ನೆರೆಪೀಡಿತ ಉತ್ತರಾಖಂಡ್​ನಲ್ಲಿ ವಿದ್ಯುತ್ ತಂತಿ ಸುತ್ತಿಕೊಂಡು ಹೆಲಿಕಾಪ್ಟರ್ ಪತನ; 3 ಸಾವು

ಉತ್ತರಾಖಂಡ್​ನಲ್ಲಿ ಅತೀ ಹೆಚ್ಚು ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಗಳಲ್ಲಿ ಉತ್ತರಕಾಶಿಯೂ ಒಂದು. ಇಲ್ಲಿ ಮಳೆ ಮತ್ತು ಪ್ರವಾಹಕ್ಕೆ ಸತ್ತವರ ಸಂಖ್ಯೆ 12ಕ್ಕೇರಿದೆ. ಐದಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.

Vijayasarthy SN | news18
Updated:August 21, 2019, 2:37 PM IST
ನೆರೆಪೀಡಿತ ಉತ್ತರಾಖಂಡ್​ನಲ್ಲಿ ವಿದ್ಯುತ್ ತಂತಿ ಸುತ್ತಿಕೊಂಡು ಹೆಲಿಕಾಪ್ಟರ್ ಪತನ; 3 ಸಾವು
ಉತ್ತರಕಾಶಿಯಲ್ಲಿ ದುರಂತಕ್ಕೀಡಾದ ಹೆಲಿಕಾಪ್ಟರ್
  • News18
  • Last Updated: August 21, 2019, 2:37 PM IST
  • Share this:
ಡೆಹ್ರಾಡೂನ್(ಆ. 21): ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಂತ್ರಸ್ತರ ಸಹಾಯಕ್ಕೆ ಹೋದ ಹೆಲಿಕಾಪ್ಟರ್​ವೊಂದು ಅಪಘಾತಕ್ಕೀಡಾಗಿ ಮೂವರು ಸಾವನ್ನಪ್ಪಿರುವ ದುರದೃಷ್ಟಕರ ಘಟನೆ ಉತ್ತರಾಖಂಡ್ ರಾಜ್ಯದ ಉತ್ತರಕಾಶಿಯಲ್ಲಿ ವರದಿಯಾಗಿದೆ. ಮೇಲಿದ್ದ ವಿದ್ಯುತ್ ತಂತಿಗೆ ಹೆಲಿಕಾಪ್ಟರ್ ಸಿಲುಕಿಕೊಂಡು ಪತನಗೊಂಡು ಈ ದುರಂತ ಸಂಭವಿಸಿದೆ. ಕ್ಯಾಪ್ಟನ್ ಲಾಲ್, ಹೆಲಿಕಾಪ್ಟರ್ ಸಹ-ಚಾಲಕ ಶೈಲೇಶ್ ಮತ್ತು ಸ್ಥಳೀಯ ವ್ಯಕ್ತಿ ರಾಜಪಾಲ್ ಅವರು ಮೃತ ಮೂವರಾಗಿದ್ದಾರೆ.

ನೆರೆಪೀಡಿತ ಉತ್ತರಕಾಶಿಯ ಮೋಲ್ಡಿ ಎಂಬಲ್ಲಿ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಗುತ್ತಿತ್ತು. ಹೆರಿಟೇಜ್ ಏವಿಯೇಶನ್ ಎಂಬ ಸಂಸ್ಥೆಗೆ ಸೇರಿದ್ದ ಹೆಲಿಕಾಪ್ಟರ್ ಅನ್ನು ಬಳಸಿಕೊಂಡು ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತು. ಹೆಲಿಕಾಪ್ಟರ್ ಕೆಳಗಿಳಿಯುವ ವೇಳೆ ಎಲೆಕ್ಟ್ರಿಕ್ ವೈರ್​ಗೆ ಸಿಕ್ಕಿಕೊಂಡು ಪತನಗೊಂಡಿತೆನ್ನಲಾಗಿದೆ. ಈ ಪ್ರದೇಶದಲ್ಲಿ ಭಾರತೀಯ ವಾಯುಸೇನೆಯದ್ದೊಂದು ಸೇರಿ ಒಟ್ಟು ಮೂರು ಹೆಲಿಕಾಪ್ಟರ್​ಗಳನ್ನು ಸಂತ್ರಸ್ತರ ಸಹಾಯಕ್ಕೆ ಬಳಸಿಕೊಳ್ಳಲಾಗಿತ್ತು. ಇದೀಗ ಎನ್​ಡಿಆರ್​ಎಫ್​ನ 10 ಮಂದಿಯನ್ನು ಕೂಡಲೇ ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ಪಿ. ಚಿದಂಬರಂ ಅವರನ್ನು ಭೇಟೆಯಾಡುತ್ತಿರುವುದು ನಾಚಿಕೆಗೇಡಿನ ಸಂಗತಿ; ಪ್ರಿಯಾಂಕ ಗಾಂಧಿ ಖಂಡನೆ!

ಉತ್ತರಾಖಂಡ್​ನಲ್ಲಿ ಅತೀ ಹೆಚ್ಚು ಪ್ರವಾಹಕ್ಕೆ ತುತ್ತಾಗಿರುವ ಜಿಲ್ಲೆಗಳಲ್ಲಿ ಉತ್ತರಕಾಶಿಯೂ ಒಂದು. ಇಲ್ಲಿ ಮಳೆ ಮತ್ತು ಪ್ರವಾಹಕ್ಕೆ ಸತ್ತವರ ಸಂಖ್ಯೆ 12ಕ್ಕೇರಿದೆ. ಐದಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ