ಸಂಸತ್ ಭವನದ ಮುಂದೆ ಕನಸಿನ ಕನ್ಯೆ ಹೇಮಾಮಾಲಿನಿ ಕಸ ಗುಡಿಸುವ ಸ್ಟೈಲ್​ ಕಂಡು ಬೆಕ್ಕಸ ಬೆರಗಾದ ಸಂಸದರು!

ಸನ್​ ಗ್ಲಾಸ್​ ಹಾಕಿಕೊಂಡು, ಕೈಯಲ್ಲಿ ಉದ್ದವಾದ ಪೊರಕೆ ಹಿಡಿದ ಹೇಮಾ ಮಾಲಿನಿ, ಪೊರಕೆಯನ್ನು ಸರಿಯಾಗಿ ಹಿಡಿಯಲಾಗದೆ, ಕಸ ಗುಡಿಸಲು ಪರದಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

Seema.R | news18
Updated:July 13, 2019, 3:59 PM IST
ಸಂಸತ್ ಭವನದ ಮುಂದೆ ಕನಸಿನ ಕನ್ಯೆ ಹೇಮಾಮಾಲಿನಿ ಕಸ ಗುಡಿಸುವ ಸ್ಟೈಲ್​ ಕಂಡು ಬೆಕ್ಕಸ ಬೆರಗಾದ ಸಂಸದರು!
ಹೇಮಾಮಾಲಿನಿ
Seema.R | news18
Updated: July 13, 2019, 3:59 PM IST
ನವದೆಹಲಿ (ಜು.13): ಬಾಲಿವುಡ್​ ಡ್ರಿಮ್​ ಗರ್ಲ್ ಎಂದೇ ಖ್ಯಾತಿ ಪಡೆದ​ ಹೇಮಾ ಮಾಲಿನಿ, ತನ್ನ ನಟನೆ ಮತ್ತು ಸೌಂದರ್ಯದಿಂದಲೇ ಎಲ್ಲರ ಮನಸ್ಸು  ಗೆದ್ದವರು, ಹೃದಯ ಕದ್ದವರು. ನಟನೆಯ ನಂತರ ರಾಜಕೀಯ ರಂಗಕ್ಕೆ ಬಂದ ಈ ಕನಸಿನ ಕನ್ಯೆ ಪ್ರಸ್ತುತ ಎರಡನೇ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಇಂದು ಸಂಸತ್​ಗೆ ಬಂದ ಸಂಸದೆ ಕೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸುವ ಮೂಲದ ಅಲ್ಲಿದ್ದ ಸಂಸದರನ್ನಷ್ಟೇ ಅಲ್ಲದೇ, ಇಡೀ ದೇಶದ ಗಮನ ಸೆಳೆದಿದ್ದಾರೆ.

ಅಷ್ಟಕ್ಕೂ ಅವರು ಪೊರಕೆ ಹಿಡಿದು ಕಸ ಗುಡಿಸಿದ್ದು, ಮಹಾತ್ಮ ಗಾಂಧೀಜಿ ಅವರ 150ನೇ ಜಯಂತ್ಯುತ್ಸವ ಅಂಗವಾಗಿ ಕೇಂದ್ರ ಸರ್ಕಾರ ಚಾಲನೆ ನೀಡಿರುವ ಸ್ವಚ್ಛ ಭಾರತ್​ ಅಭಿಯಾನಕ್ಕಾಗಿ ಸಂಸತ್​ ಭವನದ ಆವರಣವನ್ನು ಶುಚಿಗೊಳಿಸಿದರು. ಅವರ ಈ ಕಾರ್ಯಕ್ಕೆ ದೇಶಾದ್ಯಂತ ಅಪಾರ ಮೆಚ್ಚುಗೆ ವ್ಯಕ್ತವಾಗಿದೆಯಾದರೂ, ಅವರು ಕಸ ಗುಡಿಸುವ ಶೈಲಿ ಮಾತ್ರ ಟ್ರೋಲಿಗರಿಗೆ ಹಬ್ಬವಾಗಿದೆ.

ಸನ್​ ಗ್ಲಾಸ್​ ಹಾಕಿಕೊಂಡು, ಕೈಯಲ್ಲಿ ಉದ್ದವಾದ ಪೊರಕೆ ಹಿಡಿದ ಹೇಮಾ ಮಾಲಿನಿ ಪೊರಕೆಯನ್ನು ಸರಿಯಾಗಿ ಹಿಡಿಯಲಾಗದೆ, ಕಸ ಗುಡಿಸಲು ಪರದಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

#WATCH Delhi: BJP MPs including Minister of State (Finance) Anurag Thakur and Hema Malini take part in 'Swachh Bharat Abhiyan' in Parliament premises. pic.twitter.com/JJJ6IEd0bgಈ ಕುರಿತು ಮಾತನಾಡಿದ ಹೇಮಾಮಾಲಿನಿ ಅವರು,  ಮಹಾತ್ಮ ಗಾಂಧಿಯವರ 150ನೇ ಜನ್ಮ ದಿನಾಚರಣೆ ಅಂಗವಾಗಿ ಸಂಸತ್ತಿನ ಆವರಣದಲ್ಲಿ ಸ್ವಚ್ಛ ಭಾರತ್​ ಅಭಿಯಾನ ನಡೆಸಲು ಸ್ಪೀಕರ್​ ಮುಂದಾಗಿರುವುದು ಅತ್ಯಂತ ಶ್ಲಾಘನೀಯ, ನಾನು ಮುಂದಿನ ವಾರ ನನ್ನ ಕ್ಷೇತ್ರ ಮಥುರಾಕ್ಕೆ ತೆರಳಲಿದ್ದು, ಅಲ್ಲಿಯೂ ಕೂಡ ಈ ಅಭಿಯಾನ ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ.

ಹೇಮಾಮಾಲಿನಿ ಅವರ ಜೊತೆಗೆ ರಾಜ್ಯ ಖಾತೆ ಹಣಕಾಸು ಸಚಿವ ಅನುರಾಗ್​ ಠಾಕೂರ್ ಕೂಡ ಸಾತ್​ ನೀಡಿ ಸ್ವಚ್ಛ ಭಾರತ್​ ಅಭಿಯಾನದಲ್ಲಿ ಭಾಗಿಯಾಗಿ, ಪೊರಕೆ ಹಿಡಿದು ಕಸ ಗುಡಿಸಿದರು.

ಇದನ್ನು ಓದಿ: ವಿಶ್ವ ಬ್ಯಾಂಕ್​ ಎಂಡಿಯಾಗಿ ಎಸ್​ಬಿಐನ​ ವ್ಯವಸ್ಥಾಪಕ ನಿರ್ದೇಶಕಿ ಅನ್ಶುಲಾ ಕಾಂತ್​​ ಆಯ್ಕೆ

ಗಾಂಧೀಜೀ ಕನಸಿನ ಯೋಜನೆಯಂತೆ ದೇಶದ ಸ್ವಚ್ಛತೆ ಆದ್ಯತೆ ನೀಡಿದ ಪ್ರಧಾನಿ ಮೋದಿ ಗಾಂಧಿಜೀ 150ನೇ ಜಯಂತಿ ಸ್ವಚ್ಛ ಭಾರತ್​ ಅಭಿಯಾನಕ್ಕೆ 2014ರಲ್ಲಿ ಚಾಲನೆ ನೀಡಿದರು. ಈ ಅಭಿಯಾನದಡಿ 2014ರಲ್ಲಿ 9.6 ಕೋಟಿ ಶೌಚಾಲಯ ನಿರ್ಮಾಣ ಮಾಡಲಾಗಿದೆ

First published:July 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...