ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ: 7 ಸಾವು: ಮಳೆಯಿಂದ ​ಕ್ಯಾಂಪ್​ನಲ್ಲೇ ಉಳಿದ ಅಮರನಾಥ ಯಾತ್ರಿಕರು

news18
Updated:July 1, 2018, 9:08 AM IST
ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ: 7 ಸಾವು: ಮಳೆಯಿಂದ ​ಕ್ಯಾಂಪ್​ನಲ್ಲೇ ಉಳಿದ ಅಮರನಾಥ ಯಾತ್ರಿಕರು
  • News18
  • Last Updated: July 1, 2018, 9:08 AM IST
  • Share this:
ನ್ಯೂಸ್​ 18 ಕನ್ನಡ
ನವದೆಹಲಿ (ಜುಲೈ 1): ಜಮ್ಮು ಕಾಶ್ಮೀರದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಪ್ರವಾಹ ಭೀತಿ ಎದುರಾಗಿದೆ. ಮಳೆಯಿಂದಾಗಿ ಈಗಾಗಲೇ ಜಮ್ಮು ಮತ್ತು ಅರುಣಾಚಲಪ್ರದೇಶದಲ್ಲಿ 7 ಜನ ನೀರಿನಲ್ಲಿ ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಮಳೆಯ ಅಬ್ಬರದಿಂದಾಗಿ ಅಮರನಾಥ ಯಾತ್ರೆಗೆ ತೆರಳಿರುವ ಯಾತ್ರಿಗರು ಕ್ಯಾಂಪ್​ನಲ್ಲೇ ಉಳಿದುಕೊಳ್ಳುವಂತಾಗಿದೆ.

ಜಮ್ಮು ಕಾಶ್ಮೀರದ ಕೇಂದ್ರ ಭಾಗ, ಶ್ರೀನಗರದಲ್ಲಿ ಇಂದು ಕೂಡ ಹೆಚ್ಚಿನ ಮಳೆಯಾಗುವ ಸೂಚನೆ ಇರುವುದರಿಂದ ಹೆಚ್ಚಿನ ಮುಂಜಾಗ್ರತೆ ವಹಿಸಲಾಗಿದೆ. ನೂರಾರು ಮನೆಗಳು ನೀರಿನಿಂದ ಆವೃತವಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲು ಪ್ರಯತ್ನ ನಡೆದಿತ್ತು.

ನಿಲ್ಲದ ಭಾರೀ ಮಳೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ತಿಳಿಯಲು ರಾಜ್ಯಪಾಲ ಎನ್​.ಎನ್. ವೋಹ್ರಾ ನಿನ್ನೆ ತುರ್ತು ಸಭೆ ಕರೆದು ಪರಿಸ್ಥಿತಿಯ ಮಾಹಿತಿ ಪಡೆದುಕೊಂಡರು.ಅಮರಯಾತ್ರೆಯಲ್ಲಿ ಪಾಲ್ಗೊಳ್ಳಲು ಹಲವು ರಾಜ್ಯಗಳಿಂದ ಆಗಮಿಸಿದ್ದ 5 ಸಾವಿರ ಜನರು ಮತ್ತು ಪಹಲ್ಗಾಂ ಬೇಸ್​ ಕ್ಯಾಂಪ್​ನಿಂದ ಯಾತ್ರೆಗೆ ಹೊರಟಿದ್ದ 2 ಸಾವಿರ ಯಾತ್ರಿಗರು ಮಳೆಯಿಂದಾಗಿ ವ್ಯತಿರಿಕ್ತ ವಾತಾವರಣ ನಿರ್ಮಾಣವಾಗಿರುವುದರಿಂದ ಪರದಾಡುವಂತಾಗಿದೆ. ಯಾತ್ರೆ ಮುಂದುವರಿಸಿದ್ದ ಕೆಲ ಯಾತ್ರಿಗರು ಕೂಡ ಮಳೆಯ ನೀರು ಮಾರ್ಗದಲ್ಲಿ ತುಂಬಿಕೊಂಡಿದ್ದರಿಂದ ವಾಪಾಸು ಬರುವಂತಾಯಿತು.  ಮಳೆ ನಿಂತು ಮಾರ್ಗ ಸರಿಯಾಗುವವರೆಗೂ ಯಾತ್ರೆಯನ್ನು ಮುಂದುವರಿಸಲು ಸಾಧ್ಯವಿಲ್ಲ. ಜೂನ್​ 28ಕ್ಕೆ ಆರಂಭವಾಗಬೇಕಾಗಿದ್ದ ಯಾತ್ರೆ ಮಳೆಯ ಕಾರಣಕ್ಕೆ ವಿಳಂಬವಾಗುತ್ತಿದೆ. ಆಗಸ್ಟ್​ 26ರ ರಕ್ಷಾ ಬಂಧನ ದಿನದ ವೇಳೆಗೆ ಈ ಯಾತ್ರೆ ಅಂತ್ಯಗೊಳ್ಳಲಿದೆ.
First published:July 1, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading