ಸದ್ಯ ಹರ್ಕ್ಲಿಯಾನ್ ಸಿದ್ಧಪಡಿಸಿದ ಅಂಡರ್​ವೇರ್​ ವಿಶೇಷತೆ ಭಾರೀ ಸುದ್ದಿಯಾಗುತ್ತಿದೆ.

  ಹರ್ಕ್ಲಿಯಾನ್ ಉತ್ಪಾದಿಸಿದ ಈ ಅಂಡರ್​ವೇರ್​ಗೆ ‘ಕ್ರಿಬಿ’ ಎಂದು ಹೆಸರನ್ನಿಟ್ಟಿದೆ. ಇದನ್ನು ಹರ್ಕ್​ಫೈಬರ್​ ಎಂಬ ವಸ್ತುವನ್ನು ಬಳಸಿ ಉತ್ಪಾದಿಸಲಾಗಿದೆಯಂತೆ. ಹರ್ಕ್​ಫೈಬರ್​ ಬಂಬೂ, ಬೀಚ್​ಪುಡ್​​,ಯೂಕಲಿಪ್ಟನ್​ ಮತ್ತು ತಾಮ್ರದ ಮಿಶ್ರಣ ಬಳಸಿರುವುದರಿಂದ ಬ್ಯಾಕ್ಟೀರಿಯಾಗಳು ಇದರಲ್ಲಿ ಸಾಯುತ್ತದೆ.

  ಅಚ್ಚರಿಯ ವಿಚಾರವೆಂದರೆ ತಿಂಗಳುಗಟ್ಟಲೇ ಒಗೆಯದೆ ಹಾಕಬಹುದಾದ ಅಂಡರ್​ವೇರ್​ ಅನ್ನು ಕಂಪೆನಿ ತಯಾರಿಸಿದೆ. ಕೆಲವರಿಗೆ ಈ ಅಂಡರ್​ವೇರ್​ ನೀರು ಉಳಿಸಿದರೆ. ಇನ್ನು ಕೆಲವರಿಗೆ ನಗು ಬರಿಸಿರಬಹುದು. ಅಂತೂ ಟ್ರಾವೆಲ್​ ಮಾಡುವವರಿಗೆ ಇಂತಹ ಅಂಡರ್​ವೇರ್​ ಹೇಳಿ ಮಾಡಿದಂತಿದೆ.
  Published by:Harshith AS
  First published: