ಕೇರಳ ಬಳಿಕ ದೆಹಲಿಯಲ್ಲಿ ಭಾರೀ ಮಳೆ; ರಸ್ತೆಗಳು ಸಂಪೂರ್ಣ ಜಲಾವೃತ

news18
Updated:August 28, 2018, 11:33 AM IST
ಕೇರಳ ಬಳಿಕ ದೆಹಲಿಯಲ್ಲಿ ಭಾರೀ ಮಳೆ; ರಸ್ತೆಗಳು ಸಂಪೂರ್ಣ ಜಲಾವೃತ
news18
Updated: August 28, 2018, 11:33 AM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.28): ಕೇರಳ, ಕರ್ನಾಟಕದಲ್ಲಿ ಅವಾಂತರ ಸೃಷ್ಟಿಸಿದ ಮಳೆ ಈಗ ಕೊಂಚ ಬಿಡುವು ನೀಡಿದ್ದು ಉತ್ತರ ಭಾರತದಲ್ಲಿ ತನ್ನ ಆರ್ಭಟ ತೋರಿದೆ.

ದೆಹಲಿ ಮತ್ತು ಗುರುಂಗಾವ್​ನಲ್ಲಿ ಮಂಗಳವಾರ ನಸುಕಿನಲ್ಲಿ ಸುರಿದ ಭಾರೀ ಮಳೆಗೆ ಜನರು ತತ್ತರಿಸಿದ್ದು, ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದೆ. ಭಾರೀ ಮಳೆಯಿಂದಾಗಿ ಟ್ರಾಫಿಕ್​ ಜಾಮ್​ ಉಂಟಾಗಿದೆ. ಇನ್ನು ಗುರುಗಾಂವ್​ನ ಕೆಲವು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.



ತಗ್ಗು ಪ್ರದೇಶದ ಬಡಾವಣೆಗಳಿಗೆ ನೀರುನುಗ್ಗಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಸರಿಯಾದ ನಾಗರೀಕ ಸೌಲಭ್ಯಗಳನ್ನು ನಿರ್ವಹಣೆ ಮಾಡದ ಬಗ್ಗೆ ಹಲವು ನಿವಾಸಿಗಳು ಟ್ವೀಟರ್​ ಮೂಲಕ  ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊಣಕಾಲಿನವರೆಗೆ ನೀರು ಇರುವ ಚಿತ್ರಣವೊಂದನ್ನು ಪೋಸ್ಟ್​ ಮಾಡಿರುವ ನಿವಾಸಿಯೊಬ್ಬರು  ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಕೇರಳ ಪ್ರವಾಹಕ್ಕೆ ಸಹಾಯ ಮಾಡಿದ್ದಾರೆ. ಇದೇ ರೀತಿ ಎರಡು ಗಂಟೆ ಮಳೆ ಸುರಿದರೆ ನಿಮ್ಮ ರಾಜ್ಯದಲ್ಲಿ ಅದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದಿದ್ದಾರೆ.



ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ತೀನ್​ ಮೂರ್ತಿ ಭವನ್​ ಮತ್ತು ಆರ್​ಕೆ ಪುರಂನಲ್ಲಿ ಗುಡುಗು ಮಿಂಚಿನ ಸಹಿತ ಭಾರೀ ಮಳೆ ಸುರಿದಿದೆ. ಮಂಗಳವಾರ ಮುಂಜಾನೆ 3 ರಿಂದ 4ಗಂಟೆ ಸಮಯದಲ್ಲಿ ಭಾರೀ ಮಳೆ ಸುರಿದಿದ್ದು ಅನೇಕ ಮರಗಳು ಧರೆಗೆ ಉರುಳಿದ್ದು, ವಿದ್ಯುತ್​ ಸಂಪರ್ಕ ಕಡಿತಗೊಂಡಿದೆ



ಖಾಸಗಿ ಹವಾಮಾನ ಸಂಸ್ಥೆ ಸ್ಕೈಮ್ಯಾಟ್​ ದೆಹಲಿಯಲ್ಲಿ ಗುಡುಗು ಸಹಿತ ಭಾರೀ ಮಳೆ ಇನ್ನು ಎರಡು-ಮೂರುಗಂಟೆ ಮುಂದುವರೆಯಲಿದೆ ಎಂದಿದೆ. ದೆಹಲಿ ಟ್ರಾಫಿಕ್​ ಪೊಲೀಸ್​  ಜನರಿಗೆ ಎಚ್ಚರಿಕೆ ನೀಡಿ ಟ್ವೀಟ್​ ಮಾಡಿದ್ದಾರೆ,

 
First published:August 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ