ರಷ್ಯಾದಲ್ಲಿ ಎರಡು ಹೆಲಿಕಾಪ್ಟರ್​ಗಳು ಪರಸ್ಪರ ಡಿಕ್ಕಿ; 18 ಮಂದಿ ದುರ್ಮರಣ

news18
Updated:August 4, 2018, 4:09 PM IST
ರಷ್ಯಾದಲ್ಲಿ ಎರಡು ಹೆಲಿಕಾಪ್ಟರ್​ಗಳು ಪರಸ್ಪರ ಡಿಕ್ಕಿ; 18 ಮಂದಿ ದುರ್ಮರಣ
  • Advertorial
  • Last Updated: August 4, 2018, 4:09 PM IST
  • Share this:
ನ್ಯೂಸ್ 18 ಕನ್ನಡ

ಮಾಸ್ಕೋ (ಆ.4) : ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಎಂಐ 8 ಹೆಲಿಕಾಪ್ಟರ್ ಮತ್ತೊಂದು ಹೆಲಿಕಾಪ್ಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಎಂಐ 8 ನಲ್ಲಿ ಪ್ರಯಾಣಿಸುತ್ತಿದ್ದ 18 ಮಂದಿ ಮೃತಪಟ್ಟ ಧಾರುಣ ಘಟನೆ ಸಿಬಿರಿಯಾದ ಕ್ರಸ್ನೋಯಾರ್ಸ್ ವಲಯದಲ್ಲಿ ಸಂಭವಿಸಿದೆ.

ಈ ಹೆಲಿಕಾಪ್ಟರ್ ಅನ್ನು ಉಟೈರ್ ಏರ್ಲೈನ್ ನಿರ್ವಹಿಸುತ್ತಿತ್ತು. ಘಟನೆಯಲ್ಲಿ 15 ಮಂದಿ ಪ್ರಯಾಣಿಕರು ಸೇರಿದಂತೆ ಮೂರು ಮಂದಿ ಸಿಬ್ಬಂದಿ ಮೃತಪಟ್ಟಿರುವುದು ದೃಢವಾಗಿದೆ.

ತೈಲ ಕಂಪನಿಯಲ್ಲಿ ಕೆಲಸ ಮಾಡುವ 15 ಮಂದಿಯನ್ನುಈ ಚಾಪರ್ ಹೊತ್ತೊಯ್ಯುತ್ತಿತ್ತು. ಇದೇ ವೇಳೆ ಯಂತ್ರವನ್ನು ಸಾಗಿಸುತ್ತಿದ್ದ ಮತ್ತೊಂದು ಹೆಲಿಕಾಪ್ಟರ್ಗೆ ಈ ಚಾಪರ್ ಡಿಕ್ಕಿ ಹೊಡೆದಿದೆ. ಪ್ರಯಾಣಿಕರಿದ್ದ ಚಾಪರ್ ಸಂಪೂರ್ಣ ಛಿದ್ರವಾಗಿದ್ದು ಅದರೊಳಗಿದ್ದ ಎಲ್ಲರೂ ಅಸುನೀಗಿದ್ದಾರೆ. ಯಂತ್ರ ಸಾಗಿಸುತ್ತಿದ್ದ ಹೆಲಿಕಾಪ್ಟರ್ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ.

ಘಟನೆ ಸಂಬಂಧ ವಿಮಾನಯಾನ ಸುರಕ್ಷತಾ ಮಾನದಂಡಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿದ ಸಲುವಾಗಿ ಕ್ರಿಮಿನಲ್ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ.

ಸ್ಥಳೀಯ ಅಧಿಕಾರಿ ಹೇಳುವ ಪ್ರಕಾರ, ತಾಂತ್ರಿಕ ದೋಷ ಅಥವಾ ಪೈಲೆಟ್ ತಪ್ಪಿನಿಂದ ಈ ಅವಘಡ ಸಂಭವಿಸಿದೆ. ಅಪಘಾತ ಸಂಭವಿಸಿದ ಸ್ಥಳದಲ್ಲಿ ಎಂಐ 8 ಹೆಲಿಕಾಪ್ಟರ್ನ ಬ್ಲ್ಯಾಕ್ ಬಾಕ್ಸ್ ಅನ್ನು ವಶಕ್ಕೆ ಪಡೆಯಲಾಗಿದ್ದು, ಘಟನೆ ಕಾರಣ ಏನು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ. ಆದರೆ, ಬ್ಲ್ಯಾಕ್ಬಾಕ್ಸ್ನ ಚಿತ್ರಣಗಳ ಕೂಡ ಅಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.
First published:August 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ