ಈ ರಾಜ್ಯದಲ್ಲಿ ಹೆಲ್ಮೆಟ್ ಮೌಂಟೆಡ್ ಕ್ಯಾಮೆರಾ ಧರಿಸುವಂತಿಲ್ಲ, ನಿಯಮ ಉಲ್ಲಂಘಿಸಿದರೆ ಪರವಾನಗಿ ರದ್ದು!

Helmet mounted cameras: ಹೆಲ್ಮೆಟ್​​ ಮೇಲೆ ಕ್ಯಾಮೆರಾ ಧರಿಸಿ ಓಡಾಡುವ ಸವಾರರು ರಸ್ತೆಯ ಮೇಲೆ ಕೇಂದ್ರಿ ಕರಿಸಲು ಸಾಧ್ಯವಿಲ್ಲ. ಮತ್ತು ವಿಡಿಯೋ ಚಿತ್ರೀಕರಣ ಬಗ್ಗೆ ಆಲೋಚಿಸುತ್ತಾರೆ. ಇದರಿಂದಾಗಿ ವಾಹನ ಸಹ ಚಾಲಕ ಮತ್ತು ಪಾದಚಾರಿಗಳಿಗೆ ಅಪಾಯವಾಗುತ್ತದೆ ಎಂದು ತಿಳಿಸಿದೆ.

ಹೆಲ್ಮೆಟ್​​ಗೆ ಧರಿಸುವ ಕ್ಯಾಮೆರಾ

ಹೆಲ್ಮೆಟ್​​ಗೆ ಧರಿಸುವ ಕ್ಯಾಮೆರಾ

 • Share this:
  ಬೈಕ್​ ಚಲಾಯಿಸುವವರು ಹೆಲ್ಮೆಟ್​​ಗೆ ಕ್ಯಾಮೆರಾ ಅಳವಡಿಸುವಂತಿಲ್ಲ. ಒಂದು ವೇಳೆ ಹೆಲ್ಮೆಟ್​​ಗೆ ಕ್ಯಾಮೆರಾ ಧರಿಸಿ ಓಡಾಡುವುದು ಕಂಡುಬಂದರೆ ವಾಹನ ಸವಾರನ ಪರವಾನಗಿ ರದ್ದುಗೊಳಿಸುವುದಾಗಿ ಕೇರಳ ಮೋಟಾರ್​ ವಾಹನ ಸಾರಿಗೆ ಇಲಾಖೆ ಸೂಚನೆ ನೀಡಿದೆ.

  ಹೆಲ್ಮೆಟ್​​ಗೆ ಕ್ಯಾಮೆರಾ ಧರಿಸುವು ಸದ್ಯ ಟ್ರೆಂಡ್​ ಆಗಿದೆ. ಬೈಕ್​ ಸವಾರರು ಹೆಚ್ಚಾಗಿ ಹೆಲ್ಮೆಟ್​​ಗೆ ಕ್ಯಾಮೆರಾ ಧರಿಸುತ್ತಾರೆ. ಅದಕ್ಕಾಗಿಯೇ ಮಾರುಕಟ್ಟೆಯಲ್ಲಿ ನಾನಾ ತರಹದ ಕ್ಯಾಮೆರಾಗಳು ಬಂದಿದೆ, ಗೊಪ್ರೊ, ಎಸ್​ಜೆ​ಕ್ಯಾಮ್​, ಇನ್​ಸ್ಟಾ360 ಹೀಗೆ ವಿವಿಧ ಕಂಪನಿಗಳ ಹೆಲ್ಮೆಟ್​​ಗೆ ಧರಿಸುವ ಕ್ಯಾಮೆರಾಗಳಿವೆ. ಆದರೀಗ ಕೇರಳ ಆರ್​ಟಿಒ ಬೈಕ್​​ ಸವಾರರು ಕ್ಯಾಮೆರಾ ಧರಿಸಿ ಓಡಾಡಿದರೆ ಮತ್ತು ವಿಡಿಯೋ ಚಿತ್ರೀಕರಿಸುವುದು ಕಾನೂನು ಬಾಹಿರ ಎಂದಿದೆ.

  ಹೆಲ್ಮೆಟ್​​ ಮೇಲೆ ಕ್ಯಾಮೆರಾ ಧರಿಸಿ ಓಡಾಡುವ ಸವಾರರು ರಸ್ತೆಯ ಮೇಲೆ ಕೇಂದ್ರಿ ಕರಿಸಲು ಸಾಧ್ಯವಿಲ್ಲ. ಮತ್ತು ವಿಡಿಯೋ ಚಿತ್ರೀಕರಣ ಬಗ್ಗೆ ಆಲೋಚಿಸುತ್ತಾರೆ. ಇದರಿಂದಾಗಿ ವಾಹನ ಸಹ ಚಾಲಕ ಮತ್ತು ಪಾದಚಾರಿಗಳಿಗೆ ಅಪಾಯವಾಗುತ್ತದೆ ಎಂದು ತಿಳಿಸಿದೆ.

  Toyota Car Offer: ಜೋಳ ನೀಡಿದರೆ ಸಾಕು ಫಾರ್ಚುನರ್ ಕಾರು ಖರೀದಿಗೆ ಸಿಗುತ್ತದೆ!

  ಎಂವಿ ಕಾಯ್ದೆಯಡಿ ಅಂತಹ ಯಾವುದೇ ನಿಯವಿಲ್ಲದಿದ್ದರು, ಪೊಲೀಸ್​ ಸೆಕ್ಷನ್​ 53 ಮೂಲಕ ಅಪರಾಧಿಗಳ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ. ಇನ್ನು ಎಮ್​ವಿಡಿ ಸೆಕ್ಷನ್​ 53ರ ಪ್ರಕಾರ ವಾಹನವನ್ನು ಮಾರ್ಪಾಡು ಮಾಡಿದ್ದರು ಸಹ ವಾಹನ ನೋಂದಣಿ ತಾತ್ಕಾಲಿಕ ರದ್ದು ಮಾಡುವುದಾಗಿ ತಿಳಿಸಿದೆ.

  ಹೆಲ್ಮೆಟ್​ ಕ್ಯಾಮೆರಾ ಉಪಯುಕ್ತವಾಗಿದೆ!

  ಸಾರ್ವಜನಿಕ ರಸ್ತೆಯಲ್ಲಿ ಓಡಾಡುವ ವೇಲೆ ಹೆಲ್ಮೆಟ್​ ಕ್ಯಾಮೆರಾಗಳು ಅತ್ಯಂತ ಮುಖ್ಯ ಮತ್ತು ಉಪಯುಕ್ತವಾಗಿದೆ. ವಿದೇಶದಲ್ಲಿ ಕಾರಿನ ಡ್ಯಾಶ್​ಬೋರ್ಡ್​ನಲ್ಲಿ ಕ್ಯಾಮೆರಾ ಅಳವಡಿಸುವುದು ಸಾಮಾನ್ಯವಾಗಿದೆ. ಭಾರತದಲ್ಲಿ ಈ ಪ್ರವೃತ್ತಿ ನಿಧಾನವಾಗಿ ಅಳವಡಿಸುತ್ತಿದ್ದಾರೆ. ಹೆಲ್ಮೆಟ್​ಗೆ ಕ್ಯಾಮೆರಾ ಅಳವಡಿಸಿದರೆ ಅಫಘಾತ ಸಮಯದಲ್ಲಿ ಪುರಾವೆ ಒದಗಿಸಲು ಸಹಕಾರಿಯಾಗುತ್ತದೆ.

  ವಿವಿಧ ದೇಶಗಳಲ್ಲಿ ವಿಭಿನ್ನ ನಿಯಮ!

  ಭಾರತದಲ್ಲಿ ಹೆಲ್ಮೆಟ್​ಗೆ ಕ್ಯಾಮೆರಾ ಬಳಸುವುದು ಕಾನೂನು ಬಾಹಿರವಲ್ಲ. ಆದರೂ ಮಿಲಿಟರಿ ಪ್ರದೇಶದಲ್ಲಿ ವಿಡಿಯೋ ಚಿತ್ರೀಕರಿಸುವಂತಿಲ್ಲ. ಆದರೆ ವಿವಿಧ ದೇಶಗಳು ಕೆಲವು ನಿಯಮವನ್ನು ಅಳವಡಿಸಿಕೊಂಡಿದೆ. ಅದರಲ್ಲಿ ಆಸ್ಟ್ರೀಯಾದಲ್ಲಿ ಕಣ್ಗಾವಳಿನ ಉದ್ದೇದಿಂದಾಗಿ ಡ್ಯಾಶ್​ಬೋರ್ಡ್​ ಕ್ಯಾಮೆರಾ ಅಳವಡಿಸುವಂತಿಲ್ಲ. ಮತ್ತು ಈ ನಿಯಮ ಉಲ್ಲಂಘಿಸಿದರೆ ದಂಡ ತೆರಬೇಕು.

  ಜರ್ಮನ್​ ಸರ್ಕಾರ ಡ್ಯಾಶ್​ಬೋರ್ಡ್​ ಕ್ಯಾಮೆರಾ ಅಳವಡಿಸಲು ಅನುಮತಿಸುತ್ತದೆ. ಲಕ್ಸೆಂಬರ್ಗ್​ನಲ್ಲಿ ಡ್ಯಾಶ್​ಬೋರ್ಡ್​​ ಕ್ಯಾಮೆರಾ ಖರೀದಿಸಬಹುದು ಆದರೆ ಸಾರ್ವಜನಿಕ ಸ್ಥಳಗಳಲ್ಲಿ ರೆಕಾರ್ಡ್​ ಮಾಡುವಂತಿಲ್ಲ.
  Published by:Harshith AS
  First published: