• Home
 • »
 • News
 • »
 • national-international
 • »
 • Mumbai Rain| ಮಳೆಯ ಆರ್ಭಟಕ್ಕೆ ಮುಂಬೈ ತತ್ತರ; ಮುಂದಿನ ನಾಲ್ಕು ದಿನಕ್ಕೆ ಆರೆಂಜ್ ಅಲರ್ಟ್​!

Mumbai Rain| ಮಳೆಯ ಆರ್ಭಟಕ್ಕೆ ಮುಂಬೈ ತತ್ತರ; ಮುಂದಿನ ನಾಲ್ಕು ದಿನಕ್ಕೆ ಆರೆಂಜ್ ಅಲರ್ಟ್​!

ಮುಂಬೈ ಮಹಾಮಳೆಗೆ ತತ್ತರಿಸಿರುವ ಜನ ಜೀವನ.

ಮುಂಬೈ ಮಹಾಮಳೆಗೆ ತತ್ತರಿಸಿರುವ ಜನ ಜೀವನ.

ಭಾರತೀಯ ಹವಾಮಾನ ಇಲಾಖೆಯು ಮಂಗಳವಾರ ಜೂನ್‌ 8 ರ ಮುಂಜಾನೆ 8:30 ಗಂಟೆಯಿಂದ ಬುಧವಾರ 8:30 ನಿಮಿಷದ ಅವಧಿಯಲ್ಲಿ ಕೊಲಾಬಾ ಒಂದರಲ್ಲೇ 65.4 ಮಿಲಿಮೀಟರ್‌ ಮಳೆಯಾಗಿದೆಯೆಂದು ವರದಿಯಾಗಿದೆ. ಇದೇ ವೇಳೆಯಲ್ಲಿ ಸಾಂತಾಕ್ರೂಝ್‌ನಲ್ಲಿ 50 ಮಿಲಿಮೀಟರ್‌ ಮಳೆಯಾಗಿದೆ.

 • Share this:

  ಮುಂಬೈ (ಜೂನ್ 09); ಮಾನ್ಸೂನ್ ಮಾರುತಗಳು ಭಾರತಕ್ಕೆ ತಡವಾಗಿ ಆಗಮಿಸಿದರೂ ಸಹ ಇದೀಗ ಎಲ್ಲೆಡೆ ಮಳೆ ಚುರುಕುಗೊಂಡಿದೆ. ಜೂನ್‌ ಮೊದಲ ವಾರದಲ್ಲಿ ಕೇರಳದ ಮೂಲಕ ಭಾರತ ಪ್ರವೇಶಿಸಿದ ಮಾನ್ಸೂನ್ ಈಗ ಕರ್ನಾಟಕ, ಮಹಾರಾಷ್ಟ್ರ ಗುಜರಾತ್‌ ರಾಜ್ಯಗಳಲ್ಲಿ ಉತ್ತಮ ಮಳೆ ಸುರಿಸುತ್ತಿದೆ. ಕರ್ನಾಟಕ ಮತ್ತು ಕೇರಳದಲ್ಲಿ ಮಾನ್ಸೂನ್‌ ಅಬ್ಬರ ಸಾಧರಣವಾಗಿದೆ. ಪಶ್ಚಿಮ ಕರಾವಳಿಯ ಮಹಾನಗರ ಮುಂಬೈನಲ್ಲಿ ನಿನ್ನೆ ಮಂಗಳವಾರ ಜೂನ್‌ 8 ರಿಂದ ಮಾನ್ಸೂನ್‌ ಆರ್ಭಟ ತೀವ್ರಗೊಂಡಿದೆ. ಇಂದು ಬುಧವಾರ ಜೂನ್ 9 ರಂದು ಕೂಡ ಮುಂಬೈ ನಗರ ಮತ್ತು ಸುತ್ತ ಮುತ್ತ ಭಾರಿ ಮಳೆ ಸುರಿದಿದೆ. ಅಲ್ಲದೆ, ಮುಂಬೈನಲ್ಲಿ ಇಂದು ಭಾರೀ ಮಳೆಯಾಗಿದ್ದು, ಹವಾಮಾನ ಇಲಾಖೆ ಮುಂದಿನ ನಾಲ್ಕು ದಿನಗಳ ಕಾಲ ಮಹಾರಾಷ್ಟ್ರದಲ್ಲಿ ಆರೆಂಜ್​ ಅಲರ್ಟ್​ ಘೋಷಣೆ ಮಾಡಿದೆ. ಹೀಗಾಗಿ ಅಲ್ಲಿನ ಸರ್ಕಾರ ಮಳೆ ಆಘಾತದ ಬಗ್ಗೆ ಎಚ್ಚರ ವಹಿಸಿದೆ ಎನ್ನಲಾಗಿದೆ.


  ಮಾನ್ಸೂನ್‌ ಮಳೆಯ ಪರಿಣಾಮ ಮುಂಬೈನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅನೇಕ ಜನವಸತಿ ಪ್ರದೇಶಗಳಿಗೂ ನೀರು ನುಗ್ಗಿ ಸಾವಿರಾರು ಜನರು ಎತ್ತರದ ಪ್ರದೇಶಗಳಲ್ಲಿ ರಕ್ಷಣೆ ಪಡೆದಿದ್ದಾರೆ. ಇನ್ನೊಂದೆಡೆ ರಸ್ತೆಗಳು ಕೂಡ ಜಲಾವೃತವಾಗಿದ್ದು ಅನೇಕ ವಾಹನಗಳು ನೀರಿನಲ್ಲಿ ಮುಳುಗಿವೆ. ಮುಂಬೈ ನಗರ ಮತ್ತು ಉಪನಗರಗಳ ಹಲವಾರು ಕಡೆ ವಿದ್ಯತ್‌ ಕಂಬಗಳು ಧರೆಗುರಿಳಿದ್ದು ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ.‌‌ ಹೀಗಾಗಿ ಜನ ಜೀವನ ವ್ಯತ್ಯವಾಗಿದೆ.


  ಭಾರಿ ಮಳೆಯಿಂದಾಗಿ ರಸ್ತೆಗಳ ತುಂಬಾ ನೀರು ಹರಿಯುತ್ತಿರುವುದು ವಾಹನಗಳ ಸಂಪರ್ಕಕ್ಕೆ ತೊಡಕಾಗಿದೆ. ಮುಂಬೈ ನಗರದ ಚೆಂಬುರ್‌, ಈಸ್ಟರ್ನ್‌ ಎಕ್ಸ್‌ಪ್ರೆಸ್‌ ವೇ, ದಾದರ್‌ ಕಿಂಗ್‌ ಸರ್ಕಲ್‌, ಸಿಯೋನ್‌ ಮತ್ತು ಜಿಟಿಬಿ ನಗರಗಳಲ್ಲಿ ಭಾರೀ ಮಳೆಯಿಂದಾಗಿ ಗಂಟೆಗಳ ಕಾಲ ಕಿಲೋಮಿಟರ್‌ಗಳ ದೂರ ವಾಹನಗಳು ಸಾಲಾಗಿ ನಿಂತಿರುವ ದೃಶ್ಯಗಳು ಕಂಡುಬಂದಿದೆ.


  ಮುಂಬೈನ ಛತ್ರಪತಿ ಶಿವಾಜಿ ಟರ್ಮಿನ್ಸನ್‌ (CSMT) ನಿಂದ ಅನೇಕ ರೈಲುಗಳ ಸಂಚಾರ ಸ್ಥಗಿತಗೊಂಡಿದೆ. ಮುಂಬೈ-ಕುರ್ಲಾ ಮಾರ್ಗದಲ್ಲಿ ಇಂದು ಬೆಳಗ್ಗೆ 10:20 ಗಂಟೆಯಿಂದ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸೆಂಟ್ರಲ್‌ ರೈಲ್ವೆ CRPO ತಿಳಿಸಿದ್ದಾರೆ. ಕುರ್ಲಾ, ಚೆಂಬೂರ್‌ ಗಳಲ್ಲಿ ರೈಲ್ವೆ ಹಳಿಗಳ ಮೇಲೆ ಭಾರಿ ಪ್ರಮಾಣದ ನೀರು ನಿಂತಿರುವುದು ರೈಲುಗಳ ಸಂಚಾರವನ್ನು ಆಸಾಧ್ಯಗೊಳಿಸಿದೆ. ಕುರ್ಲಾ ಮಾರ್ಗವಾಗಿ ಮುಂಬೈ ಛತ್ರಪತಿ ಶಿವಾಜಿ ಸ್ಟೇಷನ್‌ ಗೆ ಬರುವ ರೈಲುಗಳನ್ನು ಬೇರೆ ಮಾರ್ಗಗಳಲ್ಲಿ ಸಂಚರಿಸಲು ಸೂಚಿಸಲಾಗಿದೆ ಎಂದು ಸೆಂಟ್ರಲ್‌ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.


  ಇದನ್ನೂ ಓದಿ: Narendra Modi: ಗಡ್ಡ ಬೋಳಿಸಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ 100ರೂ ಕಳಿಸಿದ ಚಹಾ ಮಾರಾಟಗಾರ!


  ಭಾರತೀಯ ಹವಾಮಾನ ಇಲಾಖೆಯು ಮಂಗಳವಾರ ಜೂನ್‌ 8 ರ ಮುಂಜಾನೆ 8:30 ಗಂಟೆಯಿಂದ ಬುಧವಾರ 8:30 ನಿಮಿಷದ ಅವಧಿಯಲ್ಲಿ ಕೊಲಾಬಾ ಒಂದರಲ್ಲೇ 65.4 ಮಿಲಿಮೀಟರ್‌ ಮಳೆಯಾಗಿದೆಯೆಂದು ವರದಿಯಾಗಿದೆ. ಇದೇ ವೇಳೆಯಲ್ಲಿ ಸಾಂತಾಕ್ರೂಝ್‌ನಲ್ಲಿ 50 ಮಿಲಿಮೀಟರ್‌ ಮಳೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.


  ಇದನ್ನೂ ಓದಿ: ಆದಿವಾಸಿ ಯುವತಿ ಮೇಲೆ ಅತ್ಯಾಚಾರ ನಡೆಸಿ ಕೊಂದು ಮಾವೋವಾದಿ ಪಟ್ಟ ಕಟ್ಟಿತೇ ಭದ್ರತಾ ಪಡೆ?: ಗಂಭೀರ ಆರೋಪ


  4.16 ಮೀಟರ್‌ ಎತ್ತರದ ಅಲೆಗಳು ಸಮದ್ರದಲ್ಲಿ ಕಾಣಿಸಿಕೊಳ್ಳಲಿವೆ. ಮೀನುಗಾರರು ಮತ್ತು ಇತರರು ಯಾರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಮುಂಬೈ, ಪುಣೆ, ಸೇರಿ ಮಹಾರಾಷ್ಟ್ರದ ನಗರಗಳಲ್ಲಿ ಮುಂದಿನ 4 ದಿನಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.‌


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:MAshok Kumar
  First published: