ಬ್ರೆಜಿಲ್: ಈ ಬಿರು ಬೇಸಿಗೆಯಲ್ಲಿ (Summer) ಬ್ರಿಜಿಲ್ (Brazil) ದೇಶ ಮಳೆಯಿಂದಾಗಿ (Rain) ತತ್ತರಿಸಿ ಹೋಗಿದೆ. ದಿಢೀರ್ ಅಂತ ಕಾಣಿಸಿಕೊಂಡ ಭಾರಿ ಗಾಳಿ (Heavy Winds), ಮಳೆಯಿಂದಾಗಿ ಪೆಟ್ರೊಪೊಲಿಸ್ (Petrpolis) ನಗರ (City) ತತ್ತರಿಸಿ ಹೋಗಿದೆ. ನಿರಂತರ ಮಳೆ ಹಾಗೂ ಭಾರಿ ಗಾಳಿಯಿಂದಾಗಿ ಜನರು ಮನೆಯಿಂದ ಹೊರ ಬರುವುದಕ್ಕೆ ಪರಿತಪಿಸುವಂತಾಗಿದೆ. ಮನೆಯಲ್ಲಿ ಇದ್ದರೂ ಪ್ರವಾಹದ (Flood) ನೀರು ಮನೆಯೊಳಗೆ ನುಗ್ಗುತ್ತಿದ್ದು, ಅಲ್ಲಿಯೂ ಸುರಕ್ಷತೆ ಇಲ್ಲವಾಗಿದೆ. ಒಂದೇ ದಿನ ಮೂರು ತಿಂಗಳಿಗಾಗುವಷ್ಟು ಮಳೆಯನ್ನು ಸುರಿಸಿದೆ ಅಂತ ತಜ್ಞರು (Experts) ವಿಶ್ಲೇಷಿಸಿದ್ದಾರೆ. ಬೀದಿಗಳೆಲ್ಲ ನದಿಗಳಾಂತಾಗಿದ್ದು, ಮನೆಯೊಳಗೂ ನೀರು ನುಗ್ಗುತ್ತಿದೆ. ರಿಯೋ ಡಿ ಜನೈರೋ (Rio de Janeiro
) ಎಂಬ ಪ್ರದೇಶದ ಉತ್ತರದ ಬೆಟ್ಟಗಳು ಕುಸಿದಿದ್ದು,. ಪ್ರವಾಸಿ ಮಂದಿರಗಳು, ಮನೆಗಳೆಲ್ಲ ಧರಾಶಾಹಿಯಾಗಿವೆ.
ಮೂರು ಗಂಟೆಗಳಲ್ಲಿ ಮೂರು ತಿಂಗಳಷ್ಟು ಮಳೆ!
ಪೆಟ್ರೋಪೊಲಿಸ್ ಸೇರಿದಂತೆ ಸುತ್ತಮುತ್ತಲ ನಗರಗಳಲ್ಲಿ ದಿಢೀರ್ ಅಂತ ಮಳೆ ಶುರುವಾಗಿದೆ. ಗುಡುಗು ಸಹಿತ ಭಾರೀ ಗಾಳಿಯೂ ಬೀಸುತ್ತಿದೆ. ಭಾರಿ ಮಳೆಯಿಂದಾಗಿ ನದಿಗಳೆಲ್ಲ ತುಂಬಿ ಹರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ತಲೆದೂರಿದೆ. ಕೇವಲ ಮೂರು ಗಂಟೆಗಳಲ್ಲಿ ದಾಖಲೆಯ ಪ್ರಮಾಣದ ಮಳೆಯಾಗಿದೆ. ಹವಾಮಾನ ಇಲಾಖೆ ತಜ್ಞರು ಹೇಳುವ ಪ್ರಕಾರ ಮೂರು ತಿಂಗಳು ಸುರಿಯುವಷ್ಟು ಮಳೆ ಮೂರೇ ಗಂಟೆಯಲ್ಲಿ ಬಂದಿದೆಯಂತೆ!
ಮಹಾ ಪ್ರವಾಹಕ್ಕೆ ಸಿಲುಕಿ 78 ಮಂದಿ ಸಾವು
ರಿಯೊ ಡಿ ಜನೈರೊ ಸೇರಿದಂತೆ ಹಲವೆಡೆ ಗುಡ್ಡಗಳು, ಬೆಟ್ಟಗಳು ಕುಸಿಯುತ್ತಿವೆ. ಹೀಗಾಗಿ ಮನೆ, ಪ್ರವಾಸಿ ಮಂದಿರಗಳೆಲ್ಲ ಭೂಮಿಯೊಳಗೆ ಹೂತು ಹೋಗಿದೆ. ಮತ್ತೊಂದೆಡೆ ಪ್ರವಾಹದಿಂದಾಗಿಯೂ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಮಹಾ ದುರಂತದಲ್ಲಿ ಸದ್ಯ 78 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಇದನ್ನೂ ಓದಿ: Viral Video: ಮಗನ ಮದುವೆಯಲ್ಲಿ ಕುಣಿಯುತ್ತಲೇ ಪ್ರಾಣಬಿಟ್ಟ ಅಮ್ಮ! ಕಣ್ಣಲ್ಲಿ ನೀರು ತರಿಸೋ ದೃಶ್ಯ ಇಲ್ಲಿದೆ
ಮುಂದುವರೆದ ರಕ್ಷಣಾ ಕಾರ್ಯ
78 ಜನ ಸತ್ತಿದ್ದು ವರದಿಯಾಗಿದ್ದು. ಅದೆಷ್ಟೋ ಮಂದಿ ಪ್ರವಾಹಕ್ಕೆ ಸಿಲುಕಿ ಕಾಣೆಯಾಗಿದ್ದಾರೆ. ಇನ್ನು ಭೂಕುಸಿತದಲ್ಲಿ ಅನೇಕರು ಸಿಲುಕಿ ಕೊಂಡಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಸುಮಾರು 30ಕ್ಕೂ ಹೆಚ್ಚು ಜನರನ್ನು ಜೀವಂತವಾಗಿ ರಕ್ಷಿಸಲಾಗಿದೆ. ಹೆಲಿಕಾಪ್ಟರ್ ಬಳಸಿ, ರಕ್ಷಣಾ ಕಾರ್ಯಕರ್ತರು ಬಿರುಸಿನ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸುಮಾರು 300 ಜನರನ್ನು ನಿರಾಶ್ರಿತರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರವಾಹ ಪೀಡಿತ ನಗರಗಳಲ್ಲಿ ಸುಮಾರು 180ಕ್ಕೂ ಹೆಚ್ಚು ಅಗ್ನಿಶಾಮಕ ದಳದವರು ಮತ್ತು ಇತರ ರಕ್ಷಣಾ ಕಾರ್ಯಕರ್ತರು ತುರ್ತು ಪರಿಸ್ಥಿತಿಗೆ ಸ್ಪಂದಿಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗಾಗಿ 400 ಸೈನಿಕರು ನಿಯೋಜನೆಗೊಂಡಿದ್ದಾರೆ.
ಕಣ್ಣೇದುರೆ ಕುಸಿಯುತ್ತಿರುವ ಮನೆಗಳು
ಬ್ರೇಜಿಲ್ನ ಹಲವು ನಗರಗಳಲ್ಲಿ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ತಮ್ಮ ಪ್ರಾಣ ಉಳಿದರೆ ಸಾಕಪ್ಪ ಅಂತ ಜನರು ಸುರಕ್ಷಿತ ಪ್ರದೇಶಕ್ಕೆ ಹೋಗುತ್ತಿದ್ದಾರೆ. ಅದೆಷ್ಟೋ ಮಂದಿ ಪ್ರವಾಹದಲ್ಲೇ ಕೊಚ್ಚಿಕೊಂಡು ಹೋಗಿದ್ದಾರೆ. ಇನ್ನು ಕಣ್ಣೇದುರೇ ಮನೆ ಕುಸಿದು ಬಿದ್ದರೂ ಏನೂ ಮಾಡಲಾಗದ ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ.
ಇದನ್ನೂ ಓದಿ: ಇಲ್ಲಿ Hijab ಗಲಾಟೆ, ಅಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ! ಮಾದರಿಯಾಯ್ತು ಕೇರಳದ ಈ ಗ್ರಾಮ
ಕಣ್ಣೆದುರೇ ಭೂಮಿಯಲ್ಲಿ ಹೂತು ಹೋದ ಹುಡುಗಿ
24 ವರ್ಷದ ವೆಂಡೆಲ್ ಪಿಯೊ ಲೌರೆಂಕೊ ಎಂಬಾತ ಪ್ರವಾಹದ ಭೀಕರ ಪರಿಸ್ಥಿತಿಯನ್ನು ವಿವರಿಸಿದ್ದಾನೆ. ಒಂದು ಹುಡುಗಿಯಂತೂ ನನ್ನ ಕಣ್ಣೆದುರೇ ಜೀವಂತವಾಗಿ ಭೂಮಿಯೊಳಗೆ ಹೂತು ಹೋದಳು ಎಂದಿದ್ದಾನೆ.
ನಾನು ಅವಳಿಗೆ ಸಹಾಯ ಮಾಡುವ ಪರಿಸ್ಥಿತಿಯಲ್ಲೇ ಇರಲಿಲ್ಲ. ಯಾಕೆಂದ್ರೆ ನಾನು ಅಪಾಯದ ಸ್ಥಳದಲ್ಲೇ ನಿಂತಿದ್ದೆ. ಹೀಗಾಗಿ ಸುರಕ್ಷಿತ ಸ್ಥಳಕ್ಕೆ ಓಡಿ ಬರುವುದು ನನಗೆ ಮುಖ್ಯವಾಗಿತ್ತು. ಆ ಬಾಲಕಿಯನ್ನು ರಕ್ಷಣೆ ಮಾಡಲು ಆಗದೇ ಇರುವುದಕ್ಕೆ ನನಗೆ ಈಗ ಅಪರಾಧಿ ಭಾವನೆ ಕಾಡುತ್ತಿದೆ ಎಂದಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ